भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗಣಿತಾನುಗಮನ

(ಗ) n ಒಂದು ಸ್ವಾಭಾವಿಕ ಸಂಖ್ಯೆಯಾಗಿರುವಾಗ P(n) ಎಂಬ ಹೇಳಿಕೆ ಅಥವಾ ಉಕ್ತಿ nನ ಎಲ್ಲ ಬೆಲೆಗಳಿಗೂ ನಿಜವೆಂದು ಸಾಧಿಸಲು ಬಳಸುವ ಒಂದು ವಿಧಾನ. ಇದನ್ನು ಎರಡು ಹಂತಗಳಲ್ಲಿ ಸಾಧಿಸಲಾಗುತ್ತದೆ: (೧) P (೧)ನ್ನು ನಿಜವೆಂದು ತೋರಿಸಬೇಕು. (೨) P (k)ಯನ್ನು ನಿಜವೆಂದು ಪರಿಗಣಿಸಿದರೆ P (k+1) ನಿಜ ಎಂದು ಸಾಧಿಸಬೇಕು. ಉಭಯಹಂತಗಳನ್ನೂ ನಿಜವೆಂದು ಸಾಧಿಸಿದಾಗ nನ ಎಲ್ಲ ಬೆಲೆಗಳಿಗೂ P(n) ನಿಜವಾಗಿರುತ್ತದೆ

ಗಣಿತೋಕ್ತಿ

(ಗ) ಮೊತ್ತವನ್ನು ಸೂಚಿಸುವ ಸಂಕೇತ ಸಮುದಾಯ. ಗಣಿತಶಾಸ್ತ್ರೀಯ ಅಥವಾ ತರ್ಕಶಾಸ್ತ್ರೀಯ ಸಂಕೇತಗಳ ಅರ್ಥಪೂರ್ಣ ಸಂಯೋಗ

ಗಣಿಸು

(ಗ) ಲೆಕ್ಕಿಸು. ಲೆಕ್ಕಹಾಕು. ಗಣನೆಮಾಡು

ಗಣಿಸು

(ಗ) ಎಣಿಸು, ಲೆಕ್ಕಮಾಡು

ಗತ ಪ್ರತ್ಯಾಗತ ಸಂಖ್ಯೆ

(ಗ) ಎಡದಿಂದ ಬಲಕ್ಕೂ ಬಲದಿಂದ ಎಡಕ್ಕೂ ಒಂದಾದ ಸಂಖ್ಯೆ. ಉದಾ: ೪೫೬೫೪

ಗಂತಿ

(ವೈ) ಶರೀರದ ನಿರ್ದಿಷ್ಟ ಭಾಗಗಳಲ್ಲಿ ಜೀವಕೋಶಗಳ ಅತಿಬೆಳೆತ. ಇದರಿಂದ ಸಾಮಾನ್ಯವಾಗಿ ಊತ ಅಥವಾ ಗೆಡ್ಡೆ/ಗಂತಿ ಆಗುವುದುಂಟು. ಗಂತಿಗಳಲ್ಲಿ ಅಮಾರಕ (benign) ಮತ್ತು ಮಾರಕ (malignant) ಎಂದು ಎರಡು ವಿಧ. ಅಮಾರಕ ಗಂತಿ ನಿಧಾನವಾಗಿ ಬೆಳೆಯುತ್ತದೆ. ಸುತ್ತಲ ಊತಕಗಳನ್ನು ಆಕ್ರಮಿಸು ವುದಿಲ್ಲ. ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ. ಶಸ್ತ್ರಕ್ರಿಯೆ ಮಾಡಿ ತೆಗೆದುಹಾಕಿದರೆ ಮತ್ತೆ ಬೆಳೆಯುವುದಿಲ್ಲ. ಆದರೆ ಮಿದುಳಿನಲ್ಲಿ ಏನಾದರೂ ಈ ಗಂತಿ ಇದ್ದರೆ ಅಪಾಯಕರ. ಮಾರಕಗಂತಿಗಳು ಬೇಗ ಹರಡುತ್ತವೆ. ಸುತ್ತಲ ಊತಕಗಳನ್ನು ಆಕ್ರಮಿಸುತ್ತವೆ. ತೆಗೆದುಹಾಕಿದರೆ ಮತ್ತೆ ಬೆಳೆಯುತ್ತವೆ. ಕ್ಯಾನ್ಸರ್ ರೋಗದಲ್ಲಿ ಆಗುವುದು ಇಂಥ ಗಂತಿಯೇ. ಗಂಟು, ಅರ್ಬುದ, ಏಡಿಗಂತಿ

ಗತಿ

(ಗ) ಹೆಜ್ಜೆ, ದಾಪು, ಪಥ. ಒಂದು ಹೆಜ್ಜೆಯ ದೂರ (ಸುಮಾರು ೭೫ ಸೆಂಮೀ)

ಗತಿಕ್ರಮ

(ಜೀ) ಬಾಹ್ಯ ಪ್ರಚೋದನೆಗೆ ಗುರಿಯಾದ ಪ್ರಾಣಿಯು ಪ್ರಚೋದನೆಯ ದಿಕ್ಕಿನಲ್ಲಿ ಅಲ್ಲದೆ, ಅಂದರೆ ಅನಿಯಂತ್ರಿತವಾಗಿ, ಚಲಿಸುವುದು. ಪ್ರಾಣಿಯ ಈ ಪ್ರತಿಕ್ರಿಯೆ ಬಾಹ್ಯ ಪ್ರಚೋದನೆಯ ತೀವ್ರತೆಗೆ ಅನುಗುಣವಾಗಿರುತ್ತದೆ

ಗತಿಪ್ರವರ್ಧಕ

(ವೈ) ನೋಡಿ : ಪೇಸ್‌ಮೇಕರ್

ಗಂತಿವಿಜ್ಞಾನ

(ವೈ) ಶರೀರದ ಊತಕಗಳಲ್ಲಿ ಗಂತಿಗಳು (ಅರ್ಬುದಗಳು) ಬೆಳೆಯುವುದಕ್ಕೆ ಕಾರಣಗಳು, ಅವುಗಳ ಅಭಿವರ್ಧನೆ, ವಿಶಿಷ್ಟ ಲಕ್ಷಣಗಳು ಮತ್ತು ಚಿಕಿತ್ಸೆ ಇತ್ಯಾದಿಗಳ ಅಧ್ಯಯನಕ್ಕೆ ಮೀಸಲಾದ ವೈದ್ಯವಿಜ್ಞಾನ ಶಾಖೆ

ಗತಿವಿಭ್ರಮ

(ವೈ) ನರಮಂಡಲದಲ್ಲಿಯ ವೈಪರೀತ್ಯದ ಕಾರಣವಾಗಿ ಶರೀರದ ಸ್ನಾಯುಗಳ ನಡುವೆ ಸಮನ್ವಯ ತಪ್ಪಿಹೋಗಿ ಚಲನೆಗಳು ಕ್ರಮರಹಿತ ಹಾಗೂ ಅನಿಯಂತ್ರಿತ ಆಗುವುದು. ತತ್ತರ ನಡಿಗೆ

ಗತಿವೀಕ್ಷಣೆ

(ಅಂವಿ) ಅತಿದೂರದಲ್ಲಿ, ಅಂತರಿಕ್ಷದಲ್ಲಿ, ವಸ್ತುವೊಂದು ಇರುವ ಸ್ಥಾನವನ್ನು ಅಥವಾ ಅದು ಚಲಿಸುತ್ತಿದ್ದರೆ ಅದರ ಪಥ ವಿವರಗಳನ್ನು ವೀಕ್ಷಣ ಕೇಂದ್ರದಿಂದ ಸತತವಾಗಿ ಗುರುತಿಸುವ ಪ್ರಕ್ರಿಯೆ. ಪಥವೀಕ್ಷಣೆ

ಗಂದಿಗ

(ವೈ) ಮೂಲಿಕಾ ಔಷಧಿಗಳ ಮಾರಾಟಗಾರ

ಗಂದೆ

(ವೈ) ಲೋಮನಾಳಗಳು ಹಿಗ್ಗಿ ಚರ್ಮದ ಮೇಲೆ ಅಲ್ಲಲ್ಲಿ ಆಗುವ ಉರಿಯೂತ

ಗದ್ದಲ

(ತಂ) ೧. ಅಹಿತಕರ ಶಬ್ದ. ಹಗಲು ೭೫ ರಾತ್ರಿ ೭೦ ಡೆಸಿಬಲ್ (ಕೈಗಾರಿಕಾ ಪ್ರದೇಶಗಳಲ್ಲಿ) ಇರಬಹುದು. ೫೦ ಡೆಸಿಬಲ್‌ಗಿಂತಲೂ ಹೆಚ್ಚಿದ್ದರೆ ಅಹಿತಕರ ಎಂದು ನಿಗದಿಪಡಿಸ ಲಾಗಿದೆ. ೨. ಸಂಪರ್ಕ ಚಾನೆಲ್‌ನಲ್ಲಿ ಕಂಡುಬರುವ ಅಡಚಣೆ. ೩. ಚಿತ್ರ ಪುನರುತ್ಪಾದನೆಯಲ್ಲಿ ಹೆಚ್ಚು ಚುಕ್ಕೆಗಳನ್ನು ಅಥವಾ ಕ್ರಮರಹಿತವಾದ ವರ್ಣಕಲೆಗಳನ್ನು ಮೂಡಿಸಿ ಚಿತ್ರದ ನೋಟ ಕೆಡುವಂತೆ ಮಾಡುವ ಅನಪೇಕ್ಷಿತ ಸಂeಗಳು ಅಥವಾ ಹಿನ್ನೆಲೆ ಕ್ಷೋಭೆ. ೪. ವಿದ್ಯುತ್ ವ್ಯವಸ್ಥೆ ಅಥವಾ ಸಾಧನದಲ್ಲಿ ಉಂಟಾಗ ಬಹುದಾದ ಅನಪೇಕ್ಷಿತ ವೋಲ್ಟೇಜ್ ಹಾಗೂ ವಿದ್ಯುತ್ ಪ್ರವಾಹ ವ್ಯತ್ಯಯ. ೫. ನಿರ್ದಿಷ್ಟ ಆಕರದಿಂದ ಬರುವ ಸಂದೇಶದ ಭಾಗವಾಗಿರದಂಥ ಯಾವುದೇ ಪಲ್ಲಟ/ಕ್ಷೋಭೆ

ಗದ್ದೆ ಹಾವಸೆ

(ಸಾ) ಗದ್ದೆಯಲ್ಲಿಯ ಪಾಚಿ. ಬೀಜ ಕಣಕೋಶಗಳು ನೆಟ್ಟಗೆ ಗೊಂಚಲಾಗಿರುವ ಒಂದು ಬಗೆಯ ಪಾಚಿ. ಹುಲ್ಲು, ಚಂಡುಪಾಚಿ

ಗಂಧಕ

(ರ) ಅನೇಕ ಭಿನ್ನ ರೂಪಗಳಲ್ಲಿ ದೊರೆಯುವ ಅಲೋಹೀಯ ಧಾತು. ಪ್ರತೀಕ S; ಪಸಂ ೧೬; ಸಾಪರಾ ೩೨.೦೬, ವೇಲೆನ್ಸಿಗಳು ೨,೪,೬; ರಾಂಬಿಕ್ (ವಜ್ರಾಕೃತಿ)ಗಂಧಕ ನಿಂಬೆ ಹಳದಿ ಬಣ್ಣದ್ದು; ದ್ರಬಿಂ ೧೧೨.೮0ಸೆ. ಸಾಸಾಂ ೨.೦೭. ಏಕನತೀಯ ಗಂಧಕ ರಾಂಬಿಕ್ ಗಂಧಕಕ್ಕಿಂತ ಹೆಚ್ಚು ಗಾಢ ವರ್ಣದ್ದು; ದ್ರಬಿಂ ೧೧೯0ಸೆ. ಸಾಸಾಂ ೧.೯೬, ಕುಬಿಂ ೪೪೪.೬0ಸೆ. ರಾಸಾಯನಿಕವಾಗಿ ಗಂಧಕ ಆಕ್ಸಿಜನ್ನನ್ನು ಹೋಲುತ್ತದೆ. ಅನೇಕ ಸಂಯುಕ್ತಗಳಲ್ಲಿ ಇದು ಆಕ್ಸಿಜನ್‌ನ ಸ್ಥಾನ ಪಡೆಯಬಲ್ಲದು; ನಿಸರ್ಗದಲ್ಲಿ ಮುಕ್ತ, ಸಂಯುಕ್ತ ರೂಪಗಳಲ್ಲಿ ಲಭ್ಯ. ಜ್ವಾಲಾಮುಖಿ ಸುತ್ತಮುತ್ತ, ಬಿಸಿನೀರ ಬುಗ್ಗೆ ಬಳಿ ಮತ್ತು ಸಲ್ಫೇಟ್ ನಿಕ್ಷೇಪಗಳಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಉಪಯೋಗ: ಸಲ್ಫೂರಿಕ್ ಆಮ್ಲ, ಕಾರ್ಬನ್ ಡೈ ಸಲ್ಫೈಡ್, ಸಿಡಿಮದ್ದು, ಬೆಂಕಿಕಡ್ಡಿ, ಮತಾಪು, ವರ್ಣದ್ರವ್ಯ ತಯಾರಿಕೆಯಲ್ಲಿ; ಔಷಧಿಗಳಲ್ಲಿ; ರಬ್ಬರ್ ವಲ್ಕನೀಕರಣದಲ್ಲಿ; ಶಿಲೀಂಧ್ರ ನಾಶಕವಾಗಿ

ಗಂಧಕದ ಆಕ್ಸಿ ಆಮ್ಲಗಳು

(ರ) ಸಲ್ಫ್ಯೂರಿಕ್ ಆಮ್ಲ (H2SO4), ಪೈರೊಸಲ್ಫ್ಯೂರಿಕ್ ಆಮ್ಲ (H2S2O7), ಹೈಪೊಸಲ್ಫ್ಯೂರಸ್ ಆಮ್ಲ (H2S2O4), ಥಯೊಸಲ್ಫ್ಯೂರಿಕ್ ಆಮ್ಲ (H2S2O3). ಪರ್‌ಸಲ್ಫ್ಯೂರಿಕ್ ಆಮ್ಲಗಳು (H2SO5) ಮತ್ತು ಥಯಾನಿಕ್ ಆಮ್ಲಗಳು (H2SnO6 – ಇಲ್ಲಿ n =೨,೩,೪,೫ ಅಥವಾ ೬) ಆಗಬಹುದು. ಇವೆಲ್ಲ ವೈದ್ಯಕೀಯದಲ್ಲಿ ಔಷಧಿಗಳಾಗಿಯೂ ಉತ್ಕರ್ಷಕಗಳಾಗಿಯೂ ಬಳಕೆಯಾಗುತ್ತವೆ

ಗಂಧಕಾಮ್ಲ

(ರ) ನೋಡಿ : ಸಲ್ಫ್ಯೂರಿಕ್ ಆಮ್ಲ

ಗಂಧದ ಮರ

(ಸ) ಸ್ಯಾಂಟಲೇಸೀ ಕುಟುಂಬಕ್ಕೆ ಸೇರಿದ, ಸುವಾಸನೆಯುಳ್ಳ ಹಾಗೂ ಔಷಧೀಯ ಗುಣದ ಎಣ್ಣೆ ಕೊಡುವ ಸುಪ್ರಸಿದ್ಧ ವೃಕ್ಷ. ಸ್ಯಾಂಟಲಮ್ ಆಲ್ಬಮ್ ವೈಜ್ಞಾನಿಕ ನಾಮ. ಶ್ರೀಗಂಧದ ಮರ, ಚಂದನದ ಮರ ಪರ್ಯಾಯ ನಾಮಗಳು. ದಕ್ಷಿಣ ಭಾರತಕ್ಕೆ ಸೀಮಿತ. ಅರ್ಧ ಪರಾವಲಂಬಿ ಸಸ್ಯ. ಇತರ ಮರಗಳ ಬೇರುಗಳೊಂದಿಗೆ ತನ್ನ ಬೇರಿನ ಮೂಲಕ ಸಂಪರ್ಕ ಕಲ್ಪಿಸಿಕೊಂಡು ಖನಿಜಾಂಶಗಳನ್ನು ಹೀರಿಕೊಳ್ಳುತ್ತದೆ. ಗಂಧದ ಮರದ ತುಂಡನ್ನು ಸಾಣೆಕಲ್ಲಿನ ಮೇಲೆ ತೇಯ್ದ ಗಂಧಲೇಪನ ದೇಹಕ್ಕೆ ಸುವಾಸನೆ ಕೊಟ್ಟು ಉಷ್ಣಮೂಲದ ರೋಗ ಗಳನ್ನು ಶಮನ ಮಾಡುತ್ತದೆ. ಚರ್ಮರೋಗವನ್ನು ನಿವಾರಿಸುತ್ತದೆ. ಗಂಧದ ಮರ ಕೆತ್ತನೆಗೂ ಬಲು ಯೋಗ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App