भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಟೆರಿಗಾಯ್ಡ್

(ಪ್ರಾ) ಕಶೇರುಕಗಳ ಅಂಗುಳಿನ ತಳಭಾಗ ದಲ್ಲಿರುವ ರೆಕ್ಕೆಯಾಕಾರದ ಮೂಳೆ

ಟೆರಿಜಿಯಮ್

(ಪ್ರಾ) ಭೂಕಶೇರುಕಗಳ ಕೈಕಾಲು

ಟೆರಿಯರ್

(ಪ್ರಾ) ಚುರುಕಿನವೂ ಶ್ರಮಸಹಿಷ್ಣುವೂ ಆಗಿದ್ದು ನೆಲ ಬಗೆಯುವ ಪ್ರವೃತ್ತಿ ಇರುವ ಹಲವು ಬಗೆಯ ನಾಯಿಗಳ ಒಟ್ಟು ಹೆಸರು. ಸಣ್ಣ ಗಾತ್ರದವು

ಟೆರೆಡೊ

(ಪ್ರಾ) ಪೆಲಿಸಿಪೊಡ / ಲ್ಯಾಮೆಲಿ ಬ್ರ್ಯಾಂಕಿಯೇಟ ವರ್ಗ, ಯೂಲ್ಯಾಮೆಲಿಬ್ರ್ಯಾಂಕಿಯೇಟ ಗಣ ಮತ್ತು ಟೆರೆಡಿನಿಡೀ ಕುಟುಂಬಕ್ಕೆ ಸೇರಿದ, ಎರಡು ಚಿಪ್ಪುಗಳಿಂದ ಕೂಡಿದ ಕಡಲ ಮೃದ್ವಂಗಿ. ಗೆದ್ದಲು ಹುಳುಗಳಂತೆ ಮರಗಳನ್ನು ತಿಂದು ನಾಶ ಮಾಡುವುದರಿಂದ ಕಡಲ ಗೆದ್ದಲು ಎಂದೂ ಕರೆಯುವುದುಂಟು. ಮೆಡಿಟರೇನಿಯನ್, ಬಾಲ್ಟಿಕ್ ಹಾಗೂ ಅಟ್ಲಾಂಟಿಕ್ ಸಾಗರಗಳ ತೀರ ಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು. ಹಡಗು ಕೊರಕ

ಟೆರೆಫ್ತ್ಯಾಲಿಕ್ ಆಮ್ಲ

(ರ) ೧,೪ – ಬೆನ್ಝೀನ್ ಡೈ ಕಾರ್ಬಾಕ್ಸಿಲಿಕ್ ಆಮ್ಲ. C6H4(COOH)2. ಬಿಳಿ ಹರಳು ರೂಪಿ ಅವಿಲೇಯ ಪದಾರ್ಥ. ೩೦೦0ಸೆ. ಮೀರಿದ ತಾಪದಲ್ಲಿ ಉತ್ಪತನ. ಟೆರಿಲಿನ್ ತಯಾರಿಕೆಯಲ್ಲಿ ಬಳಕೆ. ನೋಡಿ : ಥ್ಯಾಲಿಕ್ ಆಮ್ಲಗಳು

ಟೆಲಿಗ್ರಾಫ್ ಗಿಡ

(ಸ) ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ. ಡೆಸ್ಮೋಡಿಯಮ್ ಮೋಟಾರಿಯಮ್ (ಗೈರಾನ್ಸ್) ವೈಜ್ಞಾನಿಕ ನಾಮ. ತವರು ಭಾರತ ಮತ್ತಿತರ ಏಷ್ಯದ ಉಷ್ಣ ಪ್ರದೇಶಗಳು. ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಹಸಿರು ಗೊಬ್ಬರ, ಒಣಮೇವು ಹಾಗೂ ಔಷಧಿ ಸಸ್ಯವಾಗಿ ಬಳಕೆ

ಟೆಲಿಯೊಸ್ಟಿಯೈ

(ಪ್ರಾ) ಆಕ್ಟಿನಾಪ್ಟರಜಿಯೈ ವರ್ಗಕ್ಕೆ ಸೇರಿದ ಮೀನುಗಳ ಮೂರು ಗಣಗಳಲ್ಲೊಂದು. ಉಳಿದೆರಡು ಕಾಂಡ್ರಾಸ್ಟಿಯೈ ಮತ್ತು ಹೊಲಾಸ್ಟಯೈ. ಅಸ್ಥಿಪಂಜರದಲ್ಲಿ ಮೂಳೆಗಳಿರುವ ಅನಿಯತತಾಪಿ ಜಲಚರಗಳು. ಕಿವಿರು ಮೂಲಕ ಉಸಿರಾಟ. ಭಾರತದಲ್ಲಿ ಟೆಲಿಯಾಸ್ಟ್ ಮೀನುಗಳು ಎಲ್ಲೆಡೆ ಇವೆ. ಆಹಾರ ಯೋಗ್ಯವಾದುದರಿಂದ ಆರ್ಥಿಕ ಪ್ರಾಮುಖ್ಯವುಂಟು

ಟೆಲಿವಿಷನ್

(ತಂ) ನೋಡಿ : ದೂರದರ್ಶನ

ಟೆಲಿವಿಷನ್ ಕ್ಯಾಮೆರಾ TV

(ತಂ) ದೂರದರ್ಶನದಲ್ಲಿ ಪ್ರಸಾರ ಮಾಡಲು ಅಥವಾ ದಾಖಲು ಮಾಡಲು ಬಾಹ್ಯ ದೃಶ್ಯವೊಂದರ ದ್ಯುತಿ ಬಿಂಬವನ್ನು ವಿದ್ಯುತ್ ಸಂeಗಳನ್ನಾಗಿ ಪರಿವರ್ತಿಸುವ ಕ್ಯಾಮೆರಾ

ಟೆಲೆಗೊನಿ

(ಪ್ರಾ) ಒಂದು ಗಂಡಿನ ಜೊತೆ ಕೂಡಿದ ಹೆಣ್ಣು ಮುಂದೆ ಇನ್ನೊಂದು ಗಂಡಿನಿಂದ ಪಡೆದ ಸಂತಾನದಲ್ಲೂ ಮೊದಲ ಗಂಡಿನ ಪ್ರಭಾವ ಇದೆಯೆಂಬ ಭಾವನೆ. ಪೂರ್ವ ಜನಕ ಪ್ರಭಾವ

ಟೆಲೊಫೇಸ್

(ಜೀ) ಕೋಶ ವಿಭಜನೆಯ ನಾಲ್ಕು ಪ್ರಾವಸ್ಥೆಗಳಲ್ಲಿ ಕೊನೆಯದು. ಇದರಲ್ಲಿ ಹೊಸ ನ್ಯೂಕ್ಲಿಯಸ್‌ಗಳು ರೂಪುಗೊಳ್ಳುತ್ತವೆ ಮತ್ತು ಕೋಶ ವಿಭಜನೆ ಪೂರ್ಣಗೊಳ್ಳುತ್ತದೆ

ಟೆಲ್ಯೂರಿಯಮ್

(ರ) ಆವರ್ತಕೋಷ್ಟಕದ ೬ನೇ ಗುಂಪಿನ ಒಂದು ಧಾತು. ಬೆಳ್ಳಿ ಬಿಳುಪಿನ ಲೋಹಸದೃಶ ಭಿದುರ ಸ್ಫಟಿಕ. ರಾಸಾಯನಿಕ ಗುಣಗಳಲ್ಲಿ ಗಂಧಕವನ್ನು ಹೋಲುತ್ತದೆ. ಪ.ಸಂ. ೫೨, ಪ.ತೂ. ೧೨೭.೬, ದ್ರ.ಬಿಂ. ೪೫೨0 ಸೆ. ಕುಬಿಂ ೧೩೯೦0 ಸೆ. ಸಾಸಾಂ. ೬.೨೪. ಮಿಶ್ರ ಲೋಹ. ಬಣ್ಣ ಗಾಜು ಮತ್ತು ಕುಂಭ ಕಲೆಯಲ್ಲಿ ಬಳಕೆ. ಪ್ರತೀಕ Te

ಟೆಲ್ಸನ್

(ಪ್ರಾ) ಕ್ರಸ್ಟೇಷಿಯನ್, ಅರಾಕ್ನಿಡ್ ಮುಂತಾದ

ಟೆಸೆರ

(ಭೂವಿ) ಶಬಲಖಚಿತ (ಮೊಸಾಯಿಕ್) ಅಲಂಕಾರದಲ್ಲುಪಯೋಗಿಸುವ ಸರಿಸುಮಾರು ಚೌಕಾಕಾರದ ಬಣ್ಣ ಗಾಜಿನ ಅಥವಾ ಅಮೃತ ಶಿಲೆಯ ತುಂಡು

ಟೇಪಿರ್

(ಪ್ರಾ) ಪೆರಿಸೊಡ್ಯಾಕ್ಟಿಲ ಗಣ, ಟಪಿರಿಡೀ ಕುಟುಂಬಕ್ಕೆ ಸೇರಿದ ವನ್ಯ ಪ್ರಾಣಿ. ದಕ್ಷಿಣ ಅಮೆರಿಕ ತವರು. ಟ್ಯಾಪಿರಸ್ ವೈಜ್ಞಾನಿಕ ನಾಮ. ಘೇಂಡ ಮೃಗಕ್ಕೆ ಹತ್ತಿರ ಸಂಬಂಧಿ. ಗಿಡ್ಡ ಸೊಂಡಿಲು, ಗೊರಸು ಇರುವ ಹಂದಿಯಂಥ ಸ್ತನಿ. ಶಾಶ್ವತ ನೀರಿನ ಆಸರೆ ಇರುವ ಅರಣ್ಯ ಮತ್ತು ಹುಲ್ಲುಗಾವಲುಗಳಲ್ಲಿ ವಾಸ. ಬೇಟೆಯಿಂದಾಗಿ ಸಂತತಿ ಕ್ಷಯಿಸುತ್ತಿದೆ

ಟೇಬಿಸ್

(ವೈ) ದೇಹ ದಿನೇ ದಿನೇ ಕ್ಷೀಣಿಸಿ ನಶಿಸಿ ಹೋಗುವ ಕ್ಷಯ ರೋಗ. ಟೇಬಿಸ್ ಡೊರ್ಸಾಲಿಸ್ ನರವ್ಯೂಹವನ್ನೇ ಬಾಧಿಸುವ ಮಿದುಳು ಬಳ್ಳಿಯ ವ್ಯಾಧಿ

ಟೈಗ

(ಪವಿ) ಅಲಾಸ್ಕ, ಕೆನಡ, ಸ್ಕ್ಯಾಂಡಿನೇವಿಯ ಮತ್ತು ರಷ್ಯದ ಕೆಲವು ಪ್ರದೇಶಗಳಲ್ಲಿ ಹಬ್ಬಿರುವ ಶಂಕುದಾರಿ ವೃಕ್ಷಗಳು ಇರುವ ಅರಣ್ಯ. ಉಪಧ್ರುವೀಯ ವಲಯದಲ್ಲಿರುವ ಈ ಅರಣ್ಯದಲ್ಲಿ ಮಳೆ ಕಡಿಮೆ. ವೃಕ್ಷಗಳ ಅಭಿವರ್ಧನೆ ನಿಧಾನ. ಖನಿಜಾಂಶಗಳು ಹೆಚ್ಚಾಗಿ ಇರುವುದಿಲ್ಲ. ಮಣ್ಣು ಹೆಚ್ಚು ಆಮ್ಲೀಯವಾಗಿರುತ್ತದೆ

ಟೈಟನೈಟ್

(ರ) ಪ್ರಧಾನವಾಗಿ ಕ್ಯಾಲ್ಸಿಯಮ್ ಹಾಗೂ ಟೈಟಾನಿಯಮ್‌ಗಳಿಂದ ರೂಪಿತವಾದ ನೈಸರ್ಗಿಕ ಕಠಿಣ ಸ್ಫಟಿಕ. ಕಬ್ಬಿಣ, ಮ್ಯಾಂಗನೀಸ್‌ಗಳ ಅಂಶಗಳೂ ಇರುವುದುಂಟು.

ಟೈಟಾನಿಯ

(ರ) ಟೈಟಾನಿಯಮ್ ಡೈಆಕ್ಸೈಡ್. ನೀರಿನಲ್ಲಿ ಅವಿಲೇಯ. ಬಿಳಿ ಪುಡಿ. ದ್ರಬಿಂ ೧೮೫೦0 ಸೆ. ಪ್ರತೀಕ TiO2. ಬಣ್ಣಗಳಲ್ಲಿ ಮತ್ತು ಅಂಗರಾಗಗಳಲ್ಲಿ ಬಳಕೆ. ಕಾಗದ, ರಬ್ಬರ್ ಮತ್ತು ಜವಳಿ ಕೈಗಾರಿಕೆಯಲ್ಲೂ ಉಪಯೋಗವುಂಟು

ಟೈಟಾನಿಯಮ್

(ರ) ಆವರ್ತ ಕೋಷ್ಟಕದ ೪ನೇ ಗುಂಪಿನ ಸಂಕ್ರಮಣ ಲೋಹ ಧಾತು. ಪ್ರತೀಕ ti; ಪಸಂ ೨೨; ಸಾಪರಾ ೪೭.೯೦; ದ್ರಬಿಂ ೧೬೭೫0 ಸೆ. ಕುಬಿಂ ೩೦೦೦0 ಸೆ. ಸಾಸಾಂ ೪.೫. ಸಂಕ್ಷಾರಣ ನಿರೋಧಿ. ಬಲು ಹಗುರ. ವಿಮಾನ ತಯಾರಿಕೆಯಲ್ಲಿ ಮತ್ತು ನೀರಿನ ನಿರ್ಲವಣೀಕರಣದಲ್ಲಿ ಉಪಯೋಗ. ರೂಟೈಲ್ ಮತ್ತು ಇಲ್ಮೆನೈಟ್ ಪ್ರಧಾನ ಅದಿರು

Search Dictionaries

Loading Results

Follow Us :   
  Download Bharatavani App
  Bharatavani Windows App