भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗರ್ಭನಿರೋಧ

(ವೈ) ಬಸಿರಾಗುವುದನ್ನು ತಡೆಯುವುದು

ಗರ್ಭನಿರೋಧಕ

(ವೈ) ವೀರ್ಯಾಣುವಿನಿಂದ ಅಂಡಾಣು ಫಲಿಸುವುದನ್ನು ತಡೆಯುವ ಕಾರಕ/ವಿಧಾನ

ಗರ್ಭಪಾತ

(ವೈ) ಗರ್ಭ ತಳೆದ ೧೨ ವಾರಗಳ ಒಳಗೆ ಗರ್ಭದ ಸ್ವಯಮೋತ್ಪಾಟನೆ/ಪ್ರೇರಿತ ಉತ್ಪಾಟನೆ. ಅಪಾಯಕಾರಿ. ಕಾನೂನಿಗೆ ವಿರುದ್ಧ. ಗರ್ಭಸ್ರಾವ. ಮೈ ಇಳಿತ

ಗರ್ಭವೇಷ್ಟನ

(ಪ್ರಾ) ಭ್ರೂಣವನ್ನು ಆವರಿಸಿರುವ ದ್ರವಯುಕ್ತ ಒಳಪೊರೆ. ಇದು ಭ್ರೂಣವನ್ನು ಆಘಾತದಿಂದ ರಕ್ಷಿಸುತ್ತದೆ. ಗರ್ಭದ ಒಳಗವಚ

ಗರ್ಭವೇಷ್ಟನ ದ್ರವ ಚೂಷಣೆ

(ಜೀ) ಗರ್ಭಾವಧಿಯ ಸುಮಾರು ಹದಿನಾರನೆಯ ವಾರದಲ್ಲಿ ಗರ್ಭವೇಷ್ಟನ ದ್ರವದಿಂದ ಭ್ರೂಣಕೋಶಗಳನ್ನು ತೆಗೆದು ಕೃಷಿಕೆಗೈದು ಪರೀಕ್ಷಿಸಿ ಭ್ರೂಣ ದಲ್ಲಿಯ ಅಸಹಜತೆಗಳನ್ನು ನಿದಾನಿಸುವ ವಿಧಾನ. ಭ್ರೂಣದ ಒಳಪೊರೆಯಲ್ಲಿರುವ ದ್ರವವನ್ನು ಪರೀಕ್ಷಿಸಲು ಕೊಳವೆಯಂತಿರುವ ಸೂಜಿಯನ್ನು ಚುಚ್ಚಿ ದ್ರವದ ಸ್ವಲ್ಪ ಭಾಗವನ್ನು ತೆಗೆದುಕೊಳ್ಳುವುದು

ಗರ್ಭವೇಷ್ಟನರಹಿತ

(ಪ್ರಾ) ಬೆಳವಣಿಗೆಯ ಕಾಲದಲ್ಲಿ ಗರ್ಭವೇಷ್ಟನ ಇಲ್ಲದಿರುವುದು

ಗರ್ಭಶಿಶು ವರ್ತನ

(ವೈ) ಹೆರಿಗೆಯಲ್ಲಿ ಮಗು ಸುಲಭವಾಗಿ ಹೊರಬರಲು ಅನುಕೂಲಿಸುವಂತೆ ಗರ್ಭಾಶಯದಲ್ಲಿಯ ಪಿಂಡಗೂಸನ್ನು ಕೈಯಿಂದ ತಿರುಗಿಸುವುದು

ಗರ್ಭಾವಧಿ

(ವೈ) ಸ್ತನಿಗಳು ಗರ್ಭಕೋಶದಲ್ಲಿರುವ ಭ್ರೂಣವನ್ನು ಪೋಷಿಸಿ ಬೆಳೆಸುವ ಅವಧಿ

ಗರ್ಭಾವಸ್ಥೆ

(ವೈ) ಜೀವಿಯ ಗರ್ಭಾಶಯದಲ್ಲಿ ಭ್ರೂಣ ಅಭಿವರ್ಧನೆಗೊಳ್ಳಲು ತೆಗೆದುಕೊಳ್ಳುವ ಅವಧಿ. ಇದು ಗರ್ಭಧಾರಣೆಯಿಂದ ಆರಂಭವಾಗಿ ಜನನದೊಂದಿಗೆ ಅಂತ್ಯಗೊಳ್ಳುತ್ತದೆ. ಮನುಷ್ಯರಲ್ಲಿ ಸಾಧಾರಣವಾಗಿ ೩೬ ವಾರ

ಗರ್ಭಾಶಯ ನಿರ್ಮೂಲನ

(ವೈ) ಗರ್ಭಕೋಶವನ್ನು ಕತ್ತರಿಸಿ ತೆಗೆದುಹಾಕುವುದು

ಗರ್ಭಾಶಯ ಸೀಳಿಕೆ

(ವೈ) ಗರ್ಭಾಶಯವನ್ನು ಸೀಳುವಿಕೆ. ಉದಾ: ಸಿಸೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ಗರ್ಭಾಶಯ ವನ್ನು ಸೀಳಿ ಮಗುವನ್ನು ಹೊರತೆಗೆಯುವುದು

ಗಲಗ್ರಂಥಿಗಳು

(ವೈ) ಗಂಟಲ ಹಿಂಬದಿಯಲ್ಲಿರುವ ಬಾದಾಮಿ ಆಕಾರದ ಒಂದು ಜೊತೆ ದುಗ್ಧೀಯ ಊತಕ ರಾಶಿಗಳು. ಇವು ಕೆಲವು ವೇಳೆ ದೊಡ್ಡ ಕೆಲವು ವೇಳೆ ಸಣ್ಣ ಆಕಾರದಲ್ಲಿರುತ್ತವೆ. ಎಲ್ಲ ದುಗ್ಧೀಯ ಊತಕಗಳಂತೆ ಇವೂ ಬ್ಯಾಕ್ಟೀರಿಯಗಳನ್ನು ನಾಶಗೊಳಿಸುವ ಭಕ್ಷಕ ಕೋಶಗಳನ್ನು ಹೊರಸೂಸುತ್ತವೆ. ಆದರೆ ಕೆಲವು ವೇಳೆ ತಾವೇ ಸೋಂಕಿಗೆ ತುತ್ತಾಗಿ ರೋಗಗ್ರಸ್ತವಾಗುತ್ತವೆ. ಆಗ ಇವು ಊದಿಕೊಂಡು ಉರಿಯತೊಡಗುತ್ತವೆ. ಇದು ಮಕ್ಕಳಲ್ಲಿ ವಿಶೇಷ. ಗಲಗ್ರಂಥಿಗಳ ಈ ಉರಿಯೂತವನ್ನು ಟಾನ್ಸಿಲೈಟಿಸ್ ಎಂದು ಕರೆಯುತ್ತಾರೆ. ಆಗ ಸಾಮಾನ್ಯವಾಗಿ ಗಂಟಲು ಉರಿತದೊಂದಿಗೆ ನೋಯ ತೊಡಗುತ್ತದೆ. ಪದೇಪದೇ ಹೀಗಾದರೆ ಗಲಗ್ರಂಥಿಗಳನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕಬೇಕಾಗುತ್ತದೆ. ಆದರೆ ಇದನ್ನು ವಿಶೇಷ ಎಚ್ಚರಿಕೆಯಿಂದ, ಮತ್ತೆ ಯಾವ ತೊಡಕುಗಳೂ ಸಂಭವಿಸದಂತೆ, ಆಂಟಿಬಯಾಟಿಕ್ (ಪ್ರತಿಜೈವಿಕ) ಗಳಿಂದ ಗುಣಪಡಿಸಲಾಗದಾಗಷ್ಟೆ, ರೋಗಿಯ ಆರೋಗ್ಯದ ಪೂರ್ವಚರಿತ್ರೆಯನ್ನು ಅಭ್ಯಸಿಸಿ ತೀರ ಅವಶ್ಯವೆಂದು ಕಂಡುಬಂದಾಗ ಮಾತ್ರ ಜರಗಿಸಬೇಕು. ನೋಡಿ: ಟಾನ್ಸಿಲೈಟಿಸ್. ಟಾನ್ಸಿಲೆಕ್ಟೋಮಿ

ಗಲನಿಸು

(ತಂ) ಲೋಹಯುಕ್ತ ಅದಿರನ್ನು ಸಂಸ್ಕರಿಸಿ ಲೋಹವನ್ನು ಬೇರ್ಪಡಿಸು. ಅದಿರು ಕರಗಿಸು. ಸಾಮಾನ್ಯವಾಗಿ ಲೋಹದ ಆಕ್ಸೈಡನ್ನು ಯುಕ್ತ ಕುಲುಮೆಯಲ್ಲಿ ಅಪಕರ್ಷಿಸುವುದೇ ಈ ಪ್ರಕ್ರಿಯೆ. ಅದಿರಿನ ಸ್ವಭಾವಕ್ಕನುಗುಣವಾಗಿ ಅಪಕರ್ಷಣಕಾರಿ ಯನ್ನು ಚುನಾಯಿಸಿಕೊಳ್ಳಬೇಕಾಗುತ್ತದೆ. ಉದಾ: ಸತುವಿಗೆ ಕಾರ್ಬನ್, ನಿಕಲ್‌ಗೆ ಹೈಡ್ರೊಜನ್, ಕ್ರೋಮಿಯಮ್‌ಗೆ ಅಲ್ಯೂಮಿನಿಯಮ್ ಮತ್ತು ಕಬ್ಬಿಣಕ್ಕೆ ಕಾರ್ಬನ್ ಮಾನಾಕ್ಸೈಡ್

ಗಲೀನ

(ಭೂವಿ) ಲೆಡ್‌ಸಲ್ಫೈಡ್ PbS, ಸಾಮಾನ್ಯವಾಗಿ ಊದಾ ಬಣ್ಣದ ಘನ ಸ್ಫಟಿಕ ರೂಪದಲ್ಲಿ ದೊರೆಯುವ ಸೀಸದ ಅದಿರು. ಖನಿಜ ಸಿರೆಗಳಲ್ಲಿ ಸತುವಿನ ಬ್ಲೆಂಡ್‌ನೊಂದಿಗಿರುತ್ತದೆ

ಗಲೋದ್ರೇಕ

(ವೈ) ನೋಡಿ : ಟಾನ್ಸಿಲೈಟಿಸ್

ಗಲ್ಫ್ ಸ್ಟ್ರೀಮ್

(ಭೂವಿ) ಉಷ್ಣೋದಕ ಪ್ರವಾಹ. ಮೆಕ್ಸಿಕೋ ಕೊಲ್ಲಿಯಿಂದ ಅಮೆರಿಕದ ಪೂರ್ವ ತೀರದವರೆಗೆ ಹರಿದು, ಉತ್ತರ ಅಟ್ಲಾಂಟಿಕ್ ಸಾಗರದ ಮಧ್ಯ ಭಾಗ ಪ್ರವೇಶಿಸಿ ಉತ್ತರ ಅಟ್ಲಾಂಟಿಕ್ ಪ್ರವಾಹದೊಂದಿಗೆ ಕೂಡುವ ಒಂದು ದೊಡ್ಡ ಉಷ್ಣೋದಕ ಪ್ರವಾಹ. ಮಳೆ ಮಾರುತಗಳ ಮೇಲೆ ಪ್ರಭಾವ ಬೀರುತ್ತದೆ. ಗಲ್ಫ್ ಪ್ರವಾಹ

ಗಲ್ಲ

(ಜೀ) ಕೆಳದವಡೆಯ ಮುಂಭಾಗ. ಗಂಡ, ಕದಪು

ಗವಾಕ್ಷಿ

(ಭೌ) ನಿರ್ದಿಷ್ಟ ಮಾಧ್ಯಮಕ್ಕೆ ಪಾರಕವಾಗಿರುವ ಅಲೆಯುದ್ದ ಪಟ್ಟಿ. ಉದಾ: ವಾಯುಮಂಡಲವು ರೇಡಿಯೋ ಅಲೆಗಳಿಗೂ ಗೋಚರ ಬೆಳಕಿಗೂ ಪಾರಕ, ಎಕ್ಸ್-ಕಿರಣಗಳಿಗೆ ಅಲ್ಲ. ಎಂದೇ ವಾಯುಮಂಡಲದಲ್ಲಿ ೨೦ ಮೀ-೮ ಮಿಮೀ ವ್ಯಾಪ್ತಿಯಲ್ಲಿ ರೇಡಿಯೋ ಗವಾಕ್ಷಿ ಇದೆ ಎನ್ನುತ್ತೇವೆ. ತರಂಗಕಿಟಕಿ

ಗಳಗಂಡ

(ವೈ) ಇದು ಥೈರಾಯ್ಡ್ ಗ್ರಂಥಿಯ ಊತ. ಗ್ರಂಥಿಯ ಅತಿ ಉತ್ಪಾದನೆ ಅಥವಾ ಅಲ್ಪ ಉತ್ಪಾದನೆಯ ಸಂದರ್ಭ ಗಳಲ್ಲಿ ಇಂತಹ ಊತ ತಲೆದೋರಬಹುದು. ಉದಾ: ಥೈರಾಯ್ಡ್ ಉರಿಯೂತ, ಸೌಮ್ಯ ರೂಪದ ಗಂತಿಗಳು, ಅಯೊಡೀನ್ ಕೊರತೆ ಇತ್ಯಾದಿ ಸಂದರ್ಭಗಳಲ್ಲಿ. ಥೈರಾಯ್ಡ್ ಗ್ರಂಥಿಯು ಅರ್ಬುದ ರೋಗಕ್ಕೊಳಗಾದಾಗಲೂ ಊತ ಕಂಡುಬರುತ್ತದೆ. ಗಂಡಮಾಲೆ

ಗಳಲೆ

(ವೈ) ತೊಡೆ ಸಂದಿಯಲ್ಲಿ ಕಂಕುಳಲ್ಲಿ ದುಗ್ಧರಸ ಗ್ರಂಥಿಯ ಉರಿಯೂತದ ಕಾರಣವಾಗಿ ಏಳುವ ಗೆಡ್ಡೆ. ತೊಡೆವಾಳ, ಉಡಚು

Search Dictionaries

Loading Results

Follow Us :   
  Download Bharatavani App
  Bharatavani Windows App