भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಜಿಗುಟು ಜೇಡಿ

(ಭೂವಿ) ಮರಳು ಕಲ್ಲು ಮೊದಲಾದವು ಸೇರಿದ ಅಂಟು ಮಣ್ಣು ಮಿಶ್ರಣ. ಹಿಮಾನಿ ಕ್ರಿಯೆಯಿಂದ ರೂಪಿತ. ಬೌಲ್ಡರ್ ಕ್ಲೇ ಎಂದೂ ಹೇಳುವುದುಂಟು

ಜಿಗ್

(ತಂ) ೧. ಖನಿಜಗಳನ್ನು ಶುದ್ಧಗೊಳಿಸಿ ಅದಿರನ್ನು ನೀರಿನಲ್ಲಿ ಸಾಂದ್ರೀಕರಿಸಲು ಬಳಸುವ ಕಂಪನ ಸಾಧನ. ೨. ಸಾಮಗ್ರಿಯನ್ನು ಅದರ ಸ್ಥಾನದಲ್ಲಿ ದೃಢವಾಗಿ ಹಿಡಿದಿರಿಸಿ ಅದರಲ್ಲಿ ರಂಧ್ರ ಮಾಡುವ ಅಥವಾ ಅದನ್ನು ಕತ್ತರಿಸುವ ಉಪಕರಣಕ್ಕೆ ಮಾರ್ಗದರ್ಶನ ನೀಡುವ ಪೆಟ್ಟಿಗೆಯಂಥ ಲೋಹ ಸಾಧನ

ಜಿಗ್‌ಸಾ

(ತಂ) ಸಂಕ್ಲಿಷ್ಟ ವಕ್ರಾಕೃತಿಗಳನ್ನೂ ನೇರ ಆಕೃತಿ ಗಳನ್ನೂ ಕತ್ತರಿಸಲು ಅನುಕೂಲ ಮಾಡಿಕೊಡುವಂಥ ಸಣ್ಣ ಅಲಗು ಇರುವ ಯಾಂತ್ರಿಕ ಗರಗಸ

ಜಿನುಗು

(ಸಾ) ಸೂಕ್ಷ್ಮ ರಂಧ್ರಗಳ ಮೂಲಕ ದ್ರವವನ್ನು ಅಥವಾ ಪುಡಿಯನ್ನು ಬಸಿ(ಯುವುದು)

ಜಿನೋಮಿಕ್ಸ್

(ಜೀ) ನ್ಯೂಕ್ಲಿಯೊಟೈಡ್‌ಗಳ ನಿರ್ದಿಷ್ಟ ಜೋಡಣಾ ಸರಪಳಿಯ ನಕ್ಷೆ ತಯಾರಿಕೆ, ವಿಶ್ಲೇಷಣೆ ಮತ್ತು ವಿವರ ಒಳಗೊಂಡಂತೆ ನಡೆಸುವ ಅಧ್ಯಯನ

ಜಿನೋಮ್

(ಜೀ) ಒಂದು ಜೀವಿ ಅಥವಾ ಪ್ರಭೇದದ ಜೀನ್ ಘಟಕಗಳ ಸರಮಾಲೆಯ ಒಟ್ಟಾರೆ ಮೊತ್ತ. ಮಾನವನೂ ಸೇರಿದಂತೆ ಅನೇಕ ಪ್ರಾಣಿ ಮತ್ತು ಸಸ್ಯಗಳ ಜಿನೋಮ್ ಅಧ್ಯಯನವನ್ನು ಕೈಗೊಳ್ಳಲಾಗಿದೆ. ತಳಿ ತಂತ್ರಜ್ಞಾನದಲ್ಲಿ ಈ ಅಧ್ಯಯನ ಅತಿಮುಖ್ಯ

ಜಿಪ್ಸಮ್

(ಭೂವಿ) ಜಲಯುಕ್ತ ಕ್ಯಾಲ್ಸಿಯಮ್ ಸಲ್ಫೇಟ್ ಖನಿಜ. CaSO4.2H2O. ಅಲಬಾಸ್ಟರ್ ಆಗಿ ಹೇರಳವಾಗಿ ಲಭ್ಯ. ವರ್ಣರಹಿತ ಏಕನತಿ ಸ್ಫಟಿಕ. ೧೨೦0ಸೆ.ಗೆ ಕಾಸಿದಾಗ ಮುಕ್ಕಾಲು ಪಾಲು ಸ್ಫಟಿಕ ಜಲವನ್ನು ಕಳೆದುಕೊಂಡು ಪ್ಲಾಸ್ಟರ್ ಆಫ್ ಪ್ಯಾರಿಸ್ ಆಗುತ್ತದೆ. ಕಾಠಿಣ್ಯಾಂಕ ೨. ವಿಶಿಷ್ಟ ಗುರುತ್ವ ೨.೩. ಪ್ಲಾಸ್ಟರ್, ಪ್ಲಾಸ್ಟರ್ ಬೋರ್ಡ್ ತಯಾರಿಕೆಯಲ್ಲಿ ಮತ್ತು ಅಮೋನಿಯಮ್ ಸಲ್ಫೇಟ್ ಎಂಬ ಫಲವತ್ಕಾರಕದ ಉತ್ಪಾದನೆಯಲ್ಲಿ ಬಳಕೆ

ಜಿಪ್ಸೀ ಪತಂಗ

(ಪ್ರಾ) ಲೆಪಿಡಾಪ್ಟರ ಗಣದ ಲಿಪಾರಿಡೀ ಕುಟುಂಬಕ್ಕೆ ಸೇರಿದ ಪತಂಗ. ಪಾರ್ತೆಟ್ರಿಯ ಡಿಸ್ಟಾರ್ ವೈಜ್ಞಾನಿಕ ನಾಮ. ಯೂರೋಪಿಯನ್ ಮೂಲದ್ದು. ಈಗ ಜಗತ್ತಿನಾದ್ಯಂತ ಕಾಡುಮೇಡುಗಳಿಗೆ ಅಪಾಯಕಾರಿ ಪಿಡುಗಾಗಿದೆ

ಜಿಂಬಲ್ಸ್

(ತಂ) ದಿಕ್ಸೂಚಿಯೂ ಕಾಲಮಾಪಕ ಯಂತ್ರವೂ ಹಡಗಿನ ಚಲನೆಯಿಂದ ಬಾಧಿತವಾಗದೆ ಯಾವಾಗಲೂ ಸಮಮಟ್ಟ ದಲ್ಲಿಯೇ ಆಡುವಂತಾಗಿಸುವ ಬಳೆಗಳಿಂದಲೂ ತಿರುಗುಗೂಟ ಗಳಿಂದಲೂ ರಚಿಸಿದ ಸಲಕರಣೆ

ಜಿಮ್ನೊಕಾರ್ಪಸ್

(ಸ) ಶಿಲೀಂಧ್ರಗಳ ಅಥವಾ ಶಿಲಾವಲ್ಕಗಳ ಥ್ಯಾಲಸ್‌ನ ಮೇಲ್ಮೈ ಮೇಲೆ ಹೈಮೀನಿಯಮ್ (ಬೀಜವನ್ನು ಅಥವಾ ಅಂಕುರವನ್ನು ಹೊತ್ತಿರುವ ಮೇಲ್ಮೈ) ಹೊದಿಕೆ ಇಲ್ಲದಿರುವುದು. ಜಿಮ್ನೊ=ಅನಾವೃತ

ಜಿಮ್ನೊಗೈನಸ್

(ಸ) ಅನಾವೃತ (ನಗ್ನ) ಅಂಡಾಶಯವುಳ್ಳ

ಜಿಮ್ನೊಜಿನಸ್

(ಪ್ರಾ) ಪುಕ್ಕಗಳು ಬೆಳೆಯದೆ ಚರ್ಮ ಸಂಪೂರ್ಣ ಅನಾವೃತ (ನಗ್ನ) ಸ್ಥಿತಿಯಲ್ಲಿದ್ದಾಗ ಮರಿಹಕ್ಕಿ ಮೊಟ್ಟೆಯಿಂದ ಹೊರಬರುವುದು

ಜಿಯೊಡೆಸಿಕ್

(ಗ) ಯಾವುದೇ ತಲದಲ್ಲಿಯ ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ಪಥ

ಜಿಯೊಡ್

(ಭೂವಿ) ಹರಳುಗಳ ಅಥವಾ ಖನಿಜ ಪದಾರ್ಥಗಳ ಅಸ್ತರಿಯುಳ್ಳ ಪೊಟರೆಯಿರುವ ಶಿಲೆ. ಪೊಳ್ಳಿನಲ್ಲಿ ಸ್ಫಟಿಕಗಳು ಒಳಮುಖವಾಗಿ ಬೆಳೆದಿರುತ್ತವೆ

ಜಿರಾಫೆ

(ಪ್ರಾ) ಆರ್ಟಿಯೊಡ್ಯಾಕ್ಟಿಲ ಗಣ, ಜಿರ‍್ಯಾಫಿಡೀ ಕುಟುಂಬಕ್ಕೆ ಸೇರಿದ, ಮೆಲುಕು ಹಾಕುವ ಸ್ತನಿ. ಜಿರಾಫ ಕಮೀಲೊ ಪಾರ್ಡಸ್ ವೈಜ್ಞಾನಿಕ ನಾಮ. ಆಫ್ರಿಕದಲ್ಲಿ ಸಹಾರಾ ಮರುಭೂಮಿಯ ದಕ್ಷಿಣದಲ್ಲಿರುವ ಕುರುಚಲು ಕಾಡು ಹಾಗೂ ಸವಾನಾ ಹುಲ್ಲುಗಾವಲು ಗಳಲ್ಲಿ ವಾಸ. ಪ್ರಾಣಿ ಗಳಲ್ಲೆಲ್ಲ ಅತ್ಯಂತ ಎತ್ತರ. ಕತ್ತು ಉದ್ದವಾಗಿದ್ದರೂ ಕಶೇರುಗಳ ಸಂಖ್ಯೆ ಎಲ್ಲ ಸ್ತನಿಗಳಲ್ಲಿ ಇರುವಷ್ಟೆ ೭. ದೃಷ್ಟಿ ತೀಕ್ಷ್ಣ, ಉದ್ದಕ್ಕೆ ಚಾಚಬಲ್ಲ ನಾಲಿಗೆ, ಬೇಕೆಂದಾಗ ಮುಚ್ಚುವ ಮೂಗಿನ ಹೊಳ್ಳೆ ಇದರ ವಿಚಿತ್ರ ಲಕ್ಷಣ. ನೀರನ್ನು ಕುಡಿಯುವುದು ಬಲು ಕಡಿಮೆ. ಈಜಲು ಬಾರದು. ಆದ್ದರಿಂದ ನೀರಿನಲ್ಲಿ ಇಳಿಯಲು ಅಂಜುತ್ತದೆ. ಆಯಸ್ಸು ಸುಮಾರು ೨೦ ವರ್ಷ

ಜಿರ್ಕೋನಿಯಮ್

(ರ) ಲೋಹೀಯ ಧಾತು; ಪ್ರತೀಕ Zr. ಪಸಂ ೪೦, ಸಾಪರಾ ೯೧.೨೨; ಸಾಸಾಂ ೪.೧೫, ದ್ರಬಿಂ ೧೮೫೨0 ಸೆ. ಕುಬಿಂ ೪೩೭೬0 ಸೆ. ಬೈಜಿಕ ಕ್ರಿಯಾಕಾರಿಗಳ ನಿರ್ಮಾಣದಲ್ಲಿ ಉಪಯೋಗ. ಇದರ ಒಂದು ಸಮಸ್ಥಾನಿಯಾದ ಜಿರ್ಕೋನಿ ಯಮ್-೯೫ ವಿಕಿರಣಪಟು. ಅರ್ಧಾಯು ೬೩ ದಿವಸಗಳು; ಬೀಟ-ಕಣ ಮತ್ತು ಗ್ಯಾಮ-ಕಿರಣಗಳನ್ನು ಸೂಸುತ್ತದೆ

ಜಿಹ್ವಾಸ್ಥಿ

(ವೈ) ಗಲ್ಲಕ್ಕೂ ಥೈರಾಯ್ಡ್ ಮೃದ್ವಸ್ಥಿಗೂ ಮಧ್ಯೆ ಇರುವ U-ಆಕಾರದ ಮೂಳೆ. ನಾಲಗೆ ಮೂಳೆ

ಜೀನ್

(ಪ್ರಾ) ಕ್ರೋಮೊಸೋಮ್‌ನ ಮೇಲೆ ಉದ್ದುದ್ದವಾಗಿ ಅಳವಟ್ಟ ಡಿಎನ್‌ಎಯ ಒಂದು ಘಟಕ. ಜನ್ಮದಾತೃಗಳ ಆನುವಂಶಿಕ ಗುಣವನ್ನು ಮುಂದಿನ ಸಂತತಿಗೆ ವರ್ಗಾಯಿಸುವ ಅಂಶ

ಜೀನ್ ಚಿಕಿತ್ಸೆ

(ವೈ) ಆನುವಂಶಿಕ ನ್ಯೂನತೆಯ ಜೀನ್‌ಗಳನ್ನು ಕತ್ತರಿಸಿ ಆ ಜಾಗ ದಲ್ಲಿ ಆರೋಗ್ಯಕರ ಜೀನ್ ಕಸಿ ಮಾಡುವಿಕೆ. ತಳಿ ತಂತ್ರಜ್ಞಾನದ ದಿಟ್ಟ ಹೆಜ್ಜೆ. ಇಂತಹ ಚಿಕಿತ್ಸೆ ಗಳನ್ನು ಲಿಂಗಾಣು ಅಥವಾ ಫಲಿತ ಅಂಡಾಣು ಅಥವಾ ಭ್ರೂಣಾವಸ್ಥೆಯಲ್ಲೂ ನಡೆಸಿ ನ್ಯೂನತೆ ನಿವಾರಿಸಿ ಶಾಶ್ವತ ಪರಿಹಾರ ಕಂಡುಹಿಡಿಯು ವುದು ವೈದ್ಯಕೀಯ ಕ್ಷೇತ್ರದ ಮಹದಾಸೆ

ಜೀನ್ ದ್ವಿಪ್ರತೀಕರಣ

(ಜೀ) ಕೋಶ ವಿಭಜನೆಯ ಕಾಲದಲ್ಲಿ ಅಪಸಾಮಾನ್ಯ ವರ್ಣತಂತು ತುಂಡುಗಳ ಮರುಜೋಡಣೆಯ ಸಂದರ್ಭದಲ್ಲಿ ಉಂಟಾಗುವ ಹಲವು ವಿಧದ ಮರುಜೋಡಣೆಗಳಲ್ಲಿ ದ್ವಿಪ್ರತೀಕರಣವೂ ಒಂದು. ಈ ಇಮ್ಮಡಿಕೆಯು ಜೀನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಇದು ವಿಕೃತಿಗೂ ಕಾರಣವಾಗಬಹುದು.

Search Dictionaries

Loading Results

Follow Us :   
  Download Bharatavani App
  Bharatavani Windows App