भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತೋಲಕ್ಕಿ

(ಪ್ರಾ) ನೋಡಿ : ಬಾವಲಿ

ತೋಲನಕಾರಿ

(ತಂ) ವಿದ್ಯುತ್ ವ್ಯವಸ್ಥೆಯಲ್ಲಿ ಬಹು ಪ್ರಾವಸ್ಥಾ ಅಥವಾ ೩-ತಂತಿ ವ್ಯವಸ್ಥೆಗಳಲ್ಲಿ ಆಸಮತೋಲಿತ ಹೊರೆಗಳನ್ನು ವಿತರಿಸುವಾಗ ವ್ಯವಸ್ಥೆಯ ಪ್ರಾವಸ್ಥೆಗಳ ಅಥವಾ ಪಾರ್ಶ್ವಗಳ ನಡುವಿನ ವೋಲ್ಟೇಜ್‌ಗಳನ್ನು ಸಮಗೊಳಿಸಲು ಬಳಸುವ ಸಲಕರಣೆ

ತೋಳ

(ಪ್ರಾ) ಕಾರ್ನಿವೊರ ಗಣ, ಕೇನಿಡೀ ಕುಟುಂಬ, ಕೇನಿಸ್ ಜಾತಿಗೆ ಸೇರಿದ ವನ್ಯವಾಸಿ ಸ್ತನಿ. ಕೇನಿಸ್ ಲೂಪಸ್ ವೈಜ್ಞಾನಿಕ ನಾಮ. ನಾಯಿಯ ಹತ್ತಿರ ಸಂಬಂಧಿ. ಬೂದು ತೋಳ ಅತ್ಯಂತ ಬಲಶಾಲಿ. ಭಯ ವನ್ನೇ ಅರಿಯದು. ಕುದುರೆ, ಎಮ್ಮೆ, ಕುರಿ, ಜಿಂಕೆ, ಸಾರಂಗ ಮುಂತಾದ ಪ್ರಾಣಿಗಳನ್ನು ಹಿಡಿದು ತಿನ್ನುತ್ತದೆ. ಬಲು ಹೊಟ್ಟೆಬಾಕ. ಗುಡ್ಡಗಾಡು ಗವಿಗಳಲ್ಲಿ ಗಾಳಿ ಬೆಳಕು ಚೆನ್ನಾಗಿ ಇರುವ ಸ್ಥಳಗಳಲ್ಲಿ ಅನ್ಯೋನ್ಯ ಕುಟುಂಬ ಜೀವನ ನಡೆಸುತ್ತದೆ. ವೃಕ

ತೋಳು

(ಪ್ರಾ) ದ್ವಿಪಾದಿ ಸ್ತನಿಗಳಲ್ಲಿ ಮೇಲಿನ (ಅಗ್ರ) ೨ ಅವಯವಗಳು; ಚತುಷ್ಪಾದಿಗಳಲ್ಲಿ ಮುಂಭಾಗದ ೨ ಕಾಲುಗಳು; ಶೀರ್ಷಪಾದಿಗಳಲ್ಲಿ ಬಾಯಿಯನ್ನು ಸುತ್ತುವರಿದುಕೊಂಡಿರುವ ಸ್ಪರ್ಶಕಗಳ ಪೈಕಿ ಒಂದು. ಕಂಟಕಚರ್ಮಿಗಳಲ್ಲಿ ತ್ರಿಜ್ಯದ ದಿಶೆಯಲ್ಲಿ ದೇಹದ ಮುಂಚಾಚು. ಬಾಹು

ತೌಡು

(ಸ) ಬತ್ತ, ಗೋಧಿ ಮುಂತಾದವನ್ನು ಒನಕೆ, ರಾಟೆ ಇಲ್ಲವೆ ಗಿರಣಿ ಮೂಲಕ ಕುಟ್ಟಿ ಕಾಳುಗಳನ್ನು ಬೇರ್ಪಡಿಸಿದ ಬಳಿಕ ಉಳಿಯುವ ಹೊಟ್ಟು, ಪುಡಿ ಮುಂತಾದ ವರ್ಜ್ಯ ಪದಾರ್ಥ. ಇದರಿಂದ ಹೊಟ್ಟನ್ನು ತೂರಿ ತೆಗೆದಾಗ ಉಳಿಯುವ ಪುಡಿಗೂ ಇದೇ ಹೆಸರು. ದನಗಳಿಗೆ ಅಕ್ಕಚ್ಚು, ಮಡ್ಡಿ ತಯಾರಿಸುವಲ್ಲಿ ಉಪಯೋಗ

ತೌಲನಿಕ

(ಸಾ) ತುಲನಾತ್ಮಕ. ಹೋಲಿಸಬಲ್ಲ

ತ್ಯಾಜ್ಯ

(ತಂ) ನಿರುಪಯುಕ್ತ ಪದಾರ್ಥ. ವ್ಯರ್ಥವಾದ ವಸ್ತು. ಆಹಾರ ತಯಾರಿಕೆಯಲ್ಲಿ ನಿಷ್ಪ್ರಯೋಜಕವಾದ ಉಪೋತ್ಪನ್ನಗಳು. ಕಲ್ಮಶ, ಕಷ್ಮಲ

ತ್ಯಾಲಿಯಮ್

(ರ) ಆವರ್ತ ಕೋಷ್ಟಕದ ಮೂರನೆಯ ಗುಂಪಿನ ಒಂದು ಲೋಹೀಯ ಧಾತು. ಪ್ರತೀಕ Tl. ಪ.ಸಂ. ೮೧, ಪರಮಾಣು ತೂಕ ೨೦೪.೩೭, ಸಾ.ಸಾಂ. ೧೧.೮೫ ದ್ರಬಿಂ ೩೦೩.೫0 ಸೆ ಕುಬಿಂ ೧೪೫೭0 ಸೆ. ನೀರಿನಲ್ಲಿ ಅವಿಲೇಯ; ನೈಟ್ರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳಲ್ಲಿ ವಿಲೇಯ. ನೀಲ ಬಿಳಿ ಲೋಹ. ತವರ ಸದೃಶ ಪತ್ರಶೀಲತೆ. ಮಿಶ್ರಲೋಹ ತಯಾರಿಕೆಯಲ್ಲಿ ಉಪಯೋಗ. ಇದರ ಲವಣಗಳು ಕೀಟನಾಶಕಗಳಾಗಿಯೂ ಇಲಿಯ ಪಾಷಾಣ ವಾಗಿಯೂ ಬಳಕೆ. ೧೮೬೧ರಲ್ಲಿ ಸರ್ ವಿಲಿಯಮ್ ಕ್ರೂಕ್ಸ್ (೧೮೩೨-೧೯೧೯) ಆವಿಷ್ಕರಿಸಿದರು

ತ್ಯಾಲೊಫೈಟ

(ಸ) ಸಸ್ಯ ಪ್ರಪಂಚದ ನಾಲ್ಕು ಪ್ರಮುಖ ವಿಭಾಗಗಳ ಪೈಕಿ ಮೊದಲನೆಯದು. ಅತ್ಯಂತ ನಿಮ್ನ ವರ್ಗದ ಸಸ್ಯಗಳನ್ನು ಒಳಗೊಂಡಿದೆ. ಉದಾ: ಪಾಚಿ, ಶಿಲೀಂಧ್ರ, ಕಲ್ಲುಹೂ, ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿ. ಬೀಜಕಗಳಿಂದ ಸಂತಾನೋತ್ಪತ್ತಿ. ಈ ವಿಭಾಗವನ್ನೂ ಬ್ರಯೋಫೈಟ ಮತ್ತು ಟೆರಿಡೋಫೈಟ ಎಂಬ ಇನ್ನೆರಡು ವಿಭಾಗಗಳನ್ನೂ ಒಟ್ಟುಗೂಡಿಸಿ ಕ್ರಿಪ್ಟೋಗ್ಯಾಮ್ಸ್ (ಹೂ ಬಿಡದ ಸಸ್ಯಗಳು) ಎಂದು ಕರೆಯಲಾಗುತ್ತದೆ

ತ್ರಷ್ ಹಕ್ಕಿ

(ಪ್ರಾ) ಟರ್ಡಿಡೀ ಕುಟುಂಬಕ್ಕೆ ಸೇರಿದ ಸಣ್ಣ ಅಥವಾ ಮಧ್ಯಮ ಗಾತ್ರದ ಹಾಡು ಹಕ್ಕಿಗಳಲ್ಲಿ ಒಂದು. ಕೃಷ್ಣಪಕ್ಷಿ. ಕೋಗಿಲೆ ಜಾತಿಗೆ ಸೇರಿದುದು

ತ್ರಾಣ

(ಭೌ) ಪೀಡನದ ಒಂದು ಮಿತಿ. ಇದನ್ನು ಮೀರಿದಾಗ ವಸ್ತು ಛಿದ್ರಗೊಳ್ಳುತ್ತದೆ

ತ್ರಾಪಿಜ್ಯ

(ಗ) ನೋಡಿ : ಸಮಲಂಬ

ತ್ರಾಂಬೊಸೈಟ್

(ಪ್ರಾ) ಕಶೇರುಕ ರಕ್ತದ ಜೀವ ದ್ರವ್ಯಗಳಲ್ಲಿ ರುವ ಅತ್ಯಂತ ಸೂಕ್ಷ್ಮ ಬಿಲ್ಲೆಗಳ ಪೈಕಿ ಒಂದು. ನೆತ್ತರು ಹೆಪ್ಪುಗಟ್ಟುವುದರಲ್ಲಿ ಇದರದು ಪ್ರಧಾನ ಪಾತ್ರ

ತ್ರಿಕಾಯ ಸಮಸ್ಯೆ

(ಖ) ಗುರುತ್ವಾಕರ್ಷಣ ನಿಯಮಾನುಸಾರ ಪರಸ್ಪರ ಆಕರ್ಷಿಸುತ್ತಿದ್ದು (ನ್ಯೂಟನ್) ಚಲನ ನಿಯಮ ಪ್ರಕಾರ ಚಲಿಸುತ್ತಿರುವ ಮೂರು ಕಾಯಗಳ ವರ್ತನೆಗೆ ಸಂಬಂಧಿಸಿದ ಸಮಸ್ಯೆ. ಈ ತ್ರಿಕಾಯ ಸಮಸ್ಯೆಗೆ ಯಾವುದೇ ಸಾರ್ವತ್ರಿಕ ಪರಿಹಾರ ಇಲ್ಲ. ಆದರೆ ಕೆಲವು ನಿರ್ದಿಷ್ಟ ಪರಿಹಾರಗಳು ತಿಳಿದಿವೆ. ನೋಡಿ: ಟ್ರೋಜನ್ ಕ್ಷುದ್ರಗ್ರಹಗಳು

ತ್ರಿಕಾಸ್ಥಿ

(ಪ್ರಾ) ವಸ್ತಿ ಕುಹರದ ಎರಡು ಕಟ್ಯಸ್ಥಿಗಳ ಮಧ್ಯೆ ಇರುವ, ಬೆನ್ನೆಲುಬುಗಳು ಸೇರಿಕೊಂಡು ಉಂಟಾಗಿರುವ ತ್ರಿಕೋನ ಆಕಾರದ ಎಲುಬು. ಸೇಕ್ರಮ್ ಮೂಳೆ

ತ್ರಿಕೂಟ

(ಜೀ) mRNAಯಲ್ಲಿರುವ (ದೂತ ಆರ್‌ಎನ್‌ಎ) ಮೂರು ನ್ಯೂಕ್ಲಿಯೊಟೈಡ್ ಪ್ರತ್ಯಾಮ್ಲಗಳ ಈ ಸರಣಿಯು ವಿಶಿಷ್ಟ ಅಮೀನೊ ಆಮ್ಲದ ನಿರ್ದಿಷ್ಟ ಸಂಕೇತ. (ರ) ಎರಡು ಅಯುಗ್ಮಿತ ಎಲೆಕ್ಟ್ರಾನ್‌ಗಳಿರುವ ಒಂದು ಸ್ಥಿತಿ

ತ್ರಿಕೋಣಮಿತಿ

(ಗ) ತ್ರಿಭುಜದ ಕೋನಗಳ ಮತ್ತು ಬಾಹುಗಳ ನಡುವಿನ ಸಂಬಂಧಗಳನ್ನು ಅಭ್ಯಸಿಸುವ ಗಣಿತ ವಿಭಾಗ. ಸಮತಲ ತ್ರಿಕೋಣಮಿತಿ ಮತ್ತು ಗೋಳೀಯ ತ್ರಿಕೋಣಮಿತಿ ಎಂಬ ಎರಡು ವಿಭಾಗಗಳುಂಟು. ಮೊದಲನೆಯದರಲ್ಲಿ ಹೆಸರೇ ಸೂಚಿಸುವಂತೆ ಸಮತಲ ಆಕೃತಿಗಳನ್ನು ಅಭ್ಯಸಿಸಲಾಗುವುದು. ಎರಡನೆಯದರಲ್ಲಾದರೋ ಗೋಳದ ಮೇಲ್ಮೈಯಲ್ಲಿಯ ವೃತ್ತ ಕಂಸಗಳೂ ಇವು ಗೋಳ ಕೇಂದ್ರದಲ್ಲಿ ರಚಿಸುವ ಕೋನಗಳೂ ಅಧ್ಯಯನ ವಸ್ತುಗಳು

ತ್ರಿಕೋಣಮಿತೀಯ ಫಲನಗಳು

(ಗ) ದತ್ತಕೋನ xo ಯ ೬ ತ್ರಿಕೋಣಮಿತೀಯ ಫಲನಗಳು : sine x, cosine x, tangent x, cotangent x, secant  x, cosecant x, ತ್ರಿಭುಜ OPQನಲ್ಲಿ ಕೋನ PQO = x0 ಮತ್ತು ಕೋನ POQ = 900 ಆಗಿದ್ದರೆ ಆಗ

ತ್ರಿಗುಣಿತ

(ಪ್ರಾ) ನ್ಯೂಕ್ಲಿಯಸ್‌ನಲ್ಲಿ ಅಗುಣಿತ (ಹ್ಯಾಪ್ಲಾಯ್ಡ್) ಸಂಖ್ಯೆಯ ಮೂರರಷ್ಟು ಕ್ರೋಮೊಸೋಮ್‌ಗಳಿರುವುದು

ತ್ರಿಗುಣಿಸು

(ಗ) ಒಂದರದೇ ಮೂರು ಭಾಗಗಳಿರುವ ಅಥವಾ ನಕಲುಗಳಿರುವ ಮೂರು ಪ್ರತಿಗಳನ್ನು ತಯಾರಿಸು. ತ್ರಿಪ್ರತೀಕರಿಸು

Search Dictionaries

Loading Results

Follow Us :   
  Download Bharatavani App
  Bharatavani Windows App