Navakarnataka Vijnana Tantrajnana Padasampada (2011)
Navakarnataka Publications Private Limited
ತ್ರಿವಳಿ
(ರ) ಎರಡು ಅಯುಗ್ಮಿತ (ಅನ್ಪೇರ್ಡ್) ಎಲೆಕ್ಟ್ರಾನ್ಗಳಿರುವ ಸ್ಥಿತಿ. (ಭೌ) ರೋಹಿತದಲ್ಲಿ ತೀರ ಒತ್ತೊತ್ತಿಗೆ ಇದ್ದು ಒಂದೇ ಗೆರೆ ಎಂದು ಭಾಸವಾಗುವ ಮೂರು ರೇಖೆಗಳು
ತ್ರಿವಳಿಗಳು
(ಪ್ರಾ) ಸ್ತನಿಗಳಲ್ಲಿ ಒಂದೇ ಹೆರಿಗೆಯಲ್ಲಿ ಮೂರು ಶಿಶುಗಳ ಜನನ
ತ್ರಿವಿಭಕ್ತ
(ಸ) ಮೂರು ವಿಭಾಗಗಳಿಂದಾದ. ಹೆಚ್ಚು ಕಡಿಮೆ ಬುಡದವರೆಗೂ ಮೂರಾಗಿ ಸೀಳಿರುವ ಎಲೆ
ತ್ರಿಶೃಂಗೀ ಕವಾಟ
(ಪ್ರಾ) ಸ್ತನಿ ಹೃದಯದ ಬಲಭಾಗದ ಎರಡು ವಿಭಾಗಗಳ ನಡುವಿನ ಕವಾಟ
ತ್ರಿಸಂಕರ
(ಪ್ರಾ) ಮೂರು ಜೊತೆಯ ವೈಲಕ್ಷಣ್ಯ ತೋರುವ ಗುಣಗಳನ್ನಾಧರಿಸಿ ಪ್ರಾಯೋಗಿಕವಾಗಿ ಬೆಳೆಸಿದ ಸಂಕರ ತಳಿ. ಇಂಥ ತಳಿಯಿಂದ ತಳಿಶಾಸ್ತ್ರ ತಜ್ಞ ಗ್ರೆಗೊರಿ ಮೆಂದೆಲ್ರವರ ಲೆಕ್ಕಾಚಾರದಂತೆ ಎರಡನೇ ಪೀಳಿಗೆಯಲ್ಲಿ ೨೭:೯:೯:೩೩೩:೧ ಪ್ರಮಾಣದ ವಿವಿಧ ಗುಣ ಸಂಯೋಗಗಳನ್ನು ಪಡೆಯಬಹುದು. ಮಾನೊಹೈಬ್ರಿಡ್=ಏಕಸಂಕರ, ಡೈಹೈಬ್ರಿಡ್= ದ್ವಿಸಂಕರ
ತ್ರಿಸುರುಳಿ
(ಜೈತಂ) ಕೊಲಾಜಿನ್ ನಾರು/ತಂತುವಿನ ಮೂಲ ಸಂರಚನಾ ಘಟಕ. ಇದರಲ್ಲಿ ಮೂರು ಪಾಲಿಪೆಪ್ಟೈಡ್ ಸರಪಳಿಗಳು ಸುರುಳಿ ಆಕಾರದಲ್ಲಿ ಸುತ್ತಿಕೊಂಡಿರುತ್ತವೆ. ಇವು ಮೂರೂ ಒಂದರೊಡನೊಂದು ಸುತ್ತಿಕೊಂಡು ದೃಢವಾದ ತಂತಿಯಂತೆ ಇರುತ್ತವೆ. ಇದನ್ನು ಮೊದಲು ವಿಜ್ಞಾನಿಗಳಾದ ಜಿ. ಎನ್. ರಾಮಚಂದ್ರನ್ ಮತ್ತು ಜಿ. ಕರ್ತಾ ಕಂಡುಹಿಡಿದರು
ತ್ರುಟಿತ ಅಸ್ಥಿಭಂಗ
(ವೈ) ನೋಡಿ : ಛಿದ್ರಿತ ಅಸ್ಥಿಭಂಗ
ತ್ರೋಂಬೇಸ್