भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಟೈಟ್ರೀಕರಣ

(ರ) ನೋಡಿ : ಅನುಮಾಪನ

ಟೈಫಸ್

(ವೈ) ರಿಕೆಟ್ಸಿಯ ಎಂಬ ಸೂಕ್ಷ್ಮಜೀವಿಗಳ ಸೋಂಕಿನಿಂದುಂಟಾಗುವ ಜ್ವರ. ಈ ರೋಗ ತಗಲಿದಾಗ ಬುದ್ಧಿಗೆ ಮಂಜು ಮುಸುಕಿದಂತಾಗುವುದರಿಂದ ಈ ಹೆಸರು. (ಟೈಫಸ್ ಎಂದರೆ ಮಂಜು/ಹೊಗೆ ಎಂದರ್ಥ) ಹೇನು, ಚಿಗಟ, ನುಸಿ ಹಾಗೂ ಉಣ್ಣಿಗಳಿಂದ ಈ ರೋಗ ಹರಡುತ್ತದೆ. ಚಳಿ, ನಡುಕ, ತಲೆನೋವು, ಜ್ವರ ಇದರ ಲಕ್ಷಣಗಳು

ಟೈಫೂನ್

(ಪವಿ) ನೋಡಿ: ತುಫಾನು

ಟೈರೊತ್ರೈಸಿನ್

(ರ) ಕೃಷಿ ಮಣ್ಣಿನಲ್ಲಿ ವಾಸಿಸುವ ಬ್ಯಾಸಿಲ್ಲಸ್ ಬ್ರೆವಿಸ್ ಎಂಬ ನಿರುಪದ್ರವಿ ಬ್ಯಾಕ್ಟೀರಿಯಾದಿಂದ ತಯಾರಿಸಿದ ಪ್ರತಿಜೈವಿಕ. ಬಿಳಿಪುಡಿ. ನೀರಿನಲ್ಲಿ ಅವಿಲೇಯ. ಆದರೆ ಮದ್ಯಸಾರದಲ್ಲಿ ವಿಲೇಯ. ದ್ರಾವಣ ಅಥವಾ ಮುಲಾಮು ರೂಪದಲ್ಲಿ ಗಾಯಗಳಿಗೆ ಹೊರಲೇಪನವಾಗಿ, ಗಂಟಲುಬೇನೆ ಯಲ್ಲಿ ಚೀಪುವ ಗುಳಿಗೆಗಳಾಗಿ (ಲೊಸೆಂಜಸ್) ಬಳಕೆ

ಟೈರೊಸೀನ್

(ರ) C9H11NO3. ಅನೇಕ ಪ್ರೋಟೀನ್ ಗಳಲ್ಲಿರುವ ಫೀನಾಲಿಕ್ ಆಲ್ಫ ಅಮೀನೊಆಮ್ಲ. ಪ್ರತೀಕ tyr. ಬಿಳಿ ಸ್ಫಟಿಕೀಯ ಪದಾರ್ಥ. ದ್ರಬಿಂ ೩೧೦0-೩೨೦0 ಸೆ. ಪ್ಯಾರಾಹೈಡ್ರಾಕ್ಸಿ ಫೀನೈಲ್ ಅಲಾನಿನ್. ನೀರಿನಲ್ಲಿ ಅವಿಲೇಯ

ಟೈರ್

(ತಂ) ಉರುಳು ಚಕ್ರಗಳಿಗೆ ತೊಡಿಸಲು ಬಳಸುವ ರಬ್ಬರಿನ ಇಲ್ಲವೇ ಲೋಹದ ಪಟ್ಟಿ. ಘರ್ಷಣೆಯನ್ನು ಕನಿಷ್ಠ ಗೊಳಿಸಿ ಸಲೀಸು ಚಲನೆ ಸಾಧಿಸುವುದು ಹಾಗೂ ಚಕ್ರದ ಸುತ್ತು ಅಂಚಿನ ಸವೆತ ತಡೆಯುವುದು ಇದರ ಉದ್ದೇಶ. ಗಡುಸು, ಮೆತ್ತೆ ಹಾಗೂ ವಾಯುವಿಕ ಟೈರುಗಳೆಂದು ಹಲವಾರು ಬಗೆಗಳುಂಟು

ಟೈಲೋಸ್

(ಸ) ಕೆಲವು ಸಸ್ಯಗಳ ಅದರಲ್ಲೂ ಬೀಜೋತ್ಪತ್ತಿ ಉಳ್ಳವುಗಳ ಕ್ಸೈಲಮ್ ಪರೆಂಕಿಮ ಜೀವಕೋಶಗಳಲ್ಲಿ ಉಂಟಾಗುವ ಊತ. ಇದು ಟ್ರೇಕಿಯ ಜೀವಕೋಶದ ಬಹುಭಾಗವನ್ನು ಆಕ್ರಮಿಸಿಕೊಂಡು ನೀರು ಮತ್ತಿತರ ಲವಣಾಂಶಗಳ ವಹನವನ್ನು ತಡೆಯುತ್ತದೆ. ಇದರಿಂದಾಗಿ ಸಸ್ಯ ಬೆಳೆದಂತೆಲ್ಲ ಮರದ ವಿವಿಧ ಭಾಗಗಳ ಸುತ್ತಳತೆ ದೊಡ್ಡದಾಗುತ್ತಾ ಹೋಗುತ್ತದೆ (ಪ್ರಾ) ಒಂದು ಕೋಶದ ಕುಳಿಯೊಳಗೆ ಮತ್ತೊಂದು ಕೋಶ/ಕೋಶಗಳ ಅಕ್ರಮ ಬೆಳೆತ. (ವೈ) ಉಜ್ಜುವುದು ಇತ್ಯಾದಿಗಳ ಪರಿಣಾಮವಾಗಿ ಚರ್ಮದ ಮೇಲೆ ಮೂಡುವ ದಪ್ಪ ಗಡುಸು ಭಾಗ. ಬೊಬ್ಬೆ

ಟೊಂಕ

(ಪ್ರಾ) ಶರೀರದಲ್ಲಿ ಪಕ್ಕೆಲಬುಗಳ ವಸ್ತಿ ಕುಹರದ ನಡುವೆ ಹಿಂಬದಿಯಲ್ಲೂ ಪಕ್ಕಗಳಲ್ಲೂ ಇರುವ ಭಾಗ. ಕಟಿ

ಟೊಮೇನ್‌ಗಳು

(ರ) ಪ್ರೋಟೀನ್‌ಗಳ, ಮುಖ್ಯವಾಗಿ ಸತ್ತ ಪ್ರಾಣಿ ವಸ್ತುಗಳ, ವಿಘಟನೆಯಿಂದ ಉತ್ಪಾದನೆಯಾಗುವ ವಿಷಪೂರಿತ ಅಮೀನೊ ಸಂಯುಕ್ತಗಳು. ಇವು ಪುಟ್ರೆಸಿನ್, ಕ್ಯಾಡೆವೆರಿನ್, ಚೊಲೈನ್, ಮಸ್ಕರಿನ್, ನ್ಯೂರೈನ್ ಮೊದಲಾದ ವನ್ನು ಒಳಗೊಂಡಿರುತ್ತವೆ

ಟೊಮೊಗ್ರಫಿ

(ವೈ) ಎಕ್ಸ್-ಕಿರಣ ಹಾಯಿಸಿ ಶರೀರ ಅಥವಾ ವಸ್ತುವಿನ ಆಯ್ದ ಒಂದು ಸಮತಲದ (ಇತರ ಸಮತಲಗಳು ಹೊರತಾಗಿರುತ್ತವೆ) ಛಾಯಾಚಿತ್ರೀಕೃತ ವಿವರ ಗಳನ್ನು ಪಡೆಯುವ ತಂತ್ರ. (ಭೂವಿ) ಕಂಪನ ತರಂಗಗಳನ್ನು ಪ್ರೇಷಿಸಿ ಭೂ ಒಳರಚನೆಯನ್ನು ಅರಿಯುವ ತಂತ್ರ

ಟೊಮ್ಯಾಟೊ

(ಸ) ಸೊಲನೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಜನಪ್ರಿಯ ತರಕಾರಿ ಸಸ್ಯ. ಲೈಕೊಪರ್ಸಿಕಮ್ ಎಸ್ಕಯು ಲೆಂಟಮ್ ವೈಜ್ಞಾನಿಕ ನಾಮ. ಇದರ ಮೃದು, ರಸಭರಿತ ಹಣ್ಣು ತಿನ್ನಲು ಯೋಗ್ಯವಾದರೂ ಇದನ್ನು ಫಲಸಸ್ಯವೆಂದು ಪರಿಗಣಿಸದೆ ತರಕಾರಿ ಸಸ್ಯವೆಂದು ವರ್ಗೀಕರಿಸಲಾಗಿದೆ. ಪ್ರಪಂಚದ ವಿವಿಧೆಡೆಗಳಲ್ಲಿ ನೂರಾರು ಪ್ರಭೇದಗಳು ಬೇಸಾಯದಲ್ಲಿವೆ. ತವರು ದಕ್ಷಿಣ ಅಮೆರಿಕ. ಪೋರ್ಚುಗೀಸರು ಇದನ್ನು ಭಾರತಕ್ಕೆ ತಂದರು. ಹಣ್ಣನ್ನು ಕೆಚಪ್, ಗೊಜ್ಜು, ಪೇಯ ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ

ಟೊಳ್ಳು ಕಲ್ಲುಗಳು

(ಭೂವಿ) ಮರಳುಗಲ್ಲಿನ

ಟೋಟಲ್ ಸ್ಟೇಷನ್

(ತಂ) ಎಲೆಕ್ಟ್ರಾನಿಕ್ ಥಿಯೋ ಡೊಲೈಟು ಹಾಗೂ ಎಲೆಕ್ಟ್ರಾನಿಕ್ ದೂರಮಾಪಕಗಳನ್ನೊಳಗೊಂಡ ಮೋಜಣಿ ಉಪಕರಣ. ಇದರಿಂದ ಕೋನವನ್ನೂ ದೂರವನ್ನೂ ಎತ್ತರವನ್ನೂ ಕರಾರುವಾಕ್ಕಾಗಿ ಅದರಲ್ಲಿರುವ ತಂತ್ರಾಂಶದಿಂದ ಅತಿಶೀಘ್ರವಾಗಿ ತಿಳಿಯಬಹುದು

ಟೋನೊಮೀಟರ್

(ಭೌ) ೧. ಆವಿ ಒತ್ತಡವನ್ನು ಅಳೆಯುವ ಸಾಧನ. ೨. ನಾದಗಳ ಆವೃತ್ತಿಗಳನ್ನು ಅಳೆಯಲು ಬಳಸುವ ಉಪಕರಣ. (ವೈ) ದೇಹದ ಯಾವುದೇ ಅಂಗದ ಕರ್ಷಣ ಅಥವಾ ಒತ್ತಡವನ್ನು (ಉದಾ: ಕಣ್ಣುಗುಡ್ಡೆಯ ಒಳಗಿನ ಒತ್ತಡವನ್ನು) ಅಳೆಯಲು ಬಳಸುವ ಸಲಕರಣೆ

ಟೋರಸ್

(ಗ) ವೃತ್ತದ ಸಮತಲದಲ್ಲಿರುವ ಆದರೆ ಅದನ್ನು ಸಂಧಿಸದ ಸರಳರೇಖೆಯ ಸುತ್ತ ಆ ವೃತ್ತವನ್ನು ಪರಿಭ್ರಮಿಸಿದಾಗ ದೊರೆಯುವ ಮೂರು ಆಯಾಮಗಳ ಆಕೃತಿ. ಸಿಂಬೆ, ರಿಂಗ್ ಟೆನಿಸ್ ಆಟದ ರಿಂಗ್, ಆಂಕರ್ ರಿಂಗ್, ವಾಯುಭರಿತ ಸೈಕಲ್ ಟ್ಯೂಬ್ ಮುಂತಾದವು ಉದಾಹರಣೆಗಳು. ಗಣಿತದಲ್ಲಿ ಟೋರಸ್ಸನ್ನು ಜಿನಸ್ ೧ ಮತ್ತು ಸಂಯೋಜಕತ್ವ (connectivity) ೩ ಇರುವ ಎರಡು ಆಯಾಮಗಳ ಮ್ಯಾನಿಫೋಲ್ಡ್ ಎಂದು ವರ್ಣಿಸುತ್ತಾರೆ.

ಟೌ ಕಣ

(ಭೌ) ದುರ್ಬಲ ಅಂತರಕ್ರಿಯೆಯಿಂದ ಪ್ರತಿಕ್ರಿಯಿಸುವ ಭಾರ ಲೆಪ್ಟಾನ್. ಅತಿ ಹ್ರಸ್ವ ಆಯಸ್ಸು (ಸುಮಾರು ೫´೧೦-೧೨ ಸೆಕೆಂಡ್). ದ್ರವ್ಯರಾಶಿ ಸುಮಾರು ೧೮೦೦ MeV (ಅಂದರೆ ಎಲೆಕ್ಟ್ರಾನ್‌ಗಿಂತ ಸುಮಾರು ೩೫೦೦ ಪಟ್ಟು ಹೆಚ್ಚು ಭಾರ). ನೋಡಿ: ಲೆಪ್ಟಾನ್, ಆಂಟಿಲೆಪ್ಟಾನ್

ಟ್ಯಾಕಿಮೀಟರ್

(ತಂ) ಮೋಜಣಿ ಕೆಲಸದಲ್ಲಿ ದೂರಗಳನ್ನು ಕ್ಷಿಪ್ರವಾಗಿ ಅಳೆಯಲು ಬಳಸುವ ಸಲಕರಣೆ. ಗುರಿ ಬಿಂದುವಿನಲ್ಲಿ ನೇರವಾಗಿ ನಿಲ್ಲಿಸಿದ ಗೊತ್ತಾದ ಅಳತೆಯ ದಂಡದ ಉದ್ದವನ್ನು ಇದರಲ್ಲಿರುವ ದೂರದರ್ಶಕದ ಮೂಲಕ ಗುರುತಿಸಿ ದೂರ ಲೆಕ್ಕಿಸಲಾಗುತ್ತದೆ. ದೂರ ಲಕ್ಷಣಮಾಪಕ. ಬಾಂದುಸೂಚಕ

ಟ್ಯಾಕಿಯಾನ್

(ಭೌ) ಬೆಳಕಿನ ವೇಗಕ್ಕಿಂತ ಅಧಿಕ ವೇಗದಲ್ಲಿ ಚಲಿಸುವ ಒಂದು ಊಹಾತ್ಮಕ ಕಣ

ಟ್ಯಾಕಿಲೈಟ್

(ಭೂವಿ) ಬೆಸಾಲ್ಟ್ ಸಂಯೋಜನೆ ಇರುವ ಕಪ್ಪು, ಹಸುರು ಇಲ್ಲವೇ ಕಂದು ಬಣ್ಣದ ಜ್ವಾಲಾಮುಖಿಜ ಗಾಜು. ಬೆಸಾಲ್ಟ್ ಗಾಜು

ಟ್ಯಾಕೊನೈಟ್

(ಭೂವಿ) ಪ್ರಧಾನವಾಗಿ ಸಣ್ಣ ಸಿಲಿಕಾ ಕಣಗಳೊಂದಿಗೆ ಕೂಡಿದ ಮ್ಯಾಗ್ನೆಟೈಟ್ ಮತ್ತು ಹಿಮಟೈಟ್ ಲೋಹಗಳಿರುವ ಕಬ್ಬಿಣದ ಅದಿರು

Search Dictionaries

Loading Results

Follow Us :   
  Download Bharatavani App
  Bharatavani Windows App