भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗಭೀರ

(ಭೂವಿ) ಸುಮಾರು ೨೦೦-೪,೦೦೦ ಮೀ ಆಳದಲ್ಲಿ ಸಾಗರ ತಲ ಪರಿಸರ ಕುರಿತ. ಆಳ ಕುರಿತಂತೆ ಸಾಗರದ ಉಳಿದ ಎರಡು ತಲಗಳು: ಅಗಾಧ (೪,೦೦೦-೬,೦೦೦ ಮೀ) ಹಾಗೂ ತೀರಾವಳಿ (೨೦೦ ಮೀ)

ಗಮನ

(ಸಾ) ಜಾಡು. ಗತಿ, ದಿಕ್ಕು, ಮಾರ್ಗ, ಧಾಟಿ, ಪಥ

ಗಮನಾರ್ಹ ಅಂಕೆಗಳು

(ಗ) ಸಂಖ್ಯೆಗೆ ಸಂಬಂಧಿಸಿದ್ದು; ಸಂಖ್ಯೆಯ ಮೌಲ್ಯಕ್ಕೆ ಕಾರಣವಾಗುವ ಅಂಕೆಗಳು. ಉದಾ: ೦೦.೧೨೩೦ ಈ ಸಂಖ್ಯೆಯಲ್ಲಿ ಮೊದಲೆರಡು ಸೊನ್ನೆಗಳು ಗಮನಾರ್ಹವಲ್ಲ, ದಶಮಾಂಶ ಬಿಂದುವಿನ ಬಲಕ್ಕಿರುವ ೧,೨,೩ ಸಂಖ್ಯೆಗಳು ಗಮನಾರ್ಹ. ಕೊನೆಯ ಸೊನ್ನೆಯಾದರೋ ನಾಲ್ಕನೆಯ ದಶಮಾಂಶ ಸ್ಥಾನದಲ್ಲಿ ಬೇರೆ ಯಾವ ಸಂಖ್ಯೆಯೂ ಇಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ

ಗಮೀಟ್

(ಜೀ) ಸಂತಾನೋತ್ಪತ್ತಿಗೆ ಹೆಣ್ಣು ಒದಗಿಸುವ ಅಂಡಾಣು ಮತ್ತು ಗಂಡು ಒದಗಿಸುವ ರೇತ್ರಾಣುಗಳಲ್ಲಿ ಒಂದು. ಜಂಪತಿ. ನೋಡಿ : ಯುಗ್ಮಕ

ಗಮೈಟ್

(ರ) ಯುರೇನಿಯಮ್, ಥೋರಿಯಮ್ ಹಾಗೂ ಸೀಸದ ಜಲಯುಕ್ತ ಆಕ್ಸೈಡ್‌ಗಳುಳ್ಳ, ಹಳದಿ ಕಿತ್ತಳೆ ಕೆಂಪು ಅಥವಾ ಕಂದುಬಣ್ಣದ ನಾನಾ ದ್ವಿತೀಯಕ ಖನಿಜಗಳಲ್ಲೊಂದು. ಯುರೇನಿಯಮ್ ಓಕರ್ ಎಂದೂ ಹೆಸರುಂಟು

ಗರಗಸ ಅಂಚು

(ಸ) ಎಲೆಗಳಲ್ಲಿ ಗರಗಸದ ಹಲ್ಲುಗಳಂತಿರುವ ಅಂಚು. ಉದಾ: ಗುಲಾಬಿ ಎಲೆಯ ಅಂಚು

ಗರಗಸ ಅಂಚುಳ್ಳ

(ಜೀ) (ಪ್ರಾಣಿಯಲ್ಲಿ) ಗರಗಸದ ಹಲ್ಲುಗಳಂತೆ ಹಲ್ಲುಳ್ಳ ಅಂಗರಚನೆ. ದಂತುರ

ಗರಣೆ

(ವೈ) ೧. ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯ ಫಲ. ರಕ್ತಸ್ರಾವ ನಿಲ್ಲಲು ತೀರ ಅಗತ್ಯವಾದ ಪ್ರಕ್ರಿಯೆ. ಕೆಲವು ಸಲ ಈ ಗರಣೆ ಯಾವುದೇ ರಕ್ತಸ್ರಾವವಿರದ ಸ್ಥಿತಿಯಲ್ಲಿ ತಲೆದೋರಿ ಅಪಾಯವನ್ನು ಉಂಟುಮಾಡಬಹುದು. ಹೃದಯದ ಮಕುಟ ಧಮನಿಯಲ್ಲಿ ಗರಣೆ ಅಡಚಿಕೊಂಡಾಗ ಹೃದಯಾಘಾತ, ಮಿದುಳಿನ ಧಮನಿಯಲ್ಲಿ ಅಡಚಿಕೊಂಡಾಗ ಪಾರ್ಶ್ವವಾಯು ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಸೂಕ್ತ ಗರಣೆ ನಿವಾರಕ ಔಷಧಗಳನ್ನು ನೀಡುವು ದರಿಂದ ಗರಣೆಯನ್ನು ಕರಗಿಸಿ, ರಕ್ತ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಜೀವವನ್ನು ಉಳಿಸಬಹುದು. ೨. ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆ

ಗರಣೆ ಕಟ್ಟುವಿಕೆ

(ರ) ದ್ರಾವಣಗಳಿಂದ ಕಲಿಲಗಳ, ಅಲ್ಲಿಯೂ ಪ್ರೋಟೀನ್‌ಗಳ, ಅವಕ್ಷೇಪಣ, ಹೆಪ್ಪಾಗುವಿಕೆ, ಘನೀಭವನ. ರಕ್ತ ಹೆಪ್ಪುಗಟ್ಟುವುದು, ಕಲಿಲ ದ್ರಾವಣಗಳು ಬೊಂತೆ ಕಟ್ಟುವುದು. ಪ್ರೋಟೊಪ್ಲಾಸ್ಮ್ ಹಾಗೂ ಅಲ್ಬುಮೆನ್‌ಗಳು ಕಾಸಿದಾಗ ಗಡಸಾಗುವುದು ಇತ್ಯಾದಿ ಪ್ರಸಂಗಗಳಲ್ಲಿಯಂತೆ ದ್ರವಸ್ಥಿತಿಯ ಪದಾರ್ಥ, ರಾಸಾಯನಿಕ ಬದಲಾವಣೆಗಳಿಂದಾಗಿ, ಭಾಗಶಃ ಇಲ್ಲವೇ ಪೂರ್ತಿ ಗಡಸು, ಲೋಳೆ ಅಥವಾ ಘನ ರೂಪ ತಾಳುವುದು

ಗರಿ

(ಪ್ರಾ) ಹಕ್ಕಿಯ ಪುಕ್ಕದ ಟೊಳ್ಳು ಕಾಂಡ

ಗರಿ

(ಪ್ರಾ) ಹಕ್ಕಿಗಳಲ್ಲಿ ಮಾತ್ರ ಕಾಣಬರುವ ವಿಶೇಷ ನಿರ್ಜೀವ ರಚನೆ. ಚರ್ಮದಿಂದ ಉದ್ಭವಿಸುವ ಈ ಕೊಂಬಿನ ರಚನೆ ಹಕ್ಕಿಗಳ ವಾಯು ಜೀವನಕ್ಕೆ ಬಲು ಸಹಕಾರಿ. ಕೆರಾಟಿನ್‌ನಿಂದ ಕೂಡಿರುತ್ತದೆ. ವೈವಿಧ್ಯ, ವರ್ಣಮಯ

ಗರಿಕೆ ಹುಲ್ಲು

(ಸ) ಪೋಯೇಸೀ (ಗ್ರಾಮಿನೀ) ಕುಟುಂಬಕ್ಕೆ ಸೇರಿದ ಸೈನೊಡಾನ್ ಡ್ಯಾಕ್ಟಿಲಾನ್ ವೈಜ್ಞಾನಿಕ ನಾಮದ ಬಹುವಾರ್ಷಿಕ ಹುಲ್ಲುಗಿಡ. ಯೂರೇಷ್ಯದ ಮೂಲವಾಸಿ. ದನಕರುಗಳಿಗೆ, ಅದರಲ್ಲೂ ಕುದುರೆಗೆ, ಉತ್ತಮ ಆಹಾರ. ಆದರೆ ವ್ಯವಸಾಯ ಭೂಮಿಗಳಲ್ಲಿ ಅಪಾಯಕಾರಿ ಕಳೆ. ಬೇರು ಹಾಗೂ ಗುಪ್ತಕಾಂಡಗಳಲ್ಲಿ ಔಷಧೀಯ ಗುಣವುಂಟು. ಕುಡಿ ಗರಿಕೆ

ಗರಿಯುರ್ಚು

(ಪ್ರಾ) ನೋಡಿ : ನಿರ್ಮೋಚನೆ

ಗರಿಷ್ಠ-ಕನಿಷ್ಠ ಉಷ್ಣತಾಮಾಪಕ

(ಪವಿ) ಎರಡು ಪರೀಕ್ಷಣೆಗಳ ನಡುವೆ, ಸಾಮಾನ್ಯವಾಗಿ ೨೪ ಗಂಟೆಗಳ ಅವಧಿಯಲ್ಲಿ, ಗಾಳಿಯ ಗರಿಷ್ಠ ಹಾಗೂ ಕನಿಷ್ಠ ಉಷ್ಣತೆಯನ್ನು ದಾಖಲಿಸುವ ಉಪಕರಣ

ಗರ್ತ

(ಪವಿ) ನೋಡಿ : ಕುಸಿತ

ಗರ್ತ

(ತಂ) ತರಂಗ ಚಲನೆಯಲ್ಲಿ ಎರಡು ಶೃಂಗಗಳ ನಡುವಿನ ತಗ್ಗು ಪ್ರದೇಶ. ಕರಾವಳಿಯ ಸಮೀಪ ಸಮುದ್ರದ ಅಥವಾ ಸರೋವರದ ತಳದಲ್ಲಿ ರೂಪುಗೊಂಡಿರುವ ಸಣ್ಣದಾದ ನೇರವಾದ ತಗ್ಗು ಪ್ರದೇಶ

ಗರ್ಭಕಟ್ಟಿಸು

(ವೈ) ಪುರುಷನ ವೀರ್ಯಾಣುವನ್ನು ಸ್ತ್ರೀಯಲ್ಲಿನ ಅಂಡಾಣುವಿನೊಂದಿಗೆ ಸಂಯೋಗಗೊಳಿಸಿ ತನ್ಮೂಲಕ ಫಲೀಕರಿಸುವ ಕ್ರಿಯೆ

ಗರ್ಭಕೋಶ

(ಪ್ರಾ) ಹೆಣ್ಣು ಸ್ತನಿಗಳಲ್ಲಿ ಭ್ರೂಣ

ಗರ್ಭಧರಿಸು

(ಜೀ) ಗರ್ಭತಳೆ, ಗರ್ಭವತಿಯಾಗು. ಗರ್ಭಾಶಯದಲ್ಲಿ ಸಂತಾನಾಭಿವರ್ಧನೆಯನ್ನು ಪ್ರಾರಂಭಿಸು

ಗರ್ಭಧಾರಣೆ

(ಜೀ) ವೀರ್ಯಾಣುವೂ ಅಂಡಾಣುವೂ ಒಗ್ಗೂಡಿ ಯುಗ್ಮಜ ಮೈದಳೆಯುವುದು

Search Dictionaries

Loading Results

Follow Us :   
  Download Bharatavani App
  Bharatavani Windows App