Navakarnataka Vijnana Tantrajnana Padasampada (2011)
Navakarnataka Publications Private Limited
ಟ್ರಯೋಡ್ ಕವಾಟ
(ತಂ) ತಲಾ ಒಂದು ಆನೋಡ್, ಕ್ಯಾಥೋಡ್ ಮತ್ತು ನಿಯಂತ್ರಣ ಎಲೆಕ್ಟ್ರೋಡ್ ಇರುವ ಗಾಜಿನ ನಿರ್ದ್ರವ್ಯ ಬುರುಡೆ. ಇದರ ವಿಭವವು ಕ್ಯಾಥೋಡ್ನಿಂದ ಆನೋಡ್ಗೆ ಎಲೆಕ್ಟ್ರಾನ್ಗಳ ಪ್ರವಾಹವನ್ನು ನಿಯಂತ್ರಿಸುತ್ತದೆ. ನಿರ್ದ್ರವ್ಯ ನಳಿಕೆ. ಎಲೆಕ್ಟ್ರಾನ್ ಟ್ಯೂಬ್
ಟ್ರಾಕ್ಲಿಯ
(ಪ್ರಾ) ರಾಟೆ ಆಕಾರದಲ್ಲಿರುವ ಯಾವುದೇ ಅಂಗರಚನೆ. ವಿಶೇಷವಾಗಿ ಸ್ನಾಯುರಜ್ಜು ಅಡ್ಡಹಾಯುವ ಸಂಧಿ
ಟ್ರಾನ್ಸಿಸ್ಟರ್
(ಭೌ) transfer resistor ಪದಗಳ ಹ್ರಸ್ವರೂಪವಿದು. ಪ್ರವರ್ಧನೆ ಮತ್ತು/ಅಥವಾ ನಿಯಂತ್ರಣಕ್ಕಾಗಿ ಬಳಸುವ ಎಲೆಕ್ಟ್ರಾನಿಕ್ ಉಪಕರಣ. ಇದರಲ್ಲೊಂದು ಅರೆವಾಹಕ ಪದಾರ್ಥವುಂಟು. ಎರಡು ಅಥವಾ ಹೆಚ್ಚು ಎಲೆಕ್ಟ್ರೋಡ್ಗಳು ಇದರೊಡನೆ ಸಂಸ್ಪರ್ಶ ಪಡೆದಿವೆ. ಎಲೆಕ್ಟ್ರೋಡ್ಗಳು ಸಾಧಾರಣ ವಾಗಿ ಲೋಹ ಬಿಂದುಗಳು ಇಲ್ಲವೇ ಲೋಹಮಯಿಗಳು. ಇವನ್ನು ಅರೆವಾಹಕಕ್ಕೆ ಬೆಸೆಯಲಾಗಿರುತ್ತದೆ. ಟ್ರಾನ್ಸಿಸ್ಟರ್ ಉಪಕರಣವು ರೇಡಿಯೋ ಟಿವಿ ಹಾಗೂ ಕಂಪ್ಯೂಟರ್ಮಂಡಲದ ಮೂಲ ಘಟಕ. ಇದು ಉಷ್ಣಾಯಾನು ಕವಾಟಗಳನ್ನು ಸಂಪೂರ್ಣವಾಗಿ ಸ್ಥಾನಾಂತರಿಸಿದೆ. ಇದರ ನೆರವಿನಿಂದ ಕಾರ್ಯ ಜರಗಿಸುವ ಕೈ ರೇಡಿಯೋಗಳನ್ನೂ ಟ್ರಾನ್ಸಿಸ್ಟರ್ ಎಂದೇ ಕರೆಯುತ್ತಾರೆ
ಟ್ರಾನ್ಸ್ಡ್ಯೂಸರ್
(ತಂ) ಸಂಜ್ಞೆಗಳನ್ನು ಒಂದು ಭೌತ ರೂಪದಿಂದ ಇನ್ನೊಂದಕ್ಕೆ ಪರಿವರ್ತಿಸುವ ಸಾಧನ. ಉದಾ : ವಿದ್ಯುತ್ ಸ್ಪಂದವನ್ನು ಶಬ್ದ ಸಂeಯಾಗಿ ಪರಿವರ್ತಿಸುವ ಲೌಡ್ ಸ್ಪೀಕರ್. ಮೈಕ್ರೊಫೋನ್, ಮೋಟಾರ್ ಹಾರ್ನ್, ವಿದ್ಯುತ್ ಕರೆಗಂಟೆ, ಫೋನೊಗ್ರಾಫ್ ಪಿಕ್ಅಪ್ ಇತರ ಉದಾಹರಣೆಗಳು
ಟ್ರಾನ್ಸ್ಫಾರ್ಮರ್
(ಭೌ) ಆವೃತ್ತಿಯಲ್ಲಿ ವ್ಯತ್ಯಯ ಮಾಡದೆ ಪರ್ಯಾಯ ವಿದ್ಯುತ್ತಿನ ವೋಲ್ಟೇಜ್ ಪ್ರಮಾಣವನ್ನು ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸುವ ಸಾಧನ. ಇದರ ಸಹಾಯದಿಂದ ವೋಲ್ಟೇಜ್ಗಳ ಮತ್ತು ಪ್ರವಾಹಗಳ ಮೊತ್ತಗಳನ್ನು ಬದಲಾಯಿಸಬಹುದು; ಪ್ರತಿಬಾಧೆಯಲ್ಲಿ (ಇಂಪೆಡೆನ್ಸ್) ಬದಲಾವಣೆಗಳನ್ನು ಉಂಟುಮಾಡಬಹುದು. ಪರಿವರ್ತಕ
ಟ್ರಾನ್ಸ್ಫೆಕ್ಷನ್
(ಜೀ) ಕೋಶದಿಂದ ಹೊರಬಂದ ಡಿಎನ್ಎ ದ್ರಾವಣದಲ್ಲಿದ್ದರೂ ಮತ್ತೊಂದು ಕೋಶ ಅದನ್ನು ಹೀರಿಕೊಂಡು ಆನುವಂಶಿಕ ಪರಿವರ್ತನೆ ಹೊಂದುವುದು. ಬ್ಯಾಕ್ಟಿರಿಯೋಫೇಝ್ನಿಂದ ಸೋಂಕು ತಗುಲಿದ ನಂತರ ಆತಿಥೇಯ ಜಿನೋಮ್ (ಆನುವಂಶಿಕ ಜೀನ್ಗಳ ಮೊತ್ತ) ನಲ್ಲಾಗುವ ಬದಲಾವಣೆ. ಬ್ರಿಟಿಷ್ ವಿಜ್ಞಾನಿ ಫ್ರೆಡ್ ಗ್ರಿಫಿತ್ ೧೯೨೮ರಲ್ಲಿ ನ್ಯುಮೋನಿಯಾಕಾರಕ ಬ್ಯಾಕ್ಟೀರಿಯ ಬಳಸಿ ಮೊತ್ತ ಮೊದಲಿಗೆ ಇಂತಹ ಪ್ರಯೋಗ ನಡೆಸಿದರು
ಟ್ರಾಪ್ ರೂಪಣೆ
(ಭೂವಿ) ಬೆಸಾಲ್ಟ್ ಶಿಲಾರಸ ಪ್ರವಾಹದಿಂದಾದ ಅನುಕ್ರಮ ಸ್ತರಗಳು ಹಠಾತ್ತನೆ ಸ್ಥಗಿತಗೊಂಡಾಗ ಮೈದಳೆಯುವ ಸೋಪಾನ ಸದೃಶ ಲಕ್ಷಣಗಳು. ಉದಾ: ದಖ್ಖನ್ ಪ್ರಸ್ಥಭೂಮಿಯ ಶಿಲಾರಚನೆ. ಸ್ವೀಡಿಷ್ ಭಾಷೆಯ ಟ್ರಾಪ (ಸೋಪಾನ) ಎಂಬುದರಿಂದ ಈ ಹೆಸರು
ಟ್ರಾಯ್ ತೂಕ
(ರ) ಹಳೆಯ ಇಂಗ್ಲಿಷ್ ತೂಕ ಏಕಮಾನ ಪದ್ಧತಿ. ಈಗಲೂ ಚಿನ್ನ, ಬೆಳ್ಳಿ, ಹಾಗೂ ಔಷಧ ವಸ್ತುಗಳ ತೂಕದಲ್ಲಿ ಬಳಕೆ. ಪ್ರಧಾನ ಏಕಮಾನಗಳು: ಪೌಂಡ್ ಟ್ರಾಯ್ (೧೨ ಟ್ರಾಯ್ ಔನ್ಸ್ಗಳು), ಔನ್ಸ್ ಟ್ರಾಯ್ (೨೦ ಪೆನ್ನಿವೈಟ್) ಹಾಗೂ ಪೆನ್ನಿವೈಟ್ (೨೪ ಗ್ರೈನ್ಸ್ ಅಥವಾ ೧.೫ ಗ್ರಾಮ್)
ಟ್ರಿಟಿಕೇಲ್
(ಸ) ಗೋದಿ (ಟ್ರಿಟಿಕಮ್) ಮತ್ತು ರೈ (ಸಿಕೇಲ್) ಇವೆರಡರ ಸಂಕರ ತಳಿ. ೧೮೭೬ರಲ್ಲಿ ಎ. ಸ್ಟೀಫನ್ ವಿಲ್ಸನ್ ಇದನ್ನು ಸೃಷ್ಟಿಸಿದರೆಂದು ವರದಿ. ಮರುಸಂತಾನ ಸಾಧ್ಯ ವಿರುವ ಟ್ರಿಟಿಕೇಲ್ ೧೯೩೭ರಲ್ಲಿ ಮೊತ್ತಮೊದಲು ತಯಾರಾಯಿತು
ಟ್ರಿಪಾನಸೋಮ
(ಪ್ರಾ) ಕಶಾಂಗಯುಕ್ತ ಪ್ರೋಟೊಜೋವ ಗುಂಪು. ಇವುಗಳಲ್ಲಿ ಮನುಷ್ಯ ಹಾಗೂ ಪ್ರಾಣಿಗಳಿಗೆ ರೋಗ ತರುವಂಥವೂ ಇರುವುದುಂಟು
ಟ್ರಿಪ್ಟೋಫೇನ್
(ರ) C11H12O2N2. ಕೇಸೀನ್, ಫೈಬ್ರಿನ್ ಮತ್ತಿತರ ಕೆಲವು ಪ್ರೊಟೀನ್ಗಳಿಂದ ಪಡೆದ ಅಮೀನೊಆಮ್ಲ
ಟ್ರಿಪ್ಸಿನ್
(ರ) ಕಶೇರುಕದ ಕರುಳಿನಲ್ಲಿರುವ ಪ್ರೊಟೀನ್ ಅಂಶಗಳ ಪಚನಕ್ಕೆ ಹೊಣೆಯಾಗಿರುವ ಒಂದು ಕಿಣ್ವ. ಇದು ಮೇದೋಜೀರಕಾಂಗದಲ್ಲಿ ಸ್ರವಿಸುತ್ತದೆ
ಟ್ರಿಲಿಯನ್
(ಗ) ಮಿಲಿಯನ್ ಮಿಲಿಯನ್ = ೧೦೧೨
ಟ್ರೀ ಪೈ
(ಪ್ರಾ) ಕಾರ್ವಿಡೀ ಕುಟುಂಬ. ಡೆಂಡ್ರೊಸಿಟಿ ಜಾತಿಗೆ ಸೇರಿದ ಒಂದು ಹಕ್ಕಿ. ಬಿಳಿ ಕೋಗಿಲೆ ಪರ್ಯಾಯ ನಾಮ. ಗುಡ್ಡಗಾಡು ವಾಸಿ. ಭಾರತದಲ್ಲಿ ಐದು ಪ್ರಭೇದಗಳಿವೆ. ಕೆಲವು ಇಂಪಾದ ಧ್ವನಿ ಹೊಮ್ಮಿಸುತ್ತವೆ
ಟ್ರೆಪ್ಯಾಂಗ್
(ಪ್ರಾ) ಎಕೈನೊಡರ್ಮೆಟ ವಿಭಾಗದ ಹಾಲೋ ತುರಾಯಿಡಿಯ ಅಥವಾ ಸಮುದ್ರಸೌತೆ ವರ್ಗಕ್ಕೆ ಸೇರಿದ ಪ್ರಾಣಿ. ದೇಹ ನೀಳವಾಗಿ ಉರುಳೆಯಾಕಾರದಲ್ಲಿದೆ. ದಕ್ಷಿಣ ಸಾಗರದ ನಿವಾಸಿಗಳು ಮೀನು ಹಿಡಿಯಲು ಗಾಳದ ಎರೆಯಾಗಿ ಇದನ್ನು ಉಪಯೋಗಿಸುತ್ತಾರೆ
ಟ್ರೆಫೈನ್
(ವೈ) ಮಿದುಳ ಮೇಲೆ ಶಸ್ತ್ರಕ್ರಿಯೆ ಮಾಡುವ ಸಲುವಾಗಿ ತಲೆಬುರುಡೆಯಿಂದ ಯುಕ್ತ ಸ್ಥಳದಲ್ಲಿ ಮೂಳೆಯ ದುಂಡು ತುಣುಕನ್ನು ಹೊರತೆಗೆಯುವುದು. ಗ್ಲಾಕೋಮಾ ಬೇನೆಯ ಚಿಕಿತ್ಸೆಯಲ್ಲಿ ಆ ಸ್ಥಳದಿಂದ ದುಂಡು ತುಣುಕನ್ನು ಹೊರ ತೆಗೆಯುವುದು. ಇಂಥ ದುಂಡು ತುಣುಕನ್ನು ಹೊರತೆಗೆಯುವ ಶಸ್ತ್ರಕ್ಕೂ ಇದೇ ಹೆಸರು. ಇದು ಚಲನೆಯನ್ನು ನಿರ್ದೇಶಿಸುವ ನಡುಗೂಟವುಳ್ಳ ಒಂದು ಪರಿಷ್ಕೃತ ಉರುಳೆ ಗರಗಸ
ಟ್ರೇಕಿಯ
(ಪ್ರಾ) ನೋಡಿ: ಶ್ವಾಸನಾಳ
ಟ್ರೈಟನಾಮಲಿ
(ವೈ) ಒಂದು ಬಗೆಯ ಬಣ್ಣಗುರುಡು. ಈ ನ್ಯೂನತೆ ಇರುವವರಿಗೆ ರೋಹಿತದಲ್ಲಿನ ನೀಲಿ ಬಣ್ಣ ಅಸ್ಪಷ್ಟ
ಟ್ರೈಟನ್
(ರ) ಟ್ರೈಟಿಯಮ್ ಪರಮಾಣುವಿನ ಬೀಜ. ೧ ಪ್ರೋಟಾನ್ ಮತ್ತು ೨ ನ್ಯೂಟ್ರಾನ್ಗಳಿಂದ ಕೂಡಿದೆ. ಹೈಡ್ರೊಜನ್ ಬಾಂಬ್ ತಯಾರಿಕೆಯಲ್ಲಿ ಬಳಕೆ
ಟ್ರೈಟಿ(ಷಿ)ಯಮ್