भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದ್ವಿವಕ್ರೀಭವನ

(ಭೌ) ಸ್ಫಟಿಕದಲ್ಲಿ ಬೆಳಕಿನ ವಕ್ರೀಭವನ; ಆಪಾತ ಬೆಳಕು ಪರಸ್ಪರ ಲಂಬ ದಿಶೆಗಳಲ್ಲಿ ಧ್ರುವೀಕರಣಗೊಂಡ ಎರಡು ಕಿರಣಗಳಾಗಿ ಒಡೆದು ಎರಡು ಪ್ರತಿಬಿಂಬಗಳಿಗೆ ಕಾರಣವಾಗುವುದು. ದ್ವಿವಕ್ರೀಕರಣ

ದ್ವಿವರ್ಣಗ್ರಹಣ

(ವೈ) ಅರೆಬಣ್ಣಗುರುಡು ಆಂಶಿಕ ವರ್ಣಾಂಧತೆ. ೩ ಮೂಲ ವರ್ಣಗಳ ಬದಲು ೨ ವರ್ಣಗಳನ್ನಷ್ಟೇ ಗುರುತಿಸಬಲ್ಲ ನೋಟದ ಶಕ್ತಿ. ರೋಹಿತದ ೨ ಬಣ್ಣಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗುವ ಒಂದು ಬಗೆಯ ವರ್ಣಾಂಧತೆ

ದ್ವಿವಿದಲನ

(ಜೀ) ನ್ಯೂಕ್ಲಿಯಸ್ ಎರಡು ಜನ್ಯ- ನ್ಯೂಕ್ಲಿಯಸ್‌ಗಳಾಗಿ ಒಡೆಯುವುದು ಮತ್ತು ಈ ಪ್ರಕ್ರಿಯೆಯನ್ನು ಅನುಸರಿಸಿ ಕೋಶವಸ್ತುವೂ ಎರಡಾಗಿ ಒಡೆಯುವುದು

ದ್ವಿವಿಭಜನೆ

(ರ) ಧಾತುಗಳ ಅಥವಾ ರ‍್ಯಾಡಿಕಲ್‌ಗಳ ಸರಳ ವಿನಿಮಯದ ಕಾರಣವಾಗಿ ಎರಡು ನೂತನ ಪದಾರ್ಥಗಳ ರೂಪಣೆ. AB+CDAAC+BD. CaSO4+Bacl22 Cacl2+BaSo4

ದ್ವಿವಿಭಾಗಜನ್ಯ

(ಜೀ) ಎರಡು ವಿಭಿನ್ನ ವಿಭಾಗಗಳಿಂದ (ಫೈಲಮ್) ಜನಿಸಿದುದು. ಎರಡು ದೂರಪೂರ್ವಜ ವೃಂದದಿಂದ ಹುಟ್ಟಿದ

ದ್ವಿವಿವರ್ಧ

(ಪ್ರಾ) ಕಶೇರುವಿನ ಅಡ್ಡ ಸ್ನಾಯು ರಚನೆ. ಕೀಲುಗಳ ಚಲನೆಗೆ ಸಂಬಂಧಿಸಿದ ಸ್ನಾಯು ಭಾಗ

ದ್ವಿವೃತ್ತೀಯ

(ಜೀ) ಎರಡು ವೃತ್ತಗಳ ಆಕಾರದಲ್ಲಿರುವ

ದ್ವಿಶಾಖಿತ, ಇಕ್ಕವಲಿನ

(ಜೀ) ಕೆಳ ಅರ್ಧಭಾಗದಿಂದ ಮುಂದಕ್ಕೆ ಆಳವಾದ ಬಿರುಕಿನಿಂದ ಎರಡು ಕವಲುಗಳಾಗಿ ಒಡೆದಿರುವ

ದ್ವಿಶುದ್ಧೀಕರಣ

(ರ) ಮಿಶ್ರದ್ರವದಲ್ಲಿರುವ ವಿವಿಧ ಪದಾರ್ಥಗಳ ಪ್ರಮಾಣಗಳನ್ನು ಆಸವನದ ಮೂಲಕ ಅಳೆಯುವ ಪ್ರಕ್ರಿಯೆ. ದ್ವಿಪರಿಶೋಧನೆ

ದ್ವಿಸಮಮಿತೀಯ

(ಸಾ) ಪರಸ್ಪರ ಲಂಬವಾಗಿರುವ ಎರಡು ಸಮತಲಗಳನ್ನು ಕುರಿತು ಸಮಮಿತೀಯವಾಗಿರುವ

ದ್ವಿಸೂತ್ರ ನಿಲಂಬನ

(ಭೌ) ಎರಡು ಸಮಾಂತರ ಲಂಬೀಯ ದಾರಗಳಿಂದ (ಸೂತ್ರ) ವಸ್ತುವನ್ನು ತೂಗುಹಾಕಿರು ವುದು. ಇದರಿಂದ ಸಾಕಷ್ಟು ನಿಯಂತ್ರಣ ಭ್ರಾಮಕ ಒದಗುತ್ತದೆ

ದ್ವಿಹಸ್ತೀಯ

(ಸಾ) ಎರಡೂ ಕೈಗಳಿಂದ ಮಾಡಿದ; ಅಥವಾ ಎರಡೂ ಕೈಗಳು ಅವಶ್ಯವಾಗುವ

ದ್ವಿಹೃದಯಕ

(ಪ್ರಾ) ಹೃದಯದಲ್ಲಿ ಎರಡು ಪ್ರತ್ಯೇಕ ಭಾಗಗಳಿದ್ದು ಒಂದು ಭಾಗ ಫುಪ್ಪುಸಗಳ ಜೊತೆಯಲ್ಲೂ ಇನ್ನೊಂದು ದೇಹದ ಉಳಿದ ಭಾಗಗಳ ಜೊತೆಯಲ್ಲೂ ಸಂಬಂಧಿಸಿರುವುದು

ದ್ವೀಪ

(ಭೂ) ನೀರಿನಿಂದ ಸುತ್ತುವರಿಯಲ್ಪಟ್ಟ, ಖಂಡಕ್ಕಿಂತ ಕಡಿಮೆ ಗಾತ್ರದ ಭೂಭಾಗ. ಸಾಮಾನ್ಯವಾಗಿ ಸಾಗರ, ಸಮುದ್ರ, ಸರೋವರ ಅಥವಾ ಹೊಳೆಯಲ್ಲಿರುತ್ತದೆ (ವೈ) ದೇಹದ ಯಾವುದೇ ಭಾಗದಲ್ಲಿ ಬೇರೊಂದು ಬಗೆಯ ಜೀವಕೋಶ ಗಳಿಂದ ಅಥವಾ ಊತಕದಿಂದ ಆವೃತವಾಗಿರುವ ಜೀವಕೋಶ ಸಮೂಹ ಅಥವಾ ಊತಕ

ದ್ವೀಪವಿಶ್ವ

(ಖ) ಸುರುಳಿ ನೀಹಾರಿಕೆಯೊಂದಕ್ಕೆ ಮೊದಲು ನೀಡಿದ್ದ ಹೆಸರು. ಇಂಥ ಒಂದೊಂದು ನೀಹಾರಿಕೆಯೂ ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಗಿಂತ ಭಿನ್ನವಾದುದು ಎಂಬ ಅಭಿಪ್ರಾಯ ಆಗ (೨೦ನೇ ಶತಮಾನದ ಮೊದಲ ದಶಕಗಳಲ್ಲಿ) ಪ್ರಚಲಿತವಾಗಿತ್ತು

ದ್ವೀಪಸ್ತೋಮ

(ಭೂ) ಹಲವಾರು ದ್ವೀಪಗಳು ನಿಬಿಡವಾಗಿ ಹರಡಿ ಹೋಗಿರುವ ಸಮುದ್ರವಲಯ. ಗ್ರೀಸನ್ನು ಏಷ್ಯದಿಂದ ಪ್ರತ್ಯೇಕಿಸುವ ಮೆಡಿಟರೇನಿಯನ್ ಸಮುದ್ರದ ಭಾಗಕ್ಕೆ ಇದು ಆದಿಯಲ್ಲಿ ಅನ್ವಯವಾಗುತ್ತಿತ್ತು

ದ್ವೀಪೀಯ

(ವೈ) ಶರೀರದ ಭಾಗಗಳಲ್ಲಿ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವ ರೋಗಕಾರಕ ಕೋಶಗಳ ಸಮೂಹ

ದ್ವೈತ

(ಭೌ) ವೀಕ್ಷಣೆಯ ರೀತಿಯನ್ನು ಅವಲಂಬಿಸಿ ಭೌತ ಕಣಗಳು ಹಾಗೂ ವಿಕಿರಣವು ಕಣಗಳಾಗಿಯೂ ತರಂಗಗಳಾಗಿಯೂ ಕಾಣಿಸಿಕೊಳ್ಳುವ ವರ್ತನೆ

ದ್ವೈತತ್ವ ತತ್ತ್ವ

(ಗ) ಸಮತಲದಲ್ಲಿ ಬಿಂದುವನ್ನು ಎರಡು ಸರಳರೇಖೆಗಳ ಛೇದನ ಸ್ಥಾನ ಎಂದೂ ಅಂತೆಯೇ ಸರಳರೇಖೆಯನ್ನು ಎರಡು ಬಿಂದುಗಳ ನಡುವಿನ ಕನಿಷ್ಠ ಅಂತರವೆಂದೂ ವಿವರಿಸುವ ಗುಣ. ಹೀಗೆ ಸಮತಲದಲ್ಲಿ ಬಿಂದು ಮತ್ತು ಸರಳರೇಖೆ ಎರಡು ದ್ವೈತ ಧಾತುಗಳು. ವೃತ್ತವನ್ನು ಬಿಂದು ಪಥವೆಂದು (ಲೋಕಸ್) ವಿವರಿಸಬಹುದು. ಅಂತೆಯೇ ಸರಳ ರೇಖೆಯ ಆವರಣವೆಂದೂ (ಏನ್ವಲಪ್) ನಿರೂಪಿಸಬಹುದು

ದ್ವೈವಾರ್ಷಿಕ

(ಸ) ಅಂಕುರಣವಾದ ಬಳಿಕ ಮೊದಲ ವರ್ಷ ಹೂ ಬಿಡದೆ ಎರಡನೆಯ ವರ್ಷ ಹೂಬಿಟ್ಟು ಮಡಿಯುವ (ಸಸ್ಯ). ಮೊದಲನೆಯ ವರ್ಷ ಅದು ಆಹಾರ ದಾಸ್ತಾನು ಮಾಡುತ್ತದೆ. ಎರಡನೆಯ ವರ್ಷ ಅದನ್ನು ಉಪಯೋಗಿಸಿ ಕೊಂಡು ಹೂವು ಹಾಗೂ ಬೀಜಗಳನ್ನು ಬಿಡುತ್ತದೆ. ಕ್ಯಾರೆಟ್ ಹಾಗೂ ಪಾರ್ಸ್‌ಸಿಪ್ (ಮೂಲಂಗಿ) ಇದಕ್ಕೆ ಉದಾಹರಣೆ

Search Dictionaries

Loading Results

Follow Us :   
  Download Bharatavani App
  Bharatavani Windows App