भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತಾಡನಾಕೃತಿ

(ಭೂವಿ) ಅಭ್ರಕದಂಥ ಖನಿಜಗಳ ಮೇಲೆ ಮೊನಚಾದ ಸಾಧನದಿಂದ ತಟ್ಟಿದಾಗ ಉಂಟಾಗುವ ಕಿರಣ ಸಾಲುಗಳು

ತಾಡಿಸು

(ಭೌ) ಬೈಜಿಕ ಕ್ರಿಯೆಗಳನ್ನು ಉಂಟುಮಾಡ ಲೋಸುಗ ನ್ಯೂಟ್ರಾನ್‌ಗಳ ಅಥವಾ ಉಚ್ಚಶಕ್ತಿ ಆವಿಷ್ಟ ಕಣಗಳ ದಂಡವನ್ನು ಗುರಿಯತ್ತ ನಿರ್ದೇಶಿಸು

ತಾತ್‌ಕ್ಷಣಿಕ ಆವರ್ತನ ಕೇಂದ್ರ

(ತಂ) ಉರುಳುತ್ತಿರುವ ಗಾಲಿಯಲ್ಲಿ, ದತ್ತ ಕ್ಷಣದಲ್ಲಿ ನೆಲದೊಂದಿಗೆ ಸ್ಪರ್ಶವಿರುವ, ಗಾಲಿಯ ಮೇಲೆಯೇ ಇರಬೇಕೆಂದೇನೂ ಅಲ್ಲದ, ಕಾಲ್ಪನಿಕ ಬಿಂದು

ತಾಂತ್ರಿಕ

(ತಂ) ಜ್ಞಾನವನ್ನು ವಿಶ್ಲೇಷಿಸಿ ವಿವರಿಸುವಾಗ ಬಳಸುವ ವಿಶಿಷ್ಟ ಶಾಸ್ತ್ರೀಯ ಪದ

ತಾಪ

(ಭೌ) ನೋಡಿ: ಉಷ್ಣತೆ

ತಾಪ ಗ್ಯಾಲ್ವನೀಕರಣ

(ತಂ) ಕರಗಿಸಿದ ಸತುವಿನಲ್ಲಿ ಯಾವುದೇ ವಸ್ತುವನ್ನು (ಉದಾ: ಕಬ್ಬಿಣವನ್ನು) ಮುಳುಗಿಸಿಟ್ಟು ಅದರ ಮೇಲೆ ಸಂಕ್ಷಾರಣ-ರೋಧಕ (ತುಕ್ಕು ಹಿಡಿಯದ) ಸ್ತರ ಉಂಟುಮಾಡುವ ಪ್ರಕ್ರಿಯೆ. ಇದು ಸತುವಿನ ವಿದ್ಯುಲ್ಲೇಪನ ಕ್ರಿಯೆಯಿಂದ ಭಿನ್ನವಾದುದು

ತಾಪದೀಪ್ತ

(ಭೌ) ಅಧಿಕೋಷ್ಣತೆಯಿಂದ ಬೆಳಗುವ

ತಾಪದೀಪ್ತಿ

(ಭೌ) ವಸ್ತುವೊಂದನ್ನು ಉನ್ನತ ಉಷ್ಣತೆಗೆ ಕಾಸಿದಾಗ (ಉದಾ: ವಿದ್ಯುದ್ದೀಪದ ಫಿಲಮೆಂಟ್) ಅದರಿಂದ ಹೊರಹೊಮ್ಮುವ ಬೆಳಕು. ಬೆಳಕಿನ ಬಣ್ಣ ಉಷ್ಣತೆಯ ಪ್ರಮಾಣವನ್ನು ಅವಲಂಬಿಸಿದೆ (ವಿಶೇಷವಾಗಿ ಘನ, ದ್ರವ ಪದಾರ್ಥಗಳ ವಿಷಯದಲ್ಲಿ). ಪ್ರಜ್ವಲನ

ತಾಪನಿರೋಧಕ

(ತಂ) ಉನ್ನತ ತಾಪನಿರೋಧಕ ಸಾಮರ್ಥ್ಯವುಳ್ಳ ವಸ್ತು. ಉದಾ: ಜೇಡಿಮಣ್ಣು , ಲೋಹಗಳು ಅಥವಾ ಇತರ ವಸ್ತುಗಳಿಂದ ತಯಾರಿಸಿದ ಪಿಂಗಾಣಿ

ತಾಪನಿರೋಧಕ ಕುಲುಮೆ

(ತಂ) ಸಿಲಿಕ, ಡೊಲೊಮೈಟ್‌ಗಳಂಥ ತಾಪನಿರೋಧಕ ಲೇಪಿತ ಕುಲುಮೆ

ತಾಪಮಾಪಕ

(ಭೌ) ನೋಡಿ:ಥರ್ಮಾಮೀಟರ್

ತಾಮ್ರ

(ರ) ಆವರ್ತ ಕೋಷ್ಟಕದ ೧ನೆಯ ಗುಂಪಿನಲ್ಲಿ ಬರುವ ಉಜ್ಜ್ವಲ ಕೆಂಪುಛಾಯೆಯ ಲೋಹಧಾತು. ಪ್ರತೀಕ Cu (ಲ್ಯಾಟಿನ್‌ನ ಕುಪ್ರಮ್‌ನಿಂದ, ಸೈಪ್ರಸ್ ದ್ವೀಪದ ಅದಿರು ಎಂದರ್ಥ). ಪಸಂ ೨೯, ಸಾಪರಾ ೬೩. ೫೪, ದ್ರಬಿಂ ೧೦೮೩0 ಸೆ. ಕುಬಿಂ ೨೩೩೬0 ಸೆ. ತನ್ಯ ಮತ್ತು ಪತ್ರಶೀಲ ಗುಣ ಇರುವುದರಿಂದ ಇದನ್ನು ನವುರು ತಂತಿಯಾಗಿ ಎಳೆಯಬಹುದು, ತೆಳು ತಗಡಾಗಿ ತಟ್ಟಬಹುದು. ಉಚ್ಚಮಟ್ಟದ ವಿದ್ಯುದ್ವಾಹಕ ಹಾಗೂ ಉಷ್ಣವಾಹಕ. ಹಿತ್ತಾಳೆ, ಕಂಚು, ಜರ್ಮನ್ ಸಿಲ್ವರ್ ಮುಂತಾದ ಮಿಶ್ರಲೋಹಗಳ ಮುಖ್ಯ ಘಟಕ. ಮನುಷ್ಯ ಬಳಕೆಗೆ ತಂದ ಮೊದಲ, ಬಲು ಉಪಯುಕ್ತ ಲೋಹಗಳಲ್ಲೊಂದು

ತಾಮ್ರ ಯುಗ

(ಸಾ) ನಾಗರಿಕತೆಯ ಹರವಿನಲ್ಲಿ ನವಶಿಲಾ ಯುಗಕ್ಕೂ ಕಂಚುಯುಗಕ್ಕೂ ನಡುವಿನ ಅವಧಿ. ತಾಮ್ರದ ಉಪಯೋಗವನ್ನು ಮಾನವ ಕಂಡುಕೊಂಡ ಕಾಲ. ಕ್ರಿ.ಪೂ. ಸು. ೨೦೦೦

ತಾಮ್ರಕಾರ

(ಸಾ) ತಾಮ್ರದ ಪಾತ್ರೆಗಳು, ಪದಾರ್ಥ ಗಳನ್ನು ಮಾಡುವವ, ತಾಮ್ರ ಕೆಲಸದವನು

ತಾಮ್ರಶೀರ್ಷಿ

(ಪ್ರಾ) ಅಮೆರಿಕ, ಆಸ್ಟ್ರೇಲಿಯ ದೇಶ ಗಳಲ್ಲಿ ಕಂಡುಬರುವ ಒಂದು ಬಗೆಯ ವಿಷಹಾವು

ತಾಯಿಬೇರು

(ಸ) ಬೇರು ಸಮೂಹದಲ್ಲಿ ಕೇಂದ್ರೀಯ ಅಕ್ಷವಾಗಿದ್ದು ನೆಲದಾಳಕ್ಕೆ ತೂರುವ ಮುಖ್ಯ ಬೇರು. ಉಳಿದೆಲ್ಲ ಬೇರುಗಳಿಗಿಂತ ಗಾತ್ರದಲ್ಲಿ ದಪ್ಪ. ಕೆಲವು ಸಸ್ಯಗಳು ಇದರಲ್ಲಿ ಆಹಾರ ಸಂಚಯಿಸಿಡುವುವು. ಉದಾ: ಗಜ್ಜರಿ, ಮೂಲಂಗಿ, ಬೀಟ್‌ರೂಟ್

ತಾಯ್ತನ

(ವೈ) ಪ್ರಸವಪೂರ್ವ, ಪ್ರಸವ, ಪ್ರಸವೋತ್ತರ ಕಾಲಗಳಲ್ಲಿ ತಾಯಿಯ ದೈಹಿಕ ಮಾನಸಿಕ ಭಾವನಾತ್ಮಕ ಸ್ಥಿತಿ. ಮಾತೃತ್ವ

ತಾರ

(ಭೌ) ಮೇಲು / ಎತ್ತರ ಮಟ್ಟದ ಸ್ವರ

ತಾರಾಲಯ

(ಖ) ಆಕಾಶ ಕಾಯಗಳ ವ್ಯಕ್ತ ಚಲನ ಗಳನ್ನು ದ್ಯುತಿ ಸಾಧನಗಳ ಮೂಲಕ ಪ್ರದರ್ಶಿಸುವ ಕಟ್ಟಡ. ಸಭಾಭವನದ ಗುಮ್ಮಟಾಕಾರದ ಮೇಲ್ಚಾವಣಿಯ ಒಳಮೈ ಮೇಲೆ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿರುತ್ತದೆ. ಕೃತಕ ನಭೋಮಂಡಲ

ತಾರೆಣ್ಣೆ ಆಮ್ಲಗಳು

(ರ) ಫೀನಾಲುಗಳನ್ನು ಒಳಗೊಂಡಿರುವ ಆಮ್ಲಗಳು

Search Dictionaries

Loading Results

Follow Us :   
  Download Bharatavani App
  Bharatavani Windows App