भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಟಿಂಚರ್

(ವೈ) ಪ್ರಾಣಿಜನ್ಯ ಅಥವಾ ಸಸ್ಯಜನ್ಯ ಔಷಧ ವಸ್ತುಗಳನ್ನು ಆಲ್ಕಹಾಲ್‌ಯುಕ್ತ ದ್ರಾವಕಗಳಿಂದ ಸಂಸ್ಕರಿಸಿ ಪಡೆದ ದ್ರಾವಣ. ಔಷಧ ವಸ್ತುಗಳ ಆಲ್ಕಹಾಲ್‌ಯುಕ್ತ ಸಾರ. ಸೋಂಕು ನಿವಾರಕವಾಗಿ ಬಳಕೆ. ಮದ್ಯಾರ್ಕ

ಟಿಟ್ಟಿಭ

(ಪ್ರಾ) ಮ್ಯಾನಿಲಿಡೇ ಕುಟುಂಬಕ್ಕೆ ಸೇರಿದ ಹುಲ್ಲುಗಾವಲು, ಕೃಷಿ ಭೂಮಿ, ಕೆರೆಗಳ ಅಂಚು ಮುಂತಾದೆಡೆ ವಾಸಿಸುವ ಹಕ್ಕಿ. ಗೌಜಲ ಹಕ್ಕಿಗಿಂತ ದೊಡ್ಡದು. ಎರಡು ಬಗೆ : ಕೆಂಪು ಟಿಟ್ಟಿಭ, ಹಳದಿ ಟಿಟ್ಟಿಭ. ಕಪ್ಪು-ಬಿಳಿ ಗರಿಗಳು, ತಲೆಯ ಮೇಲೆ ಜುಟ್ಟು, ಕೀಚು ಧ್ವನಿಯಲ್ಲಿ ಕೂಗುತ್ತವೆ. ದೇವನಹಕ್ಕಿ

ಟಿನಮೂ

(ಪ್ರಾ) ರ‍್ಯಾಟೈಟೀ ಗುಂಪಿನ ಟಿನ್ಯಾಮಿಫಾರ್ಮೀಸ್ ಗಣದ ಟಿನ್ಯಾಮಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ರೀಯಾ ಹಕ್ಕಿಗಳಿಗೆ ಹತ್ತಿರ ಸಂಬಂಧಿ. ಹೊರನೋಟಕ್ಕೆ ಗೌಜಲು ಅಥವಾ ಕವುಜಗ ಹಕ್ಕಿಯಂತೆ ಕಾಣುತ್ತದೆ

ಟಿಂಪನೈಟಿಸ್

(ವೈ) ೧. ಕಿವಿಯಲ್ಲಿ ಮೂರು ಭಾಗಗಳು ಇರುತ್ತವೆ: ಹೊರಗಿವಿ, ನಡುಗಿವಿ ಹಾಗೂ ಒಳಗಿವಿ. ಈ ನಡುಗಿವಿ ಯಲ್ಲಿ ಸಾಮಾನ್ಯವಾಗಿ ಸೋಂಕಿನ ಕಾರಣ ತಲೆದೋರುವ ಉರಿಯೂತ. ೨. ಕರುಳಿನಲ್ಲಿ ಇಲ್ಲವೇ ಜಠರದ ಒಳಪೊರೆಯಲ್ಲಿ ವಾಯು ಸಂಗ್ರಹವಾಗುವ ಕಾರಣ ಕಿಬ್ಬೊಟ್ಟೆ ಉಬ್ಬುವಿಕೆ. ಗುಲ್ಮೋದರ. ನೋಡಿ : ಮೀಟಿಯೊರಿಸಮ್

ಟಿಂಪಾನಿಕ್ ಮೂಳೆ

(ಪ್ರಾ) ಉನ್ನತ ಪ್ರಾಣಿಗಳಲ್ಲಿ, ನಡುಕಿವಿ ತಮಟೆಯ ಪೊರೆಗೆ ಆಧಾರವಾಗಿರುವ ತಲೆ ಮೂಳೆ

ಟಿಬಿಯ

(ಪ್ರಾ) ಕಾಲಿನ ಎರಡು ಮೂಳೆಗಳ ಪೈಕಿ ದೊಡ್ಡದು. ತೊಡೆ ಮೂಳೆಯ ಮತ್ತು ಕಾಲಿನ ಹೊರ ಮೂಳೆಯ ಜೊತೆ ಕೀಲು ಸಂಬಂಧ ಪಡೆದಿದೆ. ಮೊಳಕಾಲು ಮೂಳೆ

ಟಿಲಿನಮ್

(ಪ್ರಾ) ನೊಣದ ಉಪಗಣವಾದ ಸೈಕ್ಲೊರಾಫಸ್ ಡಿಪ್ಟೀರಗಳಲ್ಲಿ ಕಂಡುಬರುವ ಉಬ್ಬಿದ ತಲೆಯ ಭಾಗ. ಕೋಶಾವಸ್ಥೆ ಸಮಯದಲ್ಲಿ ಕೀಟ ಭೇದಿಸಿ ಹೊರ ಬರಲು ಸಹಾಯಕ

ಟಿಲಿಯೊಡಾಂಟ್

(ಪ್ರಾ) ಹಿರಿಗಾತ್ರದ ಕೆಳ ಅಥವಾ ಜೋಲು ದವಡೆ ಇರುವ ಕೀಟಗಳ ವರ್ಗ. (ಟಿಲಿಯೊ ಎಂದರೆ ಗ್ರೀಕ್‌ನಲ್ಲಿ ಪರಿಪೂರ್ಣ, ನ್ಯೂನ ರಹಿತ ಎಂದರ್ಥ)

ಟಿಲ್ಯಾಂಡ್ಸೀಯ

(ಸ) ಬ್ರೊಮೀಲಿಯೇಸೀ ಕುಟುಂಬಕ್ಕೆ ಸೇರಿದ ವಿಚಿತ್ರ ಬಗೆಯ ಅಪ್ಪುಗಿಡ. ಮರಗಳ ಕೊಂಬೆಗಳಿಂದ ಜೋತುಬಿದ್ದು ಉಸ್ನಿಯ ಎಂಬ ಶಿಲಾವಲ್ಕದಂತೆ ಕಾಣುವುದುಂಟು. ಪರಾವಲಂಬಿಯಲ್ಲ

ಟಿಲ್ಲೈಟ್

(ಭೂವಿ) ಹಿಮನದಿಯ ಕಾರ್ಯಾಚರಣೆಯಿಂದ ಉಂಟಾದ ಶಿಲೆ. ಭೂಭಾಗಗಳ ಗತಕಾಲದ ಹವಾಗುಣ ನಿರ್ಧರಣೆಯಲ್ಲಿ ಅತ್ಯುಪಯುಕ್ತ

ಟಿವಿ

(ತಂ) ನೋಡಿ : ದೂರದರ್ಶನ

ಟೀಲಿಯಮ್

(ಜೀ) ಕೀಟದ ಅಭಿವರ್ಧನೆಯ ಅಂತಿಮ ಘಟ್ಟಗಳಲ್ಲಿ ಭ್ರೂಣದಲ್ಲಷ್ಟೇ ಕಂಡುಬರುವ ಶರೀರದ ತುದಿಭಾಗ

ಟೂಅಟಾರ

(ಪ್ರಾ) ರಿಂಕೊಸಿಫೇಲಿಯ ಗಣಕ್ಕೆ ಸೇರಿದ ಏಕೈಕ ಜೀವಂತ ಸರೀಸೃಪ. ವೈಜ್ಞಾನಿಕ ನಾಮ ಸ್ಫೀನೊಡಾನ್ ಪಂಕ್ಟೇಟಸ್. ನ್ಯೂಜಿಲೆಂಡ್ ವಾಸಿ. ಓತಿಕೇತದಂತೆ ಕಾಣುತ್ತದೆ. ಆದರೆ ಅದರಲ್ಲಿಲ್ಲದ ನಿಕ್ಟಿಟೇಟಿಂಗ್ ಪೊರೆ ಎಂಬ ಮೂರನೆ ರೆಪ್ಪೆ ಹಾಗೂ ಮೂಳೆ ಕಮಾನು ಇದರಲ್ಲಿದೆ

ಟೂಫ

(ಭೂವಿ) ಸುಣ್ಣಕಲ್ಲು ಪ್ರದೇಶದಲ್ಲಿ ಊಟೆಗಳ ಸುತ್ತ ದ್ರಾವಣದಿಂದ ನಿಕ್ಷೇಪವಾದ ಕ್ಯಾಲ್ಸಿಯಮ್ ಕಾರ್ಬೊನೇಟ್‌ನ ಸರಂಧ್ರ ಮುದ್ದೆ ಅಥವಾ ದಟ್ಟ ರೂಪ

ಟೂರ್ನಿಕೆ

(ವೈ) ರಕ್ತಸ್ರಾವ ತಡೆಗಟ್ಟಲು ಕಟ್ಟುವ ಬಿಗಿಯಾದ ಪಟ್ಟಿ. ತಿರುಪು ಪಟ್ಟಿ . ರಕ್ತಸ್ರಾವವನ್ನು ನಿಲ್ಲಿಸಲು ಅಥವಾ ಹಾವಿನ ವಿಷ ಏರದಂತಿರಲು ಹಿಂದೆ ಪಟ್ಟಿಯೊಂದನ್ನು ಗಾಯದ ಮೇಲೆ ಬಿಗಿಯಾಗಿ ತಿರುಚಿ ಕಟ್ಟಲಾಗುತ್ತಿತ್ತು. ಸೂಕ್ತ ಎಚ್ಚರಿಕೆಯನ್ನು ತೆಗೆದುಕೊಳ್ಳದಿದ್ದಲ್ಲಿ ಇಂತಹ ಪಟ್ಟಿಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿತ್ತು. ತಿರುಚಿ ಪಟ್ಟಿಯನ್ನು ಬಿಗಿಯಾಗಿ ಕಟ್ಟಿದಾಗ, ಪಟ್ಟಿಯ ಮುಂಭಾಗದಲ್ಲಿರುವ ಅಂಗಭಾಗಕ್ಕೆ ರಕ್ತಪೂರೈಕೆ ನಿಂತು ಆ ಭಾಗ ನಿರ್ಜೀವಗೊಳ್ಳುವ ಸಾಧ್ಯತೆ ಹೆಚ್ಚಿರುತ್ತಿತ್ತು. ಹಾಗಾಗಿ ಈ ಪದ್ಧತಿಯನ್ನು ಈಗ ಬಿಡಲಾಗಿದೆ. ಅದರ ಬದಲು ರಕ್ತಸ್ರಾವವನ್ನು ನಿಲ್ಲಿಸಲು, ನೇರವಾಗಿ ಗಾಯದ ಮೇಲೆ ಒತ್ತಡವನ್ನು ಹಾಕಲು ಸೂಚಿಸಲಾಗಿದೆ. ಒತ್ತು ಬಿಂದುಗಳ ಮೇಲೆಯೂ ಒತ್ತಡ ಹಾಕಿ ತೀವ್ರ ರಕ್ತಸ್ರಾವವನ್ನು ನಿಲ್ಲಿಸಬಹುದು. ಅಂಗ ಛೇದನದಂತಹ ತೀವ್ರ ಸಂದರ್ಭದಲ್ಲಿ ತಿರುಚುಪಟ್ಟಿಯನ್ನು ಬಳಸಬಹುದು. ಅಲ್ಲಿಯೂ ಸಹ ಪ್ರತಿ ೧೦ ನಿಮಿಷಕ್ಕೆ ೨ ನಿಮಿಷಗಳ ಕಾಲ ಪಟ್ಟಿಯನ್ನು ಸಡಿಲಿಸಿ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡ ಬೇಕಾಗುತ್ತದೆ. ಹಾವು ಕಚ್ಚಿದಾಗ, ಕಚ್ಚಿದ ಭಾಗವನ್ನು ಸ್ಥಿರ ಗೊಳಿಸುವಂತೆ ಪಟ್ಟಿ ಕಟ್ಟಿ ಕೂಡಲೇ ವೈದ್ಯರ ಬಳಿ ಕರೆದೊಯ್ಯ ಬೇಕು. ತಿರುಚುಪಟ್ಟಿ ಕಟ್ಟುವುದು. ಬ್ಲೇಡಿನಿಂದ ಕುಯ್ಯುವುದು, ರಕ್ತ ಹೀರುವುದು ಇತ್ಯಾದಿಗಳನ್ನು ಮಾಡಬಾರದು. ತಿರುಪು ಪಟ್ಟಿ

ಟೂರ್ಮಲೀನ್

(ಭೂವಿ) ಸೈಕ್ಲೊಸಿಲಿಕೇಟ್ ಗುಂಪಿನ ಒಂದು ಖನಿಜ. ಬೋರಾನ್ ಇದರ ಪ್ರಧಾನ ಘಟಕ. ವರ್ಣ ವೈವಿಧ್ಯವಿದೆ. ಷಡ್ಭುಜಾಕೃತಿಯಲ್ಲಿ ಸ್ಫಟಿಕೀಕರಣ. ಗಾಜಿನಂಥ ಹೊಳಪು. ಪಾರಕ ಮತ್ತು ದೋಷಮುಕ್ತ ಸ್ಫಟಿಕವು ರತ್ನ ಖನಿಜ ವಾಗಿ ಬಳಕೆ. ಗ್ರಾನೈಟ್ ಮತ್ತು ಪೆಗ್ಮಟೈಟ್ ಶಿಲೆಗಳಲ್ಲಿ ಉಪ ಖನಿಜವಾಗಿ ಲಭ್ಯ. ಪೀಜೊವಿದ್ಯುತ್ ಗುಣಗಳು ನಿಹಿತವಾಗಿವೆ

ಟೂಲರೀಮಿಯ

(ವೈ) ಇಲಿ ಹೆಗ್ಗಣ ಮುಂತಾದ ಬೀದಿ ದಂಶಕಗಳಿಗೆ ಪ್ಯಾಸ್ಟುರೆಲ್ಲ ಟುಲಾರೆನ್ಸಿಸ್ ಎಂಬ ರೋಗಾಣುವಿನ ಮೂಲಕ ತಗಲುವ ಸೋಂಕು ರೋಗ. ಈ ರೋಗದ ಲಕ್ಷಣಗಳು ದಂಶಕದ ಇಡೀ ಶರೀರದಲ್ಲಿ ಅಥವಾ ಕಣ್ಣು, ಚರ್ಮ ಅಥವಾ ದುಗ್ಧರಸ ಗ್ರಂಥಿಗಳಲ್ಲಿ, ಶ್ವಾಸನಾಳ ಇಲ್ಲವೇ ಅನ್ನನಾಳಗಳಲ್ಲಿ ಸ್ಥಳೀಯವಾಗಿ ಕಾಣಿಸಿಕೊಳ್ಳಬಹುದು. ದಂಶಕಗಳಿಂದ ಸೋಂಕು ಮನುಷ್ಯರಿಗೂ ಸಾಕುಪ್ರಾಣಿಗಳಿಗೂ ತಗುಲಬಹುದು

ಟೆಕ್ಟೈಟ್

(ಭೂವಿ) ಅಗ್ನಿಜನ್ಯವಲ್ಲದ ನೈಸರ್ಗಿಕ ಗಾಜು ಪದಾರ್ಥ. ಉಲ್ಕಾಪಿಂಡಜನ್ಯವಾಗಿರಬಹುದು

ಟೆಕ್ನೀಶಿಯಮ್

(ರ) ವಿಕಿರಣಪಟುಧಾತು; ಕೆಲವು ನಕ್ಷತ್ರಗಳಲ್ಲೂ ಯುರೇನಿಯಮ್ ವಿದಳನೋತ್ಪನ್ನಗಳಲ್ಲೂ ಕಂಡುಬರುತ್ತದೆ. ಪ್ರತೀಕ Tc; ಪಸಂ ೪೩; ದ್ರಬಿಂ ೨೧೭೧0ಸೆ.; ಕುಬಿಂ ೪೮೭೬0ಸೆ. ಟೆಕ್ನೀಶಿಯಮ್ ಸಮಸ್ಥಾನಿಗಳಲ್ಲಿ ಅತಿ ಹೆಚ್ಚು ಸ್ಥಿರವಾದದ್ದು 9743Tc. ಇದರ ಅರ್ಧಾಯು ೨.೬ ೧೦೬ವರ್ಷ

ಟೆಗ್ಮೆಂಟಮ್

(ಪ್ರಾ) ಉನ್ನತ ಕಶೇರುಕಗಳ ಮಿದುಳಿ ನಲ್ಲಿಯ ಬೂದು ದ್ರವ್ಯದ ಜೊತೆಗಿರುವ ಬಿಳಿತಂತು ರಾಶಿ

Search Dictionaries

Loading Results

Follow Us :   
  Download Bharatavani App
  Bharatavani Windows App