भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದವಡೆಹಲ್ಲು

(ಪ್ರಾ) ಸ್ತನಿಗಳಲ್ಲಿ ಆಹಾರವನ್ನು ಅಗಿಯಲು ಬಳಸುವ ಹಲ್ಲು. ಚಪ್ಪಟೆ (ನವುರಲ್ಲದ) ಅಥವಾ ಗುಂಡು ಮೇಲುಭಾಗವುಳ್ಳ. ಹಾಲುಹಲ್ಲುಗಳಿರುವಾಗ ಇದು ಇನ್ನೂ ಬೆಳೆದಿರುವುದಿಲ್ಲ

ದಂಶಕೋಶಿಕೆ

(ಪ್ರಾ) ಲೋಳೆಮೀನು ಮುಂತಾದ ಸೀಲಿಯೆಂಟರೇಟ ಮತ್ತು ಕೆಲವು ಪ್ರೊಟೊಜೋವ ಗುಂಪಿನ ಜೀವಿಗಳು ಬೇಟೆ ಹಿಡಿಯಲು ಮತ್ತು ಆತ್ಮರಕ್ಷಣೆಗೆ ಬಳಸುವ ಒಂದು ಸ್ವತಂತ್ರ ಅಂಗ. ಇದರಲ್ಲಿ ದ್ರವಭರಿತ ಚೀಲವಿರುವುದು. ಒಂದು ತುದಿ ಟೊಳ್ಳಾದ ಮೊನಚುನಾಳ ಸಾಮಾನ್ಯ ಬೋರಲಾಗಿ ಚೀಲದೊಳಗೆ ಸುರುಳಿ ಸುತ್ತಿಕೊಂಡಿದ್ದು ಕುಟುಕಬೇಕಾದಾಗ ಒಳ ಹೊರಗಾಗಬಲ್ಲದು

ದಶಫಲಕ

(ಗ) ೧೦ ಮುಖಗಳು (F), ೧೨ ಶೃಂಗಗಳು (V) ಮತ್ತು ೨೦ ಅಂಚುಗಳು (E) ಇರುವ ಘನಾಕೃತಿ. ಬಹುಫಲಕ ಗಳನ್ನು ಕುರಿತು ಆಯ್ಲರ್ ಮಂಡಿಸಿರುವ ಪ್ರಮೇಯವನ್ನು (V+F-E=2) ತಾಳೆ ಮಾಡುತ್ತದೆ

ದಶಭುಜ

(ಗ) ೧೦ ಕೋನಗಳೂ ೧೦ ಭುಜಗಳೂ ಇರುವ ಸಮತಾಲಕೃತಿ

ದಶಮಾಂಶ

(ಗ) ದಾಶಮಿಕ ಸಂಖ್ಯಾಪದ್ಧತಿಯಲ್ಲಿ ಯಾವುದೇ ಸಂಖ್ಯೆ. ಉದಾ: ೦.೩೪೫, ೨೧.೧೨೩, ಮೊದಲನೆಯದರ ಸಾಂಖ್ಯಕ ಬೆಲೆ ೧ಕ್ಕಿಂತ ಕಡಿಮೆ. ಎರಡನೆಯದರದು ಅಧಿಕ. ಮೊದಲನೆಯದಕ್ಕೆ ದಾಶಮಿಕ ಭಿನ್ನರಾಶಿಯೆಂದೂ ಎರಡನೆಯದಕ್ಕೆ ಮಿಶ್ರ ದಶಮಾಂಶ ಎಂದೂ ಹೆಸರು. ದಶಮಾಂಶದಲ್ಲಿ ನಿರ್ದಿಷ್ಟ ಸಂಖ್ಯೆಯ ಅಂಕೆಗಳು ಇರಬಹುದು, ಉದಾ: ೫/೮ = ೦.೬೨೫. ಇವು ಅವಧಿಕ ದಶಮಾಂಶಗಳು. ಇತರ ದಶಮಾಂಶಗಳಲ್ಲಿ ಅಂಕೆಗಳು ಅನಿರ್ದಿಷ್ಟವಾಗಿ ಮುಂದುವರಿಯಬಹುದು. ಇವು ಅನವಧಿಕ ದಶಮಾಂಶಗಳು. ಉದಾ: ೩.೬೧೦೯೭೯… ಅನವಧಿಕ ದಶಮಾಂಶ ಗಳಲ್ಲಿ ಅಂಕೆಗಳು ನಿರ್ದಿಷ್ಟ ಗುಂಪುಗಳಲ್ಲಿ ಪುನರಾವರ್ತಿಸಿದರೆ ಅವು ಪುನರಾವರ್ತಕ ದಶಮಾಂಶಗಳು. ಉದಾ: ೦.೩೩೩…., ೧೦.೪೧೫೪೧೫೪೧೫… ಅವಧಿಕ ಮತ್ತು ಪುನರಾವರ್ತಕ ದಶಮಾಂಶ ಗಳೆಲ್ಲವೂ ಪರಿಮೇಯ ಸಂಖ್ಯೆಗಳು ಮತ್ತು ವಿಲೋಮವಾಗಿ ಅನವಧಿಕ ಅಪುನರಾವರ್ತಕ ದಶಮಾಂಶಗಳೆಲ್ಲವೂ ಅಪರಿಮೇಯ ಸಂಖ್ಯೆಗಳು

ದಶಮಾಂಶ ಭಾಗ

(ಗ) ಯಾವುದೇ ಸಂಖ್ಯೆಯ ಲಾಗರಿತಮ್‌ನಲ್ಲಿ ಎರಡು ನಿರ್ದಿಷ್ಟ ಭಾಗಗಳಿರುವುವು: ಪೂರ್ಣಾಂಕ ಭಾಗ (ಕ್ಯಾರೆಕ್ಟರಿಸ್ಟಿಕ್, ಲಾಕ್ಷಣಿಕಾಂಕ), ದಶಮಾಂಶ ಭಾಗ (ಮ್ಯಾಂಟಿಸ) ಉದಾ: log10 367.5437= 2.7354. ಇಲ್ಲಿ ೨ ಪೂರ್ಣಾಂಕ ಭಾಗ, ೦.೭೩೫೪ ದಶಮಾಂಶ ಭಾಗ. ನೋಡಿ : ಲಾಗರಿತಮ್. ಆಂಟಿಲಾಗರಿತಮ್

ದಶಾಂಶಿಕಗಳು

(ಸಂ) ದತ್ತಾಂಶವನ್ನು ಮೌಲ್ಯಗಳ ಏರಿಕೆ ಯಾ ಇಳಿಕೆ ಕ್ರಮದಲ್ಲಿ ಜೋಡಿಸಿದಾಗ ಮೊದಲ ೧೦%, ಎರಡನೆ ೧೦% ಇತ್ಯಾದಿಯಾಗಿ ಮೌಲ್ಯಗಳನ್ನು ಒಳಗೊಂಡಿರುವ ಛೇದನ ಬಿಂದುಗಳು D1, D2,…….D9 ಏರಿಕೆ ಕ್ರಮದಲ್ಲಿ ದತ್ತಾಂಶದ ಜೋಡಣೆ

ದಹನ

(ರ) ಆಕ್ಸಿಜನ್‌ನೊಂದಿಗೆ ಯಾವುದೇ ದ್ರವ, ಘನ ಅಥವಾ ಅನಿಲ ರಾಸಾಯನಿಕವಾಗಿ ಸಂಯೋಗಿಸಿ ಬೆಳಕು ಅಥವಾ ಶಾಖ ಅಥವಾ ಎರಡನ್ನೂ ಉತ್ಪತ್ತಿ ಮಾಡುವ ಕ್ರಿಯೆ

ದಹನ ಕೋಣೆ

(ಆವಿ) ಸಿಂಪಡಿಸಲಾದ ನೋದನಕಾರಿಗಳು ಉರಿದು ಹೆಚ್ಚಿನ ಉಷ್ಣತೆ ಹಾಗೂ ಒತ್ತಡದ ಅನಿಲಗಳನ್ನು ಉತ್ಪಾದಿಸುವ ರಾಕೆಟ್‌ನ ಭಾಗ

ದಹನಶೀಲ

(ರ) ಸುಲಭವಾಗಿ ಹೊತ್ತಿಕೊಳ್ಳುವ, ದಹನ ಕ್ರಿಯೆಗೆ ಬೆಂಬಲ ನೀಡುವ. ದಹ್ಯ

ದಹನೋಷ್ಣ

(ರ) ಒಂದು ಮೋಲ್ ಪದಾರ್ಥ ಹೆಚ್ಚುವರಿ ಆಕ್ಸಿಜನ್‌ನಲ್ಲಿ ಸಂಪೂರ್ಣವಾಗಿ ದಹಿಸಿದಾಗ ಬಿಡುಗಡೆಯಾಗುವ/ಹೀರಿಕೆಯಾಗುವ ಉಷ್ಣದ ಪ್ರಮಾಣ. ಆರ್ಗ್ಯಾನಿಕ್ ಸಂಯುಕ್ತಗಳ ರೂಪಣೆಯ ಉಷ್ಣ, ಅವುಗಳ ರಚನಾ ವಿನ್ಯಾಸ ಮತ್ತು ಉರುವಲು ಹಾಗೂ ಆಹಾರ ಪದಾರ್ಥಗಳ ಉಷ್ಣೋದ್ಭವ ಮೌಲ್ಯ ನಿರ್ಣಯಿಸಲು ಸಹಾಯಕ

ದಳ

(ಸ) ಹೂವಿನ ಎಸಳು, ಸಾಮಾನ್ಯವಾಗಿ ವರ್ಣರಂಜಿತ

ದಳವಲಯ

(ಸ) ಪುಷ್ಪಪಾತ್ರೆಯ ಒಳಗೆ ಎಸಳುಗಳಿಂದ ಆಗಿರುವ ಪುಷ್ಫಭಾಗಗಳ ಉಂಗುರ. ದಳ ಸಂಪುಟ

ದಾಡಿ

(ಜೀ) ಮಾನವನಲ್ಲಿ ಮತ್ತು ಕೆಲವು ಪ್ರಾಣಿಗಳಲ್ಲಿ ಗಡ್ಡ/ಚುಂಗು. ಮೀನಿನ ಬಾಯಿಗೆ ಲಗತ್ತಾಗಿರುವ ಅನುಬಂಧ. ಕೆಲವು ಚಿಪ್ಪು ಪ್ರಾಣಿಗಳಲ್ಲಿ ಶ್ವಸನಾಂಗ. ಹಕ್ಕಿ ಕೊಕ್ಕಿನ ಮೂಲದಲ್ಲಿನ ಬಿರುಗೂದಲು. ಧಾನ್ಯದಲ್ಲಿ ಊಬು, ಶೂಕ, ಸುಂಕು

ದಾಡೆ

(ಪ್ರಾ) ಆನೆ, ಕಾಡುಹಂದಿ ಮೊದಲಾದವುಗಳ ಮೂತಿಯಿಂದ ಹೊರಹಾಯ್ದಿರುವ ಕೋರೆಹಲ್ಲು. ದಂಷ್ಟ್ರ

ದಾನಿ

(ವೈ) ರಕ್ತಪೂರಣದಲ್ಲಿ ಯಾ ಚರ್ಮ ಕಸಿಯಲ್ಲಿ ನೆರವಾಗಲು ರಕ್ತವನ್ನು ಅಥವಾ ಚರ್ಮವನ್ನು ಒದಗಿಸುವಾತ. (ರ) ಬೇರೊಂದು ಪರಮಾಣು, ಪರಮಾಣುಗಳ ಗರ್ಭ ಅಥವಾ ಸ್ಫಟಿಕಕ್ಕೆ ಎಲೆಕ್ಟ್ರಾನನ್ನು ಬಿಟ್ಟುಕೊಡುವ ಪರಮಾಣು, ಅಣು ಅಥವಾ ಅಯಾನು. ಉದಾ: ಅಮೋನಿಯಮ್ ಅಯಾನ್ ರೂಪಣೆಯಲ್ಲಿ (NH4+) ನೈಟ್ರೋಜನ್ ದಾನಿ, H+4 ಪರಿಗ್ರಾಹಿ. ನೋಡಿ : ಪರಿಗ್ರಾಹಿ

ದಾರ

(ತಂ) ನೂಲುಗಳನ್ನು ಹೆಣೆದು ತಯಾರಿಸಿದ ಹುರಿ

ದಾರಸಂಖ್ಯೆ

(ತಂ) ನೇಯಲು ಬಳಸುವ ನೂಲಿನ ಗಾತ್ರಸೂಚಕ ಸಂಖ್ಯೆ. ಏಕಮಾನ ಉದ್ದದಲ್ಲಿ ದಾರದ ದ್ರವ್ಯರಾಶಿಯ ಅಳತೆ

ದಾರಹುಳು

(ಪ್ರಾ) ಮಕ್ಕಳ ಗುದದ್ವಾರದಲ್ಲಿ ಸೇರಿ ಕೊಳ್ಳುವ ಹಲವು ಬಗೆಯ ದಾರದಂಥ ಹುಳು. ಪರೋಪಜೀವಿ. ತೀವ್ರ ನವೆಗೆ ಕಾರಣವಾಗುತ್ತದೆ. ತಂತುಕ್ರಿಮಿ

ದಾರು

(ಸ) ನಾಳ, ಮರತಂತು ಇತ್ಯಾದಿಗಳಿಂದ ರೂಪಿತ ಸಸ್ಯಭಾಗ. ಸಸ್ಯದೊಳಗೆ ನೀರು ಮತ್ತು ದ್ರವಾಹಾರ ಪದಾರ್ಥಗಳನ್ನು ಒಯ್ಯುತ್ತದೆ, ಅದಕ್ಕೆ ದೃಢ ಆಧಾರವನ್ನು ಒದಗಿಸುತ್ತದೆ. ಕ್ಸೈಲಮ್

Search Dictionaries

Loading Results

Follow Us :   
  Download Bharatavani App
  Bharatavani Windows App