भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous12Next >

ಥಯಮೀನ್

(ರ) ವೈಟಮಿನ್ ಬಿ೧. ಸೂತ್ರ C12H17ON4SCl. ಬಿ ಕಾಂಪ್ಲೆಕ್ಸ್ ವೈಟಮಿನ್‌ಗಳ ಪೈಕಿ ಒಂದು. ನೀರಿನಲ್ಲೂ ಆಲ್ಕಹಾಲ್‌ನಲ್ಲೂ ವಿಲೇಯವಾಗುವ ಬಿಳಿ ಸ್ಫಟಿಕೀಯ ಪುಡಿ. ಜೀವಿಗಳಲ್ಲಿ ಕಾರ್ಬೊಹೈಡ್ರೇಟ್‌ಗಳ ಉಪಾಪಚಯಕ್ಕೆ ಅತ್ಯವಶ್ಯ. ಯಕೃತ್ತು, ಹಾಲು, ಮೊಟ್ಟೆ ಹಾಗೂ ಹಣ್ಣುಗಳಲ್ಲಿ ಲಭ್ಯ. ಇದರ ಕೊರತೆ ಬೆರಿಬೆರಿ ರೋಗಕ್ಕೂ ನರಸಂಬಂಧಿ ವ್ಯಾಧಿಗಳಿಗೂ ಕಾರಣವಾಗುತ್ತದೆ

ಥಯಮೈಡ್

(ರ) ಅಮೈಡ್‌ಗಳ ರಚನೆಯೇ ಇದ್ದು ಆಕ್ಸಿಜನ್ (O) ಸ್ಥಳದಲ್ಲಿ ಸಲ್ಫರ್ (S) ಇರುವ ಪದಾರ್ಥಗಳ ಗುಂಪಿನ ಪೈಕಿ ಯಾವುದೇ ಒಂದು. ಥಯೊಅಸಿಟಮೈಡ್ ಒಂದು ಉದಾಹರಣೆ. CH3.CS.NH2

ಥಯೊನಿಲ್

(ರ) ಸಲ್ಫರ್ ಮಾನಾಕ್ಸೈಡ್ ಗುಂಪಿಗೆ ಸೇರಿದ್ದು

ಥಯೊಸಲ್ಫೇಟ್

(ರ) S2O3 ಗುಂಪನ್ನು ಒಳಗೊಂಡಿರುವ ಯಾವುದೇ ಪದಾರ್ಥ. ಥಯೊಸಲ್ಫ್ಯೂರಿಕ್ ಆಮ್ಲದ (H2SO3) ಲವಣ/ಎಸ್ಟರ್. ಉದಾ: ಸೋಡಿಯಮ್ ಹೈಡ್ರಾಕ್ಸೈಡ್ ಹಾಗೂ ಥಯೊಸಲ್ಫ್ಯೂರಿಕ್ ಆಮ್ಲಗಳ ಕ್ರಿಯೆಯ ಫಲವಾಗಿ ಸೋಡಿಯಮ್ ಥಯೊಸಲ್ಫೇಟ್ ಉತ್ಪಾದನೆಯಾಗುತ್ತದೆ. ‘ಥಯೊ’ ಎಂಬ ಪೂರ್ವ ಪ್ರತ್ಯಯ ಸಲ್ಫರ್ (ಗಂಧಕ) ಸೂಚಕ

ಥರ್ಮಾಮೀಟರ್

(ವೈ) ಉಷ್ಣತೆಯನ್ನು ಅಳೆಯಲು ಬಳಸುವ ಒಂದು ಉಪಕರಣ. ತಾಪಮಾಪಕ. ಇದರಲ್ಲಿ ಉದ್ದೇಶಕ್ಕನುಗುಣವಾಗಿ ನಾನಾ ಮಾದರಿಯ ಉಷ್ಣತಾಮಾಪಕಗಳುಂಟು. ಆದರೆ ಎಲ್ಲವೂ, ಉಷ್ಣತೆ ಹೆಚ್ಚು ಕಡಿಮೆ ಆದಂತೆ ವಸ್ತುವಿನ ಯಾವುದಾದರೊಂದು ಗುಣದಲ್ಲೂ ಹೆಚ್ಚು ಕಡಿಮೆ ಆಗುತ್ತದೆಂಬ ಸೂತ್ರವನ್ನು ಉಪಯೋಗಿಸಿಕೊಂಡು ಉಷ್ಣತೆಯನ್ನು ಅಳೆಯುತ್ತವೆ. ಉದಾ: ನಳಿಕೆಯಲ್ಲಿ-ದ್ರವ-ಥರ್ಮಾ ಮೀಟರುಗಳು: ದ್ರವದ (ಸಾಮಾನ್ಯವಾಗಿ ಪಾದರಸದ ಅಥವಾ ರಂಗು ಸೇರಿಸಿದ ಆಲ್ಕಹಾಲ್‌ನ) ವ್ಯಾಕೋಚನವನ್ನು ಅವಲಂಬಿಸಿ ಉಷ್ಣತೆಯನ್ನು ಅಳೆಯುತ್ತವೆ. ದ್ವಿಲೋಹ ಥರ್ಮಾಮೀಟರುಗಳು : ಎರಡು ವಿಷಮ ಲೋಹಗಳ ಅಸಮ ವ್ಯಾಕೋಚನವನ್ನು ಅವಲಂಬಿಸಿ ಉಷ್ಣತೆಯನ್ನು ಅಳೆಯುತ್ತವೆ. ಈ ಲೋಹಗಳನ್ನು ಕೂಡಿಸಿದ ಸುರುಳಿಗೆ ಲಗತ್ತಾದ ಫಲಕದ ಮೇಲಿನ ಸೂಚಿಯು ಚಲಿಸುತ್ತ ಉಷ್ಣತೆಯ ಪ್ರಮಾಣವನ್ನು ತಿಳಿಸುತ್ತದೆ. ಅನಿಲ ಥರ್ಮಾಮೀಟರುಗಳು: ಸ್ಥಿರ ಗಾತ್ರದಲ್ಲಿರಿಸಿದ ಅನಿಲದ ಒತ್ತಡದಲ್ಲಿ ಆಗುವ ವ್ಯತ್ಯಾಸವನ್ನು ಅವಲಂಬಿಸಿ ಉಷ್ಣತೆಯನ್ನು ಅಳೆಯುತ್ತವೆ. ಇವು ನಳಿಕೆಯಲ್ಲಿ-ದ್ರವ-ಥರ್ಮಾಮೀಟರುಗಳಿಗಿಂತ ಹೆಚ್ಚು ನಿಷ್ಕೃಷ್ಟ. ಪ್ರತಿರೋಧ ಥರ್ಮಾಮೀಟರುಗಳು: ಉಷ್ಣತೆಯಲ್ಲಿ ವ್ಯತ್ಯಾಸ ವಾದಾಗ ವಾಹಕ ಅಥವಾ ಅರೆವಾಹಕಗಳ ಪ್ರತಿರೋಧದಲ್ಲಾಗುವ ವ್ಯತ್ಯಯವನ್ನು ಅವಲಂಬಿಸಿರುತ್ತವೆ. ಪ್ಲಾಟಿನಮ್, ನಿಕಲ್ ಹಾಗೂ ತಾಮ್ರ ಇವುಗಳಲ್ಲಿ ಸಾಮಾನ್ಯವಾಗಿ ಬಳಸುವ ಲೋಹಗಳು

ಥರ್ಮಾಸ್ ಫ್ಲಾಸ್ಕ್

(ತಂ) ನೋಡಿ : ಡಿವಾರ್ ಜಾಡಿ

ಥರ್ಮಿಯಾನಿಕ್ ಪ್ರವಾಹ

(ಭೌ) ತಪ್ತ ಕ್ಯಾಥೋಡ್‌ನಿಂದ ಹೊರಟು ಇತರ ಎಲೆಕ್ಟ್ರೋಡ್‌ಗಳತ್ತ ಹರಿಯುವ ಎಲೆಕ್ಟ್ರಾನ್ ಹೊನಲು

ಥರ್ಮಿಯಾನಿಕ್ಸ್

(ಭೌ) ತಪ್ತ ಕಾಯಗಳು ನಿರ್ದ್ರವ್ಯತೆ ಯಲ್ಲಿ ಉತ್ಸರ್ಜಿಸುವ ಎಲೆಕ್ಟ್ರಾನ್‌ಗಳ ಪರಿಣಾಮವನ್ನೂ ವರ್ತನೆ ಯನ್ನೂ ಅಂಥ ಎಲೆಕ್ಟ್ರಾನ್‌ಗಳ ನಿಯಂತ್ರಣ ವಿಧಾನಗಳನ್ನೂ ಅಭ್ಯಸಿಸುವ ವಿಜ್ಞಾನ ವಿಭಾಗ

ಥರ್ಮಿಯಾನ್

(ಭೌ) ಕಾಸಿದ ವಸ್ತು ಉತ್ಸರ್ಜಿಸುವ ಧನಾವಿಷ್ಟ ಇಲ್ಲವೇ ಋಣಾವಿಷ್ಟ ಕಣ. ಉದಾ: ಥರ್ಮಿಯಾನಿಕ್ ನಾಳದ ತಪ್ತ ಕ್ಯಾಥೋಡ್ ಉತ್ಸರ್ಜಿಸುವ ಕಣ

ಥರ್ಮಿಸ್ಟರ್

(ಭೌ) ಈ ಅರೆವಾಹಕದಲ್ಲಿ ಉಷ್ಣತೆಯ ಏರಿಕೆಯೊಂದಿಗೆ ವಿದ್ಯುತ್ ರೋಧ ತೀವ್ರವಾಗಿ ಇಳಿಯುತ್ತದೆ. ಉದಾ: ೨೦0ಸೆನಲ್ಲಿ ರೋಧ ೧೦೫ ಓಮ್ ದರ್ಜೆಯಲ್ಲಿದ್ದರೆ ೧೦೦0ಸೆನಲ್ಲಿ ಕೇವಲ ೧೦ ಓಮ್ ದರ್ಜೆಯಲ್ಲಿರುತ್ತದೆ. thermal resistor ಪದಗಳ ಹ್ರಸ್ವರೂಪವಿದು. ನಿರ್ವಾತ ಮಾಪಕಗಳಲ್ಲಿ, ತಡವಾಗಿ ಕೆಲಸ ಮಾಡುವ ಸ್ವಿಚ್‌ಗಳಲ್ಲಿ ಹಾಗೂ ವೋಲ್ಟೇಜ್ ನಿಯಂತ್ರಕಗಳಲ್ಲಿ ಬಳಕೆ

ಥರ್ಮೈಟ್

(ರ) ಅಲ್ಯೂಮಿನಿಯಮ್ ಪುಡಿ ಮತ್ತು ಲೋಹದ ಆಕ್ಸೈಡ್‌ಗಳ (ಉದಾ: ಫೆರಿಕ್ ಆಕ್ಸೈಡ್) ಮಿಶ್ರಣ. ಮೆಗ್ನೀಸಿಯಮ್ ರಿಬ್ಬನ್ ಸಹಾಯದಿಂದ ಮಿಶ್ರಣವನ್ನು ಹೊತ್ತಿಸಿದರೆ, ಅಲ್ಯೂಮಿನಿಯಮ್ಮು ಲೋಹದ ಆಕ್ಸೈಡನ್ನು ಆಯಾ ಲೋಹಕ್ಕೆ ಅಪಕರ್ಷಿಸಿ ಮಿಶ್ರಣವೇ ಅಲ್ಯೂಮಿನಿಯಮ್ ಆಕ್ಸೈಡ್ ಆಗುತ್ತದೆ ಮತ್ತು ಕ್ರೋಮಿಯಮ್, ಮ್ಯಾಂಗನೀಸ್‌ನಂಥ ತಾಪ ನಿರೋಧಕ (ಉನ್ನತ ದ್ರಬಿಂ. ಇರುವ) ಲೋಹಗಳನ್ನೂ ದ್ರವಸ್ಥಿತಿ ಯಲ್ಲಿ ಇಟ್ಟಿರಲು ಸಾಕಾಗುವಷ್ಟು ಉಷ್ಣ ಬಿಡುಗಡೆಯಾಗುತ್ತದೆ. ಕಬ್ಬಿಣ ಮತ್ತು ಉಕ್ಕುಗಳನ್ನು ಬೆಸೆಯಲೂ ಅಗ್ನಿ ಉತ್ಪಾದಕ ಬಾಂಬುಗಳಲ್ಲೂ ಬಳಕೆ. ನೋಡಿ : ಗೋಲ್ಡ್‌ಷ್ಮಿಟ್ ವಿಧಾನ

ಥರ್ಮೊಆಮ್ಮಿಟರ್

(ಭೌ) ಅಳತೆ ಮಾಡಲು ಉದ್ದೇಶಿಸಿದ ವಿದ್ಯುತ್ ಪ್ರವಾಹವನ್ನು ಉಷ್ಣಯುಗ್ಮದ ಮೂಲಕ ಕಳಿಸಿದಾಗ ಅದರಲ್ಲಿ ಉತ್ಪತ್ತಿಯಾಗುವ ವೋಲ್ಟೇಜ್‌ನಿಂದ ಚಾಲೂಗೊಳ್ಳುವ ಆಮ್ಮೀಟರ್. ರೇಡಿಯೋ ಆವೃತ್ತಿ ಪ್ರವಾಹ ಗಳನ್ನು ಅಳೆಯಲು ಬಳಕೆ

ಥರ್ಮೊಪೈಲ್

(ಭೌ) ವಿಕಿರಣ ಶಕ್ತಿಯನ್ನು ಪತ್ತೆಹಚ್ಚಿ ಅದರ ತೀವ್ರತೆಯನ್ನು ಅಳೆಯಲು ಬಳಸುವ ಸಾಧನ. ಅಧಿಕ ಸೂಕ್ಷ್ಮಗ್ರಹಣತೆ ಸಾಧಿಸುವ ಸಲುವಾಗಿ ಇದರಲ್ಲಿ ಹಲವಾರು ಉಷ್ಣಯುಗ್ಮಗಳನ್ನು ಶ್ರೇಣಿಯಲ್ಲಿ ಸಂಯೋಜಿಸಲಾಗಿರುತ್ತದೆ. ಉಷ್ಣಯುಗ್ಮಗಳ ತಪ್ತಸಂಧಿಗಳನ್ನು ಕಪ್ಪುಗೊಳಿಸಿ ಅಳೆಯಬೇಕಾದ ವಿಕಿರಣಕ್ಕೆ ಒಡ್ಡಲಾಗುವುದು. ಅದೇ ವೇಳೆ ತಂಪು ಸಂಧಿಗಳಿಗೆ ಆ ವಿಕಿರಣ ಬಡಿಯದಂತೆ ಎಚ್ಚರ ವಹಿಸಲಾಗುವುದು. ಆಗ ಉಂಟಾಗುವ ಉಷ್ಣ ವಿದ್ಯುಚ್ಚಾಲಕ ಬಲ ತಪ್ತಸಂಧಿಯಲ್ಲಿಯ ಹೆಚ್ಚಿನ ಉಷ್ಣತೆಯನ್ನು ಲೆಕ್ಕಹಾಕಲು ಮತ್ತು ವಿಕಿರಣ ತೀವ್ರತೆಯನ್ನು ನಿಗಮಿಸಲು ನೆರವಾಗುವುದು. ಸೌರಶಾಖ ವಿಕಿರಣ ಅಳೆಯಲು ಬಳಕೆ. ಉಷ್ಣಯುಗ್ಮ ಶ್ರೇಣಿ

ಥರ್ಮೊಪ್ಲಾಸ್ಟಿಕ್

(ಭೌ) ಕಾಸಿದಾಗ ನಮ್ಯವಾಗುವ ಪದಾರ್ಥ. ಉಷ್ಣ ಪ್ರಯೋಗದಿಂದ ಮತ್ತೆ ಮತ್ತೆ ಕರಗಿಸಿದರೂ ಮಿದುವಾಗಿಸಿದರೂ ಗುಣಗಳಲ್ಲಿ ಬದಲಾವಣೆಯಾಗದ ಪ್ಲಾಸ್ಟಿಕ್. ಉದಾ: ಸೆಲ್ಯುಲೋಸ್‌ನಿಂದ ತಯಾರಿಸಿದ ವಸ್ತುಗಳು, ವಿನೈಲ್ ಪಾಲಿಮರ್‌ಗಳು, ರಾಳ ಇತ್ಯಾದಿ

ಥರ್ಮೊಲಿಸಿಸ್

(ರ) ಉಷ್ಣದ ಪರಿಣಾಮವಾಗಿ ಅಣುಗಳು ವಿಭಜನೆಗೊಳ್ಳುವ ಪ್ರಕ್ರಿಯೆ. (ಪ್ರಾ) ದೇಹೋಷ್ಣ ನಷ್ಟ

ಥರ್ಮೊಸ್ಟ್ಯಾಟ್

(ತಂ) ವ್ಯವಸ್ಥೆಯೊಂದರ ಉಷ್ಣತೆ ಯನ್ನು ಸ್ಥಿರಮಟ್ಟದಲ್ಲಿರಿಸುವ ಸಲಕರಣೆ. ಉಷ್ಣತೆ ಹೆಚ್ಚಿದಾಗ ತಾಪಸ್ಥಾಪಿಯಲ್ಲಿಯ ಸಂವೇದಕ ಘಟಕ ಕ್ರಿಯೆ ನಿಲ್ಲಿಸಿ, ಕಡಿಮೆ ಯಾದಾಗ ಕ್ರಿಯೆ ಪ್ರಾರಂಭಿಸಿ, ಉಷ್ಣತೆಯನ್ನು ಪೂರ್ವನಿರ್ಧರಿತ ಸ್ಥಿರಮಟ್ಟದಲ್ಲಿರಿಸುತ್ತದೆ. ನೀರು ಕಾಸುವ ಸಾಧನಗಳಲ್ಲಿ , ಶೀತಕ ಯಂತ್ರಗಳಲ್ಲಿ, ಕೋಣೆ ಹವಾನಿಯಂತ್ರಣ ಸಾಧನಗಳಲ್ಲಿ ಬಳಕೆ. ಯಾಂತ್ರಿಕ ಹಾಗೂ ಡಿಜಿಟಲ್ ಎಂಬ ಬಗೆಗಳುಂಟು. ತಾಪಸ್ಥಾಪಿ

ಥರ್ಮ್

(ಭೌ) ಉಷ್ಣ ಪರಿಮಾಣದ ವ್ಯಾವಹಾರಿಕ ಅಳತೆ. ೧೦೦,೦೦೦ ಬ್ರಿಟಿಷ್ ಥರ್ಮಲ್ ಏಕಮಾನಗಳು = ೨೫,೨೦೦,೦೦೦ ಕ್ಯಾಲರಿಗಳು = ೧.೦೫೫೦೬ X ೧೦೮ ಜೂಲ್‌ಗಳು

ಥೋರಿಯಮ್

(ರ) ವಿಕಿರಣಪಟು ಲೋಹೀಯ ಧಾತು. ಗಾಢ ಬೂದು ಬಣ್ಣ. ಪ್ರತೀಕ th. ಪಸಂ. ೯೦. ಸಾಪರಾ ೨೩೨.೦೩೮. ಸಾಸಾಂ ೧೧.೭೨. ದ್ರಬಿಂ ೧೭೫೦0ಸೆ. ಕುಬಿಂ ೪೫೦೦0ಸೆ. ಮಾನೊಜೈಟ್ ಖನಿಜದಲ್ಲಿ ಲಭ್ಯ. ಭಾರತದಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಬೈಜಿಕ ಶಕ್ತಿಯ ವಿಭವ ಆಕರ. ೨೩೨thಅನ್ನು ನ್ಯೂಟ್ರಾನ್ ಕಣಗಳಿಂದ ತಾಡಿಸಿ ಪಡೆದ ವಿದಳನಶೀಲ ೨೩೩Uಅನ್ನು ಬೈಜಿಕ ಕ್ರಿಯಾಕಾರಿಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ೨೩೨th ಕ್ಷಯಿಸಿ ೨೦೮Pb ಲಭಿಸುತ್ತದೆ. ೨೩೨೯೦th ಸಮಸ್ಥಾನಿಯ ಅರ್ಧಾಯು ೧.೪ X ೧೦೧೦ ವರ್ಷಗಳು

ಥ್ಯಾಲಮಸ್

(ವೈ) ಮಿದುಳಿನಿಂದ ನರ ಹೊರಡುವ ಸ್ಥಳ. ಕಶೇರುಕಗಳ ಮಿದುಳಿನಲ್ಲಿ, ಥ್ಯಾಲಮೆನ್ ಸೆಫಲಾನ್‌ನ ಬೆನ್ನಬದಿ ವಲಯದ ಹೆಚ್ಚು ದೊಡ್ಡದಾದ ಹಾಗೂ ಹೆಚ್ಚು ಕೆಳಗಿನ ಭಾಗ. ಆವೇಗಗಳನ್ನು ಪ್ರಜ್ಞಾಪೂರ್ವಕ ಸಂವೇದನೆಗಳನ್ನಾಗಿ ಪರಿವರ್ತಿ ಸುತ್ತದೆ. ಕೆಲವು ಸಂಜ್ಞೆಗಳನ್ನು ದಮನಮಾಡಿ ಕೆಲವನ್ನು ಹೆಚ್ಚಿಸುವ ಸಾಮರ್ಥ್ಯವೂ ಇದಕ್ಕಿದೆ. ಹಾಗಾಗಿ ಇದನ್ನು ಮಿದುಳಿನ ‘ಶ್ರೇಷ್ಠ ಪ್ರಸಾರ ಕೇಂದ್ರ’ ಎಂದೂ ಕರೆಯುತ್ತಾರೆ. (ಸ) ಪುಷ್ಪಾಧಾರ, ಪತ್ರದಳ, ಪುಷ್ಪದಳ, ಶಲಾಕಮಂಡಲ ಉಪಸ್ಥಿತವಿರುವ ಹೂವಿನ ಅಕ್ಷದ ಬುಗುಟೆಯಾಕಾರದ ತುದಿ

ಥ್ಯಾಲಿಕ್ ಆಮ್ಲಗಳು

(ರ) C6H4 (COOH)2 ೧. ಥ್ಯಾಲಿಕ್ ಆಮ್ಲ ಆರ್ಥೊರೂಪ. ೧,೨-ಬೆನ್ಝೀನ್ ಡೈ ಕಾರ್ಬಾಕ್ಸಿಲಿಕ್ ಆಮ್ಲ. ಬಿಳಿ ಹರಳು ರೂಪಿ ಘನ. ದ್ರಬಿಂ. ೨೦೭0ಸೆ. ಆರ್ಗ್ಯಾನಿಕ್ ಸಂಶ್ಲೇಷಣೆಯಲ್ಲಿ ಉಪಯುಕ್ತ. ೨. ಐಸೊಥ್ಯಾಲಿಕ್ ಆಮ್ಲ. ಮೆಟಾರೂಪ ೧,೩ -ಬೆನ್ಝೀನ್ ಡೈಕಾರ್ಬಾಕ್ಸಿಲಿಕ್ ಆಮ್ಲ. ದ್ರಬಿಂ. ೩೪೫-೭0 ಸೆ. ಸಂಶ್ಲೇಷಿತ ರಾಳಗಳು ಮತ್ತು ಪ್ಲಾಸ್ಟಿಕ್‌ಗಳ ತಯಾರಿಕೆಯಲ್ಲಿ ಬಳಕೆ. ೩. ನೋಡಿ: ಟೆರೆ ಫ್ತ್ಯಾಲಿಕ್ ಆಮ್ಲ
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App