भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567891516Next >

ಜಗಲಿ

(ತಂ) ಕಟ್ಟಡ ಕಟ್ಟುವಲ್ಲಿ ಕೆಲಸಗಾರರು ಬಳಸುವ ಸಾರುವೆ

ಜಗ್ಗದ ಅವಸ್ಥೆ

(ವೈ) ಸ್ನಾಯು ಅಥವಾ ನರ ಇತ್ಯಾದಿಗಳು ಒಮ್ಮೆ ಪ್ರತಿಕ್ರಿಯೆ ತೋರಿದನಂತರ ಮತ್ತೊಮ್ಮೆ ಅದೇ ಪ್ರತಿಕ್ರಿಯೆ ತೋರಿಸುವ ಮುನ್ನಿನ ಶೂನ್ಯ ಪ್ರತಿಕ್ರಿಯೆಯ ಅವಸ್ಥೆ

ಜಗ್ಗು

(ತಂ) ಭಾರ ವಸ್ತುವನ್ನು ಪ್ರಯಾಸದಿಂದ ಅಥವಾ ರಭಸದಿಂದ ಎಳೆ. ತುಯ್ಯಿ

ಜಗ್ಗು

(ಭೌ) ತರಲದಲ್ಲಿ ಚಲಿಸುವಾಗ ವಸ್ತುವಿಗೆ ಎದುರಾಗುವ ಪ್ರತಿರೋಧ. ತುಯ್ತ

ಜಘನಾಸ್ಥಿ

(ಪ್ರಾ) ವಸ್ತಿ ಕುಹರದ ಎರಡು ಪಕ್ಕಗಳನ್ನು ರಚಿಸಿರುವ ಜೋಡಿ ಮೂಳೆಗಳಲ್ಲಿ ಒಂದು. ಪ್ಯೂಬಿಸ್

ಜಟಿಲ ಮೂಳೆ ಮುರಿತ

(ವೈ) ಮೂಳೆ ಮುರಿತವಾದಾಗ ಇತರ ಊತಕಗಳೂ ಹರಿದು ಗಾಯವಾಗಿ ಮುರಿದ ಮೂಳೆಗಳಿಂದಾಗಿ ಚರ್ಮದ ಹೊರಗೆ ಗಾಯವಾಗಿ ಇರುವಂಥ ಸನ್ನಿವೇಶ. ಸಂಯುಕ್ತ ಅಸ್ಥಿಭಂಗ

ಜಠರ

(ಪ್ರಾ) ಪ್ರಾಣಿಗಳಲ್ಲಿ ಪಚನವ್ಯವಸ್ಥೆಯ ಪ್ರಥಮ ಕುಹರ. ಸ್ತನಿಗಳಲ್ಲಿ ಇದು ವಪೆಯ ಕೆಳಗಿರುವ ಸ್ನಾಯು ಸಂಚಿ. ಅನ್ನನಾಳದಿಂದ ಬಂದ ಆಹಾರ ಪದಾರ್ಥವನ್ನು ಜಠರದ ಪೊರೆ ಹೊರಸೂಸುವ ಆಮ್ಲ ಮತ್ತು ಕಿಣ್ವಗಳು ಪಚನಗೊಳಿಸಿದ ನಂತರ ಅದು ಡುಯೋಡಿನಮ್ ಪ್ರವೇಶಿಸುತ್ತದೆ. ಕೆಲವು ಸಸ್ಯಾಹಾರಿ ಸ್ತನಿಗಳ ಜಠರದಲ್ಲಿ ಹಲವು ಭಾಗಗಳು ಇವೆ. ಅವುಗಳಲ್ಲಿ ಒಂದರಲ್ಲಿ ಸೆಲ್ಯುಲೋಸನ್ನು ಪಚನಗೊಳಿಸಲು ನೆರವಾಗುವ ಬ್ಯಾಕ್ಟೀರಿಯಗಳು ಉಂಟು. ಹಕ್ಕಿಗಳಿಗೆ ಎರಡು ಜಠರಗಳು. ಮೊದಲನೆಯದರಲ್ಲಿ ಜೀರ್ಣರಸದೊಡನೆ ಮಿಶ್ರವಾದ ಆಹಾರವನ್ನು ಎರಡನೆಯದು ಅರೆಯುತ್ತದೆ. ಕೆಲವು ಬಗೆಯ ಮೀನು, ಹುಳು, ಚಿಪ್ಪು ಪ್ರಾಣಿ ಇತ್ಯಾದಿಗಳಲ್ಲಿ ಹೆಚ್ಚು ಬಲವುಳ್ಳ ಸ್ನಾಯುಗಳಿಂದ ಕೂಡಿದ ಜಠರವಿದೆ

ಜಠರ ಊತ

(ವೈ) ಜಠರದ, ಅದರಲ್ಲೂ ಮುಖ್ಯವಾಗಿ ಅದರೊಳಗಿನ ಲೋಳೆಪೊರೆಯ, ಉರಿಯೂತ

ಜಠರ ರಸ

(ವೈ) ಆಹಾರ ಜೀರ್ಣವಾಗಲು ಜಠರದ ಲೋಳೆಪೊರೆಯಲ್ಲಿಯ ಗ್ರಂಥಿಗಳು ಸ್ರವಿಸುವ, ಜೀರಕ ಕಿಣ್ವಗಳು ಇರುವ, ತಿಳಿಯ ನಿರ್ವರ್ಣ ಆಮ್ಲೀಯ ದ್ರವ. ಮನುಷ್ಯರ ಜಠರ ರಸ ಪ್ರಧಾನವಾಗಿ ಶೇ. ೯೯.೪೪ರಷ್ಟು ನೀರು, ಶೇ. ೦.೦೨ರಷ್ಟು ಮುಕ್ತ ಹೈಡ್ರೋಕ್ಲೋರಿಕ್ ಆಮ್ಲ, ಸ್ವಲ್ಪ ಪ್ರಮಾಣಗಳಲ್ಲಿ ಸೋಡಿಯಮ್ ಕ್ಲೋರೈಡ್, ಪೊಟ್ಯಾಸಿಯಮ್ ಕ್ಲೋರೈಡ್, ಕ್ಯಾಲ್ಸಿಯಮ್ ಕ್ಲೋರೈಡ್ ಇತ್ಯಾದಿಗಳನ್ನೂ ಕಿಣ್ವಗಳನ್ನೂ ಒಳಗೊಂಡಿರುತ್ತದೆ

ಜಠರರಂಧ್ರನ

(ವೈ) ಜಠರಕ್ಕೆ ಆಹಾರ ಸಹಜ ಮಾರ್ಗ ದಲ್ಲಿ ಹೋಗದಿದ್ದಾಗ ಅದನ್ನು ಒದಗಿಸಲು ಶಸ್ತ್ರಕ್ರಿಯೆಯ ಮೂಲಕ ತೆರಪು ಅಥವಾ ರಂಧ್ರ ಮಾಡುವುದು. ನೋಡಿ: ಜಠರೋಚ್ಛೇದನ

ಜಠರರಹಿತ

(ಪ್ರಾ) ಆಹಾರಪಚನ ಕುರಿತಂತೆ ಜಠರ ವಾಗಲೀ ಜಠರಸದೃಶ ಅಂಗವಾಗಲೀ ಇರದ (ಪ್ರಾಣಿ)

ಜಠರವಿಚ್ಛೇದನ

(ವೈ) ಕಿಬ್ಬೊಟ್ಟೆಯನ್ನು ಅಥವಾ ಅದರ ಮೂಲಕ ಜಠರವನ್ನು ಶಸ್ತ್ರದಿಂದ ಕೊಯ್ದು ತೆರೆಯುವುದು. ನೋಡಿ: ಜಠರೋಚ್ಛೇದನ

ಜಠರವಿಜ್ಞಾನ

(ವೈ) ಜಠರ ಹಾಗೂ ಅದರ ರೋಗಗಳ ಅಧ್ಯಯನ ಮಾಡುವ ವೈದ್ಯವಿಜ್ಞಾನ ಶಾಖೆ

ಜಠರಾಮ್ಲರಾಹಿತ್ಯ

(ವೈ) ಜಠರರಸದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಇಲ್ಲದಿರುವಿಕೆ

ಜಠರಾಶ್ಮ

(ವೈ) ಜಠರದಲ್ಲಿ ಕಲ್ಲು ಉಂಟಾಗುವುದು. (ಪ್ರಾ) ಕೆಲವು ಪ್ರಾಣಿಗಳು ನುಂಗಿ ಜಠರದಲ್ಲೋ ಎರಡನೆಯ ಜಠರದಲ್ಲೋ ಉಳಿಸಿಕೊಂಡು ತಿಂದ ಆಹಾರವನ್ನು ಅರೆಯಲೋಸುಗ ಬಳಸುವ ಕಲ್ಲು ಹರಳು

ಜಠರೋಚ್ಛೇದನ

(ವೈ) ಇಡೀ ಜಠರವನ್ನು ಅಥವಾ ಅದರ ಒಂದು ಭಾಗವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕುವುದು

ಜಡ

(ರ) ರಾಸಾಯನಿಕ ಕ್ರಿಯೆಗಳಿಂದ ಸುಲಭವಾಗಿ ಹಾಗೂ ಒಡನೆಯೇ ಮಾರ್ಪಾಡಾಗದ. ರಾಸಾಯನಿಕ ಪಟುತ್ವವಿಲ್ಲದ

ಜಡ ನಿರ್ದೇಶಕ ವ್ಯವಸ್ಥೆ

(ಗ) ಆಕಾಶದಲ್ಲಿ (ಅಂದರೆ ಸ್ಥಿರ ನಕ್ಷತ್ರಗಳನ್ನು ಕುರಿತಂತೆ) ಸ್ಥಿರವಾಗಿ ಇರುವ ಅಕ್ಷಗಳನ್ನು ಕುರಿತು ಸ್ಥಿರ ವೇಗದಲ್ಲಿ ಚಲಿಸುತ್ತಿರುವ ನಿರ್ದೇಶಕಾಕ್ಷಗಳ ಸಮೂಹ

ಜಡತಾ ಮಹತ್ತ್ವ

(ಭೌ) ಒಂದು ಅಕ್ಷದ ಸುತ್ತ ತಿರುಗುತ್ತಿರುವ ಕಾಯವು ಅದರ ಚಲನೆಯ ದರದ ಬದಲಾವಣೆಗೆ ತೋರುವ ಪ್ರತಿರೋಧ. ಕಾಯದ ಪ್ರತಿಯೊಂದೂ ಕಣದ (ಭಾಗದ) ದ್ರವ್ಯರಾಶಿಯನ್ನು (dm) ಅಕ್ಷದಿಂದ ಆ ಕಣದ ಲಂಬ ದೂರದ ವರ್ಗದಿಂದ (r2) ಗುಣಿಸುವುದರಿಂದ ಲಭಿಸಿದ ಪ್ರಮಾಣ ಗಳನ್ನು ಕೂಡುವುದರಿಂದ ಜಡತಾಮಹತ್ತ್ವ (I) ಲಭಿಸುತ್ತದೆ. I=I r2dm. ಪ್ರತೀಕ I. r2dm=MK2 ಎಂದು ಬರೆಯುವುದು ವಾಡಿಕೆ. ಇಲ್ಲಿ M ಆ ವಸ್ತುವಿನ ರಾಶಿ. K ಭ್ರಮಣ ತ್ರಿಜ್ಯ

ಜಡತೂಕ

(ತಂ) ಸರಕು ತುಂಬಿದಾಗ ಹಾಗೂ ತುಂಬಿಲ್ಲದಾಗ ಹಡಗು ಸ್ಥಳಾಂತರಿಸುವ ನೀರಿನ ಮೊತ್ತಗಳಲ್ಲಿಯ ವ್ಯತ್ಯಾಸ (ಟನ್‌ಗಳಲ್ಲಿ)
< previous1234567891516Next >

Search Dictionaries

Loading Results

Follow Us :   
  Download Bharatavani App
  Bharatavani Windows App