भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತ್ರಿಘಾತ ಸಮೀಕರಣ

(ಗ) x3+ax2+bx+c=o. ಇಲ್ಲಿ a,b,c ನಿಯತಾಂಕಗಳು

ತ್ರಿಘಾತೀಯ ವ್ಯವಸ್ಥೆ

(ಭೌ) ಗರಿಷ್ಠ ಮಟ್ಟದ ಸಮಮಿತಿ ಇರುವ ಸ್ಫಟಿಕ ವ್ಯವಸ್ಥೆ. ಷಷ್ಠಫಲಕ (ಘನ) ಮತ್ತು ಅಷ್ಟ ಫಲಕಗಳಂಥ ರೂಪಗಳು ಇದರಲ್ಲಿ ಸೇರಿವೆ

ತ್ರಿಜ್ಯ

(ಗ) ವೃತ್ತ ಅಥವಾ ಗೋಳದ ಕೇಂದ್ರದಿಂದ ಪರಿಧಿ ಮೇಲಿನ ಯಾವುದೇ ಬಿಂದುವಿಗೆ ಎಳೆದ ರೇಖೆ

ತ್ರಿಜ್ಯಖಂಡ

(ಗ) ಎರಡು ತ್ರಿಜ್ಯ ಮತ್ತು ಪರಿಧಿಯ ನಡುವೆ ಇರುವ ವೃತ್ತದ ಭಾಗ. ತ್ರಿಜ್ಯಖಂಡದ ಸಲೆ r2 ((/2). ಇಲ್ಲಿ r ತ್ರಿಜ್ಯ. . ಕೇಂದ್ರಬಿಂದುವಿನಲ್ಲಿ ತ್ರಿಜ್ಯಗಳು ರೂಪಿಸಿದ ಕೋನ (ರೇಡಿಯನ್ ಮಾನದಲ್ಲಿ)

ತ್ರಿತಲಕೋನ

(ಗ) ನೋಡಿ: ತ್ರಿಫಲಕೀಯ ಕೋನ

ತ್ರಿನತಾಕ್ಷ ವ್ಯವಸ್ಥೆ

(ಭೂವಿ) ಸ್ಫಟಿಕಗಳ ವೈಲಕ್ಷಣ್ಯ ಗಳನ್ನು ಅಭ್ಯಸಿಸಿ ಮಾಡಿರುವ ಆರು ವ್ಯವಸ್ಥೆಗಳ ಪೈಕಿ ಒಂದು. ಈ ವ್ಯವಸ್ಥೆಗೆ ಸೇರಿದ ಸ್ಫಟಿಕದ ಮೂರು ಅಕ್ಷಗಳೂ ಅಸಮ ಮತ್ತು ಯಾವ ಎರಡರ ನಡುವಿನ ಕೋನವೂ ೯೦0 ಆಗಿರುವುದಿಲ್ಲ. ಸ್ಫಟಿಕಗಳಲ್ಲಿ ಕೇಂದ್ರೀಯ ಸಮಮಿತಿ ಮಾತ್ರ ಉಂಟು: ಅಕ್ಷೀಯ ಅಥವಾ ಸಮತಲೀಯ ಸಮಮಿತಿಗಳಿಲ್ಲ. ಉದಾ : ಆಕ್ಸಿನೈಟ್

ತ್ರಿಪದಿ

(ಗ) ಮೂರು ಪದಗಳಿರುವ ಬಹುಪದಿ. ಉದಾ: ax2+bx+c (ಸಾ) ಮೂರು ಪದಗಳಿಂದ ರೂಪಿತವಾದ (ಹೆಸರು ಗಳು) ಅಥವಾ ಮೂರು ಹೆಸರುಗಳನ್ನು ಬಳಸುವ (ವ್ಯವಸ್ಥೆಗಳು)

ತ್ರಿಪರಮಾಣವಿಕ

(ರ) ಅಣುವಿನಲ್ಲಿ ಮೂರು ಪರಮಾಣುಗಳಿರುವ. ಉದಾ : ಓಜೋನ್ (O3). ಅಣುವಿನಲ್ಲಿ ಸ್ಥಾನಪಲ್ಲಟವಾಗಬಲ್ಲ ಮೂರು ಪರಮಾಣುಗಳು ಅಥವಾ ರ‍್ಯಾಡಿಕಲ್ಲುಗಳು ಇರುವ. ಉದಾ : H2O; CO2

ತ್ರಿಪ್ರತ್ಯಾಮ್ಲೀಯ ಆಮ್ಲ

(ರ) ಅಣುವಿನಲ್ಲಿ ಆಮ್ಲೀಯ ಹೈಡ್ರೊಜನ್‌ನ ಮೂರು ಪರಮಾಣುಗಳಿರುವ ಒಂದು ಆಮ್ಲ. ಎಂದೇ ಇದು ಲವಣಗಳ ಮೂರು ಶ್ರೇಣಿಗಳನ್ನು ಕೊಡಬಲ್ಲದು. ಉದಾ: ಆರ್ಥೊಫಾಸ್ಫಾರಿಕ್ ಆಮ್ಲ H3PO4. ಇದು ಟ್ರೈಸೋಡಿಯಮ್ ಆರ್ಥೊಫಾಸ್ಫೇಟ್ Na3PO4 ಡೈಸೋಡಿಯಮ್ ಹೈಡ್ರೊಜನ್ ಆರ್ಥೊಫಾಸ್ಫೇಟ್ Na2HPO4 ಮತ್ತು ಸೋಡಿಯಮ್ ಡೈ ಹೈಡ್ರೊಜನ್ ಆರ್ಥೊಫಾಸ್ಫೇಟ್ NaH2PO4 ಲವಣಗಳನ್ನು ಕೊಡಬಲ್ಲದು

ತ್ರಿಫಲಕೀಯ ಕೋನ

(ಗ) ಏಕತಲೀಯವಲ್ಲದ ಮೂರು ಸರಳರೇಖೆಗಳು ಒಂದು ಬಿಂದುವಿನಲ್ಲಿ ಸಂಧಿಸಿದಾಗ ಏರ್ಪಡುವ ಘನಕೋನ. ತ್ರಿತಲಕೋನ. ನೋಡಿ: ಘನಕೋನ

ತ್ರಿಬಂಧ

(ರ) ಮೂರು ವೇಲೆನ್ಸಿಯುಳ್ಳ ಎರಡು ಪರಮಾಣುಗಳ ನಡುವಿನ ಬಂಧ. ಇದು ಅನಾವಶ್ಯಕವಾಗಿ ಮೂರೂ ಬಂಧಕ ಘಟಕಗಳನ್ನು ಬಳಸಿಕೊಳ್ಳುತ್ತದೆ. ಎರಡು ಪರಮಾಣುಗಳು ತಮ್ಮ ನಡುವೆ ಮೂರು ಎಲೆಕ್ಟ್ರಾನ್ ಜೋಡಿ ಗಳನ್ನು ಸಹಭೋಗಿಸುವ ಸಂದರ್ಭ ಇದು. ಇದರಲ್ಲಿ ಒಂದು ಸಿಗ್ಮಾ ಮತ್ತು ಎರಡು ಪೈ ಬಂಧಗಳು ಇರುತ್ತವೆ. ಉದಾ: ಅಸಿಟಲೀನ್ Hc cH

ತ್ರಿಬಿಂದು

(ಭೌ) ವಸ್ತುವಿನ ಮೂರು ಪ್ರಾವಸ್ಥೆಗಳೂ ಸಮತೋಲದಲ್ಲಿರುವ ಉಷ್ಣತೆ ಹಾಗೂ ಒತ್ತಡ ಸೂಚಕ ಬಿಂದು. ನೀರಿನ ತ್ರಿಬಿಂದು ೨೭೩.೧೬K ಮತ್ತು ೬೧೧.೨ pa (ಗ) ವಕ್ರರೇಖೆ ತನ್ನನ್ನು ತಾನೇ ಮೂರು ಸಲ ಸಂಧಿಸುವ ಬಿಂದು

ತ್ರಿಭಾಗ

(ತಂ) ಮೂರು ಸದೃಶ ಭಾಗಗಳಿದ್ದು ಮೂರು ಘಟ್ಟಗಳಲ್ಲಿ ತಯಾರಿಸಿದ. ಉದಾ : ಟ್ರಿಪ್ಲೆಕ್ಸ್ ಗಾಜು. ಸುಲಭವಾಗಿ ಒಡೆಯದಿರುವಂತೆ ಇದರಲ್ಲಿ ೩ ಫಲಕಗಳಿರುತ್ತವೆ. ತ್ರಿಖಂಡ

ತ್ರಿಭುಜ

(ಗ) ಏಕರೇಖಾಸ್ಥವಲ್ಲದ ಮೂರು ಸಮತಲೀಯ ಬಿಂದುಗಳನ್ನು ಸರಳರೇಖೆಗಳಿಂದ ಜೋಡಿಸಿದಾಗ ದೊರೆಯುವ ಜ್ಯಾಮಿತೀಯ ಆಕೃತಿ. ಇದಕ್ಕೆ ಮೂರು ಭುಜಗಳೂ ಮೂರು ಶೃಂಗಗಳೂ ಇರುತ್ತವೆ. ಗೋಳದ ಮೈಮೇಲೆ ಮೂರು ವಿಭಿನ್ನ ಮಹಾವೃತ್ತಗಳು ಒಳಗೊಳ್ಳುವ ತ್ರಿಭುಜಕ್ಕೆ ಗೋಳೀಯ ತ್ರಿಭುಜ (ನೋಡಿ) ಎಂದು ಹೆಸರು. ತ್ರಿಕೋಣ

ತ್ರಿಭುಜಗಳ ಪರಿಹಾರ

(ಗ) ತ್ರಿಭುಜದ ೩ ಸ್ವತಂತ್ರ ಧಾತುಗಳು ದತ್ತವಾಗಿರುವಾಗ ಉಳಿದ ಮೂರರ ಶೋಧನೆ

ತ್ರಿಭುಜನ

(ಗ) ನೆಲದ ವಿಸ್ತೀರ್ಣ ಅಳೆಯಲು ಬಳಸುವ ಒಂದು ಮೋಜಣಿ ವಿಧಾನ. ಇದರಲ್ಲಿ ಇಡೀ ಪ್ರದೇಶವನ್ನು ಪರಸ್ಪರ ಸಂಬಂಧಿತ ತ್ರಿಭುಜಗಳಾಗಿ ವಿಂಗಡಿಸಲಾಗುವುದು

ತ್ರಿಭುಜೀಯ ವ್ಯವಸ್ಥೆ

(ಭೂವಿ) ಸ್ಫಟಿಕಗಳ ಷಡ್ಭುಜೀಯ ವ್ಯವಸ್ಥೆಯಲ್ಲಿಯ ಒಂದು ಉಪವ್ಯವಸ್ಥೆ. ಮುಮ್ಮಡಿ ಸಮಮಿತಿ ಇದರ ವೈಶಿಷ್ಟ್ಯ. ಉದಾ: ಬೆಣಚು

ತ್ರಿಭುಜೀಯ ಸಂಖ್ಯೆಗಳು

(ಗ) ಮೊದಲು ಒಂದು ಚುಕ್ಕಿಯನ್ನು ಗುರುತಿಸಬೇಕು. ಇದರ ಕೆಳಗೆ ೨ ಚುಕ್ಕಿಗಳ ಸಾಲನ್ನು, ಇದರ ಕೆಳಗೆ ೩ ಚುಕ್ಕಿಗಳ ಸಾಲನ್ನು, ಇದರ ಕೆಳಗೆ ೪ ಚುಕ್ಕಿಗಳ ಸಾಲನ್ನು ಇತ್ಯಾದಿ. ಈ ಚುಕ್ಕಿಗಳೆಲ್ಲವೂ ತ್ರಿಭುಜದ ಭುಜಗಳನ್ನು ರೂಪಿಸುವಂತೆ ಗುರುತಿಸಬೇಕು. ಬಳಿಕ ೧ನೆಯ ಚುಕ್ಕಿಯಿಂದ ತೊಡಗಿ ಎಲ್ಲ ಚುಕ್ಕಿಗಳಿಗೂ ೧, ೨, ೩, ೪ ಇತ್ಯಾದಿ ಸಂಖ್ಯೆಗಳನ್ನು ನಿಗದಿ ಮಾಡಬೇಕು. ಆಗ ತ್ರಿಭುಜದ ಬಲಭುಜವನ್ನು ರೂಪಿಸುವ ಚುಕ್ಕಿಗಳ ಸಂಖ್ಯೆ ೧,೩,೬,೧೦,೧೫ ಇತ್ಯಾದಿ ಗಳಾಗಿ ಇವುಗಳಿಗೆ ತ್ರಿಭುಜೀಯ ಸಂಖ್ಯೆ ಗಳೆಂದು ಹೆಸರು ನೀಡಲಾಗಿದೆ

ತ್ರಿವರ್ಣೀಯತೆ

(ಭೌ) ಮೂರು ವಿಭಿನ್ನ ದಿಶೆಗಳಿಂದ ನೋಡಿದಾಗ ಮೂರು ವಿಭಿನ್ನ ವರ್ಣಗಳನ್ನು ಪ್ರದರ್ಶಿಸುವ ಕೆಲವು ಸ್ಫಟಿಕಗಳ ಗುಣ

ತ್ರಿವಳಿ

(ಗ) ಮೂರರ ಒಂದು ಗುಂಪು. ತ್ರಯ. (ರ) ವೇಲೆನ್ಸಿ ಮೂರು ಇರುವ ಪರಮಾಣು, ಪದಾರ್ಥಗಳ ಸಮೂಹ ಅಥವಾ ಪದಾರ್ಥ. ಮುಕ್ಕೂಟ

Search Dictionaries

Loading Results

Follow Us :   
  Download Bharatavani App
  Bharatavani Windows App