भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದೊಡ್ಡರೋಗ

(ಪವೈ) ಆಕ್ಟಿನಮೈಕೊಸಿಸ್ ಎಂಬ ಬ್ಯಾಕ್ಟೀರಿಯದ ಸೋಂಕಿನಿಂದ ಉಂಟಾಗುವ, ಸಾಮಾನ್ಯವಾಗಿ ದನಗಳಲ್ಲಿ, ವಿರಳವಾಗಿ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ನಾಲಗೆ, ದವಡೆ ಮತ್ತು ಜಠರಗಳ ಊತರೋಗ. ಕಿರಣ ಶಿಲೀಂದ್ರ ರೋಗ. ನೋಡಿ: ಗೋಮಾರಿ ರೋಗ

ದೋಣಿ

(ಸಾ) ನೀರಿನಲ್ಲಿ ತೇಲುತ್ತ ಸಾಗುವ ಸಾಧನ. ಓಡ. ಹರಿಗೋಲು

ದೋಣಿಕಪಾಲಿ

(ಜೀ) ಹಿಂಜರಿದ ಹಣೆ, ಉದ್ದಕ್ಕೆ ಹಿಂಚಾಚಿದ ಹಿಂದಲೆ, ಒಟ್ಟಾರೆ ದೋಣಿ ಆಕಾರದ ತಲೆ ಇರುವ ವ್ಯಕ್ತಿ

ದೋಲನಗಳು

(ಖ) ಚಂದ್ರನ ಅಥವಾ ಇತರ ಆಕಾಶ ಕಾಯಗಳ ಗೋಚರ ಕಂಪನಗಳು. ಪ್ರಮಾಣ ಅತಿ ಸೂಕ್ಷ್ಮ

ದೋಷ

(ಕಂ) ಕಂಪ್ಯೂಟರ್ ಕಾರ್ಯಕ್ರಮದಲ್ಲಿ ಕಂಡುಬರುವ ಒಂದು ದೋಷ. ಇದರಿಂದಾಗಿ ಇಡೀ ಕಾರ್ಯಕ್ರಮ ಸ್ಥಗಿತಗೊಳ್ಳ ಬಹುದು ಅಥವಾ ನಾಶಗೊಳ್ಳಬಹುದು. ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್‌ನ ವಿದ್ಯುನ್ಮಂಡಲದಲ್ಲಿ ಒಂದು ನಿಜವಾದ ಕೀಟ (ಬಗ್) ಪ್ರವೇಶಿಸಿ ಸಂಪರ್ಕ ವ್ಯತ್ಯಯ ಮಾಡಿದುದರಿಂದಾಗಿ ಈ ಪದವನ್ನು ಟಂಕಿಸಲಾಯಿತು. ಬಗ್

ದೋಷ

(ಗ) ಯಾವುದೇ ಸಂಖ್ಯೆಗೂ ಅದರ ಸನ್ನಿಹಿತ ಸಂಖ್ಯೆಗೂ ನಡುವಿನ ವ್ಯತ್ಯಾಸ. ಸರಿಯಾದ ಅಥವಾ ನಿಖರವಾದ ಫಲಿತಾಂಶದಿಂದ ಎಷ್ಟು ವ್ಯತ್ಯಾಸವಾಗಿದೆಯೋ ಆ ಮೊತ್ತ

ದೋಷ

(ಸಾ) ವಸ್ತುವೊಂದರಲ್ಲಿ ಸ್ಥಿರಪಟ್ಟ ಅಂಗೀಕೃತ ಮಿತಿ ಗಳನ್ನೂ ಮೀರಿರುವ ವಿಚ್ಚಿನ್ನತೆ (ಭೂವಿ) ರತ್ನಖನಿಜದಲ್ಲಿ ಬಿರುಕು, ಗೋಚರ ಅಪರಿಪೂರ್ಣ ಸ್ಫಟಿಕೀಕರಣ ಅಥವಾ ಆಂತರಿಕ ತಿರುಚು ಇಲ್ಲವೇ ಸೀಳಿಕೆಯಂಥ ದೋಷಯುತ ಭಾಗ. ನೋಡಿ: ಲೋಪ

ದೋಷ ನಿರ್ಮೂಲನ

(ಕಂ) ಕಂಪ್ಯೂಟರ್ ಕ್ರಮವಿಧಿಯ ಮೂಲ ಸಂಕೇತದಲ್ಲಿರುವ ದೋಷವನ್ನು ಪತ್ತೆ ಹಚ್ಚಿ, ಹೋಗಲಾಡಿಸಿ ಕ್ರಮವಿಧಿಯನ್ನು ಸರಿಪಡಿಸುವುದು. ಡಿಬಗ್

ದ್ಯುತಿ ಅನುವರ್ತನೆ

(ಸ) ಬೆಳಕಿನ ದಿಶೆಗೆ ಸಂಬಂಧಿಸಿದಂತೆ ಸಸ್ಯದ ಭಾಗ ವಾಲಿಕೊಂಡಿರುವುದು. ಪ್ರಕಾಶಾನುವರ್ತನೆ. ನೋಡಿ : ಪ್ರಕಾಶಾನುಚಲನೆ

ದ್ಯುತಿ ಅವಧಿತ್ವ

(ಜೀ) ಹಗಲಿನ ಅವಧಿಯಲ್ಲಾಗುವ ಬದಲಾವಣೆಗಳಿಗೆ ಜೀವಿಯ ಪ್ರತಿಕ್ರಿಯೆ. ಉದಾ: ಸಸ್ಯಗಳ ಹೂ ಅರಳುವಿಕೆ, ಪ್ರಾಣಿಗಳ ಚಲನವಲನ, ಸಂತಾನಕ್ರಿಯೆ ಮತ್ತಿತರ ಚಟುವಟಿಕೆಗಳು ಹಗಲಿನ ಅವಧಿ ಬದಲಾದಂತೆ ಬದಲುತ್ತಿರುತ್ತವೆ

ದ್ಯುತಿ ಉತ್ಸರ್ಜನೆ

(ಭೌ) ಧನ ವಿದ್ಯುತ್ ಆವೇಶ ಇರುವ ಲೋಹದಂಥ ಕಾಯವೊಂದರ ಮೇಲ್ಮೈ ಮೇಲೆ ಬೆಳಕು ಬಿದ್ದಾಗ ಆ ಕಾಯದಿಂದ ಎಲೆಕ್ಟ್ರಾನ್‌ಗಳು ಹೊರಹೊಮ್ಮುವುದು

ದ್ಯುತಿ ಎಳೆಗಳು

(ತಂ) ಅತಿಶುದ್ಧ ಗಾಜಿನ ಎಳೆಗಳು. ನಿಯಂತ್ರಿತ ಬೆಳಕಿನ ಸಂಜ್ಞೆಗಳನ್ನು ಪೂರ್ಣ ಆಂತರಿಕ ಪ್ರತಿಫಲನ ದಿಂದ ರವಾನಿಸಲು ಸಮರ್ಥವಾಗುವಂತೆ ಇವುಗಳ ಒಳಸ್ತರದ ವಕ್ರೀಭವನ ಸೂಚ್ಯಂಕ ಹೊರ ಕವಚದ ವಕ್ರೀಭವನ ಸೂಚ್ಯಂಕಕ್ಕಿಂತ ಅಧಿಕವಾಗಿರುತ್ತದೆ. ಇದರಿಂದಾಗಿ ಬೆಳಕನ್ನು ಅನೇಕ ಕಿಮೀ ದೂರ ಸ್ವಲ್ಪವೂ ಸೋರಿಕೆ ಇಲ್ಲದೆ ರವಾನಿಸಬಹುದು. ಎಳೆಗಳ ವ್ಯಾಸ ಕಿರಿದಾದುದರಿಂದ ಹೆಚ್ಚು ಅನುಕೂಲ. ವೆಚ್ಚವೂ ತಾಮ್ರದ ತಂತಿಗಳನ್ನು ಬಳಸಿದಾಗ ತಗಲುವ ವೆಚ್ಚಕ್ಕಿಂತ ಕಡಿಮೆ

ದ್ಯುತಿ ಕಾಲಲೇಖಿ

(ಖ) ಛಾಯಾಚಿತ್ರೀಕರಣ ಮೂಲಕ ನಕ್ಷತ್ರಗಳ ಸಂಕ್ರಮಣ ದಾಖಲಿಸುವ ಉಪಕರಣ

ದ್ಯುತಿ ಚಿಮುಟ

(ತಂ) ಬೆಳಕನ್ನು ಬಳಸಿ ನ್ಯಾನೊ ಕಣಗಳನ್ನೂ ಏಕಪರಮಾಣುಗಳನ್ನೂ ಸ್ಥಾನಪಲ್ಲಟಗೊಳಿಸುವ ಸಾಧನ. ಇಲ್ಲಿ ಕೇಂದ್ರೀಕೃತ ಲೇಸರ್ ದೂಲವನ್ನು ಉಚ್ಚ ಸಾಮರ್ಥ್ಯ ವುಳ್ಳ ಸೂಕ್ಷ್ಮದರ್ಶಕದ ವಸ್ತುಕದ ಮೂಲಕ ಮಾದರಿಯ ತಲದ ಮೇಲೆ ಆಯ್ಕೆ ಮಾಡಿದ ಬಿಂದುವಿನ ಮೇಲೆ ಹಾಯಿಸಲಾಗುವುದು. ಕೇಂದ್ರೀಕೃತ ಲೇಸರ್ ದೂಲದಿಂದಾಗಿ, ಆ ಬಿಂದುವಿನಲ್ಲಿ ಒಂದು ದ್ಯುತಿ ಹಿಡಿತ ಸೃಷ್ಟಿಯಾಗುತ್ತದೆ. ಈ ಹಿಡಿತವು ಚಿಮುಟದ ಹಾಗೆ ೧೦ ನ್ಯಾನೊಮೀಟರ್‌ನಿಂದ ಹಿಡಿದು ೧೦೦ ಮೈಕ್ರೊಮೀಟರ್ ಗಾತ್ರದ ವಸ್ತುಗಳನ್ನು ಹಿಡಿಯುವ ಸಾಮರ್ಥ್ಯ ಹೊಂದಿದೆ

ದ್ಯುತಿ ದೀಪ್ತಿ

(ತಂ) ಒಂದು ದ್ಯುತಿ ವಿದ್ಯಮಾನ. ಈ ಪ್ರಕ್ರಿಯೆಯಲ್ಲಿ ದ್ಯುತಿಶೀಲ ಪದಾರ್ಥವು ಅಲೆಯುದ್ದದ ವಿದ್ಯುತ್ಕಾಂತೀಯ ಕಿರಣಗಳನ್ನು ಹೀರಿಕೊಂಡು ದೀರ್ಘ ಅಲೆಯುದ್ದದ ಗೋಚರ ಕಿರಣಗಳನ್ನು ಉತ್ಸರ್ಜಿಸುತ್ತದೆ. ಇಲ್ಲಿ ದ್ಯುತಿ ಕಣಗಳಿಂದಲೇ ದೀಪ್ತಿ ಉಂಟಾಗುತ್ತಿರುವುದರಿಂದ, ಈ ಪ್ರಕ್ರಿಯೆಯನ್ನು ದ್ಯುತಿದೀಪ್ತಿ ಎನ್ನುವರು. ಕ್ವಾಂಟಮ್ ಸಿದ್ಧಾಂತದ ಪ್ರಕಾರ ದ್ಯುತಿ ಕಣವನ್ನು ಹೀರಿಕೊಂಡ ಪರಮಾಣುವಿನ ಎಲೆಕ್ಟ್ರಾನ್ ಗಳು ಉದ್ರೇಕ ಸ್ಥಿತಿಯನ್ನು ತಲಪಿ, ಪುನಃ ಸ್ಥಿರ ಮೂಲಸ್ಥಿತಿಗೆ ಬರುವ ಮುನ್ನ ಗೋಚರ ಕಿರಣಗಳ ದ್ಯುತಿಕಣಗಳನ್ನು ಉತ್ಸರ್ಜಿಸುತ್ತವೆ. ದ್ಯುತಿದೀಪ್ತಿ ತಂತ್ರವು, ದ್ಯುತಿಶೀಲ ಪದಾರ್ಥಗಳ ಶುದ್ಧತೆ,

ದ್ಯುತಿ ದೂರದರ್ಶಕ

(ಭೌ) ಗೋಚರ ಬೆಳಕನ್ನೇ (ರೇಡಿಯೋ ಅಲೆಗಳನ್ನಲ್ಲ) ಆಧಾರವಾಗಿ ಇಟ್ಟುಕೊಂಡು ನಿರ್ಮಿಸಿರುವ, ದೂರದ ವಸ್ತುಗಳು ಹತ್ತಿರದಲ್ಲಿ ಇರುವಂತೆ ತೋರಿಸುವ ಉಪಕರಣ. ವಿದ್ಯುತ್ಕಾಂತೀಯ ರೇಡಿಯೋ ಅಲೆಗಳು ಆಧಾರವಾಗಿರುವುದು ರೇಡಿಯೋ ದೂರದರ್ಶಕ (ನೋಡಿ)

ದ್ಯುತಿ ವಿದ್ಯುತ್‌ಕೋಶ

(ತಂ) ದ್ಯುತಿಯನ್ನು (ಬೆಳಕನ್ನು) ವಿದ್ಯುತ್ತಾಗಿ ಪರಿವರ್ತಿಸುವ ಸಾಧನ. ಇದರಲ್ಲಿರುವ ಸಂವೇದನ ಶೀಲ ಕ್ಯಾಥೋಡ್ ಮೇಲೆ ಬೆಳಕು ಬಿದ್ದಾಗ ಅದರಿಂದ ಪತನ ದ್ಯುತಿಯ ಆವೃತ್ತಿಗೆ ಅನುಗುಣವಾಗಿ ದ್ಯುತಿ ಎಲೆಕ್ಟ್ರಾನ್‌ಗಳು ವಿಮುಕ್ತಗೊಳ್ಳುತ್ತವೆ. ಇವು ಧನವಿಭವಯುತ ಆನೋಡ್ ತಲಪುವುದರಿಂದ ಬಾಹ್ಯಮಂಡಲ ದಲ್ಲಿ ವಿದ್ಯುತ್ ಹರಿಯುತ್ತದೆ. ಇದನ್ನು ಆಮ್ಮೀಟರ್‌ನಿಂದ ಅಳೆಯ ಬಹುದು. ಸಂವೇದನಶೀಲತೆ ಮತ್ತು ದಕ್ಷತೆ ಹೆಚ್ಚಿಸಲು ಕೆಲವು ದ್ಯುತಿ ವಿದ್ಯುತ್ಕೋಶಗಳಲ್ಲಿ ಆರ್ಗಾನ್‌ನಂಥ ಅನಿಲಗಳನ್ನು ತುಂಬಲಾಗುತ್ತದೆ

ದ್ಯುತಿಕೆತ್ತನೆ

(ತಂ) ಸಂಸ್ಕರಣ ಕ್ಯಾಮೆರಾ ಸಹಾಯದಿಂದ ಉಬ್ಬುಚಿತ್ರ ಫಲಕ ಮಾಡಿ ಎಲೆಕ್ಟ್ರಾನಿಕ್ ಕೆತ್ತನೆ ಯಂತ್ರದಿಂದ ಕೊರೆಯುವುದು. ಫೋಟೊ ಎನ್‌ಗ್ರೇವಿಂಗ್

ದ್ಯುತಿಕೇಂದ್ರ

(ಭೌ) ಮಸೂರದ ಪ್ರಧಾನಾಕ್ಷದ ಮೇಲಿರುವ ಈ ಬಿಂದುವಿನ ಮೂಲಕ ಸಾಗುವ ಕಿರಣದ ಆಪಾತ ಮತ್ತು ನಿರ್ಗಮ ದಿಶೆಗಳು ಸಮಾಂತರವಾಗಿವುವು. ವಸ್ತುವಿನ ಹಾಗೂ ಬಿಂಬದ ದೂರ, ನಾಭಿದೂರ ಇತ್ಯಾದಿಗಳನ್ನು ಈ ಬಿಂದು ಕುರಿತಂತೆ ನಿರ್ಧರಿಸಲಾಗುವುದು

ದ್ಯುತಿಕ್ರಿಯಾವರ್ಧನೆ

(ರ) ಬೆಳಕಿನ ದೆಸೆಯಿಂದಾಗಿ ರಾಸಾಯನಿಕ ಕ್ರಿಯೆಗಳಲ್ಲಾಗುವ ವೇಗೋತ್ಕರ್ಷ ಅಥವಾ ವೇಗಾಪಕರ್ಷಣದ ದರ. ಫೋಟೊಕೆಟಾಲಿಸಿಸ್

Search Dictionaries

Loading Results

Follow Us :   
  Download Bharatavani App
  Bharatavani Windows App