भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಟ್ರೈನೈಟ್ರೊಟಾಲೀನ್

(ರ) C4H5(NO2)3 ಮಸಕು ಹಳದಿ ಬಣ್ಣದ ಸ್ಫಟಿಕೀಯ ಘನವಸ್ತು. ಟಾಲೀನ್‌ನ ನೈಟ್ರೇಶನ್‌ನಿಂದ ಉತ್ಪಾದಿತ. ದ್ರಬಿಂ ೮೨0 ಸೆ. ಸ್ಫೋಟಕ ವಸ್ತುವಾಗಿ ವ್ಯಾಪಕ ಬಳಕೆ. ವಿಷಕಾರಿ. ಆಲ್ಕಹಾಲ್ ಮತ್ತು ಈಥರ್‌ನಲ್ಲಿ ವಿಲೇಯ. ಸಂಕ್ಷೇಪ TNT (ಟಿಎನ್‌ಟಿ)

ಟ್ರೈನೈಟ್ರೊಬೆನ್ಝೀನ್ (ಟಿ.ಎನ್.ಬಿ)

(ರ) C6H3 (NO2)3. ಮೂರು ಹರಳು ರೂಪಿ. ಸಮಾಂಗಿಗಳುಂಟು. ದ್ರಬಿಂ. ೧೨೧-೧೨೭0ಸೆ. ಉಗ್ರ ಸ್ಫೋಟಕ. ಟಿಎನ್‌ಟಿಗಿಂತ ಹೆಚ್ಚು ಶಕ್ತಿಯುತವಾದುದು

ಟ್ರೈಮರ್

(ರ) ಮಾನೋಮರ್‌ನ ಮೂರು ಅಣುಗಳ ಸಾಂದ್ರೀ ಕರಣ ಉತ್ಪನ್ನ. ಉದಾ: C6H6 ಅನ್ನುವುದು C2H2ದ ಟ್ರೈಮರ್

ಟ್ರೈಲೊಬೈಟ

(ಪ್ರಾ) ನಿರ್ವಂಶೀ ಸಂಧಿಪದಿಗಳ ಗುಂಪಿನ ಒಂದು ವರ್ಗ. ಪ್ರಾಗ್ಜೀವಿಕಲ್ಪದ, ಕೇಂಬ್ರಿಯನ್, ಆರ್ಡೊವಿಸಿಯನ್ ಮತ್ತು ಸೈಲ್ಯೂರಿಯನ್ ಯುಗಗಳ ಶಿಲೆಗಳಲ್ಲಿ ಈ ವರ್ಗದ ಪ್ರಾಣಿಗಳ ಫಾಸಿಲುಗಳು ಸಿಕ್ಕಿವೆ. ಇವುಗಳ ಶರೀರದಲ್ಲಿ ರುಂಡ, ವಕ್ಷ ಮತ್ತು ಪುಚ್ಛ ಎಂಬ ಮೂರು ವಿಶಿಷ್ಟ ಖಂಡಗಳಿವೆ. ಎಂದೇ ಈ ಹೆಸರು

ಟ್ರೈಸೆಕ್ಟ್ರಿಕ್ಸ್

(ಗ) x3+xy2+ay2-3ax2=0 ಸಮೀಕರಣದ ಆಲೇಖ. x-ಅಕ್ಷ ಕುರಿತಂತೆ ಸಮಮಿತಿ; ಮೂಲ ಬಿಂದುವಿನ ಮೂಲಕ ಸಾಗುತ್ತದೆ. x= – a ಅನಂತಸ್ಪರ್ಶಕ. ಕೋನ ತ್ರಿಭಾಜನ ಸಮಸ್ಯೆಯಲ್ಲಿ ಇದಕ್ಕೆ ಮಹತ್ತ್ವ ಉಂಟು

ಟ್ರೈಸೊಮಿ

(ವೈ) ಜೀವಕೋಶದಲ್ಲಿ ಸಾಮಾನ್ಯವಾಗಿ ಎರಡು ಜೊತೆ ಅನುರೂಪ ವರ್ಣಕಾಯಗಳಿರುತ್ತವೆ. ತ್ರಿವರ್ಣ ಕಾಯದಲ್ಲಿ ಎರಡರ ಜೊತೆಗೆ ಮತ್ತೊಂದು ಜೊತೆ ಇರುತ್ತದೆ. ಮೂರು ಅನುರೂಪ ವರ್ಣಕಾಯಗಳಿರುವ ಸ್ಥಿತಿ. ಇದು ಅಸಹಜ ಸ್ಥಿತಿ. ನಾನಾ ರೀತಿಯ ವೈಪರೀತ್ಯಗಳಿಗೆ ಕಾರಣವಾಗಬಹುದು

ಟ್ರೈಹೈಡ್ರಿಕ್ ಆಲ್ಕಹಾಲ್‌ಗಳು

(ರ) ಮೂರು OH ಗುಂಪುಗಳಿರುವ, ಪ್ರತಿಯೊಂದೂ ಬೇರೆ ಬೇರೆ ಕಾರ್ಬನ್ ಪರಮಾಣುವಿಗೆ ಲಗತ್ತಾಗಿರುವ ಆಲ್ಕಹಾಲ್‌ಗಳು. ಉದಾ: ಗ್ಲಿಸರೀನ್

ಟ್ರೈಹೈಡ್ರೇಟ್

(ರ) ನೀರಿನ ಮೂರು ಅಣುಗಳು ಇನ್ನೊಂದು ಪದಾರ್ಥದ ಒಂದು ಅಣುವಿಗೆ ಲಗತ್ತಾಗಿರುವ ಯಾವುದೇ ಪದಾರ್ಥ

ಟ್ರೊಕಾಯ್ಡ್

(ಗ) ಸರಳರೇಖೆಯ ನೇರ ವೃತ್ತ ಉರುಳಿದಂತೆ ತ್ರಿಜ್ಯದ ಮೇಲಿನ ಒಂದು ಬಿಂದು ರೇಖಿಸುವ ವಕ್ರರೇಖೆ. ಈ ಬಿಂದು ಪರಿಧಿಯ ಮೇಲಿರುವಾಗ ದೊರೆಯುವ ವಕ್ರರೇಖೆಗೆ ಚಕ್ರಜವೆಂದು ಹೆಸರು. ನೋಡಿ: ಚಕ್ರಜ

ಟ್ರೊಕೊಫೋರ್

(ಪ್ರಾ) ವಲಯವಂತ, ರೋಟಿಫೆರ ಮತ್ತು ಮೃದ್ವಂಗಿಗಳ ಡಿಂಬಾವಸ್ಥೆ. ಜೀವಿಗಳ ವಿಕಾಸ ಪಥ ಗುರುತಿಸುವಲ್ಲಿ ವಿಶೇಷ ಉಪಯುಕ್ತ

ಟ್ರೋಪೀಯಲಮ್

(ಸ) ಟ್ರೋಪೀಯಲೇಸೀ ಕುಟುಂಬದ ಮೂಲಿಕೆ ಸಸ್ಯ. ನಸ್ಟರ್ಷಮ್ ಪರ್ಯಾಯ ನಾಮ. ೪೦ ಪ್ರಭೇದಗಳುಂಟು. ದಕ್ಷಿಣ ಅಮೆರಿಕ ತವರು. ಹೂಗಳು ಅಂದವಾಗಿ ಇರುವುದರಿಂದ ತೋಟಗಳಲ್ಲಿ ತೂಗುಬುಟ್ಟಿಗಳಲ್ಲಿ ಬೆಳೆಸುತ್ತಾರೆ

ಟ್ರೌಟ್ ಮೀನು

(ಪ್ರಾ) ಸಾಲ್ಮನಿಡೀ ಕುಟುಂಬಕ್ಕೆ ಸೇರಿದ ಆಹಾರ ಮೀನು. ಸಿಹಿನೀರು ವಾಸಿ. ಕೆಲವು ಬಗೆಯವು ಉಪ್ಪು ನೀರಿನಲ್ಲೂ ವಾಸಿಸುತ್ತವೆ. ಸೂಕ್ಷ್ಮ ಹುರುಪೆ ಆವೃತ ಉದ್ದ ಶರೀರ, ಹುರುಪೆರಹಿತ ತಲೆ, ಮೃದು ಬೆನ್ನು ರೆಕ್ಕೆಗಳು, ಕಪ್ಪು , ನೀಲ ಅಥವಾ ಕಂದು ಬೆನ್ನು, ಬೂದು ಉದರ, ಹಳದಿ ಪಾರ್ಶ್ವ ಹಾಗೂ ನಕ್ಷತ್ರಾಕಾರದ ಕಪ್ಪು ಚುಕ್ಕೆಗಳು ಈ ಮೀನಿನ ವೈಶಿಷ್ಟ್ಯ

ಟ್ರ್ಯಾಕೈಟ್

(ಭೂವಿ) ಅತಿ ಸೂಕ್ಷ್ಮ ಖನಿಜ ಕಣಗಳಿಂದಾದ ಜ್ವಾಲಾಮುಖಿಜ ಶಿಲೆ. ಕ್ಷಾರೀಯ ಫೆಲ್ಡ್‌ಸ್ಪಾರ್ ಮತ್ತು ಮೇಫಿಕ್ ಖನಿಜಗಳು ಇದರ ಪ್ರಧಾನ ಘಟಕಗಳು

ಟ್ರ್ಯಾಕ್ಟರ್

(ತಂ) ಕೃಷಿಕಾರ್ಯಗಳಲ್ಲಿ ಬಳಸುವ, ಬೇರೆ ವಾಹನಗಳನ್ನೂ ಭಾರಿ ಸರಕು ಮೊದಲಾದವನ್ನೂ ಎಳೆಯುವ ಮೋಟಾರ್ ಚಾಲಿತ ಯಂತ್ರ

ಟ್ರ್ಯಾಕ್ಟ್ರಿಕ್ಸ್

(ಗ) ಕ್ಯಾಟೆನರಿ ಎಂಬ ವಕ್ರರೇಖೆಯ ಅಂತರ್ವಲಿತ. x-ಅಕ್ಷದಲ್ಲಿಯ ಯಾವುದೇ ಬಿಂದುವಿನಿಂದ ಇದಕ್ಕೆ ಎಳೆದ ಎಲ್ಲ ಸ್ಪರ್ಶಕಗಳೂ ಸಮವಾಗಿರುತ್ತವೆ

ಟ್ರ್ಯಾಪ್‌ಶಿಲೆ

(ಭೂವಿ) ಬೆಸಾಲ್ಟ್ ಅಥವಾ ಡಯಾಬೇಸ್‌ನಂಥ ಯಾವುದೇ ಸೂಕ್ಷ್ಮಕಣಗಳ ಗಾಢವರ್ಣದ ಅಗ್ನಿಶಿಲೆ

ಟ್ರ್ಯಾಮಲ್

(ತಂ) ದೀರ್ಘ ವೃತ್ತ (ಅಂಡವೃತ್ತ) ಲೇಖಿಸುವ ಸಲಕರಣೆ. ದಂಡ ಕೈವಾರ (ಬೀಮ್‌ಕಂಪಾಸ್)

ಟ್ರ್ಯಾಮ್

(ತಂ) ಸಾರ್ವಜನಿಕ ರಸ್ತೆಯಲ್ಲಿ ಹಾಕಿದ ಹಳಿ ಮೇಲೆ ವಿದ್ಯುಚ್ಛಕ್ತಿಯ ಸಹಾಯದಿಂದ ಓಡಾಡುವ ಪ್ರಯಾಣಿಕರ ಬಂಡಿ

ಟ್ಸೆಟ್ಸೇ ನೊಣ

(ಪ್ರಾ) ಡಿಪ್ಟರ ಗಣದ ಮಸಿಡೀ ಕುಟುಂಬಕ್ಕೆ ಸೇರಿದ ನೊಣ. ಗ್ಲಾಸಿನ ನೊಣ ಪರ್ಯಾಯ ನಾಮ. ಆಫ್ರಿಕ ವಾಸಿ. ನಿದ್ದೆಯ ವ್ಯಾಧಿ (ಸ್ಲೀಪಿಂಗ್ ಸಿಕ್‌ನೆಸ್) ಉಂಟು ಮಾಡುವ ರೋಗಾಣು ವಾಹಕ. ನೀರಿನ ಆಸರೆ ಇರುವ ಕಡೆ ಪ್ರಾಣಿಗಳ ಹಾಗೂ ಮಾನವನ ರಕ್ತ ಹೀರಿ ಜೀವಿಸುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App