भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಛತ್ರ

(ಸ) ಒಂದು ಪ್ರದೇಶದಲ್ಲಿ ಅಖಂಡವಾಗಿ ಹಬ್ಬಿರುವ ಗಿಡಮರಗಳ ಸಮುದಾಯ. ಹಸಿರು ಹಂದರ/ಚಪ್ಪರ

ಛತ್ರಪ್ರಭೇದ

(ಜೀವಿ) ವಿಶಾಲ ಪ್ರಾಂತದಲ್ಲಿ ಆವರಿಸಿರುವ ಸಸ್ಯ ಅಥವಾ ಪ್ರಾಣಿ. ಇವುಗಳಿಂದ ಆವಾಸದಲ್ಲಿ ಇರುವ ಇತರ ಜೀವಿಗಳಿಗೂ ರಕ್ಷಣೆ ದೊರೆಯುತ್ತದೆ

ಛತ್ರಾವರಣ

(ಸ) ಯಾವುದೇ ಒಂದು ಸಸ್ಯ ಪ್ರಭೇದದ ಎಲ್ಲ ಬಿಡಿ ಸಸ್ಯಗಳ ಊರ್ಧ್ವ ಪ್ರಕ್ಷೇಪ ಒಳಗೊಳ್ಳುವ ನೆಲದ ಶೇಕಡತೆ. ಎಲ್ಲ ಪ್ರಭೇದಗಳ ಈ ಶೇಕಡತೆಗಳ ಮೊತ್ತ ಒಟ್ಟು ಛತ್ರಾವರಣವನ್ನು ಕೊಡುತ್ತದೆ

ಛದ್ಮ

(ಸಾ) ಶತ್ರುಗಳ ಕಣ್ಣು ತಪ್ಪಿಸುವ ಲಕ್ಷ್ಯದಿಂದ ಮರೆಮಾಚುವ ಸಲುವಾಗಿ ವಸ್ತುಗಳನ್ನು/ಜನರನ್ನು ನೈಸರ್ಗಿಕ ಹಿನ್ನೆಲೆಯ ಒಂದು ಭಾಗವಾಗಿ ಕಾಣುವಂತೆ ಮಾಡುವುದು

ಛದ್ಮನ

(ಪ್ರಾ) ಪ್ರಾಣಿಯೊಂದು ಬೇಟೆಯನ್ನು ಹಿಡಿಯುವ ಅಥವಾ ಶತ್ರುವಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವುಗಳ ಬಾಹ್ಯ ಲಕ್ಷಣಗಳನ್ನು ಅನುಕರಿಸುವುದು.

ಛದ್ಮವರ್ಣನ

(ಪ್ರಾ) ಕೆಲವು ಪ್ರಾಣಿಗಳು ಶತ್ರುಗಳಿಂದ ರಕ್ಷಿಸಿಕೊಳ್ಳಲು ತಮ್ಮ ಮೈಬಣ್ಣ ಸುತ್ತಲಿನ ಬಣ್ಣದೊಂದಿಗೆ ಬೆರೆಯುವಂತೆ ಬದಲಿಸಿಕೊಳ್ಳುವ ಕ್ರಿಯೆ. ಉದಾ: ಗೋಸುಂಬೆ/ಊಸರವಳ್ಳಿ. ರಕ್ಷೀರಂಜನ

ಛಾಯಾ ಗಡಿಯಾರ

(ತಂ) ವಸ್ತುವಿನ ಮೇಲೆ ಬಿಸಿಲು ಬಿದ್ದಾಗ ಉಂಟಾಗುವ ನೆರಳಿನ ವಿನ್ಯಾಸದ ಪರಿಶೀಲನೆ ಯಿಂದ ಹಗಲಿನ ವೇಳೆಯನ್ನು ಸ್ಥೂಲವಾಗಿ ಸೂಚಿಸಲು ಬಳಸುವ ಸಾಧನ. ಇಂದು ಇದಕ್ಕೆ ಐತಿಹಾಸಿಕ ಮಹತ್ತ್ವವಷ್ಟೆ ಉಂಟು. ಒಂದೇ ಸ್ಥಳದಲ್ಲಿ ಸೂರ್ಯನ ಸ್ಥಾನ ದಿನ ದಿನ ಬದಲಾಗುವುದರಿಂದಲೂ ಯಾವ ವ್ಯಕ್ತಿಯೂ ಒಂದೇ ಸ್ಥಳಕ್ಕೆ ಬಂಧಿತನಾಗಿಲ್ಲದಿರು ವುದರಿಂದಲೂ (ಹಗಲಿನ) ಛಾಯಾ ಗಡಿಯಾರಗಳ ಉಪಯುಕ್ತತೆ ತೀರ ಸೀಮಿತ. ಆದಿ ಮಾನವನ ಗಡಿಯಾರ ಸೂರ್ಯನಾಗಿದ್ದರಿಂದ ಅವನು ಸೂರ್ಯನನ್ನು ನೋಡಿ ಹೊತ್ತು ಅಂದಾಜು ಮಾಡುತ್ತಿದ್ದ

ಛಾಯಾಚಿತ್ರ ಭೂವಿಜ್ಞಾನ

(ಭೂವಿ) ವಿಮಾನ ಅಥವಾ ಕೃತಕ ಭೂ ಉಪಗ್ರಹಗಳಿಂದ ತೆಗೆದ ಛಾಯಾಚಿತ್ರ ಗಳಿಂದ ತೆಗೆದ ಭೂಸ್ವರೂಪಗಳ ಅಧ್ಯಯನ ಮಾಡುವ ವಿಜ್ಞಾನ

ಛಾಯಾಚಿತ್ರಣ

(ತಂ) ನೋಡಿ: ಫೋಟೊಗ್ರಫಿ

ಛಾಯಾಪ್ರೇಮಿ

(ಜೀ) ನೋಡಿ: ಫೋಟೊಫೈಗಸ್

ಛಿದ್ರ

(ಪ್ರಾ) ರಂಧ್ರಯುತವಾಗಿದ್ದು ವಿಶೇಷವಾಗಿ ಚಿಪ್ಪು ಪ್ರಾಣಿಗಳಲ್ಲಿ ಕಂಡುಬರುವ ಕಂಡಿ. ಉದರಪದಿಗಳಲ್ಲಿ ಸ್ತಂಭಗಳಂತೆ ತೋರುವ ಅಂಗ

ಛಿದ್ರ

(ಭೌ) ಸಿಡಿತದಿಂದಾಗಿ, ಮಿತಿಮೀರಿದ ವ್ಯಾಕೋಚನ ದಿಂದಾಗಿ ಇಲ್ಲವೇ ಬೇರಾವುದೇ ಬಲದ ಪ್ರಭಾವದಿಂದಾಗಿ ಪದಾರ್ಥದಲ್ಲಿ ಉಂಟಾಗುವ ರಂಧ್ರ ಅಥವಾ ಸೀಳು, ಒಡಕು. (ವೈ) ೧. ಊತಕ/ಅಂಗವೊಂದು ತುಂಡು ತುಂಡಾಗುವಿಕೆ. ಉದಾ: ಛಿದ್ರ ಅಖಿಲಸ್ ಕಂದರ. ೨. ಹರ್ನಿಯ

ಛಿದ್ರಿತ ಅಸ್ಥಿಭಂಗ

(ವೈ) ಮೂಳೆ ಮುರಿದು ನುಚ್ಚು ನೂರಾಗಿರುವುದು. ತ್ರುಟಿತ ಅಸ್ಥಿಭಂಗ

ಛಿನ್ನಾಗ್ರ

(ಸ) ತುದಿ ಕತ್ತರಿಸಿದೆಯೋ ಎಂಬಂತೆ ಕಾಣುವ (ಎಲೆ ಅಥವಾ ಗರಿ)

ಛೇದ

(ಗ) ಭಿನ್ನರಾಶಿಯಲ್ಲಿ ವಿಭಾಜಕ ರೇಖೆಯ ಕೆಳಗಿರುವ ಸಂಖ್ಯೆ. ಮೇಲಿನ ಸಂಖ್ಯೆಯ ಹೆಸರು ಅಂಶ. ಉದಾ : ¾ರಲ್ಲಿ ೪ ಛೇದ, ೩ ಅಂಶ. ನೋಡಿ : ಅಂಶ

ಛೇದಕ

(ಗ) ವಕ್ರರೇಖೆಯನ್ನು ಎರಡು ಬಿಂದುಗಳಲ್ಲಿ ಛೇದಿಸುವ ಸರಳರೇಖೆ. ಛೇದಕ ಬಿಂದುಗಳ ನಡುವಿನ ರೇಖಾ ಖಂಡ ಆ ವಕ್ರರೇಖೆಯ ಒಂದು ಜ್ಯಾ. ಈ ಬಿಂದುಗಳ ಪೈಕಿ ಒಂದು ಇನ್ನೊಂದರತ್ತ ವಕ್ರರೇಖೆಯ ಉದ್ದಕ್ಕೂ ಸರಿದು ಉಭಯ ಬಿಂದುಗಳೂ ಐಕ್ಯವಾದಾಗ ಛೇದಕ ಈ ಐಕ್ಯ ಬಿಂದುವಿನಲ್ಲಿ ವಕ್ರರೇಖೆಗೆ ಸ್ಪರ್ಶಕವಾಗುತ್ತದೆ

ಛೇದಕ

(ಗ) ನೋಡಿ : ವಿಚ್ಛೇದ

ಛೇದಕ

(ಗ) ಸರಳರೇಖೆಗಳ ಒಂದು ವ್ಯವಸ್ಥೆಯನ್ನು ಕತ್ತರಿಸುವ ಯಾವುದೇ ಸರಳರೇಖೆ

ಛೇದನ

(ಗ) ಎರಡು ಗಣಗಳ ಸಾಮಾನ್ಯ ಧಾತುಗಳ ಗಣ. ಉದಾ : A={a,b,c,d,e}, B={d,e,f,g} ಆಗ AAB={d,e}, C={1,2,3,4,5}, D={p,q,r,s,t} ಆಗ CCD = f ಶೂನ್ಯಗಣ. C ಮತ್ತು Dಗಳಿಗೆ ವಿಸಂಧಿತ ಗಣಗಳೆಂದು ಹೆಸರು. A ಮತ್ತು B ವಿಸಂಧಿತಗಳಲ್ಲ

ಛೇದ್ಯ

(ಭೂವಿ) ಮೊನಚಾದ ಅಲಗಿನಿಂದ ನವುರಾಗಿ ಕತ್ತರಿಸಿದಾಗ ಪುಡಿಯಾಗದೆ ಹೋಳಾಗುವ ಮೃದು ಖನಿಜದ ಗುಣ

Search Dictionaries

Loading Results

Follow Us :   
  Download Bharatavani App
  Bharatavani Windows App