भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಜನಸಂಖ್ಯಾಶಾಸ್ತ್ರ

(ಸಾ) ಜನಸಮೂಹಗಳ ಗಾತ್ರ, ಸಾಂದ್ರತೆ, ವಿತರಣೆ, ಹುಟ್ಟುಸಾವು, ರೋಗರುಜಿನ, ಮುಂತಾದ ವುಗಳ ಅಂಕೆ ಅಂಶಗಳ ಅಧ್ಯಯನ. ಜನಾಂಗ ಸ್ಥಿತಿ ವಿವರಣೆ

ಜನಸಮಷ್ಟಿ

(ಜೀ) ಜನಸಂಖ್ಯೆ. ನಿರ್ದಿಷ್ಟ ಭೌಗೋಲಿಕ ಪ್ರದೇಶದಲ್ಲಿ ವಾಸಿಸುವ ಜನರ ಗುಂಪು. ಸಂದಣಿ

ಜನಸಾಂದ್ರತೆ

(ಸಂ) ಒಂದು ಪ್ರದೇಶದ ಒಟ್ಟು ಜನಸಂಖ್ಯೆಯನ್ನು ಒಟ್ಟು ವಿಸ್ತೀರ್ಣದಿಂದ ಭಾಗಿಸಿದಾಗ ದೊರೆಯುವ ಸಂಖ್ಯೆ. ಜನವಸತಿ ಸಂದಣಿಯ ಒಂದು ಏಕಮಾನ

ಜನಾಂಗ ವಿಜ್ಞಾನ

(ಸಾ) ಜನಾಂಗಗಳು, ಅವುಗಳ ಪರಸ್ಪರ ಸಂಬಂಧ ಮತ್ತು ವೈಲಕ್ಷಣ್ಯಗಳ ಅಧ್ಯಯನ

ಜನಾಂಗೀಯ-ಜೀವವಿಜ್ಞಾನ

(ಸ) ಪರಿಸರ ಕುರಿತಂತೆ ಜನಾಂಗಗಳ ಸಾಂಪ್ರದಾಯಿಕ ಮತ್ತು ಅನುಭವಜನ್ಯ ಜ್ಞಾನವನ್ನು ದಾಖಲಿಸುವ ಜೀವ ವಿಜ್ಞಾನ

ಜನಾಂಗೀಯ-ಸಸ್ಯವಿಜ್ಞಾನ

(ಸ) ಮಾನವನ ಇತಿಹಾಸಕ್ಕೆ ಸಂಬಂಧಿಸಿದಂತೆ ಸಸ್ಯಗಳು, ಅವುಗಳ ಗುಣಗಳು, ಅಭಿವರ್ಧನೆ, ವಿತರಣೆ, ಬಳಕೆ ಇತ್ಯಾದಿಗಳ ಅಧ್ಯಯನ

ಜನ್ಮತಃ

(ವೈ) ಹುಟ್ಟಿನಿಂದ ಬಂದ. ಜನನಕ್ಕೆ ಸಂಬಂಧಿಸಿದ

ಜನ್ಮದಾತೃ

(ಭೌ) ವಿಕಿರಣಪಟು ಧಾತುಕ್ಷಯದಲ್ಲಿ Aಯು B ಆಗಿ ಪರಿವರ್ತಿತವಾಗುವಾಗ Aಯು ಜನ್ಮದಾತೃ ಧಾತು, B ಜನ್ಯಧಾತು

ಜನ್ಯ ನ್ಯೂಕ್ಲಿಯಸ್‌ಗಳು

(ಜೀ) ನೋಡಿ: ಜನ್ಯಕೋಶಗಳು

ಜನ್ಯಕೋಶಗಳು

(ಜೀ) ಒಂಟಿಕೋಶ ವಿಭಜನೆ ಗೊಂಡಾಗ (ಸಾಧಾರಣವಾಗಿ ಮೈಟಾಸಿಸ್‌ನಿಂದಾಗಿ) ಜನಿಸುವ ಎರಡು ಕೋಶಗಳು

ಜನ್ಯಧಾತು

(ಭೌ) ವಿಕಿರಣಪಟು ಧಾತು ಕ್ಷಯದಿಂದಾಗಿ ಹುಟ್ಟುವ ಮತ್ತೊಂದು ಧಾತು. ರುಬಿಡಿಯಮ್-೮೭ ಸಮಸ್ಥಾನಿ ೪೭,೦೦೦,೦೦೦,೦೦೦ ವರ್ಷಗಳಲ್ಲಿ ಸ್ಟ್ರಾನ್ಷಿಯಮ್-೮೭ ಸಮಸ್ಥಾನಿಯಾಗಿ ಪರಿವರ್ತನೆಯಾಗುತ್ತದೆ. ಇದು ರುಬಿಡಿಯಮ್‌ನ ಜನ್ಯಧಾತು

ಜಂಬಿಟ್ಟಿಗೆ

(ಭೂವಿ) ಉಷ್ಣವಲಯ ಪ್ರದೇಶಗಳ ವಿಶೇಷ ವಾತಾವರಣದಲ್ಲಿ ಶಿಲೆಗಳ ರಾಸಾಯನಿಕ ಶಿಥಿಲೀಕರಣದಿಂದ ಉಂಟಾಗುವ ಕಬ್ಬಿಣ ಮತ್ತು ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್ ಗಳನ್ನೊಳಗೊಂಡ ಜೇಡಿಮಣ್ಣಿನ ಕೆಂಪು, ಹಳದಿ ಯಾ ಕಂದು ಬಣ್ಣದ ಸರಂಧ್ರ ಶಿಲೆ. ಹಸಿಯಾಗಿದ್ದಾಗ, ಮೆತುವಾಗಿದ್ದು ಗರಗಸ ದಿಂದ ಕೊಯ್ಯಬಹುದು. ಒಣಗಿದ ಅನಂತರ ಗಡಸಾಗುತ್ತದೆ. ಇದು ಕೆಲವು ಕಬ್ಬಿಣ ಮತ್ತು ಮ್ಯಾಂಗನೀಸ್ ನಿಕ್ಷೇಪಗಳ ಮೂಲ. ಉಷ್ಣವಲಯ ಪ್ರದೇಶಗಳಲ್ಲಿ ಇಟ್ಟಿಗೆಯಾಗಿ ಅಲ್ಲದೆ ರಸ್ತೆ ನಿರ್ಮಾಣ ದಲ್ಲಿಯೂ ಉಪಯೋಗಿಸಲಾಗುತ್ತದೆ. ಅಲ್ಯೂಮಿನಿಯಮ್ ಅಂಶ ಹೆಚ್ಚಿದಾಗ ಬಾಕ್ಸೈಟ್ ಅದಿರಾಗುತ್ತದೆ. ಲ್ಯಾಟರೈಟ್ ಎಂಬುದು ಲ್ಯಾಟರ್ (ಇಟ್ಟಿಗೆ) ಎಂಬ ಲ್ಯಾಟಿನ್ ಮೂಲದಿಂದ ಬಂದ ಪದ. ಪಶ್ಚಿಮ ಘಟ್ಟದ ಮಲಬಾರಿನಲ್ಲಿಯ ಈ ಶಿಲೆಗೆ ಫ್ರಾನ್ಸಿಸ್ ಬುಕನನ್ ೧೮೦೦ರಲ್ಲಿ ಈ ನಾಮಕರಣ ಮಾಡಿದರು. ಮುರಕಲ್ಲು

ಜಂಬೀರ ಫಲಗಳು

(ಸ) ಕಿತ್ತಳೆ ಹಣ್ಣು, ಚಕ್ಕೋತ, ನಿಂಬೆ, ಮಾದಳ, ಮೋಸಂಬಿ, ಗ್ರೇಪ್, ಕಂಚಿ ಹುಳಿ ಮುಂತಾದ ಹಣ್ಣುಗಳು. ಸುಮಾರು ೧೬ ಪ್ರಭೇದಗಳಿವೆ. ಈ ಪೈಕಿ ಸಿಟ್ರಸ್ ಇಂಡಿಕ, ಸಿ. ಲ್ಯಾಟಿಪಸ್ ಮತ್ತು ಸಿ. ಹಿಸ್ಟ್ರಿಕ್ಸ್ ಹೊರತು ಉಳಿದವೆಲ್ಲವೂ ಬೇಸಾಯದ ಬೆಳೆಗಳು. ಹಣ್ಣು ಪುಷ್ಟಿದಾಯಕ, ತಂಪುಕಾರಕ ಹಾಗೂ ಪಿತ್ತಹರ

ಜಬೊರ‍್ಯಾಂಡಿ

(ಸ) ರೂಟೇಸೀ ಕುಟುಂಬಕ್ಕೆ ಸೇರಿದ ಪೈಲೊಕಾರ್ಪಸ್ ಜಾತಿಯ ಕುರುಚಲು ಗಿಡ. ಪೈಲೊಕಾರ್ಪಸ್ ಪೆನ್ನೇಟಿಫೋಲಿಯಸ್ ಜಬೊರ‍್ಯಾಂಡಿ ವೈಜ್ಞಾನಿಕ ನಾಮ. ನಿಂಬೆ, ಜಂಬೀರ ಸಸ್ಯಗಳ ಹತ್ತಿರ ಸಂಬಂಧಿ. ದಕ್ಷಿಣ ಅಮೆರಿಕ ಮೂಲದ್ದು. ಒಣಗಿದ ಎಲೆಗಳ ಚೂರ್ಣವೇ ಜಬೊರ‍್ಯಾಂಡಿ. ಇದು ಮನುಷ್ಯರಲ್ಲಿ ಬೆವರು ಹಾಗೂ ಲಾಲಾರಸಗಳ ಅಧಿಕಸ್ರಾವ ಉಂಟು ಮಾಡುತ್ತದೆ. ಇದರಲ್ಲಿ ಇರುವ ಪೈಲೊಕಾರ್ಪಿನ್ ಎಂಬಂಥ ದ್ರವ ರೂಪದ ಕ್ಷಾರವಸ್ತುವಿನ ನೈಟ್ರೇಟ್ ಬೆವರಿ ಜ್ವರ ಇಳಿಯುವಂತೆಯೂ ಕಣ್ಣಿನ ಪಾಪೆ ಕಿರಿದಾಗುವಂತೆಯೂ ಮಾಡುತ್ತದೆ

ಜರಡಿ

(ತಂ) ಘನಪದಾರ್ಥಗಳ ದಪ್ಪ ಕಣಗಳನ್ನು ಸಣ್ಣ ಕಣಗಳಿಂದ ಪ್ರತ್ಯೇಕಿಸಲು, ಅವಕ್ಷೇಪವನ್ನು ದ್ರಾವಣದಿಂದ ಪ್ರತ್ಯೇಕಿಸಲು, ಬಳಸುವ ರಂಧ್ರಯುಕ್ತ ಸಾಧನ. ವಂದರಿ

ಜರದಾರು

(ಸ) ರೋಸೇಸೀ ಕುಟುಂಬಕ್ಕೆ ಸೇರಿರುವ ಫಲವೃಕ್ಷ. ಪ್ರೂನಸ್ ಆರ್ಮೀನಿಯಾಕ ವೈಜ್ಞಾನಿಕ ನಾಮ. ಕಿತ್ತಳೆ ಬಣ್ಣದ ಒಂದು ಹಣ್ಣು. ಇದರ ಬೀಜ ಒಡೆದು ಒಳಗಿನ ಓಟೆ ತಿನ್ನಬಹುದು. ಆಪ್ರಿಕಾಟ್. ಜಲ್ದರು ಹಣ್ಣು. ಸಕ್ಕರೆ ಬಾದಾಮಿ

ಜರಾಯುಜ

(ಪ್ರಾ) ಮರಿಗಳನ್ನು ಈಯುವ. ನೋಡಿ: ಅಂಡಾಯುಜ (ಸ) ತಾಯಿ ಸಸಿಗೆ ಅಂಟಿಕೊಂಡಿರುವಾಗಲೇ ಮೊಳೆಯುವಂಥ ಗೆಡ್ಡೆಗಳನ್ನು ಬೀಜಗಳನ್ನು ಬಿಡುವ

ಜರ್ನಲ್ಲು

(ತಂ) ಯಾವುದೇ ಯಂತ್ರದಲ್ಲಿ ಅಚ್ಚು, ಚಾಲಕ ದಂಡ, ಕದಿರು ಮೊದಲಾದ ತಿರುಗುತ್ತಿರುವ ಉರುಳೆ ಆಕಾರದ ದಂಡದಲ್ಲಿ, ಬೇರಿಂಗುಗಳ ಮೇಲೆ ಕೂತಿರುವ ಭಾಗ

ಜರ್ಮೇನಿಯಮ್

(ರ) ಆವರ್ತಕೋಷ್ಟಕದಲ್ಲಿ ನಾಲ್ಕನೇ ಗುಂಪಿನಲ್ಲಿ ಬರುವ ಲೋಹಾಭ ಧಾತು. ಬೂದು-ಬಿಳಿ ಬಣ್ಣ. ಪಸಂ ೩೨, ಸಾಪರಾ ೭೨.೫೯. ಸಾಸಾಂ ೫.೪೭. ದ್ರಬಿಂ ಸು ೯೩೭.೪0 ಸೆ. ಕುಬಿಂ ೨೮೩೦0 ಸೆ. ಕಲ್ಲಿದ್ದಲಿನಲ್ಲೂ ಇತರ ಕೆಲವು ಖನಿಜಗಳಲ್ಲೂ ಲಭ್ಯ. ಅದ್ಭುತ ಅರೆವಾಹಕ ಗುಣವುಳ್ಳ ಇದು ಮೈಕ್ರೊವೇವ್ ಡಿಟೆಕ್ಟರ್ ಗಳಲ್ಲೂ (ಸೂಕ್ಷ್ಮ ತರಂಗ ಶೋಧಕಗಳು) ಡಯೋಡ್‌ಗಳ ತಯಾರಿಕೆಯಲ್ಲೂ ಅತ್ಯಂತ ಶುದ್ಧ ಸ್ಥಿತಿಯಲ್ಲಿ ಟ್ರಾನ್ಸಿಸ್ಟರ್‌ಗಳಲ್ಲೂ ಮುಖ್ಯವಾಗಿ ಬಳಕೆಗೆ ಬರುತ್ತದೆ. ಪ್ರತೀಕ Ge

ಜರ್ಮ್ ಲೇಯರ್

(ವೈ) ಬಹುಕೋಶ ಜೀವಿಗಳ (ಮೆಟಜೋವ) ಬೆಳವಣಿಗೆಯಲ್ಲಿ ಮೂರು ಪ್ರಾಥಮಿಕ ಕೋಶ-ಪದರಗಳಾದ, ಬಾಹ್ಯಚರ್ಮ (ಎಕ್ಟೊಡರ್ಮ್) ಮಧ್ಯಚರ್ಮ (ಮೆಸೋಡರ್ಮ್), ಅಂತಶ್ಚರ್ಮ (ಎಂಡೋಡರ್ಮ್)ಗಳಲ್ಲೊಂದು

Search Dictionaries

Loading Results

Follow Us :   
  Download Bharatavani App
  Bharatavani Windows App