भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಜಾನುವಾರು

(ಪ್ರಾ) ದುಡಿಮೆಗಾಗಿ ಇಲ್ಲವೇ ವ್ಯಾಪಾರಕ್ಕಾಗಿ ಇಟ್ಟುಕೊಂಡಿರುವ ದನಕರುಗಳು. ಪಶುಧನ

ಜಾಯಾಂಗ

(ಸ) ಪುಷ್ಪದಲ್ಲಿ ಸ್ತ್ರೀಭಾಗ. ನೋಡಿ: ಪುಮಂಗ

ಜಾರಿಕ

(ತಂ) ಸ್ನೇಹಕ. ನೋಡಿ: ಕೀಲೆಣ್ಣೆ

ಜಾರು

(ಸಾ) ಸ್ಥಿರವಸ್ತುವಿನ ಮೇಲೆ ಚರವಸ್ತುವಿನ ಈ ಚಲನೆಯಲ್ಲಿ ಸ್ಪರ್ಶಬಿಂದು ವ್ಯತ್ಯಯಗೊಳ್ಳದೆ ಅಲ್ಲೇ ಸರಿಯ ತೊಡಗುವುದು. ಉದಾ: ಸಾಧಾರಣವಾಗಿ ಉರುಳುತ್ತಿರುವ ಬಂಡಿಗಾಲಿಗೆ ಬಿರಿ ಹಾಕಿದಾಗ ಅದು ಜಾರತೊಡಗುತ್ತದೆ

ಜಾಲ

(ತಂ) ೧. ಕಾಂಕ್ರೀಟಿಗೆ ಬಲಕೊಡಲು ಬಳಸುವ ಲೋಹದ ಜಾಲಬಂಧದಲ್ಲಿಯ ಯಾವುದೇ ತೆರಪು. ಇಂಥ ಜಾಲಬಂಧದಲ್ಲಿ ಸಾಗಿಸಲು ಸಾಧ್ಯವಿರುವಂಥ ವಸ್ತುವಿನ ಗಾತ್ರ ವನ್ನು ಅಳೆಯಲು ಬಳಸುವ, ತಂತಿ ಬಲೆ ಇತ್ಯಾದಿಗಳ ಒಂದು ಇಂಚ್ (೨.೫ ಸೆಂ.ಮೀ) ಸಾಲಿನಲ್ಲಿಯ ರಂಧ್ರಗಳ ಸಂಖ್ಯೆ. ೨. ಸಂಕೀರ್ಣ ಜಾಲಬಂಧವೊಂದರ ಘಟಕ ಶಾಖೆಗಳಲ್ಲಿ ಕೆಪಾಸಿಟರ್‌ಗಳನ್ನೂ ಒಳಗೊಂಡಿರುವ ಪೂರ್ಣ ವಿದ್ಯುತ್ ಪಥ

ಜಾಲ

(ಪ್ರಾ) ೧. ಜೇಡ, ಕಂಬಳಿಹುಳುಗಳಂಥ ಕೆಲವು ಕೀಟಗಳು ಹೆಣೆಯುವ ರೇಷ್ಮೆಯಂತೆ ನವುರಾದ ಎಳೆಗಳ ಬಲೆ. ೨. ಈಜು ಹಕ್ಕಿಗಳ ಮತ್ತು ಬಾವಲಿಗಳ ಕಾಲು ಬೆರಳುಗಳ ನಡುವಣ ಚರ್ಮ ಪೊರೆ. ೩. ಹಕ್ಕಿಯ ಗರಿಯ ಅಡ್ಡೆಳೆಗಳ ಹೆಣಿಗೆ

ಜಾಲಕ

(ಭೌ) ೧. ಸ್ಫಟಿಕಗಳಲ್ಲಿ ಪರಮಾಣುಗಳ, ಅಯಾನ್‌ಗಳ ಅಥವಾ ಅಣುಗಳ ಕ್ರಮಬದ್ಧ ಆವರ್ತನೀಯ ವ್ಯವಸ್ಥೆ. ೨. ಬೈಜಿಕ ಕ್ರಿಯಾಕಾರಿಯಲ್ಲಿ ವಿದಳನ ಯಾ ಅವಿದಳನ ಸಾಮಗ್ರಿಯ ವಿವಿಕ್ತ ಕಾಯಗಳ ಕ್ರಮಬದ್ಧ ಜ್ಯಾಮಿತೀಯ ಪ್ರರೂಪ

ಜಾಲಜಠರ

(ಪ್ರಾ) ಮೆಲುಕು ಹಾಕುವ ಸ್ತನಿಗಳಲ್ಲಿ ಹೊಟ್ಟೆಯ ಎರಡನೆಯ ವಿಭಾಗ

ಜಾಲತಾಣ

(ಕಂ) ಕಂಪ್ಯೂಟರ್ ವ್ಯವಸ್ಥೆಯ ಅಂತರ್ಜಾಲ ದಲ್ಲಿ ವಿಶಿಷ್ಟ ಮಾಹಿತಿ ಒದಗಿಸುವ ತಾಣ. ಇದರಲ್ಲಿ ಮಾಹಿತಿಯನ್ನು ಪುಟಗಳ ಮಾದರಿಯಲ್ಲಿ ನಿರೂಪಿಸಲಾಗಿರುತ್ತದೆ. ಇದನ್ನು ಡಬ್ಲ್ಯುಡಬ್ಲ್ಯುಡಬ್ಲ್ಯು (www-world wide web) ಎಂಬ ಸಂಕೇತ ಹಾಗೂ ನಿರ್ದಿಷ್ಟ ತಾಣದ ಹೆಸರಿನಿಂದ ಗುರುತಿಸುತ್ತಾರೆ. ಉದಾ: www.navakarnataka.com ಇದರಲ್ಲಿ ಮಾಹಿತಿಗಳನ್ನು ಆಗಾಗ ನವೀಕರಿಸುತ್ತಾರೆ.

ಜಾಲಪಾದ

(ಪ್ರಾ) ಕಾಲ ಬೆರಳುಗಳು ತೆಳುಪೊರೆಯಿಂದ ಬಂಧಿತವಾಗಿರುವ ಪಾದ. ಉದಾ: ಕಪ್ಪೆ, ಬಾತುಗಳಲ್ಲಿರುವಂತೆ

ಜಾಲರಾಸ್ಥಿ

(ವೈ) ಮೂಗಿನ ಮೂಲದಲ್ಲಿರುವ ಜರಡಿ ರಚನೆಯ ಮೂಳೆ. (ಇದರಲ್ಲಿಯ ರಂಧ್ರಗಳ ಮೂಲಕ ವಾಸನಾ ನರಗಳು ಮೂಗಿಗೆ ಸಾಗುವುವು)

ಜಾಲರಿ

(ತಂ) ರೇಷ್ಮೆ, ನೂಲು, ತಂತಿ ಮೊದಲಾದವುಗಳಿಂದ ಮಾಡಿದ ನವುರಾದ ಪಾರದರ್ಶಕ ನೇಯ್ಗೆ, ಹೆಣಿಗೆ

ಜಾಲಿಕಾ

(ಸ) ಬಲೆಯ ಆಕಾರ ಹೋಲುವಂಥದು. ಉದಾ: ಎಲೆಯಲ್ಲಿರುವ ನಾಳಗಳು

ಜಾಲಿಸುವಿಕೆ

(ಭೂವಿ) ಚಿನ್ನದಂಥ ಭಾರ ಲೋಹವನ್ನು ಅಥವಾ ಯಾವುದೇ ಭಾರ ಖನಿಜವನ್ನು ಸಾಂದ್ರೀಕರಿಸಲು ಬಳಸುವ ವಿಧಾನಗಳ ಪೈಕಿ ಒಂದು. ಕುಟ್ಟಿ ಪುಡಿ ಮಾಡಿದ ಅದಿರು, ಮರಳು ಮುಂತಾದ ಮಿಶ್ರಣವನ್ನು ಹರಿವಾಣದಲ್ಲಿ ಹಾಕಿ ತೊಳೆದಾಗ ಹಗುರ ಮಿಶ್ರಣಾಂಗಗಳು ತೇಲಿಹೋಗಿ ಭಾರ ಲೋಹ/ಖನಿಜ ಕಣಗಳು ತಟ್ಟೆಯಲ್ಲಿ ಸಾಂದ್ರೀಕರಿಸುತ್ತವೆ. ಈ ಮೂಲಕ ಆ ಸ್ಥಳದಲ್ಲಿ ನಿರ್ದಿಷ್ಟ ಲೋಹ/ಖನಿಜ ಇದೆಯೇ ಎನ್ನುವುದನ್ನು ಪತ್ತೆ ಹಚ್ಚಬಹುದು. ಆಚಯನ

ಜಾಸ್ಪರ್

(ಭೂವಿ) ಅಶುದ್ಧ, ಅಪಾರಕ ಖನಿಜ. ಬಣ್ಣ ಕೆಂಪು, ಹಳದಿ ಅಥವಾ ಗಾಢ ಹಸುರು. ಕ್ಯಾಲ್ಸಿಡೋನಿಯದ ಒಂದು ಬಗೆಯ ಪ್ರಶಸ್ತ ಖನಿಜ. ರಾಸಾಯನಿಕವಾಗಿ ಸಿಲಿಕಾನ್ ಡೈ ಆಕ್ಸೈಡ್ (sio2). ಕಾಠಿಣ್ಯಾಂಕ ೭. ಸಾಸಾಂ ೨.೬೫. ಇದು ಕ್ವಾರ್ಟ್ಸ್‌ನ ಒಂದು ಮಾದರಿ. ಕೃತಕವಾಗಿ ತಯಾರಿಸಿದ ಹರಳು ರೇಡಿಯೊ, ಟ್ರಾನ್ಸಿಸ್ಟರ್‌ಗಳಲ್ಲಿ ಬಳಕೆ

ಜಿಂಕೆ

(ಪ್ರಾ) ರೋಮಂಥಿ ಸ್ತನಿ. ಸರ್ವಿಡೀ ಕುಟುಂಬಕ್ಕೆ ಸೇರಿದೆ. ೧೭ ಜಾತಿಗಳ ೫೪ ಪ್ರಭೇದ ಗಳಿವೆ. ಕೆಲವು ಮೊಲದಷ್ಟು ಚಿಕ್ಕವು (ಕಸ್ತೂರಿ ಮೃಗ) ಮತ್ತೆ ಕೆಲವು ಕುದುರೆಯಷ್ಟು ದೊಡ್ಡವು (ಎಲ್ಕ್). ಸಮ ಗೊರಸಿ. ಎಲ್ಲ ಗಂಡು ಜಿಂಕೆ ಗಳಿಗೂ ಕವಲು ಕೊಂಬು ಗಳಿವೆ. ಕೆಲವು ಜಾತಿಗಳಲ್ಲಿ ಹೆಣ್ಣುಗಳಿಗೂ ಕವಲ್ಗೊಂಬು ಇರುವುದುಂಟು. ನಾಲ್ಕು ಕೋಣೆಗಳ ಜಠರ. ದನಗಳಂತೆ ಮೆಲುಕು ಹಾಕುತ್ತವೆ. ಹುಲ್ಲೆ, ಚಿಗರೆ, ಹರಿಣ. ನೋಡಿ: ಕವಲ್ಗೊಂಬು

ಜಿಂಕ್ ಬ್ಲೆಂಡ್

(ಭೂವಿ) ಸ್ಫ್ಯಾಲರೈಟ್‌ಗೆ ಇನ್ನೊಂದು ಹೆಸರು. ಸತುವಿನ ಸಲ್ಫೈಡ್, ZnS. ಸತುವಿನ ಮುಖ್ಯ ಅದಿರು.

ಜಿಂಕ್‌ಷೀಟ್

(ತಂ) ನೋಡಿ: ಕಬ್ಬಿಣದ ಏಣುಹಲಗೆ

ಜಿಗಣೆ

(ಪ್ರಾ) ಆನೆಲಿಡ ವಂಶ, ಹಿರುಡೀನಿಯ ಜಾತಿಗೆ ಸೇರಿದ ಅಕಶೇರುಕ ಪರೋಪಜೀವಿ ಹುಳುಗಳ ಲ್ಲೊಂದು. ಉಷ್ಣವಲಯದ ಸಿಹಿನೀರಿನ ಕೊಳ, ಕೆರೆ, ಜೌಗುಗಳಲ್ಲಿ ಅಥವಾ ನೆಲದ ಮೇಲೆ ವಾಸ. ಶರೀರದ ಎರಡೂ ಕಡೆ ಇರುವ ಹೀರು ನಾಳಗಳಿಂದ ರಕ್ತ ಹೀರುತ್ತದೆ. ವೈದ್ಯೋಪಚಾರದಲ್ಲಿ ಬಳಕೆ ಉಂಟು. ಇಂಬಳ. ಅಟ್ಟೆಹುಳು

ಜಿಗಿ ಕೀಟಗಳು

(ಪ್ರಾ) ಹೋಮಾಪ್ಟರ ಗಣದ ಸಿಕಾಡಾಯ್ಡಿಯ ಮತ್ತು ಫಲ್ಗೊರಾಯ್ಡಿಯ ಅಧಿಕುಟುಂಬಗಳಿಗೆ ಸೇರಿದ ಹಲವಾರು ಬಗೆಯ ಕೀಟಗಳು. ಮುಖ್ಯವಾದವು ಜಾಸಿಡೀ ಅಥವಾ ಸಿಕಾಡೆಲ್ಲಿಡೀ ಕುಟುಂಬದ ಎಲೆಜಿಗಿ ಕೀಟಗಳು, ಮೆಂಬ್ರೇಸಿಡೀ ಕುಟುಂಬದ ಮರಜಿಗಿ ಕೀಟಗಳು, ಸರ್ಕಾಪಿಡೀ ಕುಟುಂಬದ ಕಪ್ಪೆಜಿಗಿ ಕೀಟಗಳು ಮತ್ತು ಫಲ್ಗಾರಿಡೀ ಕುಟುಂಬದ ಸಸ್ಯಜಿಗಿ ಕೀಟಗಳು. ಸಣ್ಣ ಗಾತ್ರ, ಬೆಣೆಯಾಕಾರದ ದೇಹ, ಅಗಲ ತಲೆ. ಬೆಳಕಿನಿಂದ ಆಕರ್ಷಿತವಾಗುವುದು ಇವುಗಳ ಪ್ರಧಾನ ಸ್ವಭಾವ. ಇವುಗಳೆಲ್ಲ ಒಂದಲ್ಲ ಒಂದು ಬೆಳೆಗೆ ಹಾನಿಕಾರಕ

Search Dictionaries

Loading Results

Follow Us :   
  Download Bharatavani App
  Bharatavani Windows App