भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಟ್ಯಾಕೊಮೀಟರ್

(ತಂ) ಕೋನೀಯ ವೇಗವನ್ನು, ವಿಶೇಷವಾಗಿ ಆವರ್ತಿಸುತ್ತಿರುವ ದೂಲವೊಂದು ಏಕಮಾನ ಕಾಲದಲ್ಲಿ ನೆರವೇರಿಸುವ ಆವರ್ತನೆಗಳ ಸಂಖ್ಯೆಯನ್ನು, ಅಳೆಯುವ ಉಪಕರಣ. ಆವರ್ತ ದಂಡವು ಸುತ್ತುವ ವೇಗದ ಪ್ರಮಾಣವನ್ನು ಅಳೆದು ಆ ಮೂಲಕ ವಾಹನದ ವೇಗ/ಗತಿಯನ್ನು ಅಳೆಯುವ ಸಲಕರಣೆ. ಇದರಲ್ಲಿ ಯಾಂತ್ರಿಕ, ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಎಂಬ ವಿವಿಧ ಮಾದರಿಗಳಿವೆ. ವಿಸ್ತೃತವಾಗಿ ಬಳಕೆಯಲ್ಲಿರುವ ವಿದ್ಯುಜ್ಜನಕ ಟ್ಯಾಕೊಮೀಟರ್‌ನಲ್ಲಿ ಇರುವ ಪುಟ್ಟ ವಿದ್ಯುಜ್ಜನಕದ ಔಟ್‌ಪುಟ್ ವೋಲ್ಟೇಜು, ವಿದ್ಯುಜ್ಜನಕವನ್ನು ಚಾಲನೆಯಲ್ಲಿರಿಸಿದ ದೂಲದ ಆವರ್ತನ ದರದ ಅಳತೆ ಆಗಿರುತ್ತದೆ. ವೇಗಮಾಪಕ

ಟ್ಯಾಂಕ್

(ತಂ) ಲೋಹದ ಹಾಳೆಯಿಂದ ಪೂರ್ಣವಾಗಿ ಹೊದಿಸಲ್ಪಟ್ಟಿರುವ ಸೇನಾವಾಹನ. ಇದರಲ್ಲಿ ಭಾರವಾದ ಫಿರಂಗಿಯೂ ಒಂದು ಇಲ್ಲವೇ ಎರಡು ಯಂತ್ರಚಾಲಿತ ಬಂದೂಕುಗಳೂ ಸಜ್ಜುಗೊಂಡಿರುತ್ತವೆ. ಜಾಡು ಪಟ್ಟಿ ಸಹಿತವಾದ ಚಕ್ರಗಳ ಮೇಲೆ ಟ್ಯಾಂಕನ್ನು ಅಳವಡಿಸಿರುವುದರಿಂದ ಇದು ಹರಕು ದೊಗಲು ನೆಲದ ಮೇಲೂ ಚಲಿಸಬಲ್ಲದು. ಯಾವುದೇ ಸೇನೆಯ ಬೆನ್ನೆಲುಬು ಟ್ಯಾಂಕ್ ಪಡೆ ಎನ್ನುವುದು ಅನ್ವರ್ಥಕ

ಟ್ಯಾಕ್ಟೈಟ್

(ಭೂವಿ) ಕಾರ್ಬೊನೇಟ್ ಶಿಲೆಗಳು ಸಂಸ್ಪರ್ಶ ರೂಪಾಂತರ ಕ್ರಿಯೆಗೊಳಗಾದಾಗ ಮೈದಳೆಯುವ ನಾನಾ ಬಗೆಯ ಖನಿಜಗಳಿಂದ ಕೂಡಿದ ಕಲ್ಲು

ಟ್ಯಾಂಗ್ರಮ್

(ಗ) ಒಂದು ಚೀನೀ ಜ್ಯಾಮಿತೀಯ ಒಗಟು. ಇದರಲ್ಲಿ ಒಂದು ಚೌಕವನ್ನು ಏಳು ಭಾಗಗಳಾಗಿ (೫ ತ್ರಿಭುಜಗಳು, ಒಂದು ಚೌಕ ಹಾಗೂ ಒಂದು ಸಮಾಂತರ ಚತುರ್ಭುಜ) ವಿಭಜಿಸ ಲಾಗಿರುತ್ತದೆ. ಇವುಗಳನ್ನು ತುಂಡರಿಸಿ ಬೇರೆಬೇರೆ ಆಕೃತಿಗಳಾಗುವಂತೆ ಪುನಃ ಒಟ್ಟಿಗೆ ಜೋಡಿಸಬಹುದು

ಟ್ಯಾಂಜೆಂಟ್

(ಗ) ಆರು ತ್ರಿಕೋಣಮಿತೀಯ ಫಲನಗಳ ಪೈಕಿ ಒಂದು. ನೋಡಿ : ತ್ರಿಕೋಣಮಿತೀಯ ಫಲನಗಳು

ಟ್ಯಾಂಜೆಂಟ್ ನಿಯಮ

(ಗ) ) ABCಯಲ್ಲಿ

ಟ್ಯಾಂಟಲಮ್

(ರ) ರಾಸಾಯನಿಕ ಲೋಹಧಾತು. ಆವರ್ತಕೋಷ್ಟಕದ ೫ನೆಯ ಗುಂಪಿನ ಸಂಕ್ರಮಣ ಲೋಹ. ಪ.ಸಂ. ೭೩, ಪ.ತೂಕ ೧೮೦.೯೪೮. ಸಾ. ಸಾಂ ೧೬.೬. ಪ್ರತೀಕ Ta. ನೈಸರ್ಗಿಕವಾಗಿ ಲಭಿಸುವ ಸಮಸ್ಥಾನಿ ೧೮೧ ಮಾತ್ರ. 179Ta ಮತ್ತು 182Ta ವಿಕಿರಣಪಟು ಸಮಸ್ಥಾನಿಗಳು. ದ್ರಬಿಂ ೨೯೯೬0 ± ೫೦0 ಸೆ. ಕುಬಿಂ. ಸುಮಾರು ೪೦೦೦0 ಸೆ. ನಿಯೋಬಿಯಮ್‌ನೊಂದಿಗೆ ಸಮರೂಪಿ. ಅಂತೆಯೇ ಖನಿಜಗಳಲ್ಲಿ ಇವೆರಡೂ ಮಿಶ್ರಣಗಳಾಗಿ ದೊರೆಯುತ್ತವೆ. ವಿದ್ಯುತ್ ಬಲ್ಬುಗಳ ತಂತುಗಳಲ್ಲಿ ಬಳಕೆ. ಸಂಕ್ಷಾರಣಾ ನಿರೋಧಕವಾದುದರಿಂದ ರಾಸಾಯನಿಕ ಕೈಗಾರಿಕೆಯಲ್ಲಿ ಉಪಕರಣಗಳ ಮತ್ತು ವೈದ್ಯಕೀಯ ಸಲಕರಣೆ ತಯಾರಿಕೆಯಲ್ಲೂ ಎಲೆಕ್ಟ್ರಾನಿಕ್ ಉದ್ಯಮದಲ್ಲೂ ಬಳಕೆ. ನೋಡಿ: ನಿಯೋಬಿಯಮ್. ೧೮೦೨ರಲ್ಲಿ ಎ. ಜಿ. ಎಕ್‌ಬೆರ್ಗ್ ಕಂಡುಹಿಡಿದು ಈ ಹೆಸರಿಟ್ಟರು

ಟ್ಯಾನಿಕ್ ಆಮ್ಲ

(ರ) ಅಳಲೆಕಾಯಿಯಿಂದ ಲಭ್ಯ. ಬಿಳಿ ಅಸ್ಫಟಿಕ ಪದಾರ್ಥ. ಗ್ಯಾಲಿಕ್ ಆಮ್ಲ ಮತ್ತು ಗ್ಲೂಕೋಸ್ ಗಳಿಂದಾದ ಎಸ್ಟರ್‌ನ ಪಾಲಿಮೆರ್. ಚರ್ಮ ಹದಗೊಳಿಸಲು, ವರ್ಣನಿವಾರಕವಾಗಿ ಮತ್ತು ಶಾಯಿ ತಯಾರಿಕೆಯಲ್ಲಿ ಬಳಕೆ

ಟ್ಯಾನಿಂಗ್

(ಪ್ರಾ) ನೆಲವಾಸಿ ಸಂಧಿಪದಿಗಳಲ್ಲಿ ಹೊಸದಾಗಿ ರೂಪುಗೊಂಡಿರುವ ಹೊರಚರ್ಮದಲ್ಲಿರುವ ಪ್ರೋಟೀನನ್ನು ಕೆಳಚರ್ಮ ಸ್ರವಿಸುವ ಕ್ರೀನೋನ್ ಬಂಧಿಸಿ ಹೊರಚರ್ಮವನ್ನು ಬಿರುಸು ಮತ್ತು ಗಾಢವಾಗಿಸುವ ಪ್ರಕ್ರಿಯೆ (ಮನುಷ್ಯರಲ್ಲಿ) ಮೈ ಚರ್ಮವನ್ನು ಬಿಸಿಲಿಗೆ ಒಡ್ಡಿ ಕಂದಾಗಿಸುವ ಪ್ರಕ್ರಿಯೆ. (ತಂ) ಚರ್ಮ ಹದ ಮಾಡುವುದು, ಚರ್ಮ ಸಂಸ್ಕರಣ

ಟ್ಯಾನಿನ್

(ರ) ಹೆಚ್ಚಿನ ಮರಗಳು ಸ್ರವಿಸುವ ಪಾಲಿ ಹೈಡ್ರಾಕ್ಸಿ ಬೆಂಜೋಯಿಕ್ ಆಮ್ಲ ನಿಷ್ಪನ್ನಗಳ ಮಿಶ್ರಣ. ಶುದ್ಧ ರೂಪದಲ್ಲಿ ಇರುವಾಗ ನೀರಿನಲ್ಲಿ ಸುಲಭವಾಗಿ ವಿಲೀನವಾಗುವುದು. ಕಹಿ ರುಚಿ ಮತ್ತು ಬಂಧಕ ಗುಣವುಂಟು

ಟ್ಯಾಂಪರ್

(ಭೌ) ಪರಮಾಣು ಕ್ರಿಯಾಕಾರಿಯಲ್ಲಿ ಮುಕ್ತ ನ್ಯೂಟ್ರಾನ್‌ಗಳನ್ನು ಸ್ಥಾವರದೊಳಕ್ಕೆ ಹಿಂತಿರುಗಿಸಲು ಬಳಸುವ ಗ್ರಾಫೈಟ್. ಮಂದನಕಾರಿ

ಟ್ಯಾಬುಲ

(ಪ್ರಾ) ಎಲುಬು ಮೊದಲಾದವುಗಳ ಗಡಸು ಚಪ್ಪಟೆ ಮೇಲ್ಮೈ

ಟ್ಯಾಲಿನ್

(ರ) ಜೊಲ್ಲಿನಲ್ಲಿ ಕಂಡುಬರುವ ಕಿಣ್ವ. ಉಪಾಪಚಯ ಕ್ರಿಯೆಯಲ್ಲಿ ಇದರ ಪಾತ್ರ ಮಹತ್ತ್ವದ್ದು

ಟ್ಯಾಲೊ

(ರ) ಗೊರಸು ಪ್ರಾಣಿಗಳ ಮೇದಸ್ಸು. ಇದರ ಕಾರ್ಬನ್ ಸರಣಿಯಲ್ಲಿ ಪ್ರತಿಯೊಂದರಲ್ಲೂ ೧೬-೧೮ ಪರಮಾಣು ಗಳಿರುತ್ತವೆ. ಸಾಬೂನು, ಮೋಂಬತ್ತಿಗಳ ತಯಾರಿಕೆಯಲ್ಲಿ ಉಪಯೋಗ. ಕೊಬ್ಬು, ಚರಬಿ

ಟ್ಯುಬೆಕ್ಟೊಮಿ

(ವೈ) ಗರ್ಭ ನಿರೋಧಕಕ್ಕಾಗಿ ಫೆಲೋಪಿಯನ್ ನಾಳವನ್ನು ಕತ್ತರಿಸುವ ಶಸ್ತ್ರಕ್ರಿಯೆ. ನಾಳಛೇದನ

ಟ್ಯೂನಿಸಿನ್

(ಸ) ಸಸ್ಯಗಳ ಸೆಲ್ಯೂಲೋಸ್‌ನಂತಿರುವ ಜೆಲ್ಲಿ ಸದೃಶ ಪದಾರ್ಥ. ಯೂರೊಕಾರ್ಡ್‌ಗಳ ಹೊರಾವರಣದಲ್ಲಿರುತ್ತದೆ

ಟ್ಯೂಲಿಪ್

(ಸ) ಲಿಲಿಯೇಸೀ ಕುಟುಂಬಕ್ಕೆ ಸೇರಿದ ಲಶುನ (ಮೂಲಿಕೆ) ಸಸ್ಯ. ಸುಮಾರು ೫೦ ಪ್ರಭೇದಗಳುಂಟು. ಇವು ಬಲು ಚಿಕ್ಕ ಗಾತ್ರದ ಮೂಲಿಕೆಗಳು. ಕಾಂಡ ಭೂಮಿಯ ಒಳಗಡೆ ಗುಪ್ತವಾಗಿದ್ದು ಈರುಳ್ಳಿಯಂತೆ ಗೆಡ್ಡೆ ರೂಪದಲ್ಲಿರುತ್ತದೆ. ಗೆಡ್ಡೆಯಿಂದ ಹೂ ಗೊಂಚಲಿನ ಉದ್ದ ತೊಟ್ಟು ಹೊರಬರುತ್ತದೆ. ಹೂಗಳು ದೊಡ್ಡವು. ಪುಷ್ಪದಳಕ್ಕೂ ಪುಷ್ಪ ಪಾತ್ರೆಗೂ ವ್ಯತ್ಯಾಸವಿಲ್ಲ. ಎರಡನ್ನೂ ಒಟ್ಟಿಗೆ ಪೆರಿಯಾಂತ್ ಎಂದು ಕರೆಯುತ್ತಾರೆ. ಹೂವಿನ ಬಣ್ಣ ವೈವಿಧ್ಯಮಯ, ಬಲು ಆಕರ್ಷಕ. ಪೆರಿಯಾಂತ್ ಸಮೂಹ ೬ ಹಾಲೆ ಗಳಿಂದ ಕೂಡಿದ್ದು ಗಂಟೆ ಇಲ್ಲವೇ ಆಲಿಕೆಯಂತಿರುತ್ತದೆ. ಟ್ಯೂಲಿಪ್ಪನ್ನು ಅಲಂಕಾರ ಸಸ್ಯವಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ

ಟ್ರಕಿಯೊಫೈಟ

(ಸ) ನೋಡಿ: ನಾಳಸಸ್ಯ

ಟ್ರಫಲ್

(ಸ) ಅಸ್ಕೊಮೈಸಿಟೀಸ್ ಗುಂಪಿನ ಟ್ಯೂಬರೇಲೀಸ್ ಗಣಕ್ಕೆ ಸೇರಿದ ತಿನ್ನಲು ಯೋಗ್ಯವಾದ ಅಣಬೆ. ಟ್ಯೂಬರ್ ಎಂಬ ಜಾತಿಯದು ಅತ್ಯಂತ ಪರಿಚಿತ ಬಗೆಯ ರಸ ಭಕ್ಷ್ಯ. ಟ್ಯೂಬರ್ ಮೆಲನೋಸ್ಪೋರಮ್ ಅತ್ಯಂತ ಜನಪ್ರಿಯ

ಟ್ರಯಾಸಿಕ್

(ಭೂವಿ) ಮಧ್ಯಜೀವಿಕಲ್ಪದ ಮೊದಲ ಯುಗ. ಪರ್ಮಿಯನ್ ಹಾಗೂ ಜುರಾಸಿಕ್ ಯುಗಗಳ ನಡುವಿನದು. ಪ್ರಾಯಶಃ ೨೨೫-೧೮೦ ಮಿಲಿಯನ್ ವರ್ಷಗಳ ಅವಧಿ. ಈ ಯುಗದ ಶಿಲೆಗಳನ್ನು ಜರ್ಮನಿಯಲ್ಲಿ ಮೊದಲು ಮೂರು ವಿಭಾಗಗಳಾಗಿ ವರ್ಗೀಕರಿಸಿದುದರಿಂದ ಈ ಹೆಸರು

Search Dictionaries

Loading Results

Follow Us :   
  Download Bharatavani App
  Bharatavani Windows App