भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗಳಲೆ

(ವೈ) ಗ್ರಂಥಿಗಳ ಉರಿಯೂತ

ಗಳಲೆ

(ವೈ) ದುಗ್ಧರಸ ನಾಳಗಳ ಮಾರ್ಗದಲ್ಲಿ ಸಾಧಾರಣವಾಗಿ ಅಲ್ಲಲ್ಲಿ ಇರುವ ಸಾಸಿವೆ ಕಾಳಿನಿಂದ ಅವರೆ ಕಾಳಿನ ಗಾತ್ರದ ಗಂಟುಗಳು, ರೋಗಗ್ರಸ್ತವಾದಾಗ ತಳೆಯುವ ಗಡಸಾದ, ದಪ್ಪವಾದ ಸ್ಥಿತಿ. ರೋಗ ಗುಣವಾದರೆ ಗಳಲೆಗಳೂ ಇಂಗಿ ಮಾಯವಾಗುತ್ತವೆ

ಗಾಜು

(ತಂ) ಅತಿ ಶೈತ್ಯೀಕೃತ ದ್ರವ. ಸಿಲಿಕಾನ್, ಬೋರಾನ್ ಅಥವಾ ರಂಜಕಗಳ ಒಂದು ಅಥವಾ ಹೆಚ್ಚು ಆಕ್ಸೈಡ್‌ಗಳನ್ನು ಸೋಡಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಮ್, ಪೊಟಾಸಿಯಮ್ ಗಳ ಕೆಲವು ಕ್ಷಾರೀಯ ಆಕ್ಸೈಡ್‌ಗಳೊಂದಿಗೆ ಕರಗಿಸಿ ತಯಾರಿಸಿದ ಗಡುಸಾದ, ರೂಪರಹಿತ, ಭಿದುರ ಪದಾರ್ಥ. ಸ್ಫಟಿಕೀರಣ ಗೊಳ್ಳುವುದನ್ನು ಅಥವಾ ಮೂಲಸ್ಥಿತಿಗೆ ಮರಳುವುದನ್ನು ತಪ್ಪಿಸಲು ಇದನ್ನು ಶೀಘ್ರವಾಗಿ ಶೈತ್ಯೀಕರಿಸಲಾಗುತ್ತದೆ. ದ್ರಬಿಂ ೮೦೦0ಸೆ- ೯೫೦0ಸೆ. ಕರ್ಷಕ ತ್ರಾಣ ಬಲುಮಟ್ಟಿಗೆ ಪೂರ್ಣವಾಗಿ ಹೊರ ಪದರದಲ್ಲಿ ಇರುತ್ತದೆ. ಈ ಭಾಗದಲ್ಲಿ ಮುಕ್ಕಾದರೆ ಅಥವಾ ಗೀಚಾದರೆ ಗಾಜು ಬಲು ಸುಲಭವಾಗಿ ಒಡೆಯುತ್ತದೆ

ಗಾಜು ಉಣ್ಣೆ

(ತಂ) ಉಣ್ಣೆಯನ್ನು ಹೋಲುವ ನವುರಾದ ಗಾಜಿನ ತಂತುಗಳ ಸಮೂಹ. ಪ್ಯಾಕಿಂಗ್‌ನಲ್ಲಿ ಒತ್ತುಕೊಡುವ ವಸ್ತುವಾಗಿಯೂ ವಿದ್ಯುದಪಾರಕವಾಗಿಯೂ ಬಳಕೆ. ಗಾಜು ತಂತು

ಗಾಜುಲೇಪ

(ತಂ) ಪಿಂಗಾಣಿ ವಸ್ತುಗಳಿಗೆ ಒಪ್ಪ ಕೊಡಲು ಬಳಸುವ ಪದಾರ್ಥ. ಲೋಹದ ಅಥವಾ ಗಡಸು ವಸ್ತುಗಳ ಮೇಲ್ಮೈ ಅಂದಕ್ಕಾಗಿ ಇಲ್ಲವೇ ರಕ್ಷಕ ಹೊದಿಕೆಯಾಗಿ ಹಚ್ಚುವ ಅಪಾರಕ/ಅರೆಪಾರಕ ಗಾಜಿನಂಥ ಲೇಪ

ಗಾಜುಲೇಪಿತ ತಂತಿ

(ತಂ) ಮೊದಲು ಎನ್ಯಾಮಲ್ ಲೇಪಿಸಿ ಮೇಲೆ ತೆಳುಪ್ಲಾಸ್ಟಿಕ್ ಹೊದಿಕೆ ಬಳಿದ ತಂತಿ

ಗಾತ್ರ

(ಭೌ) ವಸ್ತು ಆಕ್ರಮಿಸುವ ಸ್ಥಳದ ಅಳತೆ. ಘನ ಏಕಮಾನಗಳಲ್ಲಿ ಮಾಪನ. ಪ್ರತೀಕ ಘನಗಾತ್ರ

ಗಾತ್ರಮಾಪಕ ವಿಶ್ಲೇಷಣೆ

(ರ) ಪರಿಮಾಣಾತ್ಮಕ ರಾಸಾಯನಿಕ ವಿಶ್ಲೇಷಣೆಯ ಒಂದು ವಿಧಾನ. ದ್ರಾವಣದಲ್ಲಿರುವ ಘಟಕ ವಸ್ತುವಿನ ಗಾತ್ರ ಅಳೆಯಲು, ಆ ದ್ರಾವಣದೊಂದಿಗೆ ಯಾವುದಾದರೂ ಪರೀಕ್ಷಕ ವಸ್ತುವಿನ ನಿರ್ದಿಷ್ಟ ಗಾತ್ರದ ಶಿಷ್ಟ ದ್ರಾವಣವನ್ನು, ಗೊತ್ತಾದ ರಾಸಾಯನಿಕ ಪ್ರತಿಕ್ರಿಯೆ (ವರ್ಣ ಬದಲಾವಣೆ ಅಥವಾ ಅವಕ್ಷೇಪನ) ಮೂಡುವವರೆಗೂ ಬೆರೆಸುತ್ತ ಹೋಗುವ ಒಂದು ವಿಶ್ಲೇಷಣಾತ್ಮಕ ವಿಧಾನ

ಗಾತ್ರಾನುಸಾರ ಜೋಡಣೆ

(ಸಂ) ದತ್ತಾಂಶವನ್ನು ಮೌಲ್ಯಗಳ ಏರಿಕೆ ಯಾ ಇಳಿಕೆ ಕ್ರಮದಲ್ಲಿ ಜೋಡಣೆ. (ಉದಾ) ೮, ೪, ೧೦, ೫, ೧೦, ೩ ಎಂಬ ದತ್ತಾಂಶ ಏರಿಕೆಯ ಕ್ರಮದಲ್ಲಿ ೩, ೪, ೫, ೮, ೧೦, ೧೦ ಎಂದೂ, ಇಳಿಕೆ ಕ್ರಮದಲ್ಲಿ ೧೦, ೧೦, ೮, ೫, ೪, ೩ ಎಂದೂ ಆಗುತ್ತದೆ

ಗಾಧ

(ಸಾ) ನದಿ ಅಥವಾ ಕಡಲುಗಳಲ್ಲಿ ಹೆಚ್ಚು ಆಳವಿಲ್ಲದ ಭಾಗ. ತೆಟ್ಟೆ

ಗಾನಗೋಷ್ಠಿ ಶ್ರುತಿ

(ಸಾ) ವಾದ್ಯಮೇಳಗಳಲ್ಲಿ ಸಾಮಾನ್ಯವಾಗಿ ವಾದ್ಯಗಳನ್ನು ಶ್ರುತಿ ಮಾಡುವ ಸ್ಥಾಯಿ

ಗಾನಬಧಿರ

(ಮ) ಸಂಗೀತದ ಸುಸ್ವರಗಳಿಗೆ, ಸ್ವರಸ್ಥಾಯಿಯ ವ್ಯತ್ಯಾಸಗಳಿಗೆ ಕಿವುಡಾದವ. ಹಾಡುಗಿವುಡ. ನೋಡಿ : ಶಬ್ದಬಧಿರ

ಗಾನೊರೀಯ

(ವೈ) ನಿಸ್ಸೀರಿಯಾ ಗೊನೋರಿಯೆ ಎಂಬ ಬ್ಯಾಕ್ಟೀರಿಯದ ಕಾರಣ ತಲೆದೋರುವ ಒಂದು ಲೈಂಗಿಕ ಸೋಂಕುರೋಗ. ಸ್ತ್ರೀ ಪುರುಷರಿಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಮೂತ್ರನಾಳದಿಂದ ಕೀವು ಸುರಿಯುವುದು ಈ ರೋಗದ

ಗಾಯ

(ವೈ) ಶರೀರದ ಯಾವುದೇ ಭಾಗದಲ್ಲಾದ ಗಾಯ ದಿಂದಾಗಿ ಅಂಗದ ಕ್ರಿಯೆಯಲ್ಲಿ ಅಥವಾ ಅದರ ಅಂಗಾಂಶ ರಚನೆಯಲ್ಲಿ ಕಂಡುಬರುವ ರೋಗಸೂಚಕ ಬದಲಾವಣೆ

ಗಾಯಕಲೆ

(ವೈ) ಗಾಯ ಮಾಯ್ದ ಬಳಿಕ ಅಲ್ಲಿಯ ಚರ್ಮದಲ್ಲಿ ಎದ್ದುಕಾಣುವ ಕಲೆ

ಗಾಯಚಿಕಿತ್ಸೆ

(ವೈ) ಗಾಯವಾದ ಭಾಗವನ್ನು ಚೊಕ್ಕಟಗೊಳಿಸಿ ಕ್ರಿಮಿಮುಕ್ತ ಪಟ್ಟಿ ಕಟ್ಟುವುದು. ಗಾಯಪಟ್ಟಿ

ಗಾರೆ

(ತಂ) ಸುಣ್ಣ, ಮರಳು, ನೀರು ಬೆರೆಸಿ ಅರೆದ ಗಚ್ಚು. ಒಂದು ಬಂಧನಕಾರಕವನ್ನೂ ಮರಳನ್ನೂ ಕಲಸಿ ತಯಾರಿಸಿದ ನಮ್ಯ ವಸ್ತು. ಬಂಧನಕಾರಕವು ಸಿಮೆಂಟು, ಸುಣ್ಣ, ಪಾಲಿಮರ್ ಆದರೆ ಕ್ರಮವಾಗಿ ಸಿಮೆಂಟುಗಾರೆ, ಸುಣ್ಣದಗಾರೆ ಮತ್ತು ಪಾಲಿಮರ್‌ಗಾರೆ ದೊರೆಯುತ್ತವೆ. ಸುಣ್ಣ, ಇಟ್ಟಿಗೆ ಪುಡಿಯದು ಸುರ್ಖಿಗಾರೆ. ವಿಶೇಷ ಉಪಯೋಗಗಳಿಗೆ ರಾಸಾಯನಿಕ ನಿರೋಧಿಗಾರೆ, ಆಮ್ಲ ನಿರೋಧಿಗಾರೆ, ಶಾಖ ನಿರೋಧಿಗಾರೆಗಳಿವೆ. ಸಿಮೆಂಟುಗಾರೆ, ಸುಣ್ಣದ ಗಾರೆಯನ್ನು ಕಲ್ಲಿನ ನಿರ್ಮಾಣಗಳಿಗೂ, ಗಿಲಾವಿಗೂ ಬಳಸಲಾಗುತ್ತದೆ

ಗಾರೆಕಣಜ

(ಪ್ರಾ) ನೋಡಿ : ಕುಂಬಾರ ಕಣಜ

ಗಾಲಿ

(ತಂ) ಲೋಹ, ಮರ ಅಥವಾ ಇತರ ಯಾವುದೇ ಗಡಸು ಪದಾರ್ಥದಿಂದ ನಿರ್ಮಿಸಿದ ವರ್ತುಳೀಯ ಚೌಕಟ್ಟು. ಪೂರ್ಣವಾಗಿ ಇಲ್ಲವೇ ಪರಿಧಿಯಲ್ಲಿ ಮಾತ್ರ ಘನವಾಗಿರಬಹುದು. ಮೊದಲನೆಯದು ಬಿಲ್ಲೆ, ಎರಡನೆಯದು ಬಳೆ. ಕೇಂದ್ರದಲ್ಲಿ ಒಂದು ಗುಂಬವಿದ್ದು ಅಲ್ಲಿಂದ ಪರಿಧಿಯೆಡೆಗೆ ಅರೀಯವಾಗಿ ಅಪಸರಿಸುವ ಅರಗಳಿರಬಹುದು. ಚಕ್ರ

ಗಾಲ್

(ಸ) ವಿಭಿನ್ನ ಪ್ರಾಣಿ ಹಾಗೂ ಸಸ್ಯ ಪರೋಪ ಜೀವಿಗಳು ಗಿಡದ ಮೇಲೆ ಉಂಟುಮಾಡಿದ ಒಂದು ರೀತಿಯ ರೋಗಗ್ರಸ್ತ ಬೆಳವಣಿಗೆ ಅಥವಾ ಊತ. ಬೊಬ್ಬೆ, ಹೊಪ್ಪಳೆ

Search Dictionaries

Loading Results

Follow Us :   
  Download Bharatavani App
  Bharatavani Windows App