भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಜಲಾಂತರ್ಗಾಮಿ

(ತಂ) ಸಾಗರದ ನೀರಿನ ಮೇಲೂ ನೀರಿನಡಿಯೂ ಸಂಚರಿಸಬಲ್ಲ ಯುದ್ಧ ಹಡಗು. ನೀರಿನ ಅಡಿಯಲ್ಲಿ ದೀರ್ಘಕಾಲದವರೆಗೂ ನಿಲ್ಲಬಲ್ಲದು. ಗುಂಡು ಕಾಯ, ಚೂಪು ಕೊನೆ, ಚುಟ್ಟದಂತಹ ಆಕಾರ. ಹಡಗಿನ ಮಧ್ಯಭಾಗ ದಲ್ಲಿ ಇಡೀ ಹಡಗನ್ನು ಹತೋಟಿಯಲ್ಲಿಡುವ ಕಾನಿಂಗ್ ಟವರ್ (ವೀಕ್ಷಣ ಗೋಪುರ) ಇರುತ್ತದೆ. ಇದರಲ್ಲಿ ಸಮುದ್ರದ ಮೇಲಿನವರೆಗೂ ಹೋಗಿರುವ ಪರಿದರ್ಶಕ (ಪೆರಿಸ್ಕೋಪ್) ಇರುತ್ತದೆ. ಇದು ಈ ಹಡಗಿನ ಕಣ್ಣು. ಪರಮಾಣು ಶಕ್ತಿಚಾಲಿತ ಜಲಾಂತರ್ಗಾಮಿಗಳು ಅನೇಕ ತಿಂಗಳುಗಳ ಕಾಲ ನೀರಿನಡಿ ಇರಬಲ್ಲವು

ಜಲಾಂತರ್ದರ್ಶಕ

(ತಂ) ಜಲಾಂತರಾಳದಲ್ಲಿ ಸಾಕಷ್ಟು ದೂರ ಇರುವ ವಸ್ತುವನ್ನು ನೋಡಲು ಸಹಾಯಕವಾಗುವ ದರ್ಪಣ ಸಾಧನ. ಜಲದರ್ಶಕ

ಜಲಾನಯನ ಪ್ರದೇಶ

(ಭೂವಿ) ಹೊಳೆಯ ಕಣಿವೆಗೆ ಅಥವಾ ಜಲಾಶಯಕ್ಕೆ ನೀರೂಡುವ ಬೋಗುಣಿ ಆಕಾರದ ಹಿನ್ನೆಲೆ ಪ್ರದೇಶ/ನೆಲ

ಜಲಾನಿಲ

(ರ) ಕಾದು ನಿಗಿನಿಗಿಯುತ್ತಿರುವ ಕಾರ್ಬನ್ (ಕೋಕ್) ಮೇಲೆ ಉಗಿ ವರ್ತಿಸಿದಾಗ ದೊರೆಯುವ ಇಂಧನಾನಿಲ. ಇದು ಕಾರ್ಬನ್‌ಮಾನಾಕ್ಸೈಡ್ ಮತ್ತು ಹೈಡ್ರೊಜನ್‌ಗಳ ಮಿಶ್ರಣ. ನೀರನ್ನು ಪೃಥಕ್ಕರಿಸಿ ಇಂಗಾಲದಿಂದ ಸಂಸ್ಕರಿಸಿ ಬೆಳಕಿಗಾಗಿ ಬಳಸುವ ಜಲಾನಿಲ

ಜಲಾನುವರ್ತನ

(ಸ) ಸಸ್ಯಗಳ ಬೇರು ನೀರಿಗೆ ಅಭಿಮುಖವಾಗಿ ಅಥವಾ ವಿಮುಖವಾಗಿ ತಿರುಗುವ ಪ್ರವೃತ್ತಿ

ಜಲಾಭೇದ್ಯ

(ತಂ) ನೀರು ಪ್ರವೇಶಿಸದ. ಜಲನಿರೋಧಕ. ನೋಡಿ : ಜಲಬಂಧ

ಜಲಾವರಣ

(ಭೂವಿ) ನದಿಯಲ್ಲಿ ನೀರಿನ ಮಟ್ಟ ಏರಿ ಪಕ್ಕಗಳಿಗೆ ಹೊರಳಿ, ಸಾಮಾನ್ಯವಾಗಿ ಮುಳುಗಡೆಯಾಗದಂಥ ಭೂಭಾಗಗಳ ಮೇಲೆ ಹರಡುವುದು. ನೆರೆ ನೀರು ತುಂಬುವುದು

ಜಲಾಶಯ

(ತಂ) ನೀರನ್ನು ಸಂಗ್ರಹಿಸಿಡಲು ನದಿಗೆ ಅಡ್ಡಲಾಗಿ ನಿರ್ಮಿಸಿದ ಕಟ್ಟೆ. ನೀರಿನ ಸಂಗ್ರಹಾಗಾರ

ಜಲೋದರ

(ವೈ) ದೇಹದ ಊತಕದಲ್ಲಿ ಅಥವಾ ಕುಳಿಯಲ್ಲಿ ದ್ರವ ಅತಿ ಹೆಚ್ಚಾಗಿ ಸಂಗ್ರಹವಾಗುವುದು. ಶೋಫೆ

ಜಲೋದರ

(ವೈ) ಉದರ ಪರಿವೇಷ್ಟನ ಪಟಲದ ಕುಹರ ದಲ್ಲಿ ದ್ರವಸಂಚಯನ. ನಾನಾ ಕಾರಣಗಳಿಂದ ಉದರದಲ್ಲಿ ನೀರು ಸೇರಿಕೊಳ್ಳಬಹುದು. ಹೃದಯ ವೈಫಲ್ಯ, ಸಿರೆಗಳಲ್ಲಿ ರಕ್ತ ಪ್ರವಾಹಕ್ಕೆ ಅಡಚಣೆ, ಪ್ಲಾಸ್ಮಾ ಪ್ರೋಟೀನುಗಳ ನಷ್ಟ, ಯಕೃತ್ ನಾರುಗಟ್ಟುವಿಕೆ, ಅರ್ಬುದ, ಉದರದಲ್ಲಿ ತಲೆದೋರುವ ಸೋಂಕುಗಳು ಇತ್ಯಾದಿ ಪ್ರಮುಖ ಕಾರಣಗಳು. ಮಹೋದರ

ಜಲೋಷ್ಣೀಯ

(ಭೂವಿ) ಭೂಮಿಯ ಚಿಪ್ಪಿನ ಮೇಲೆ ಅಥವಾ ಅದರ ಒಳಗೆ ಬಿಸಿನೀರಿನ ಪರಿಣಾಮವಾಗಿ ಆಗುವ ಭೂವೈಜ್ಞಾನಿಕ ಪರಿವರ್ತನೆಗಳಿಗೆ ಸಂಬಂಧಿಸಿದ

ಜಲೋಷ್ಣೀಯ ಕೊಳವೆ

(ಸಾವಿ) ಆಳ ಸಮುದ್ರ ತಳದ ಬಿಸಿನೀರಿನ ಬುಗ್ಗೆಗಳು. ಸಮುದ್ರ ತಳದ ಬಿರುಕು ಗಳೊಳಕ್ಕೆ ನೀರು ನುಗ್ಗಿ ಅಲ್ಲಿ ಶಾಖಗೊಂಡು ಬುಗ್ಗೆಯಾಗಿ ಮೇಲಕ್ಕೆ ಉಕ್ಕುತ್ತದೆ. ಈ ಬಿಸಿ ನೀರಿನಲ್ಲಿ ವಿಲೀನವಾದ ಲೋಹ ಪದಾರ್ಥಗಳು ಬುಗ್ಗೆಯ ಸುತ್ತ ಸಂಚಯನಗೊಳ್ಳುತ್ತವೆ. ಆರ್ಥಿಕವಾಗಿ ಗಣಿ ಮಾಡಬಹುದಾದ ಪ್ರಮಾಣದಲ್ಲಿ ಲೋಹಗಳು ಕೆಲವೆಡೆ ಲಭ್ಯ

ಜಲೋಷ್ಣೀಯ ವಿಧಾನ

(ತಂ) ನ್ಯಾನೊ ಸಾಮಗ್ರಿಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ವಿಧಾನ ಗಳಲ್ಲೊಂದು. ಲೋಹಗಳ, ಆಕ್ಸೈಡುಗಳ ಮತ್ತು ಅಂತಹುದೇ ಸಾಮಗ್ರಿಗಳ ನ್ಯಾನೊಕಣಗಳನ್ನು ಈ ವಿಧಾನದಿಂದ ತಯಾರಿಸ ಲಾಗುವುದು. ಬಾಂಬಿನಂತೆ ವರ್ತಿಸುವ ಬಿಗಿಯಾಗಿ ಮುಚ್ಚಿದ

ಜಲ್ಲಿಗಾರೆ

(ತಂ) ಮರಳು, ಒಡೆದ ಕಲ್ಲು ಚೂರು, ಇಟ್ಟಿಗೆ/ಕಂಕರೆ ಇವುಗಳ ಅಸಮ ಮಿಶ್ರಣ; ಇದಕ್ಕೆ ಸಿಮೆಂಟ್ ಮತ್ತು ನೀರು ಬೆರೆಸಿ ಕಲಸಿದಾಗ ಕಾಂಕ್ರಿಟ್ ಮಿಶ್ರಣ ಒದಗುತ್ತದೆ

ಜವ

(ಭೌ) ವಸ್ತುವಿನ ಚಲನ ದರ. ವಸ್ತು ಕ್ರಮಿಸಿದ ದೂರವನ್ನು (s) ಕ್ರಮಿಸಲು ತೆಗೆದುಕೊಂಡ ಕಾಲದಿಂದ (t) ಭಾಗಿಸುವುದರಿಂದ ಅದರ ಚಲನೆಯ ಸರಾಸರಿ ಜವವನ್ನು (v) ಗಣಿಸಬಹುದು. (v = s / t). ಜವದ ಸಾಮಾನ್ಯ ಏಕಮಾನಗಳು: ಸೆಕೆಂಡಿಗೆ ಮೀಟರ್‌ಗಳು ಅಥವಾ ಗಂಟೆಗೆ ಕಿಲೊಮೀಟರ್‌ಗಳು (km / h). ಜವ ಅದಿಶ. ವೇಗ ಸದಿಶ. ದ್ರುತಿ

ಜಾಗತಿಕ ತಪನ

(ಪವಿ) ಭೂಮಿಯ ಮೇಲೆ ಹಸುರು ಮನೆ ಪರಿಣಾಮ (ನೋಡಿ)ದಿಂದಾಗಿ ಭೂ ವಾತಾವರಣ ದಲ್ಲಿ ಉಷ್ಣತೆ ಏರಿಕೆ. ಇದರಲ್ಲಿ ಮಾನವ ಚಟುವಟಿಕೆಯ ಪಾತ್ರ ಹೆಚ್ಚು. ಭೂ ಉಷ್ಣದ ಏರಿಕೆಯಿಂದಾಗಿ ಧ್ರುವ ಪ್ರದೇಶದ ಮಂಜುಗಡ್ಡೆ ಕರಗಿ ಸಾಗರ ಮಟ್ಟ ಹೆಚ್ಚುವ ಸಾಧ್ಯತೆಗಳಿವೆಯೆಂದು ವಿಜ್ಞಾನಿಗಳು ಊಹಿಸಿದ್ದಾರೆ. ಜಾಗತಿಕ ಬಿಸಿಯೇರಿಕೆ

ಜಾಗರ್

(ತಂ) ೧. ಮುದ್ರಣಾಲಯದಲ್ಲಿ ಕಾಗದವನ್ನು ಕತ್ತರಿಸುವುದಕ್ಕೆ ಮುನ್ನ ಅದನ್ನು ಎರಡು ಅಕ್ಕಪಕ್ಕದ ಅಂಚುಗಳ ವರೆಗೆ ಎತ್ತಿ ತಳ್ಳಲೋಸುಗ ಕಾಗದದ ಹಾಳೆಗಳನ್ನು ಇಟ್ಟಿರುವ ಮತ್ತು ಶೀಘ್ರವಾಗಿ ಕಂಪಿಸುತ್ತಿರುವ ಇಳಿಜಾರು ತಟ್ಟೆ. ೨. ಮುದ್ರಣ ಯಂತ್ರದ ನಿರ್ಗಮನ ಭಾಗದಲ್ಲಿ ಶೇಖರವಾದ ಹಾಳೆಗಳನ್ನು ನೇರ ವಾಗಿಸಿ ಓರಣವಾಗಿ ಪೇರಿಸುವ, ಸರಿಹೊಂದಿಸಬಹುದಾದ ಸನ್ನಾಹ

ಜಾಗ್ವಾರ್

(ಪ್ರಾ) ಕಾರ್ನಿವೊರ ಗಣ, ಫೀಲಿಡೀ ಕುಟುಂಬಕ್ಕೆ ಸೇರಿದ ಹಿಂಸ್ರಪ್ರಾಣಿ. ಹುಲಿ ಚಿರತೆಗಳಿಗೆ ಹತ್ತಿರ ಸಂಬಂಧಿ. ಪ್ಯಾಂತರ ಅಂಕ ವೈಜ್ಞಾನಿಕ ನಾಮ. ದಕ್ಷಿಣ ಮತ್ತು ಉತ್ತರ ಅಮೆರಿಕಗಳ ಉಷ್ಣವಲಯ ಪ್ರದೇಶ ಇದರ ತವರು. ಬೆಕ್ಕಿನ ಗುಂಪಿನ ಪ್ರಾಣಿಗಳ ಲ್ಲೆಲ್ಲ ಅತ್ಯಂತ ದೊಡ್ಡದು. ಚಿರತೆಯಷ್ಟೇ ಚುರುಕು. ಮರ ಹತ್ತುವುದರಲ್ಲಿ, ಈಜುವುದರಲ್ಲಿ ಬಲು ಕುಶಲಿ. ಬೂದು ಬಣ್ಣ, ಉದ್ದ ಬಾಲ

ಜಾತಿ

(ಜೀ) ಜೀವಿಗಳ ವರ್ಗೀಕರಣದಲ್ಲಿ ಕುಟುಂಬಕ್ಕಿಂತ ಕೆಳಗಿನ ಮತ್ತು ಪ್ರಭೇದಕ್ಕಿಂತ ಮೇಲಿನ ಹಂತ

ಜಾತಿವಾಚಕ

(ಜೀ) ಜೀವಿಗಳ ಜಾತಿ ಸೂಚಕ

Search Dictionaries

Loading Results

Follow Us :   
  Download Bharatavani App
  Bharatavani Windows App