भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದ್ರಾವಕ ದ್ವೇಷಿ

(ರ) ಕಲಿಲಗಳಿಗೆ ಸಂಬಂಧಿಸಿದಂತೆ ಪೂರ್ವಪದ ಗುಣವಾಚಕ. ರಾಸಾಯನಿಕವಾಗಿ ದ್ರಾವಕದಲ್ಲಿ ಸುಲಭವಾಗಿ ಚೆದುರದೆ ಇರುವ ಕಲಿಲ. ಉದಾ : ಲೋಹಗಳು ಅವುಗಳ ಸಲ್ಫೈಡ್ ಮತ್ತು ಹೈಡ್ರಾಕ್ಸೈಡ್‌ಗಳು. ಜಲದ್ವೇಷಿ

ದ್ರಾವಕಾಭಿಮಾನಿ

(ರ) ರಾಸಾಯನಿಕವಾಗಿ ದ್ರಾವಕದಲ್ಲಿ ಸುಲಭವಾಗಿ ಚೆದುರಿ ಬೆರೆಯಬಲ್ಲ ಕಲಿಲ. ಉದಾ: ಗೋಂದು, ಪಿಷ್ಟ, ಜಿಲೆಟಿನ್. ಜಲಪ್ರಿಯ

ದ್ರಾವಕೀಕರಣ

(ರ) ದ್ರಾವ್ಯದ ಅಯಾನ್‌ಗಳು ದ್ರಾವಕದ ಅಣುಗಳೊಂದಿಗೆ ನಡೆಸುವ ಅಂತರಕ್ರಿಯೆ. ಉದಾ: ಸೋಡಿಯಮ್ ಕ್ಲೋರೈಡನ್ನು ನೀರಿನಲ್ಲಿ ವಿಲೀನಿಸಿದಾಗ ಸೋಡಿಯಮ್ ಅಯಾನ್ ಗಳು ನೀರಿನ ಧ್ರುವೀಯ ಅಯಾನುಗಳನ್ನು ಆಕರ್ಷಿಸುತ್ತವೆ, ಋಣಾತ್ಮಕ ಆಕ್ಸಿಜನ್ ಪರಮಾಣುಗಳು ಧನಾತ್ಮಕ ಸೋಡಿಯಮ್ ಅಯಾನುಗಳತ್ತ ಆಕರ್ಷಿತವಾಗುತ್ತವೆ. ದ್ರಾವಕವು ನೀರು ಆಗಿದ್ದಾಗ, ದ್ರಾವಕೀಕರಣಕ್ಕೆ ಜಲೀಕರಣ (ಹೈಡ್ರೇಷನ್) ಎನ್ನುತ್ತಾರೆ. ದ್ರಾವಕಯೋಗ

ದ್ರಾವಣ

(ರ) ಒಂದೇ ಪ್ರಾವಸ್ಥೆಯಲ್ಲಿ ಎರಡು ಅಥವಾ ಹೆಚ್ಚು ಘಟಕಗಳ ಸಮಜಾತೀಯ ಮಿಶ್ರಣ. ಘಟಕಗಳ ಅಣುಗಳು ಮಿಶ್ರಣದ ಅಣುಗಳಲ್ಲಿ ಆದ್ಯಂತ ಪ್ರತ್ಯೇಕವಾಗಿ ಗುರುತಿಸಲಾಗದಂತೆ ಬೆರೆತಿರುತ್ತವೆ. ಸಾಮಾನ್ಯವಾಗಿ ದ್ರವಗಳಲ್ಲಿ ಘನ ಪದಾರ್ಥಗಳ ದ್ರಾವಣಕ್ಕೆ ಈ ಪದದ ಅನ್ವಯ. ಇತರ ಮಾದರಿ ದ್ರಾವಣಗಳೆಂದರೆ: ದ್ರವಗಳಲ್ಲಿ ಅನಿಲಗಳು (ಅನಿಲಯುಕ್ತ ಪಾನೀಯಗಳು. ಉಷ್ಣತೆ ಏರಿದಂತೆ ಅನಿಲಗಳ ವಿಲೇಯತೆ ಕಡಿಮೆ ಆಗುತ್ತದೆ); ಘನ ಪದಾರ್ಥಗಳಲ್ಲಿ ಅನಿಲಗಳು (ಪೆಲೇಡಿಯಮ್‌ನಲ್ಲಿ ಹೈಡ್ರೊಜನ್); ದ್ರವಗಳಲ್ಲಿ ದ್ರವಗಳು (ನೀರು ಬೆರೆಸಿದ ಮದ್ಯ), ಘನ ಪದಾರ್ಥ ಗಳಲ್ಲಿ ಘನ ಪದಾರ್ಥಗಳು (ಉದಾ: ಕೆಲವು ಮಿಶ್ರಲೋಹಗಳು)

ದ್ರಾವಣೋಷ್ಣ

(ರ) ಅಧಿಕ ಪರಿಮಾಣ ನೀರಿನಲ್ಲಿ, ಅಂದರೆ ಇನ್ನಷ್ಟು ನೀರು ಸೇರಿಸಿದಾಗ ಯಾವ ಔಷ್ಣಿಕ ಬದಲಾವಣೆಯೂ ಆಗದಿರುವಷ್ಟು ಪ್ರಮಾಣದ ನೀರಿನಲ್ಲಿ, – ಒಂದು ಮೋಲ್ ಪದಾರ್ಥ ವಿಲೀನವಾದಾಗ ಉಂಟಾಗುವ ಔಷ್ಣಿಕ ಬದಲಾವಣೆ. ಉದಾ : ಅಮೋನಿಯ – (NH3) -೮.೪ ಕಿ.ಕ್ಯಾ ಉಪ್ಪು (NaCl) +೧.೨ ಕಿ.ಕ್ಯಾ. ಉಷ್ಣ ಬಿಡುಗಡೆಯಾದರೆ ಋಣಚಿಹ್ನೆ (-) ಉಷ್ಣ ಹೀರಲ್ಪಟ್ಟರೆ ಧನ ಚಿಹ್ನೆ (+) ಇದು ಉಷ್ಣಚಲನ ವಿಜ್ಞಾನ ರೀತ್ಯ ಅಂಗೀಕೃತ ಸಂಪ್ರದಾಯ

ದ್ರಾವ್ಯ

(ರ) ದ್ರಾವಕದಲ್ಲಿ ಲೀನವಾಗಿ ದ್ರಾವಣವನ್ನು ರೂಪಿಸುವ ಪದಾರ್ಥ. ಉದಾ: ಉಪ್ಪಿನ ದ್ರಾವಣದಲ್ಲಿ ಉಪ್ಪು ದ್ರಾವ್ಯ, ನೀರು ದ್ರಾವಕ

ದ್ರಾವ್ಯತಾ ಲಬ್ಧ

(ರ) ಪ್ರತೀಕ KSP. ಅಲ್ಪ ವಿಲೇಯ ವಿದ್ಯುದ್ವಿಭಾಜ್ಯವೊಂದರ ಪರ್ಯಾಪ್ತ ದ್ರಾವಣದಲ್ಲಿ ಇರುವ ವಿದ್ಯುದ್ವಿಭಾಜ್ಯವೊಂದರ ಎರಡು ಬಗೆಯ ಅಯಾನುಗಳಿಗೆ ಸರಿಯಾದ ಸಾರತೆಗಳ ಗುಣಲಬ್ಧ. ಉಷ್ಣತೆ ಸ್ಥಿರವಾಗಿದ್ದರೆ ಈ ಮೌಲ್ಯವೂ ಸ್ಥಿರ. ಈ ಮಿತಿ ಮೀರಿದರೆ ವಿಲೇಯ ಪದಾರ್ಥ ಆಂಶಿಕವಾಗಿ ಒತ್ತರಿಸುವುದು. ಸಾಂಕೇತಿಕವಾಗಿ KSP = [A]m [B]n ಇಲ್ಲಿ ಪ್ರಸಕ್ತ ವಿದ್ಯುದ್ವಿಭಾಜ್ಯ : AmBn

ದ್ವಾದಶ ಫಲಕ

(ಗ) ಹನ್ನೆರಡು ಮುಖಗಳು ಇರುವ ಘನಾಕೃತಿ

ದ್ವಾದಶ ಭುಜ

(ಗ) ಹನ್ನೆರಡು ಭುಜಗಳೂ ಹನ್ನೆರಡು ಕೋನಗಳೂ ಇರುವ ಸಮತಲಾಕೃತಿ

ದ್ವಾರ

(ತಂ) ಅನಿಲ/ದ್ರವವನ್ನು ಒಳಕ್ಕೆ ಬಿಡಲೆಂದು ಅಥವಾ ಹೊರಹೋಗಲೆಂದು ಮಾಡಿರುವ ತೆರಪು/ಕೊಳವೆ

ದ್ವಿ ಅಂಡಜನ್ಯ ಅವಳಿಗಳು

(ಪ್ರಾ) ಎರಡು ಪ್ರತ್ಯೇಕ ಅಂಡಗಳು ನಿಷೇಚನಗೊಂಡುದರ ಫಲವಾಗಿ ಜನಿಸಿದ ಅವಳಿಗಳು

ದ್ವಿ-ನಿಮ್ನ

(ಭೌ) ಉಭಯ ತಲಗಳೂ ಒಳಬಾಗಿರುವ ಅಂದರೆ ನಿಮ್ನವಾಗಿರುವ (ಮಸೂರ)

ದ್ವಿ-ಪಾರ್ಶ್ವಕ

(ಸ) ಫ್ಲೋಯೆಮ್‌ನ ಎರಡು ಎಳೆಗಳ ನಡುವೆ ಕ್ಲೈಲಮ್ ಇರುವ

ದ್ವಿ-ಪೀನ

(ಭೌ) ಉಭಯ ತಲಗಳೂ ಹೊರಕ್ಕೆ ಉಬ್ಬಿರುವ, ಅಂದರೆ ಪೀನವಾಗಿರುವ (ಮಸೂರ)

ದ್ವಿಅಕ್ಷೀಯ ಸ್ಫಟಿಕ

(ಭೂವಿ) ಎರಡು ಅಕ್ಷಗಳಿರುವ ದ್ವಿವಕ್ರೀಭವನ ಸ್ಫಟಿಕ. ಉದಾ: ತ್ರಿನತಾಕ್ಷ ಸ್ಫಟಿಕಗಳು

ದ್ವಿಅಗ್ರ

(ಜೀ) ಮೊನಚಾದ ಎರಡು ಕೊನೆಗಳಿರುವ

ದ್ವಿಅಗ್ರ ಕವಾಟ

(ವೈ) ಹೃದಯದಲ್ಲಿ ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಗಳ ನಡುವೆ ರಕ್ತಚಲನೆ ನಿಯಂತ್ರಿಸುವ ಕವಾಟ. ದ್ವಿತಲ ಕವಾಟ. ಮಿಟ್ರಲ್ ಕವಾಟ

ದ್ವಿಅಗ್ರ ದಂತ

(ಜೀ) ಎರಡು ಮೊನೆಗಳಿರುವ ಹಲ್ಲು. ಮಾನವನಲ್ಲಿ ದವಡೆ ಹಲ್ಲಿನ ಪಕ್ಕದ್ದು. ಸ್ವಯಾಗ್ರ ದಂತ

ದ್ವಿಅರೀಯ ಸಮಮಿತಿ

(ಪ್ರಾ) (ಲೋಳೆ ಮೀನುಗಳಂಥ) ಟೇನೊಫೋರಗಳಲ್ಲಿರುವಂತೆ ದೇಹದ ಒಂದು ಭಾಗ ಅರೀಯ ಸಮಮಿತಿಯನ್ನೂ ಇನ್ನೊಂದು ಭಾಗ ದ್ವಿಪಾರ್ಶ್ವೀಯ ಸಮಮಿತಿಯನ್ನೂ ಪ್ರದರ್ಶಿಸುವುದು

ದ್ವಿಅಶ್ರಗ

(ಭೌ) ಬೆಳಕಿನ ದೂಲವನ್ನು ವಿಚ್ಛೇದಿಸಲು ಬಳಸುವ ಅತಿವಿಶಾಲ ಕೋನದ ಅಶ್ರಗ. ಪಾದ-ಪಾದ ಕೂಡಿ ಇರಿಸಿದ ಎರಡು ಲಘುಕೋನಗಳ ಅಶ್ರಗ. ವಸ್ತುವಿನ ದ್ವಿಬಿಂಬ ರೂಪುಗೊಳ್ಳುತ್ತದೆ. ಫ್ರೆಸ್ನೆಲ್‌ರು ವ್ಯತಿಕರಣ ಪ್ರಯೋಗಗಳಿಗಾಗಿ ಎರಡು ಸಂಸಕ್ತ ದೂಲಗಳನ್ನು ಸೃಷ್ಟಿಸಲು ಬಳಸಿದರು

Search Dictionaries

Loading Results

Follow Us :   
  Download Bharatavani App
  Bharatavani Windows App