भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತೊಗಟೆ

(ಸ) ಮರದಲ್ಲಿ ಕಾಂಡವನ್ನು ಸುತ್ತುವರಿದಿರುವ ಬೆಂಡಿನಂಥ ಪದಾರ್ಥ. ಕಾಂಡದಿಂದ ಕಿತ್ತು ತೆಗೆಯಬಹುದಾದ ಒಣ ವಸ್ತು. ಬೆನ್ನ ಸಿಪ್ಪೆ

ತೊಗಟೆ

(ಸ) ಕಾಯಿ ಮೊದಲಾದವುಗಳ ಸಿಪ್ಪೆ, ಚಿಪ್ಪು, ಚರ್ಮ. (ಪ್ರಾ) ಯಾವುದೇ ಅವಯವವನ್ನು ಆವರಿಸಿರುವ ತೆಳುಪೊರೆ. ಚರ್ಮ

ತೊಗಟೆ ಕಳಚಿಕೆ

(ಸ) ಮರಗಳ ತೊಗಟೆಯನ್ನು ತೆಗೆದುಹಾಕುವುದು. ಕೆಲವು ಮರಗಳಲ್ಲಿ (ಉದಾ: ನೀಲಗಿರಿ ಮರ, ಸೀಬೆ ಮರ) ತೊಗಟೆ ಸಹಜವಾಗಿಯೇ ಉದುರುತ್ತದೆ

ತೊಟ್ಟಿ ರಂಗುಗಳು

(ರ) ಅವಿಲೇಯ ರಂಗುಗಳ ಒಂದು ವರ್ಗ. ಇವುಗಳನ್ನು ಮೊದಲು ಅಪಕರ್ಷಿಸಿ ನಿರ್ವರ್ಣಗೊಳಿಸ ಲಾಗುವುದು. ಆಲ್ಕಲಿಗಳಲ್ಲಿ ವಿಲೇಯ. ದ್ರಾವಣವನ್ನು ನೂಲಿಗೆ ಹಚ್ಚಿ. ಬಳಿಕ ಉತ್ಕರ್ಷಿಸಿದರೆ ಮೂಲರಂಗು ಮೈದಳೆಯುತ್ತದೆ ಉದಾ : ಇಂಡಿಗೊ, ಹತ್ತಿಯ ನೂಲಿಗೆ ಹಚ್ಚಲು ಪ್ರಶಸ್ತ

ತೊಟ್ಟಿನ ಕಲೆ

(ಸ) ಎಲೆ ಮೊದಲಾದವು ಉದುರುವು ದರಿಂದ ಕಾಂಡದ ಮೇಲೆ ನಿಂತ ಕಲೆ, ಗುರುತು. ಬೀಜಕೋಶಕ್ಕೆ ಬೀಜ ಅಂಟಿಕೊಂಡಿರುವ ಭಾಗ. ಬೀಜನಾಭಿ

ತೊಟ್ಟಿಲು ಸಾರವೆ

(ತಂ) ಕಟ್ಟಡ ಕೆಲಸ, ಸೇತುವೆಯ ಕೆಳಭಾಗದ ದುರಸ್ತಿ ಮುಂತಾದವನ್ನು ಮಾಡ ಬೇಕಾದಾಗ ವ್ಯಕ್ತಿಗೆ ಒದಗಿಸುವ ಆಸರೆ ಕಟ್ಟಿನ ಬಗೆ

ತೊಟ್ಟಿಲ್ಲದ

(ಸ) (ಎಲೆ, ಹೂವು, ಹಣ್ಣು ಮೊದಲಾದವುಗಳ ವಿಷಯದಲ್ಲಿ) ದಂಟು, ತೊಟ್ಟು, ಕಾವು ಇಲ್ಲದ. ಮೂಲಕ್ಕೆ ಸೇರಿಕೊಂಡಿರುವ. ನಿರ್ವೃಂತ

ತೊಡರು ಮಂಡಿಗಳು

(ವೈ) ತೊಡೆಮೂಳೆ ಮತ್ತು ಮೊಣಕಾಲು ಮೂಳೆಗಳ ನಡುವಿನ ಕೋನ ವ್ಯತ್ಯಸ್ತಗೊಂಡು ಕಾಲು ನೇರವಾಗಿಲ್ಲದೆ ಒಳಗಡೆ ಬಾಗಿರುವುದರಿಂದ ನಡೆಯುವಾಗ ಒಂದಕ್ಕೊಂದು ಬಡಿಯುವ ಮಂಡಿಗಳು

ತೊಡೆ

(ವೈ) ಕಾಲಿನ ಮೇಲ್ಭಾಗ. ವಸ್ತಿ ಕುಹರದಿಂದ ಮೊಳಕಾಲುವರೆಗಿನ ಭಾಗ. ಊರು

ತೊಡೆ-ಪೋಟಿ

(ತಂ) ತೊಲೆ, ಹಳಿಗಳು ಮೊದಲಾದವನ್ನು ಸೇರಿಸುವಾಗ ತುದಿಗಳ ದಪ್ಪವನ್ನು ಅರ್ಧದಷ್ಟು ಕಡಿಮೆ ಮಾಡಿ, ಒಂದರ ಮೇಲೊಂದನ್ನು ಕೂರಿಸಿ, ಜಂಟಿ ಹಾಕುವುದು. ಪಾಳಿ

ತೊಡೆಸಂದು

(ವೈ) ಕಿಬ್ಬೊಟ್ಟೆಯ ತಳಭಾಗಕ್ಕೂ ತೊಡೆಯ ಮೇಲ್ಭಾಗಕ್ಕೂ ನಡುವೆ ಇರುವ ಹಳ್ಳ, ಮಡಿಕೆ

ತೊನ್ನು

(ಪ್ರಾ) ಚರ್ಮ ವರ್ಣ ವೈಪರೀತ್ಯ. ಚರ್ಮ ಬಣ್ಣಕ್ಕೆ ಕಾರಣ ಮೆಲಾನಿನ್ ಎಂಬ ರಾಸಾಯನಿಕ. ನಾನಾ ಕಾರಣಗಳ ಫಲವಾಗಿ ಚರ್ಮದಲ್ಲಿ ಈ ವಸ್ತು ಕಡಿಮೆಯಾದಾಗ ಅಲ್ಲಿ ಬಿಳುಪು ಕಾಣಿಸಿಕೊಳ್ಳುತ್ತದೆ. ಇದು ಚರ್ಮರೋಗವಲ್ಲ

ತೊಲೆ

(ತಂ) ಚಾವಣಿಯ ಹೊದಿಕೆ ಸಾಮಗ್ರಿಗೆ (ಉದಾ: ಹಂಚಿಗೆ) ಕೆಳಭಾಗದಲ್ಲಿ ಆಧಾರವಾಗಿರುವ ದೂಲ. ಜಂತಿ

ತೋಟ ಬಸವನಹುಳು

(ಪ್ರಾ) ತೋಟದ ಬಸವನ ಹುಳು. ಅತಿ ನಿಧಾನ ನಡಿಗೆಯ ಹುಳು

ತೋಟಗಾರಿಕೆ

(ಸ) ಗಿಡಗಳನ್ನು ಬೆಳೆಸುವ ಕಲೆ, ವಿಜ್ಞಾನ. ಹೊಲ ಬೇಸಾಯದಲ್ಲಿ ಮನುಷ್ಯ ಪ್ರಕೃತಿಯ ಅಡಿಯಾಳು. ತೋಟಗಾರಿಕೆಯಲ್ಲಾದರೋ ಅವನು ಪರಿಸ್ಥಿತಿಯ ಒಡೆಯ. ತೋಟಗಾರಿಕೆಯಲ್ಲಿ ೫ ಮುಖ್ಯಭಾಗಗಳಿವೆ: ಹಣ್ಣಿನ ಕೃಷಿ, ತರಕಾರಿ ಕೃಷಿ, ದ್ರುತ ಬೆಳೆ, ಹೂ ಬೇಸಾಯ, ಉದ್ಯಾನ ಕಲೆ. ಮೊದಲ ಮೂರು ಮನುಷ್ಯನ ಆಹಾರ, ಆರೋಗ್ಯ, ಗಳಿಕೆಗೆ ಸಂಬಂಧಿಸಿದವು. ಉಳಿದೆರಡು ವಿಲಾಸ, ಕಲೆ, ಸಂತೋಷಗಳಿಗೆ ಸಂಬಂಧಿಸಿದವು

ತೋಡುದಾರಿ

(ಭೂವಿ) ಗಣಿಯೊಳಕ್ಕೆ ಇಳಿಯಲು ಮಾಡಿರುವ ಲಂಬ/ಇಳಕಲು ಮಾರ್ಗ. ಕೂಪ

ತೋಪಡ

(ತಂ) ಮರಗೆಲಸದಲ್ಲಿ ಮೇಲ್ಮೈಯನ್ನು ನಯಗೊಳಿಸಲು ಬಳಸುವ ಹತ್ತರಿ. ಅನೇಕ ಬಗೆಗಳುಂಟು

ತೋಪುದಿಬ್ಬ

(ಸಾ) ಫಿರಂಗಿಗಳನ್ನು ಇಟ್ಟು ಗುಂಡು ಹಾರಿಸಲು ಅನುಕೂಲವಾಗುವಂತೆ ರಚಿಸಿದ ಕುಳ್ಳುಗೋಡೆ

ತೋರಾನ್

(ರ) ಥೋರಿಯಮ್‌ನ ವಿಕಿರಣಪಟು ಕ್ಷಯದಿಂದ ಒಂದು ಮಜಲಿನಲ್ಲಿ ಉತ್ಪನ್ನವಾಗುವ ವಿಕಿರಣಪಟು ಅನಿಲ. ಪ್ರತೀಕ tn. ರೇಡಾನ್‌ನ ಒಂದು ಸಮಸ್ಥಾನಿ (Rn-220). ಅರ್ಧಾಯು ೫೪.೫ ಸೆಕೆಂಡ್‌ಗಳು

ತೋರ್ಕೆಚಂದ್ರ

(ಖ) ನೋಡಿ : ಅನುಕರಣಚಂದ್ರ

Search Dictionaries

Loading Results

Follow Us :   
  Download Bharatavani App
  Bharatavani Windows App