भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಡೈನೊಸಾರ್

(ಪ್ರಾ) ಮಧ್ಯಜೀವಿಕಲ್ಪದಲ್ಲಿ ನೆಲ, ನೀರು, ಬಾನುಗಳಲ್ಲಿ ಸಂಚರಿಸುತ್ತಿದ್ದ ಬೃಹತ್ ಗಾತ್ರದ ಸರೀಸೃಪಗಳು. ಸುಮಾರು ೬೫ ಮಿಲಿಯನ್ ವರ್ಷಗಳ ಹಿಂದೆ ಹಠಾತ್ತನೆ ಇವು ಕಣ್ಮರೆಯಾದವು. ಹೆಗ್ಗೌಳಿ

ಡೈನ್

(ಭೌ) ಸಿಜಿಎಸ್ ವ್ಯವಸ್ಥೆಯಲ್ಲಿ ಬಲದ ಏಕಮಾನ. ಇದು ೧ ಗ್ರಾಮ್ ರಾಶಿಯ ಮೇಲೆ ವರ್ತಿಸಿ ಸೆಕೆಂಡ್-ಸೆಕೆಂಡ್‌ಗೆ ೧ ಸೆಂಮೀ ವೇಗೋತ್ಕರ್ಷ ಉಂಟುಮಾಡಬಲ್ಲದು. ಸುಮಾರು ೯೮೧ ಡೈನ್‌ಗಳು = ೧ ಗ್ರಾಮ್ ತೂಕ. ೧೦೫ ಡೈನ್‌ಗಳು = ೧ ನ್ಯೂಟನ್

ಡೈಮರ್

(ರ) ಎರಡು ಸದೃಶ ಅಣುಗಳ ಸಂಯೋಗದಿಂದ ರೂಪುಗೊಳ್ಳುವ ಆಣವಿಕ ಪ್ರಭೇದ. ಉದಾ: ಅಪ್ರೊಟಿಕ್ ದ್ರಾವಣಗಳಲ್ಲಿರುವ ಕಾರ್ಬಾಕ್ಸಿಲಿಕ್ ಆಮ್ಲಗಳು

ಡೈಯಾಸ್ಕಿಸಿಸ್

(ವೈ) ಮಿದುಳಿನ ಯಾವುದಾದರೊಂದು ಭಾಗಕ್ಕೆ ಪೆಟ್ಟಾದಾಗ ಅಥವಾ ಊನವಾದಾಗ, ಆ ಕ್ಷೇತ್ರದಿಂದ ದೂರವಿರುವ ಹಾಗೂ ಸಂಬಂಧವಿರದ ಇನ್ನೊಂದು ಕ್ಷೇತ್ರದಲ್ಲಿ ಕಾರ್ಯಚಟುವಟಿಕೆ ಮಂದವಾಗುತ್ತದೆ. ಕಾರಣ ಈ ಪ್ರದೇಶಕ್ಕೆ ಪೂರೈಕೆಯಾಗುವ ರಕ್ತಪ್ರಮಾಣದಲ್ಲಿ ಇಳಿತ ಹಾಗೂ ಅದರ ಪರಿಣಾಮವಾಗಿ ಅಲ್ಲಿರುವ ಜೈವಿಕ ಚಟುವಟಿಕೆಗಳ ಮಂದವಾಗುವಿಕೆ. ಸೂಕ್ತ ಪುನರ್ವಸತಿಯಿಂದ ಅಥವಾ ರಕ್ತ ಮರುಪೂರೈಕೆಯಿಂದ ಮಂದಸ್ಥಿತಿ ಮರೆಯಾಗಿ ಮೊದಲಿನ ಚಟುವಟಿಕೆ ಮರಳಿ ಬರುತ್ತದೆ

ಡೈರಿ

(ಸಾ) ಹಾಲು ಮತ್ತದರ ಉತ್ಪನ್ನಗಳನ್ನು ತಯಾರಿಸುವ ಕೇಂದ್ರ. ಹೈನಿನ ಮನೆ. ಕ್ಷೀರಾಗಾರ

ಡೈವಿಂಗ್

(ಸಾವಿ) ಥಟ್ಟನೆ ಜಿಗಿದು ನೀರಿನೊಳಕ್ಕೆ ಮುಳುಗು ಹಾಕುವ ಕ್ರಿಯೆ. ಯಾವುದೇ ಸಾಧನಗಳ ನೆರವಿಲ್ಲದೆ ವ್ಯಕ್ತಿಯೊಬ್ಬ

ಡೈಸ್ಯಾಕರಾಯ್ಡ್‌ಗಳು

(ರ) ಜಲವಿಶ್ಲೇಷಣೆಗೆ ಒಳಪಡಿಸಿದಾಗ ಎರಡು ಏಕಶರ್ಕರ ಅಣುಗಳನ್ನು ಒದಗಿಸುವ, ಶರ್ಕರ ವರ್ಗಕ್ಕೆ ಸೇರಿದ (ಸುಕ್ರೋಸ್‌ನಂಥ) ಯಾವುದೇ ರಾಸಾಯನಿಕ ವಸ್ತು. ದ್ವಿಶರ್ಕರಗಳು

ಡೊಂಕು

(ತಂ) ಒತ್ತಡ, ವಾಯುಗುಣದ ಏರಿಳಿತ ಆಂತರಿಕ ರಚನೆಯಲ್ಲಿಯ ಏರುಪೇರು ಮುಂತಾದವುಗಳಿಂದ ವಸ್ತುವಿನಲ್ಲಿ ಆಗುವ ಸುರುಟು, ಡೊಂಕು ಅಥವಾ ಬಾಗು

ಡೋ

(ಪ್ರಾ) ಜಿಂಕೆ, ಮೊಲ, ಹಿಮಸಾರಂಗ ಮುಂತಾದವು ಗಳಲ್ಲಿ ಹೆಣ್ಣಿನ ಹೆಸರು

ಡೋಡೋ

(ಪ್ರಾ) ಕೊಲಂಬಿ ಫಾರ್ಮೀಸ್ ಗಣ, ರ‍್ಯಾಫಿಡೀ ಕುಟುಂಬಕ್ಕೆ ಸೇರಿದ ನಿರ್ವಂಶವಾಗಿರುವ ಒಂದು ವಿಲಕ್ಷಣ ಪಕ್ಷಿ. ಡೈಡಸ್ ಅಥವಾ ರ‍್ಯಾಫಸ್ ವೈಜ್ಞಾನಿಕ ನಾಮ. ೧೮೬೧ರ ತನಕ ಮಾರಿಷಸ್ ದ್ವೀಪದ ಕಾಡು ಗಳಲ್ಲಿ ಜೀವಿಸುತ್ತಿತ್ತು. ಪಾರಿವಾಳ, ಕಪೋತ ಹಕ್ಕಿಗಳ ಹತ್ತಿರ ಸಂಬಂಧಿ. ಹಾರು ಹಕ್ಕಿಗಳ ಗುಂಪಿಗೆ ಸೇರಿದ್ದರೂ ಹಾರ ಲಾರದೆ ನೆಲದ ಮೇಲೆ ವಾಸಿಸುತ್ತಿತ್ತು. ಜಡಸ್ವಭಾವ. ರುಚಿಕರವಾದ ಮಾಂಸ ಮತ್ತು ಮೊಟ್ಟೆಗಳಿಗಾಗಿ ಬೇಟೆಗಾರರ ಹತ್ಯೆಗೊಳಗಾಗಿ ಇದರ ಸಂತತಿ ವಿನಾಶಗೊಂಡಿತು

ಡೋಪಿಂಗ್

(ತಂ) ನಿರ್ದಿಷ್ಟ ವೈಲಕ್ಷಣ್ಯ ಪಡೆಯುವ ಸಲುವಾಗಿ ಅರೆವಾಹಕಕ್ಕೆ ಅಲ್ಪ ಮೊತ್ತದ ವಿಶಿಷ್ಟ ಕಲ್ಮಷವನ್ನು ಬೆರೆಸುವುದು. (ಸಾ) ಮಾದಕ ವಸ್ತು ನೀಡಿ ಕ್ರೀಡಾಪಟುವನ್ನು ಉತ್ತೇಜಿಸುವುದು

ಡೋಲಾಯಮಾನ

(ಗ) ಒಂದು ಅನಂತ ಶ್ರೇಣಿಯಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಪದಗಳಿದ್ದು ಆ ಶ್ರೇಣಿಯ ಮೊತ್ತವನ್ನು ಬೇರೆ ಬೇರೆ ರೀತಿಯ ಪದಗಣಗಳ ಮೂಲಕ ಪರಿಗಣಿಸಿದಾಗ ಬೇರೆ ಬೇರೆ ಮೊತ್ತಗಳು ಬಂದರೆ ಅಂತಹ ಶ್ರೇಣಿಯನ್ನು ಡೋಲಾಯಮಾನ ಎನ್ನುತ್ತೇವೆ. ಉದಾ: ೧-೧+೧-೧+೧-+… ಎಂಬ ಅನಂತ ಶ್ರೇಣಿಯಲ್ಲಿ, ಅನಂತ ಬೆಸ ಪದಗಳ ಮೊತ್ತವು ೧ ಆಗಿಯೂ ಅನಂತ ಸರಿಪದಗಳ ಮೊತ್ತವು ೦ (ಶೂನ್ಯ) ಆಗಿಯೂ ಡೋಲಾಯಮಾನವಾಗಿರುತ್ತವೆ

ಡೋಲ್‌ಡ್ರಮ್ಸ್

(ಭೂ) ಸಮಭಾಜಕದ ಆಸುಪಾಸಿನ ಸಾಗರ ಪ್ರದೇಶಗಳಲ್ಲಿ ನೌಕಾಯಾನಕ್ಕೆ ಅನುಕೂಲಿಸುವ ಶಾಂತ ವಲಯಗಳು. ಸ್ತಬ್ಧತೆ

ಡೋಸಿಮೀಟರ್

(ಭೌ) ಅಯಾನೀಕಾರಕ ವಿಕಿರಣದ ಪರಿಮಾಣವನ್ನು ಅಳೆಯಬಲ್ಲ, ಆಸ್ಪತ್ರೆ ಪ್ರಯೋಗಶಾಲೆ ಮುಂತಾದೆಡೆಗಳಲ್ಲಿ ಬಳಸುವ ಉಪಕರಣ. ಗುಟ್ಟಿಮಾಪಕ

ಡೋಸ್

(ವೈ) ವೈದ್ಯ ನಿಗದಿ ಮಾಡಿದ ಔಷಧಿ ಪ್ರಮಾಣ. ಗುಟ್ಟಿ. (ಭೌ) ವಿಕಿರಣಪ್ರಮಾಣ ಸೂಚಕ

ಡ್ಯಾಕ್ರಾನ್

(ರ) ಟೆರಿಲೀನ್ ಸಂಶ್ಲೇಷಿತ ನೂಲಿಗೆ ಅಮೆರಿಕದಲ್ಲಿ ಬಳಕೆಯಲ್ಲಿರುವ ಪರ್ಯಾಯ ನಾಮ

ಡ್ಯಾಕ್ಸ್‌ಹುಂಡ್

(ಪ್ರಾ) ಜರ್ಮನ್ ನಾಯಿ ತಳಿ, ಗಿಡ್ಡ ಕಾಲು, ನೀಳ ದೇಹ, ಕಂದು ಅಥವಾ ಕಪ್ಪು ಮೈಬಣ್ಣ

ಡ್ಯುರೇನ್

(ಭೂವಿ) ಕೀಳುದರ್ಜೆಯ ಕಲ್ಲಿದ್ದಲಿನಲ್ಲಿ ಪ್ರತ್ಯೇಕಿಸಬಹುದಾದ ಘಟಕ. ಇದರಲ್ಲಿ ಬೂದಿ ಅಂಶ ಅಧಿಕ

ಡ್ಯೂಟೀರಿಯಮ್

(ರ) ಹೈಡ್ರೊಜನ್‌ನ ಒಂದು ಸಮಸ್ಥಾನಿ. ಇದರ ಬೀಜದಲ್ಲಿ ೧ ಪ್ರೋಟಾನ್ ಮತ್ತು ೧ ನ್ಯೂಟ್ರಾನ್ ಇವೆ. ರಾಸಾಯನಿಕ ಲಕ್ಷಣಗಳಲ್ಲಿ ಹೈಡ್ರೊಜನ್ ಸದೃಶವಾದರೂ ಭೌತ ಲಕ್ಷಣಗಳಲ್ಲಿ ತುಸು ಭಿನ್ನ. ಉದಾ: ಇದರ ಕುಬಿಂ ೨೩.೬ K (ಹೈಡ್ರೊಜನ್‌ನದು ೨೦.೪ K) ನೀರಿನಲ್ಲಿ ಆಕ್ಸೈಡ್ (HDO) ಆಗಿರುತ್ತದೆ. ಆಂಶಿಕ ಆಸವನ/ವಿದ್ಯುದ್ವಿಭಜನೆಯಿಂದ ಲಭ್ಯ. ನೋಡಿ: ಟ್ರೈಟಿ(ಷಿ)ಯಮ್

ಡ್ಯೂರಲ್ಯೂಮಿನ್

(ರ) ಶೇ. ೪ ತಾಮ್ರ, ಅಲ್ಪ ಪರಿಮಾಣ ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಸಿಲಿಕಾನ್ ಒಳಗೊಂಡಿರುವ ಅಲ್ಯೂಮಿನಿಯಮ್‌ನ ಮಿಶ್ರಲೋಹದ ವಾಣಿಜ್ಯ ನಾಮ. ವಿಮಾನ ರಚನೆಯಲ್ಲಿ ಹೆಚ್ಚು ಬಳಕೆ

Search Dictionaries

Loading Results

Follow Us :   
  Download Bharatavani App
  Bharatavani Windows App