Navakarnataka Vijnana Tantrajnana Padasampada (2011)
Navakarnataka Publications Private Limited
ಡೆಸ್ಮಿಡ್ಗಳು
(ಜೀ) ಸೂಕ್ಷ್ಮದರ್ಶಕೀಯ ಏಕಕೋಶ ಜೀವಿ. ಶೈವಲ ಗುಂಪಿಗೆ ಸೇರಿದ ಜಲವಾಸಿ
ಡೇಗೆ
(ಪ್ರಾ) ನೋಡಿ: ಗಿಡುಗ
ಡೇಟಿವ್ ಬಂಧ
(ರ) ನೋಡಿ : ಸಹಯೋಜಕ ಬಂಧ
ಡೇಯ್ಸಿ
(ಸ) ಬೆಲಿಸ್ ಪೆರಿನಿಸ್ ಜಾತಿ. ಆಸ್ಟರೇಸೀ ಕುಟುಂಬಕ್ಕೆ ಸೇರಿದ ಸಣ್ಣ ಹೂ ಗಿಡ ಅಥವಾ ಹೂ. ಹಳದಿ ಪುಷ್ಪ ಪಾತ್ರ, ಬಿಳಿ ದಳವಲಯ ಉಳ್ಳದ್ದು. ಯೂರೋಪ್ನ ಕಾಡುಗಳಲ್ಲಿ ಬೆಳೆಯುತ್ತದೆ. ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ
ಡೈಅಜೋ
(ರ) N2 ಗುಂಪನ್ನು ಒಳಗೊಂಡಿರುವ ಇಲ್ಲವೇ ಇದಕ್ಕೆ ಸಂಬಂಧಿಸಿದ. ಆರ್ಗ್ಯಾನಿಕ್ ರ್ಯಾಡಿಕಲ್ನ ಒಂಟಿ ಕಾರ್ಬನ್ಗೆ ಎರಡು ನೈಟ್ರೊಜನ್ ಪರಮಾಣುಗಳು ಸೇರಿ ಆದವು
ಡೈಅಮೀನ್ಗಳು
(ರ) ಎರಡು ಅಮೀನೊ ಗುಂಪುಗಳಿಂದ ಆಗಿರುವ ಯಾವುವೇ ಸಂಯುಕ್ತಗಳು
ಡೈಆಕ್ಸೈಡ್
(ರ) ಆಕ್ಸಿಜನ್ನ ಎರಡು ಪರಮಾಣುಗಳು ಇರುವ ಸಂಯುಕ್ತ
ಡೈಆಟಮ್
(ಸ) ಬ್ಯಾಸಿಲೇರಿಯೊಫೈಸೀ ಕುಟುಂಬಕ್ಕೆ ಸೇರಿದ ಏಕಕೋಶೀಯ ಶೈವಲ. ಕಡಲತಳದಲ್ಲಿ ಪಳೆಯುಳಿಕೆಯ ನಿಕ್ಷೇಪ ರೂಪದಲ್ಲಿ ಲಭ್ಯ. ನೋಡಿ: ಬ್ಯಾಸಿಲೇರಿಯೊಫೈಟ
ಡೈಆಪ್ಸಿಡ್
(ಪ್ರಾ) ತಲೆಬುರುಡೆಯಲ್ಲಿ ಎರಡು ಜೊತೆ ಕಪೋಲ ತೆರಪುಗಳುಳ್ಳ ಪ್ರಾಣಿಗಳು. ಉದಾ: ಮೊಸಳೆ
ಡೈಆಲ್ಕಿನ್ಸ್
(ರ) ತಮ್ಮ ಅಣುಗಳಲ್ಲಿ ೨ ದ್ವಿಬಂಧಗಳಿರುವ ಹೈಡ್ರೊಕಾರ್ಬನ್ಗಳು. ಇವು ಈ ದ್ವಿಬಂಧಗಳ ವಿನ್ಯಾಸಾನುಸಾರ ೩ ರೂಪಗಳಲ್ಲಿ ಕಂಡುಬರುತ್ತವೆ: ೧. ಅಲೀನ್ಗಳಲ್ಲಿರುವಂತೆ ಪಕ್ಕಪಕ್ಕದಲ್ಲಿರುವುದು; ೨. ಏಕಬಂಧದಿಂದ ಪ್ರತೇಕಿತವಾದುವು, ೩. ಎರಡು ಅಥವಾ ಹೆಚ್ಚು ಏಕಬಂಧಗಳಿಂದ ಪ್ರತ್ಯೇಕಿತವಾದವು
ಡೈಆಲ್ಡಿಹೈಡ್ಗಳು
(ರ) ಎರಡು ಆಲ್ಡಿಹೈಡ್ ಗುಂಪು ಗಳಿರುವ ಸಂಯುಕ್ತಗಳು
ಡೈಕೊಗೆಮಿ
(ಸ) ಸ್ವಪರಾಗಣ ಸಂಭವಿಸದಂತೆ ಕೇಸರಗಳೂ ಶಲಾಖೆಗಳೂ ವಿಭಿನ್ನ ಕಾಲಗಳಲ್ಲಿ ಪ್ರೌಢವಾಗುವುದು
ಡೈಕ್ಯಾರಿಯಾನ್
(dikaryon) (ಸ) ಪ್ರತಿಯೊಂದು ಜೀವಕೋಶದಲ್ಲಿ ಇಲ್ಲವೇ ಕವಕತಂತು ಖಂಡದಲ್ಲಿ (ಹೈಫಲ್ ಸೆಗ್ಮೆಂಟ್) ವಿಭಿನ್ನ ಸಂಗಮಜನ್ಯ (+ ಮತ್ತು -) ಎರಡು ನ್ಯೂಕ್ಲಿಯಸ್ಗಳಿರುವ ಶಿಲೀಂಧ್ರ ಕವಕ, ಕವಕತಂತು (ಫೂಂಗಲ್ ಹೈಫ) ಅಥವಾ ಸೂಕ್ಷ್ಮ ತಂತುಜಾಲ (ಮೈಸೀಲಿಯಮ್)
ಡೈಕ್ರೊಮಾಟಿಕ್
(ಪ್ರಾ) ವಯಸ್ಸು ಅಥವಾ ಲಿಂಗವನ್ನು ಅವಲಂಬಿಸದೆ ಎರಡು ವರ್ಣ ಪ್ರಾವಸ್ಥೆಗಳನ್ನು ಒಳಗೊಂಡಿರುವ ಅಥವಾ ಪ್ರದರ್ಶಿಸುವ (ವೈ) ಇಬ್ಬಣ್ಣ ಗುರುತಿಸುವ, ಮೂರು ಮೂಲ ವರ್ಣಗಳಲ್ಲಿ ಎರಡನ್ನು ಮಾತ್ರ ಗುರುತಿಸಬಲ್ಲ ಅರೆ ಬಣ್ಣಗುರುಡು
ಡೈಕ್ರೊಮೇಟ್
(ರ) ಡೈಕ್ರೊಮಿಕ್ ಆಮ್ಲದ ಮತ್ತು ಸಾಮಾನ್ಯವಾಗಿ ಕಿತ್ತಳೆ ಅಥವಾ ಕೆಂಪು ಬಣ್ಣದ ಲವಣ. ಉದಾ : ಪೊಟ್ಯಾಸಿಯಮ್ ಡೈಕ್ರೊಮೇಟ್ K2Cr2O7 (ಪ್ರಾ) ಡೈಕ್ರೊಮೇಟ್ ಪ್ರಾಣಿವಂಶಗಳಲ್ಲಿ ಪ್ರಾಣಿಗಳ ಬಣ್ಣ ಬೇರೆಯಾಗಿರುವುದು
ಡೈಕ್ಲಿನಿ
(ಸ) ಹೆಣ್ಣು ಮತ್ತು ಗಂಡು ಹೂಗಳು ಪ್ರತ್ಯೇಕವಾಗಿ ಒಂದೇ ಗಿಡದಲ್ಲಿರುವುದು
ಡೈಕ್ಲ್ಯಾಮಿಡಿಯಸ್
(ಸ) ವಿವಿಕ್ತ ಪುಷ್ಪಪಾತ್ರವೂ ದಳವಲಯವೂ ಇರುವ
ಡೈಡೀಮಿಯಮ್
(ರ) ವಿರಳ ಭಸ್ಮಧಾತುಗಳಾದ ಪ್ರೇಸಿಯೋಡಿಯಮ್ ಮತ್ತು ನಿಯೋಡೀಮಿಯಮ್ಗಳ ಮಿಶ್ರಣ. ರಾಸಾಯನಿಕ ಪ್ರತೀಕ Di
ಡೈನಮೈಟ್
(ತಂ) ಕೀಸಲ್ಘರ್ (ಡೈ ಆಟಮ್ ಎಂಬ ಸೂಕ್ಷ್ಮ ಸಸ್ಯಗಳ ಅವಶೇಷದಲ್ಲಿರುವ ಜಲಯುಕ್ತ ಸಿಲಿಕಾವನ್ನು ಒಳ ಗೊಂಡಿರುವ ಮಣ್ಣು) ಎಂಬುದರಲ್ಲಿ ನೈಟ್ರೊಗ್ಲಿಸರಿನ್ನನ್ನು ಹೀರಿಸಿ ತಯಾರಿಸಿದ ಸಿಡಿಮದ್ದು. ನೊಬೆಲ್ ಪಾರಿತೋಷಕ ಸ್ಥಾಪಕ ಆಲ್ಫ್ರೆಡ್ ನೊಬೆಲ್ (೧೮೩೩-೯೬) ಮೊತ್ತಮೊದಲು ೧೮೬೭ರಲ್ಲಿ ಉತ್ಪಾದಿಸಿದ್ದು. ಬಂಡೆ ಒಡೆಯಲು, ಗಣಿ ತೋಡಲು, ಸ್ಫೋಟಕವಾಗಿ ಬಳಕೆ
ಡೈನಮೊ