भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಚೌಕ ತರಂಗ

(ಭೌ) ಮೌಲ್ಯವು ಹಠಾತ್ತನೆ ಒಂದು ತುದಿಯಿಂದ ಇನ್ನೊಂದು ತುದಿಗೆ ಆವರ್ತನೀಯವಾಗಿ ಬದಲಾಯಿಸುವುದರ ಫಲವಾಗಿ ದೊರೆಯುವ ತರಂಗ

ಚೌಕಟ್ಟು

(ತಂ) ಚಲಚ್ಚಿತ್ರ ಸುರುಳಿಯಲ್ಲಿ ಒಂದು ಘಟಕ ಚಿತ್ರ. ಟೆಲಿವಿಷನ್ ಅಥವಾ ವೀಡಿಯೊ (ವೀಡಿಯೊ ಡಿಸ್‌ಪ್ಲೆ ಯೂನಿಟ್) ತೆರೆಯ ಮೇಲೆ ಮೂಡುವ ೬೨೫ ಗೆರೆಗಳುಳ್ಳ ಒಂದು ಪೂರ್ಣ ಚಿತ್ರ. ಪ್ರತಿ ೧/೨೫ ಸೆಕೆಂಡಿಗೆ ಒಂದು ಹೊಸ ಚೌಕಟ್ಟು, ಬೆಸಸಂಖ್ಯೆಯ ಗೆರೆಗಳ ನಂತರ ಸಮಸಂಖ್ಯೆ ಗೆರೆಗಳುಳ್ಳ ಎರಡು ಒಂದರೊಡನೊಂದು ಬೆರೆತ ಕ್ಷೇತ್ರಗಳಾಗಿ ಪ್ರಸಾರವಾಗುತ್ತದೆ

ಚೌಕುಳಿಫಲಕ

(ಎಂ) ನೆಲಕ್ಕೆ ಗಾರೆ, ಲೆಪ್ಪ ಹಾಕುವಾಗ ಆ ಮಿಶ್ರಣಕ್ಕೆ ದೃಢತೆಯನ್ನೂ ಆಕಾರವನ್ನೂ ಕೊಡುವ ಸಲುವಾಗಿ ಬಳಸುವ ಉಕ್ಕಿನ ಉಬ್ಬು ಚೌಕಟ್ಟು

ಚೌಬೀನೆ

(ಸಾ) ಕಟ್ಟಡ, ಪೀಠೋಪಕರಣ ಮೊದಲಾದವು ಗಳಲ್ಲಿ ಉಪಯೋಗಿಸುವ ಮರಮುಟ್ಟು, ದಿಮ್ಮಿ ತೊಲೆ ಇತ್ಯಾದಿಗಳು. ದಾರು

ಚೌಳು

(ರ) ಉಪ್ಪು, ವಿಶೇಷವಾಗಿ ಕ್ಷಾರೀಯ ಲೋಹಗಳೂ ಮೆಗ್ನೀಸಿಯಮ್‌ನ ಲವಣಗಳೂ ಇರುವ (ರಾಸಾಯನಿಕ ಸಂಯುಕ್ತ). ಲವಣಯುಕ್ತ

ಚೌಳು

(ಸಾ) ಉಪ್ಪುಪ್ಪಾಗಿರುವ, ಆದರೆ ಸಮುದ್ರದ ನೀರಿನಷ್ಟು ಉಪ್ಪಾಗಿರದ ಈ ನೀರು ಅಳಿವೆಗಳಲ್ಲಿ, ಕೊರಕಲು ಗಳಲ್ಲಿ ಹಾಗೂ ಆಳವಾದ ಬಾವಿಗಳಲ್ಲಿ ಕಂಡುಬರುತ್ತದೆ

ಚ್ಯಾಫಿಂಚ್ ಹಕ್ಕಿ

(ಪ್ರಾ) ಫ್ರಿಂಜಿಲಿಡೀ ಕುಟುಂಬಕ್ಕೆ ಸೇರಿದ ಗುಬ್ಬಚ್ಚಿ ಗಾತ್ರದ ಕಾಡು ಹಕ್ಕಿ. ಫಿಂಚ್ ಎಂಬ ಹಾಡು ಹಕ್ಕಿಗಳಿಗೆ ಹತ್ತಿರ ಸಂಬಂಧಿ. ಫ್ರಿಂಜಿಲ ಸೀಲೆಬ್ಸ್ ವೈಜ್ಞಾನಿಕ ನಾಮ. ಹೊಟ್ಟು (ಚ್ಯಾಫ್) ತಿನ್ನುವುದರಿಂದ ಈ ಹೆಸರು. ಹಾಡುವಿಕೆಗೆ ಹೆಸರುವಾಸಿ. ಇದನ್ನು ಯೂರೋಪಿನಲ್ಲಿ ಮನೆಗಳಲ್ಲಿ ಸಾಕುತ್ತಾರೆ

Search Dictionaries

Loading Results

Follow Us :   
  Download Bharatavani App
  Bharatavani Windows App