भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗಿಲ್ಬರ್ಟ್

(ಭೌ) ಕಾಂತಚಾಲಕಬಲದ ಸಿಜಿಎಸ್ ಏಕಮಾನ =10/4/(=೦.೭೯೫೭೭) ಆಂಪೇರ್ ಟರ್ನ್. ವಿಲಿಯಮ್ ಗಿಲ್ಬರ್ಟ್ (೧೫೪೪-೧೬೦೩) ಗೌರವಾರ್ಥ ಈ ಹೆಸರು. ಪ್ರತೀಕ Gb

ಗಿಳಿ ಮೀನು

(ಪ್ರಾ) ಸ್ಕ್ಯಾರಿಡೀ ಕುಟುಂಬ, ಸ್ಕೇರಸ್ ಜಾತಿಗೆ ಸೇರಿದ ಮೀನು. ವರ್ಣರಂಜಿತ ದೇಹ, ಗಿಳಿ ಕೊಕ್ಕಿನಂಥ ಬಾಯಿ. ಮೇಲಿನ ಹಾಗೂ ಕೆಳದವಡೆಗಳಲ್ಲಿ ಒಂದೊಂದು ಜೊತೆ ಗಡುಸಾದ ಹಲ್ಲುಗಳಿವೆ. ಗಂಟಲು ಭಾಗದ ಹಲ್ಲುಗಳು ಬಲು ಗಟ್ಟಿ. ಮೃದ್ವಂಗಿಗಳು, ಹವಳಗಳು ಮತ್ತು ಸಮುದ್ರ ಸಸ್ಯಗಳು ಇದರ ಮುಖ್ಯ ಆಹಾರ. ರಾತ್ರಿ ವೇಳೆ ಸಮುದ್ರ ತಳದ ಮೇಲೆ ತನ್ನ ಸುತ್ತ ಲೋಳೆ ಹೊದಿಕೆ ನಿರ್ಮಿಸಿಕೊಂಡು ನಿದ್ರಿಸುತ್ತದೆ

ಗೀಸರ್

(ಭೂವಿ) ಸಣ್ಣ ಪ್ರಮಾಣದ ಜ್ವಾಲಾಮುಖಿಯಂತೆ ಇದರಲ್ಲಿ ಲಾವಾರಸ ಮತ್ತು ಬೂದಿ ಹುಡಿಗಳಿಗೆ ಬದಲಾಗಿ ಬಿಸಿ ನೀರು ಹಾಗೂ ಆವಿ ಆಗಿಂದಾಗ್ಗೆ ಚಿಮ್ಮುತ್ತಿರುತ್ತವೆ. ಐಸ್‌ಲೆಂಡಿನ ಗ್ರೇಟ್ ಗೀಸರ್‌ನಿಂದಾಗಿ ಈ ಹೆಸರು. ಆದರೂ ಅಮೆರಿಕದ ಯೆಲ್ಲೊಸ್ಟೋನ್ ಪಾರ್ಕ್‌ನ ‘ಓಲ್ಡ್ ಫೆಯ್ತ್‌ಫುಲ್’ ಗೀಸರ್ ಹೆಚ್ಚು ಪ್ರಸಿದ್ಧ. ನ್ಯೂಜಿಲೆಂಡ್, ಐಸ್‌ಲೆಂಡ್, ಅಲಾಸ್ಕ, ಚಿಲಿ, ಟಿಬೆಟ್, ಜಪಾನ್ ಮತ್ತು ಇಂಡೊನೇಷ್ಯಗಳಲ್ಲಿ ಗೀಸರ್‌ಗಳನ್ನು ಕಾಣಬಹುದು. (ತಂ) ನೀರು ಕಾಸುವ ವಿದ್ಯುತ್ ಸಲಕರಣೆ

ಗೀಳು

(ವೈ) ವ್ಯಕ್ತಿಯ ಇಚ್ಛೆಗೂ ವಿರುದ್ಧವಾಗಿ ವಿಚಾರ ಭಾವನೆ ಅಥವಾ ಅಂತಃಪ್ರೇರಣೆಯೊಂದು ಅವನ ಮನಸ್ಸಿನಲ್ಲಿ ಶಾಶ್ವತವಾಗಿ ಇದ್ದುಕೊಂಡು ಅಥವಾ ಪದೇಪದೇ ಮರುಕಳಿಸುತ್ತ, ಇತರ ವಿಷಯಗಳ ಕಡೆಗೆ ಅವನು ಗಮನ ನೀಡದ ಹಾಗೆ ಮಾಡುವ, ಪಟ್ಟುಹಿಡಿದು ಪೀಡಿಸುವ, ರೋಗಗ್ರಸ್ತ ಎನ್ನುವಂಥ ಮನೋಸ್ಥಿತಿ. ಸಂಪೀಡನೆ, ಗ್ರಸ್ತತೆ

ಗುಚ್ಛ

(ಸಾ) ಒಂದೇ ಬಗೆಯ ವಸ್ತುಗಳ ಗುಂಪು. ಒಟ್ಟಾಗಿ ಬೆಳೆಯುವ ಗಿಡಗಳ ಸಮುದಾಯ. ಗುಂಪು. ಗೊನೆ, ಮಂಜರಿ, ಕುಚ್ಚು, ಜೊಂಪೆ

ಗುಚ್ಛ

(ಸ) ಹೂ ಅಥವಾ ಎಲೆಗಳ ಕಂತೆ

ಗುಟ್ಟಿ

(ವೈ) ನಿಗದಿತ ಔಷಧ ಪ್ರಮಾಣ. ನೋಡಿ : ಡೋಸ್

ಗುಟ್ಟಿ ಪ್ರಮಾಣ

(ವೈ) ನೋಡಿ : ಡೋಸ್

ಗುಂಡು

(ತಂ) ತುಪಾಕಿಯಿಂದ ಸಿಡಿಯುವ ಗೋಳಾಕಾರದ ಅಥವಾ ಶಂಕುವಿನಾಕಾರದ ಸೀಸದಿಂದ ಮಾಡಿದ ಗೋಲಿ

ಗುಡುಗು

(ಪವಿ) ಮಿಂಚು ಛಳುಕಿನ ಹಾದಿಯ ನೇರ ಅನಿಲಗಳು ಅತಿಕ್ಷಿಪ್ರವಾಗಿ ವ್ಯಾಕೋಚಿಸಿದಾಗ ಉಂಟಾಗುವ ಶಬ್ದ. ಮಿಂಚು ಉಂಟುಮಾಡುವ ಉಷ್ಣದಿಂದ ಅನಿಲಗಳು ೧೫,೦೦೦0ಸೆ. ವರೆಗೆ ಕಾಯುತ್ತವೆ ಮತ್ತು ತ್ವರಿತವಾಗಿ ವ್ಯಾಕೋಚನಗೊಂಡು ಆಘಾತ ತರಂಗಗಳನ್ನು ಉಂಟುಮಾಡುತ್ತವೆ. ಇದೇ ಗುಡುಗು. ಸಾಮಾನ್ಯವಾಗಿ ಮಿಂಚು ಮೊದಲು ಕಂಡು ಅನಂತರ ಗುಡುಗು ಕೇಳಿಸುತ್ತದೆ, ಏಕೆಂದರೆ, ಬೆಳಕಿನ ಚಲನವೇಗ ಶಬ್ದದ ಚಲನ ವೇಗಕ್ಕಿಂತ ಅಧಿಕ. ಮೊಳಗು

ಗುಡುಗು ಮೋಡ

(ಪವಿ) ವಾಯುವಿನ ಊರ್ಧ್ವ ಪ್ರವಾಹಗಳು ಪ್ರಬಲವಾಗಿರುವ ಈ ಮೇಘದಲ್ಲಿ ನೀರಹನಿಗಳು ವಿದ್ಯುದಾವಿಷ್ಟವಾಗಿ ಸಮಗ್ರ ವಿಭವ ಸಾಕಷ್ಟು ತೀವ್ರವಾದಾಗ ವಿದ್ಯುತ್ ವಿಸರ್ಜನೆಗೊಂಡು ಮಿಂಚು ಛಳುಕುತ್ತದೆ, ಗುಡುಗು ಮೊಳಗುತ್ತದೆ

ಗುಡುಗುಮಳೆ

(ಪವಿ) ಮಿಂಚು ಮತ್ತು ಗುಡುಗು ಸಹಿತವಾಗಿ ಸುರಿಯುವ ಮಳೆ

ಗುಡ್ಡದೇಣು

(ಭೂವಿ) ಬೆಟ್ಟಗುಡ್ಡಗಳ ನೆತ್ತಿಯ ಕಡಿದಾದ ಸಾಮಾನ್ಯವಾಗಿ ೨೦0ಗೂ ಹೆಚ್ಚಿನ ಇಳುಕಲುಗಳುಳ್ಳ ಏಣು. ಪರ್ವತ ಪ್ರವಾಹಿಗಳ ಸವೆತ ಕ್ರಿಯೆಯ ಪರಿಣಾಮವಾಗಿ ಪರ್ವತದ ಕೆಲವು ಪ್ರದೇಶಗಳಲ್ಲಿ ಏಣುಗಳೂ ಕಮರಿಗಳೂ ಪರ್ಯಾಯವಾಗಿ ರೂಪುಗೊಳ್ಳುತ್ತವೆ. ಭಾರತದ ಸಿವಾಲಿಕ್ ಗುಡ್ಡ, ಹಿಮಾಲಯದ ಪೀರ್ ಪಂಜಲ್ ಶ್ರೇಣಿಗಳಲ್ಲಿ ಏಣುಗಳ ದೃಶ್ಯ ಕಾಣಬಹುದು

ಗುಣ

(ಸಾ) ಒಂದು ಪದಾರ್ಥ ವರ್ಗಕ್ಕೆ ಸಾಮಾನ್ಯ ವಾಗಿರುವ ಗುಣ. ಗುಣಧರ್ಮ

ಗುಣ ನಿಯಂತ್ರಣ

(ಸಂಕ) ದೊಡ್ಡ ಪ್ರಮಾಣಗಳಲ್ಲಿ ತಯಾರಾದ ಯಾವುವೇ ವಸ್ತುಗಳ ಗುಣವನ್ನು ನಿಶ್ಚಿತಮಟ್ಟದಲ್ಲಿಡಲು ಆ ವಸ್ತುಗಳಿಂದ ಯಾದೃಚ್ಛಿಕವಾಗಿ ಕೆಲವನ್ನು ಆಯ್ದುಕೊಂಡು ಅವುಗಳ ಗುಣಮಟ್ಟವನ್ನು ಪರೀಕ್ಷಿಸಿ ನಿಯಂತ್ರಿಸುವ ವಿಧಾನ

ಗುಣಕ

(ಗ) xನ್ನು aಯಿಂದ ಗುಣಿಸಿ ಗುಣನ ಫಲ ax ಪಡೆಯುತ್ತೇವೆ. ಇಲ್ಲಿ a ಗುಣಕ, x ಗುಣ್ಯ. ನೋಡಿ: ಗುಣ್ಯ

ಗುಣಲಕ್ಷಣ

(ಜೀ) ಜೀವಿಯೊಂದರ ಪ್ರಕಟಿತ ರೂಪದಲ್ಲಿ ಗುರುತಿಸಬಹುದಾದ ಲಕ್ಷಣ ಅಥವಾ ಚಿಹ್ನೆ

ಗುಣಲಬ್ಧ

(ಗ) ಒಂದು ರಾಶಿಯನ್ನು ಇನ್ನೊಂದರಿಂದ ಗುಣಿಸಿದಾಗ ಲಭಿಸುವ ಫಲ

ಗುಣಾಕಾರ

(ಗ) ಅಂಕಗಣಿತದ ನಾಲ್ಕು ಮೂಲ ಪರಿಕರ್ಮಗಳ ಪೈಕಿ ಒಂದು. ಉಳಿದವು: ಸಂಕಲನ, ವ್ಯವಕಲನ ಮತ್ತು ಭಾಗಾಹಾರ. ಗುಣಾಕಾರವು ಭಾಗಾಹಾರದ ವಿಲೋಮ ಕ್ರಿಯೆ. a ´ b = c ಆಗಿರಲಿ. ಈ ಒಟ್ಟು ಪರಿಕರ್ಮ ಗುಣಾಕಾರ. aಗೆ ‘ಗುಣ್ಯ’ (ಗುಣಿಸಬೇಕಾದ ಸಂಖ್ಯೆ), bಗೆ ‘ಗುಣಕ’ (ಗುಣಿಸುವ ಸಂಖ್ಯೆ) ಮತ್ತು cಗೆ ಗುಣಲಬ್ಧವೆಂದು ಹೆಸರು. a ಮತ್ತು bಗಳು cಯ ಅಪವರ್ತನಗಳಾಗಿ ಇರುವುದರಿಂದ cಯನ್ನು aಯ ಅಥವಾ bಯ ಗುಣಿತ ಎನ್ನುತ್ತೇವೆ

ಗುಣಾತ್ಮಕ ವಿಶ್ಲೇಷಣೆ

(ರ) ಅನಿಲ, ದ್ರವ ಅಥವಾ ಘನ ಮಾದರಿಯಲ್ಲಿ/ಮಿಶ್ರಣದಲ್ಲಿ ಇರುವ ಧಾತು, ರ‍್ಯಾಡಿಕಲ್ / ಸಂಯುಕ್ತಗಳನ್ನು ಗುರುತಿಸಲು ಮಾಡುವ ಪ್ರಯೋಗ

Search Dictionaries

Loading Results

Follow Us :   
  Download Bharatavani App
  Bharatavani Windows App