भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗುಣಿತ

(ಗ) ಪೂರ್ಣಾಂಕ a ಪೂರ್ಣಾಂಕ bಯ ಭಾಜಕವಾಗಿದ್ದರೆ, ಆಗ bಯು aಯ ಗುಣಿತ ಎನ್ನಲಾಗುತ್ತದೆ. ವಿಧಿವಿಹಿತವಾಗಿ a, b ಹಾಗೂ xಗಳು ಪೂರ್ಣಾಂಕಗಳಾಗಿದ್ದು ax=b ಆಗಿದ್ದರೆ, ಆಗ bಯು aಯ ಗುಣಿತ ಹಾಗೂ aಯು bಯ ಭಾಜಕ. ನೋಡಿ: ಅಪವರ್ತ್ಯ

ಗುಣಿತಾನುಪಾತ ನಿಯಮ

(ರ) ಎರಡು ಧಾತುಗಳು ಸಂಯೋಗಿಸಿ ಒಂದಕ್ಕಿಂತ ಹೆಚ್ಚು ಸಂಯುಕ್ತಗಳು ರೂಪುಗೊಳ್ಳುವಾಗ ಒಂದರ ನಿರ್ದಿಷ್ಟ ತೂಕದೊಂದಿಗೆ ಸಂಯೋಗಿಸುವ ಇನ್ನೊಂದರ ತೂಕಗಳು ಸರಳ ಗುಣಿತ ಸಂಬಂಧ ಪ್ರದರ್ಶಿಸುತ್ತವೆ ಎನ್ನುವ ನಿಯಮ

ಗುಣೋತ್ತರ ಮಾಧ್ಯ

(ಗ) a,b,c ಗುಣೋತ್ತರ ಶ್ರೇಢಿಯಲ್ಲಿರುವಾಗ a ಮತ್ತು cಗಳ ನಡುವಿನ ಗುಣೋತ್ತರ ಮಾಧ್ಯ b. ಇಲ್ಲಿ b2 = ac. ಸಾರ್ವತ್ರಿಕವಾಗಿ a, a1, a2, a3…., an, b ಗುಣೋತ್ತರ ಶ್ರೇಢಿಯಲ್ಲಿ a ಮತ್ತು b ನಡುವಿನ n ಗುಣೋತ್ತರ ಮಾಧ್ಯಗಳು. a1,….,an. ಇಲ್ಲಿ

ಗುಣೋತ್ತರ ಶ್ರೇಢಿ

(ಗ) ಈ ಶ್ರೇಢಿಯಲ್ಲಿ ಯಾವುದೇ ಜೊತೆ ಆಸನ್ನ ಪದಗಳ ನಿಷ್ಪತ್ತಿ ಒಂದು ನಿರ್ದಿಷ್ಟ ಸ್ಥಿರಾಂಕ. ಇದಕ್ಕೆ ಶ್ರೇಢಿಯ ಸಾಮಾನ್ಯ ಸ್ಥಿರಾಂಕವೆಂದು ಹೆಸರು. ಮೊದಲ ಪದ a ಮತ್ತು ಸಾಮಾನ್ಯ ಸ್ಥಿರಾಂಕ r ಆಗಿದ್ದರೆ, ಈ ಶ್ರೇಢಿ: a, ar, ar2, ar3,….

ಗುಣ್ಯ

(ಗ) ಗುಣಿಸಲ್ಪಡಬೇಕಾದ ಸಂಖ್ಯೆ. ಗುಣಿಸುವ ಸಂಖ್ಯೆಗೆ ‘ಗುಣಕ’ವೆಂದು ಹೆಸರು. ನೋಡಿ: ಗುಣಕ

ಗುದದ್ವಾರ

(ಪ್ರಾ) ಆಹಾರನಾಳದ ಹಿಂಭಾಗ (ಕೆಳಭಾಗ) ದಲ್ಲಿರುವ ತೆರಪು, ಶೇಷವಸ್ತುಗಳು ಹೊರಹೋಗಲು ಇರುವ ಕಂಡಿ. ಮಲದ್ವಾರ

ಗುದನಾಳ

(ಪ್ರಾ) ಆಹಾರ ಜೀರ್ಣವಾದನಂತರ ಉಳಿಯುವ ವ್ಯರ್ಥ ಪದಾರ್ಥಗಳಲ್ಲಿ ಘನ ರೂಪದವು (ಮಲ) ವಿಸರ್ಜಿತವಾಗಲು ಅನುವಾಗುವಂತೆ ಗುದದಲ್ಲಿ ಕೊನೆಗೊಳ್ಳುವ ದೊಡ್ಡ ಕರುಳಿನ ಕೊನೆಯ ಭಾಗ

ಗುಪ್ತ

(ಭೌ) ಅಪ್ರಕಟಿತ. ಅವ್ಯಕ್ತ. ಉದಾ: ಗುಪ್ತೋಷ್ಣ. (ಪ್ರಾ) ಜೀವಿಗಳು ನಿಶ್ಚಲವಾಗಿರುವ ಅಥವಾ ಬೆಳವಣಿಗೆ ಸ್ಥಗಿತವಾಗಿದ್ದು ಅನುಕೂಲ ಪರಿಸ್ಥಿತಿಗಳಲ್ಲಿ ಕ್ರಿಯಾಶೀಲವಾಗಬಲ್ಲ ಅಥವಾ ಮತ್ತಷ್ಟು ಅಭಿವೃದ್ಧಿಯಾಗಬಲ್ಲ ಗುಣ. ಸುಪ್ತ

ಗುಪ್ತ ಪುಷ್ಟಿ

(ಸ) ಶಲಾಕೆಗಳೂ ಪುಂಕೇಸರಗಳೂ ಇಲ್ಲದ, ಆದ್ದರಿಂದ ನಿಜವಾದ ಹೂಗಳಿಲ್ಲದ ಸಸ್ಯಗಳು. ಉದಾ : ಪಾಚಿ, ಜರಿಗಿಡ ಇತ್ಯಾದಿ

ಗುಪ್ತ ಪ್ರತಿಬಿಂಬ

(ತಂ) ಕ್ಯಾಮರಾ ಪ್ಲೇಟ್ ಅಥವಾ ಫಿಲ್ಮ್ ಮೇಲೆ ಬೆಳಕು ಉಂಟುಮಾಡುವ ಅಗೋಚರ ಬದಲಾವಣೆಗಳು. ಇಮಲ್ಷನ್‌ನಲ್ಲಿಯ ಸಿಲ್ವರ್ ಹ್ಯಾಲೈಡ್ ಕಣಗಳ ಅಣು ಅಯಾನೀಕರಣದಿಂದ ಪ್ಲೇಟ್/ಫಿಲ್ಮ್ ಮೇಲೆ ಅಗೋಚರ ಛಾಯಾಚಿತ್ರ ಮೂಡಿರುತ್ತದೆ. ಪ್ಲೇಟನ್ನು ಅಥವಾ ಫಿಲ್ಮನ್ನು ರಾಸಾಯನಿಕವಾಗಿ ಸಂಸ್ಕರಿಸಿದಾಗ ಅಗೋಚರ ಛಾಯಾಚಿತ್ರ ಗೋಚರ ಚಿತ್ರವಾಗುತ್ತದೆ

ಗುಪ್ತ ಪ್ರವಾಹ

(ಭೂವಿ) ನೆಲದೊಳಗಿನ ಪ್ರವಾಹ; ಪ್ರವಾಹ ಕಣ್ಣಿಗೆ ಕಾಣದೆ ಇಳಿದು ಹೋಗುವ ಹಳ್ಳ, ಕಂಡಿ, ಕಳ್ಳ ನೀರ್ಗಂಡಿ

ಗುಪ್ತಪುಷ್ಟೀಯತೆ

(ಸ) ಗುಪ್ತ ಪುಷ್ಟಿಯಾಗಿರುವ ಸ್ಥಿತಿ

ಗುಪ್ತಭಾಷಾ ಶಾಸ್ತ್ರ

(ಸಾ) ಗೂಢಲಿಪಿ ವಿಶ್ಲೇಷಣೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ

ಗುಪ್ತವರ್ಷ ಲೇಖ

(ಸಾ) ಈ ಕೆತ್ತನೆಯಲ್ಲಿ ಎದ್ದು ಕಾಣುವ ಅಕ್ಷರಗಳನ್ನು ಜೋಡಿಸಿದಾಗ ದೊರೆಯುವ ರೋಮನ್ ಸಂಖ್ಯೆ. ಉದಾ : LIfe Is a MIXeD Menu. LIIMIXDM = 50+1+1+1000+1+10+500+1000 = 2563. ಗುಪ್ತವಾಗಿ ವರ್ಷ ವನ್ನು ಸೂಚಿಸುವ ವಾಕ್ಯ. LorD haVe MerCIe Vpon Vs = LDVMCIVV = 50+500+5+1000+100+1+5+5 = 1666

ಗುಪ್ತವಾಸಿ

(ಜೀ) ಕತ್ತಲ ನೆಲೆಗಳಲ್ಲಿ ಅಥವಾ ಮೂಲೆಗಳಲ್ಲಿ ವಾಸಿಸುವ ಜೀವಿ

ಗುಪ್ತಸ್ಫಟಿಕೀಯ

(ಭೂವಿ) ಕಣ್ಣಿಗೆ ಕಾಣಿಸದಂಥ ಚಿಕ್ಕ ಸ್ಫಟಿಕಗಳಿಂದ ಕೂಡಿದ

ಗುಪ್ತೋಷ್ಣ

(ಭೌ) ಸ್ಥಿರ ಉಷ್ಣತೆ ಮತ್ತು ಒತ್ತಡಗಳಲ್ಲಿ ವಸ್ತುವನ್ನು ಘನಸ್ಥಿತಿಯಿಂದ ದ್ರವ ಅಥವಾ ಅನಿಲ ಸ್ಥಿತಿಗಾಗಲೀ ದ್ರವಸ್ಥಿತಿಯಿಂದ ಅನಿಲ ಸ್ಥಿತಿಗಾಗಲೀ ಪರಿವರ್ತಿಸಲು ಅಗತ್ಯವಾಗುವ ಉಷ್ಣ. ಸುಪ್ತೋಷ್ಣ. ಹೆಚ್ಚಿನ ವಸ್ತುಗಳು ಸಂಲಯನ ಗುಪ್ತೋಷ್ಣ ಹಾಗೂ ಬಾಷ್ಪೀಕರಣ ಗುಪ್ತೋಷ್ಣಗಳನ್ನು ಒಳಗೊಂಡಿರುತ್ತವೆ

ಗುಂಬ

(ತಂ) ಅಚ್ಚಿನ ಮೇಲೆ ಅಥವಾ ಅಚ್ಚಿನೊಡನೆ ಸುತ್ತುವ, ಸುತ್ತಲೂ ಅರೆಕಾಲುಗಳು ಹೊರಟಿರುವ, ಗಾಲಿಯ ಮಧ್ಯಭಾಗ

ಗುಬುಟು

(ಸ) ಪುಷ್ಪಪಾತ್ರದಂತೆ ತೋರುವ ಕಾವಿನ ತುದಿ. ನೋಡಿ : ಟೋರಸ್

ಗುಮ್ಮಟ

(ಭೂವಿ) ಬೆಟ್ಟದ ತುದಿಯಲ್ಲಿ ಕೆಲವೆಡೆ ಕಾಣುವ ಗೋಲಾಕಾರದ ಚಾಚು

Search Dictionaries

Loading Results

Follow Us :   
  Download Bharatavani App
  Bharatavani Windows App