भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಡಿಪ್ಟರ

(ಪ್ರಾ) ಕೀಟ ವರ್ಗದ ಒಂದು ಗಣ. ಎರಡು ರೆಕ್ಕೆಯ ಹಾರುಹುಳುಗಳು (ನೊಣ ಮುಂತಾದವು)

ಡಿಪ್ನಾಯ್

(ಜೀ) ಶ್ವಾಸಕೋಶೀ ಮತ್ಸ್ಯ ವರ್ಗ. ಕಿವಿರು ಮತ್ತು ಶ್ವಾಸಕೋಶಗಳೆರಡರಿಂದಲೂ ಉಸಿರಾಡುವ ಮೀನುಗಳು. ಇವುಗಳ ಹಂಚಿಕೆ ಸೀಮಿತ. ಉದಾ: ನಿಯೊಸೆರಟೋಡಸ್ (ಆಸ್ಟ್ರೇಲಿಯಾ), ಪ್ರೊಟಾಪ್ಟಿರಸ್ (ಆಫ್ರಿಕಾ), ಲೆಪಿಡೊಸೈರನ್ (ದ. ಅಮೆರಿಕ)ಗಳಲ್ಲಷ್ಟೆ ಕಂಡುಬರುತ್ತದೆ

ಡಿಪ್ಲಾಯಿಡ್

(ಜೀ) ಎರಡು ಕ್ರೋಮೊಸೋಮ್ ಸಮುಚ್ಚಯ ಗಳಿದ್ದು ಪ್ರತಿಯೊಂದು ಸಮುಚ್ಚಯವೂ ಒಂದೊಂದು ಜನ್ಮದಾತೃ ವಿನಿಂದ ಬಂದಿರುವ. ಹೆಚ್ಚಿನ ಜೀವಿಗಳು ಇಂಥವು. ದ್ವಿಗುಣಿತ

ಡಿಪ್ಲಾಸಿಸ್

(ಜೀ) ಗರ್ಭಧಾರಣೆಯಲ್ಲಿ ಎರಡು ಯುಗ್ಮಕಗಳ ಅಗುಣಿತ ಕ್ರೋಮೊಸೋಮ್‌ಗಳು ಒಗ್ಗೂಡುವುದರಿಂದಾಗಿ ಶಾರೀರಿಕ ಕ್ರೋಮೊಸೋಮ್‌ಗಳ ಸಂಖ್ಯೆ ದ್ವಿಗುಣಿತವಾಗುವುದು

ಡಿಪ್ಲೊಕಾಕಸ್

(ಪ್ರಾ) ವಿದಲನದಿಂದ ಎರಡಾಗಿ ವಿಭಜಿಸಿ ಜೊತೆಜೊತೆಯಾಗಿರುವ ದುಂಡು ಬ್ಯಾಕ್ಟೀರಿಯಾಗಳು

ಡಿಪ್ಲೊಬ್ಲಾಸ್ಟಿಕ್

(ಪ್ರಾ) ಹೊರ ಚರ್ಮ ಹಾಗೂ ಒಳ ಚರ್ಮ ಎಂಬ ಎರಡು ಪ್ರಾಥಮಿಕ ಜೀವಾಂಕುರ ಸ್ತರಗಳಿರುವ. ಎರಡು ಬೀಜ ಪೊರೆಗಳುಳ್ಳ

ಡಿಂಬದ್ರವ್ಯ

(ಜೀ) ಮೊಟ್ಟೆಯೊಂದರ ಕೋಶದ್ರವ್ಯ. (ಜೀವಕೋಶದಲ್ಲಿ ನ್ಯೂಕ್ಲಿಯಸ್ ಬಿಟ್ಟು ಬೇರೆ ಭಾಗ – ಸೈಟೊಪ್ಲಾಸ್ಮ್)

ಡಿಮಾಡ್ಯುಲೀಕರಣ

(ಭೌ) ಸಾಮಾನ್ಯವಾಗಿ ವಾಹಕ ಅಲೆಯ ಮೇಲೆ ಮುದ್ರಿಸಿದ ಮೂಲ ಮಾಹಿತಿಯನ್ನು ಹೊರ ತೆಗೆಯುವ ಪ್ರಕ್ರಿಯೆಗೆ ಅನ್ವಯಿಸುತ್ತದೆ, ಟೆಲಿವಿಷನ್, ರೇಡಿಯೊ ಮೊದಲಾದವುಗಳಲ್ಲಿ ದೃಶ್ಯಬಿಂಬ ಅಥವಾ ಶಬ್ದಗಳನ್ನು ರವಾನಿಸಲು ಮಾಡ್ಯುಲೀಕರಿಸಿದ (ಸಂದರ್ಭಕ್ಕೆ ತಕ್ಕಂತೆ ಅಳವಡಿಸಿದ) ಅಲೆಗಳಿಂದ ಪುನಃ ಅವೇ ದೃಶ್ಯಬಿಂಬ ಅಥವಾ ಬಿಂಬಗಳನ್ನು ಪಡೆಯುವುದು. ಪ್ರತ್ಯಳವಡಿಕೆ

ಡಿಷ್ ಆಂಟಿನಾ

(ತಂ) ನಿಮ್ನ ತಲ ಇರುವ ದಿಶಾಸೂಚಕ ಆಂಟೆನಾ. ಆಕಾಶ ದಿಂದ ಬರುವ ಸಂಜ್ಞೆಗಳನ್ನು ಸ್ವೀಕರಿಸಿ ರವಾನಿಸುವ, ಬಾಣಲೆ ಆಕಾರದ ಸಲಕರಣೆ. ಟಿವಿ ಆಂಟೆನಾ ಅಂತಲ್ಲದೆ ಇದು ನೇರವಾಗಿ ಉಪಗ್ರಹದಿಂದಲೂ ಎಲ್ಲ ದಿಕ್ಕುಗಳಿಂದಲೂ ಬರುವ ಸಂಜ್ಞೆಗಳನ್ನು ಸ್ವೀಕರಿಸಬಲ್ಲುದು

ಡಿಸ್ಕ್

(ಕಂ) ಕಂಪ್ಯೂಟರಿನಲ್ಲಿ ದೊಡ್ಡ ಪ್ರಮಾಣದ ದತ್ತಾಂಶಗಳನ್ನು ಸಂರಕ್ಷಿಸಿಡುವ ಸಾಮಾನ್ಯ ಮಾಧ್ಯಮ. ಕಾಂತೀಯಪಟ್ಟಿಗೆ ಪರ್ಯಾಯ

ಡಿಸ್ಕ್ರಿಮಿನೆಂಟ್

(ಗ) ax2+bx+c=0 ಸಮೀಕರಣ ದಲ್ಲಿ b2– 4ac. ಇದರ ಮೂರು ನೆಲೆಗಳನ್ನು ಅನುಸರಿಸಿ ಸಮೀಕರಣದ ಪರಿಹಾರಗಳು ನಿರ್ಣೀತವಾಗುತ್ತವೆ; b2 – 4ac< 0 ಆದಾಗ ಪರಿಹಾರಗಳು ಕಾಲ್ಪನಿಕ; b2 – 4ac = 0 ಆದಾಗ ನೈಜ, ಸಮ; b2 – 4ac>0 ಆದಾಗ ಪರಿಹಾರಗಳು ನೈಜ ಮತ್ತು ಅಸಮ. ಏಕೆಂದರೆ ಸಮೀಕರಣದಲ್ಲಿ . ವಿವಿಕ್ತಕ

ಡಿಸ್ಕ್ರಿಮಿನೇಟರ್

(ಗ) ವಿಭಿನ್ನ ವೈಲಕ್ಷಣ್ಯಗಳಿರುವ (ಉದಾ: ಪಾರ ಅಥವಾ ಆವೃತ್ತಿ) ಸಂeಗಳನ್ನು ಸ್ವೀಕರಿಸುವಂತೆ /ನಿರಾಕರಿಸುವಂತೆ ಹೊಂದಿಸಬಹುದಾದ ಮಂಡಲ. ವಿವಿಕ್ತಕಾರಿ

ಡಿಸ್ಟೆಂಪರ್

(ತಂ) ನೀರಿನಲ್ಲಿ ಅಥವಾ ಎಣ್ಣೆಯಲ್ಲಿ ಕಲಸಿ ಒಳಗೋಡೆಗಳಿಗೆ ಲೇಪಿಸುವ ಬಣ್ಣ (ವೈ) ಚಿತ್ತವೈಕಲ್ಯ. ಉದ್ವೇಗದ ಕಾರಣವಾಗಿ ಮನಸ್ಸಿನ ಹದ ತಪ್ಪುವುದು. (ಪ್ರಾ) ನಾಯಿರೋಗ

ಡಿಸ್ಟ್ರೋಸಿಯಮ್

(ರ) ವಿರಳ ಭಸ್ಮ ಲೋಹ ಧಾತುಗಳಲ್ಲೊಂದು. ಪ್ರತೀಕ dy. ಪಸಂ ೬೬, ಪರಮಾಣು ತೂಕ ೧೬೨.೫೦. ಸಾಸಾಂ. ೮.೫೫೧. ದ್ರಬಿಂ ೧೪೦೭0 ಸೆ. ಕುಬಿಂ ೨೫೬೭0 ಸೆ. ನ್ಯೂಕ್ಲಿಯರ್ ತಂತ್ರವಿದ್ಯೆಯಲ್ಲಿ ನ್ಯೂಟ್ರಾನ್ ಅಪಶೋಷಕವಾಗಿ ಕೆಲವು ಮಿಶ್ರಲೋಹಗಳಲ್ಲಿ ಸೀಮಿತ ಬಳಕೆ

ಡೀಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ

(ರ) DNA (ಡಿಎನ್‌ಎ). ಆನುವಂಶಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿಯುವ ಜೀನ್ ಸಾಮಗ್ರಿ. ಸಾಮಾನ್ಯವಾಗಿ ಜೀವಕೋಶದ ಕೇಂದ್ರಬಿಂದುವಾದ ನ್ಯೂಕ್ಲಿಯಸ್‌ನಲ್ಲಿರುವುದು. ಬಹುಪಾಲು ಜೀವಿಗಳಲ್ಲಿ ಒಂದಕ್ಕೊಂದು ಸುರುಳಿ ಸುತ್ತಿಕೊಂಡಿರುವ ಎರಡು ಎಳೆಗಳಿಂದಾಗಿರುತ್ತದೆ. ಕೆಲವು ಜೀವಿಗಳಲ್ಲಿ (ಉದಾ: ವೈರಸ್) ಒಂಟಿ ಎಳೆ ರೂಪದಲ್ಲಿರುವುದು. ರೈಬೋಸ್ ಶರ್ಕರ, ಫಾಸ್ಫೇಟ್ ಮತ್ತು ನೈಟ್ರೊಜನ್‌ಯುಕ್ತ ಪ್ರತ್ಯಾಮ್ಲಗಳು ಇದರ ರಾಸಾಯನಿಕ ಘಟಕಗಳು. ನೋಡಿ: ರೈಬೊ ನ್ಯೂಕ್ಲಿಯಿಕ್ ಆಮ್ಲ

ಡೀಆಕ್ಸಿರೈಬೋಸ್

(ರ) ಡಿಎನ್‌ಎಯನ್ನು ಜಲ ವಿಭಜನೆಗೆ ಒಳಪಡಿಸಿದಾಗ ಲಭಿಸುವ ಶರ್ಕರ. ರೈಬೋಸ್ ಶರ್ಕರ ಕ್ಕಿಂತ ಒಂದು ಆಕ್ಸಿಜನ್ ಪರಮಾಣು ಕಡಿಮೆ ಇರುತ್ತದೆ. C5H10O4

ಡೀಕಾರ್ಬನೈಸೇಷನ್

(ರ) ರಕ್ತ, ಉಕ್ಕು, ಅಂತರ್ದಹನ ಯಂತ್ರ ಮುಂತಾದ ವಸ್ತುಗಳಿಂದ ಇಂಗಾಲವನ್ನು ತೆಗೆದುಹಾಕುವುದು. ಇಂಗಾಲ ನಿವಾರಣೆ. ಡೀಕಾರ್ಬನೀಕರಣ

ಡೀಕಾರ್ಬರೈಸೇಷನ್

(ರ) ಉಕ್ಕಿನ ಮೇಲ್ಮೈಯಿಂದ ಇಂಗಾಲ ಕಳೆಯಲು ಅದನ್ನು ಇಂಗಾಲ ನಿವಾರಕ ಅನಿಲಗಳ ಸಾರತೆ ಒಂದು ನಿರ್ದಿಷ್ಟ ಮೌಲ್ಯಕ್ಕಿಂತ ಅಧಿಕವಾಗಿರುವ ವಾತಾವರಣದಲ್ಲಿ ಕಾಸುವುದು. ಡೀಕಾರ್ಬರೀಕರಣ

ಡೀಕ್ಯಾಪ್ಸುಲೇಷನ್

(ವೈ) ಯಾವುದೇ ಅಂಗದ, ವಿಶೇಷವಾಗಿ ಮೂತ್ರಜನಕಾಂಗದ, ಪೊರೆಚೀಲವನ್ನು ಅಥವಾ ಆವರಣವನ್ನು ತೆಗೆದುಹಾಕುವುದು

ಡೀಪಾಲಿಮರೈಸೇಷನ್

(ರ) ಯಾವುದೇ ಬಾಹ್ಯ ಅಭಿಕಾರಕವನ್ನು ಬಳಸಿ ಅಥವಾ ಬಳಸದೆ ಸಂಕೀರ್ಣ ಪದಾರ್ಥವನ್ನು ಸರಳ ಘಟಕಗಳಾಗಿ ಒಡೆಯುವುದು. ಉದಾ: N2O4 ಅಣುಗಳು NO2 ಅಣುಗಳಾಗುವುದು. ಡೀಪಾಲಿಮರೀಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App