Navakarnataka Vijnana Tantrajnana Padasampada (2011)
Navakarnataka Publications Private Limited
ಟೆಗ್ಮೆನ್
(ಸ) ಬೀಜದ ಸುತ್ತ ಇರುವ ಸಿಪ್ಪೆಯ ಒಳಪದರ
ಟೆಟನಸ್
(ವೈ) ನೋಡಿ: ಧನುರ್ವಾಯು
ಟೆಂಟೋರಿಯಮ್
(ಪ್ರಾ) ಸ್ತನಿಯ ಮಿದುಳಿನಲ್ಲಿ ಇರುವ ಒಂದು ಭಾಗ. ಕೀಟಗಳಲ್ಲಿ ತಲೆಯ ಹೊರ ಕಂಕಾಲ
ಟೆಟ್ರಈಥೈಲ್ ಪೈರೊಫಾಸ್ಫೇಟ್
(TEPP) (ರ) (C2H5)4P2O7 ನಿರ್ವರ್ಣ ಆರ್ದ್ರತಾಶೀಲ ದ್ರವ. ಕುಬಿಂ ೧೫೫0 ಸೆ. ಕೀಟನಾಶಕ ಮತ್ತು ಇಲಿ ಪಾಷಾಣವಾಗಿ ಬಳಕೆ
ಟೆಟ್ರಈಥೈಲ್ ಲೆಡ್
(ರ) (C2H5)4 pb ನಿರ್ವರ್ಣ ದ್ರವ. ಪೆಟ್ರೋಲ್ನಲ್ಲಿ ಪ್ರತ್ಯಪಸ್ಫೋಟನವಾಗಿ ಬಳಕೆ. ವಾಯುಮಾಲಿನ್ಯ ದೃಷ್ಟಿಯಿಂದ ಈಗ ನಿಷಿದ್ಧ. ಆರ್ಗ್ಯಾನೋ ಲೋಹೀಯ ಸಂಯುಕ್ತ
ಟೆಟ್ರಕ್ಲೋರೈಡ್
(ರ) ಕ್ಲೋರೀನ್ನ ನಾಲ್ಕು ಪರಮಾಣುಯುಕ್ತ ರಾಸಾಯನಿಕ ಸಂಯುಕ್ತ
ಟೆಟ್ರಡ್ಯಾಕ್ಟಿಲ್
(ಪ್ರಾ) ೪ ಬೆರಳುಗಳಿರುವ. ಚತುರಂಗುಲಿ
ಟೆಟ್ರನೈಟ್ರೊಮೀಥೇನ್
(ರ) C(No2)4 ನಿರ್ವರ್ಣ ಆವಿಶೀಲ ದ್ರವ. ಕುಬಿಂ ೧೨೬0 ಸೆ. ರಾಕೆಟ್ ಇಂಧನದಲ್ಲಿ ಉತ್ಕರ್ಷಣಕಾರಿಯಾಗಿ ಬಳಕೆ
ಟೆಟ್ರಸೈಕ್ಲಿನ್
(ರ) ವಿಶಾಲ ಶ್ರೇಣಿಯ ಪ್ರತಿಜೈವಿಕ. ಅಂದರೆ ಅಸಂಖ್ಯ ಬಗೆಯ ಅತಿ ಸೂಕ್ಷ್ಮಜೀವಿಗಳಿಂದ ಉಂಟಾಗುವ ವಿವಿಧ ಸೋಂಕು ರೋಗಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪ್ರತಿಜೈವಿಕ. ಕ್ಲೋರೊಟೆಟ್ರಸೈಕ್ಲಿನ್ ಹೈಡ್ರೊಕ್ಲೋರೈಡ್, ಆಕ್ಸಿಟೆಟ್ರ ಸೈಕ್ಲಿನ್ ಹೈಡ್ರೊಕ್ಲೊರೈಡ್ ಮತ್ತು ಟೆಟ್ರಸೈಕ್ಲಿನ್ ಹೈಡ್ರೊಕ್ಲೊರೈಡ್ ಎಂಬ ಮೂರು ಸಂಯುಕ್ತಗಳ ಒಟ್ಟು ಹೆಸರು
ಟೆಟ್ರಹೆಡ್ರೈಟ್
(ರ) ತಾಮ್ರ ಮತ್ತು ಗಂಧಕದ ನೈಸರ್ಗಿಕ ಸಲ್ಫೈಟ್ ಖನಿಜ. ತಾಮ್ರದ ಪ್ರಮುಖ ಆಕರ. ಬೂದು-ಕಪ್ಪು ಬಣ್ಣ. ಕಾಠಿಣ್ಯಾಂಕ ೩.೫-೪; ಸಾಸಾಂ ೪.೬-೫.೧
ಟೆಟ್ರಾಮಾರ್ಫಸ್
(ರ) ನಾಲ್ಕು ವಿಭಿನ್ನ ಸ್ಫಟಿಕೀಯ ರೂಪಗಳಿರುವ (ಪದಾರ್ಥ)
ಟೆಟ್ರೋಡ್
(ತಂ) ಆನೋಡ್, ಕ್ಯಾಥೋಡ್, ನಿಯಂತ್ರಕ ಎಲೆಕ್ಟ್ರೋಡ್ ಮತ್ತು ಅಧಿಕ ಎಲೆಕ್ಟ್ರೋಡ್ (ಸ್ಕ್ರೀನ್ ಗ್ರಿಡ್) ಉಳ್ಳ ನಾಲ್ಕು ಎಲೆಕ್ಟ್ರೋಡ್ ಎಲೆಕ್ಟ್ರಾನ್ ನಾಳ, ಉಷ್ಣಾಯಾನು ಕವಾಟ
ಟೆಟ್ರೋಸ್
(ರ) ನಾಲ್ಕು ಇಂಗಾಲ ಸರಪಳಿ ಇರುವ ಮಾನೊಸ್ಯಾಕರೈಡ್ಗಳ ಯಾವುದೇ ಗುಂಪು. ಉದಾ: ಎರಿತ್ರೋಜ್ CH2OH. (CHOH)2.CHO
ಟೆತ್ಲಿನ್
(ರ) ಪಿಟ್ಯೂಟರಿ ಗ್ರಂಥಿಯ ಮೊದಲ ಹಾಲೆಯಿಂದ ದೊರೆಯುವ ಪದಾರ್ಥ. ಬೆಳವಣಿಗೆಯ ದರವನ್ನು ವರ್ಧಿಸುವ ಗುಣವುಂಟು
ಟೆನೊರೈಟ್
(ರ) ತ್ರಿನತಾಕ್ಷ ವ್ಯವಸ್ಥೆಯಲ್ಲಿ ಸ್ಫಟಕೀಕರಿಸುವ ತಾಮ್ರ ಆಕ್ಸೈಡ್. ಜ್ವಾಲಾಮುಖಿ ಉತ್ಪನ್ನವಾಗಿ ಇಲ್ಲವೇ ತಾಮ್ರ ಸಿರಗಳಲ್ಲಿ ಕಪ್ಪು ಹುರುಪೆಗಳಾಗಿ ಅಲ್ಪ ಪ್ರಮಾಣದಲ್ಲಿ ಲಭ್ಯ
ಟೆನ್ರೆಕ್
(ಪ್ರಾ) ಇನ್ಸೆಕ್ಟಿವೊರ ಗಣ, ಟೆನ್ರೆಸಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಟೆನ್ರೆಕ್ ಈಕಾಡೇಟಸ್ ವೈಜ್ಞಾನಿಕ ನಾಮ. ಸೆಂಟೀಟಸ್ ಪರ್ಯಾಯ ನಾಮ. ಮಡಗಾಸ್ಕರ್ ದ್ವೀಪವಾಸಿ. ಮುಳ್ಳುಹಂದಿ, ಮೂಗಿಲಿಗಳ ಹತ್ತಿರ ಸಂಬಂಧಿ. ಪ್ರಾಣಿ ಕೋಪಗೊಂಡಾಗ ಶರೀರದ ಮೇಲಿರುವ ಬಿರುಗೂದಲು ಚೂಪು ಮುಳ್ಳುಗಳಾಗಿ ನಿಮಿರುತ್ತವೆ. ನಿಶಾಚರಿ. ಹಗಲಲ್ಲಿ ಬಿಲವಾಸಿ. ಕೀಟ, ಎರೆಹುಳು ಆಹಾರ
ಟೆಫ್ರೈಟ್
(ಭೂವಿ) ಸಾಧಾರಣವಾಗಿ ಲಾವಾ ಪ್ರವಾಹದಲ್ಲಿ ದೊರೆಯುವ ಮತ್ತು ಬೆಸಾಲ್ಟನ್ನು ಹೋಲುವ ನಯಕಣಗಳ ಅಗ್ನಿಜನ್ಯ ಶಿಲೆ
ಟೆರಟೋಮ
(ವೈ) ಭ್ರೂಣಾವಸ್ಥೆಯ ತ್ರಿಪದರಗಳಲ್ಲಿ
ಟೆರಾಮೈಸಿನ್
(ರ) C22H30N2O11 ಆಕ್ಸಿಟೆಟ್ರನ್ ಸೈಕ್ಲಿನ್. ಉಪಯುಕ್ತ ಪ್ರತಿಜೈವಿಕ (ಆಂಟಿಬಯೋಟಿಕ್)
ಟೆರಾಯ್ಡ್