भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗ್ರ್ಯಾವೆಲ್

(ಭೂವಿ) ಗಣಿಗಳಲ್ಲಿ ಚಿನ್ನವಿರುವಂಥ ಜಲ್ಲಿ ಸ್ತರ. (ತಂ) ಕಾಂಕ್ರಿಟ್ ತಯಾರಿಕೆಯಲ್ಲಿ ಬಳಸುವ ದುಂಡನೆಯ, ಸಣ್ಣ, ನುಣುಪಾದ ಉರುಟುಕಲ್ಲು ಮತ್ತು ದಪ್ಪ ಮರಳಿನ ಮಿಶ್ರಣ. ಗರಸು. ಕಂಕರೆ. (ವೈ) ಪ್ರಾಣಿಗಳ ಮೂತ್ರಪಿಂಡ ಮತ್ತು ಮೂತ್ರಕೋಶಗಳಲ್ಲಿ ಹರಳು ಸೇರಿಕೊಂಡಿರುವ ರೋಗ

ಗ್ಲಾಕೋನೈಟ್

(ಭೂವಿ) ಪೊಟ್ಯಾಸಿಯಮ್, ಕಬ್ಬಿಣ ಹಾಗೂ ಅಲ್ಯೂಮಿನಿಯಮ್‌ನ ಜಲೀಕೃತ ಸಿಲಿಕೇಟ್, ಹಸಿರು ಖನಿಜ. ವಿಶೇಷವಾಗಿ ಸಾಗರದ ಮಡ್ಡಿಗಳಲ್ಲಿ, ಅದರಲ್ಲೂ ಹಸಿರು ಮರಳಿನಲ್ಲಿ ಕಂಡುಬರುತ್ತದೆ. ಅಭ್ರಕದ ರಚನೆಯುಳ್ಳದ್ದಾದರೂ ಗುಂಡನೆಯ ಅತಿ ಸಣ್ಣ ಕಣಗಳ ಮುದ್ದೆಯಾಗಿ ಲಭ್ಯ

ಗ್ಲಾಕೋಮ

(ವೈ) ನಾನಾ ಕಾರಣಗಳಿಂದ ಒಳಗಣ್ಣಿನ ತರಲದ ಒತ್ತಡ ಹೆಚ್ಚಿ ದೃಕ್ ನರತಂತುಗಳಿಗೆ ಹಾನಿ ಉಂಟಾಗಿ ಕ್ರಮೇಣ ದೃಷ್ಟಿ ಇಂಗಿಹೋಗುವ ಒಂದು ವ್ಯಾಧಿ. ಮನುಷ್ಯರಲ್ಲಿ ೪೫ ವಯಸ್ಸಿನ ಅನಂತರ ಉಂಟಾಗುವ ಕುರುಡಿನಲ್ಲಿ ಕಾಲು ಭಾಗಕ್ಕೆ ಇದೇ ಕಾರಣ

ಗ್ಲಾನ್ಸಿಂಗ್ ಕೋನ

(ಭೌ) ಆಪಾತಕೋನದ ಪೂರಕಕೋನ. ಸವರುಕೋನ

ಗ್ಲಾನ್ಸ್

(ಭೂವಿ) ಕಂದು ಬಣ್ಣದ ಮತ್ತು ಲೋಹದ ಹೊಳಪುಳ್ಳ ಹಲವಾರು ಖನಿಜ ಸಲ್ಫೈಡ್‌ಗಳಲ್ಲಿ ಒಂದು, ವಿಶೇಷವಾಗಿ ನೈಸರ್ಗಿಕ CuS4

ಗ್ಲಾಬ್ಯುಲಿನ್

(ರ) ಅನೇಕ ಪ್ರಾಣಿ, ಸಸ್ಯ ಊತಕ ಹಾಗೂ ತರಲಗಳಲ್ಲಿ ಕಂಡುಬರುವ ಪ್ರೋಟೀನ್ ಪದಾರ್ಥ. ಉದಾ: ಹಾಲಿನಲ್ಲಿ ಲಾಕ್ಟೊಗ್ಲಾಬ್ಯುಲಿನ್, ರಕ್ತದಲ್ಲಿ ಸೆರಮ್ ಗ್ಲಾಬ್ಯೂಲಿನ್, ಬೀಜಗಳಲ್ಲಿ ತರಕಾರಿ ಗ್ಲಾಬ್ಯುಲಿನ್. ನೀರಿನಲ್ಲಿ ಅವಿಲೇಯ, ಆದರೆ ಸೋಡಿಯಮ್ ಕ್ಲೋರೈಡ್, ಮೆಗ್ನೀಸಿಯಮ್ ಸಲ್ಫೇಟ್‌ಗಳಂಥ ಖನಿಜಯುತ ಲವಣಗಳಲ್ಲಿ ವಿಲೇಯ. ಪ್ರತಿಕಾಯಗಳ ಪ್ರಧಾನ ಪ್ರೋಟೀನ್

ಗ್ಲಾಮರುಲಸ್

(ಜೀ) ಲೋಮನಾಳಗಳ/ನರಾಗ್ರಗಳ ಗೊಂಡೆ. ಮೂತ್ರಪಿಂಡದ ಬೌಮನ್ ಗೋಳಕದಲ್ಲಿ ಅಥವಾ ಮಿದುಳಿನಲ್ಲಿನ ಘ್ರಾಣೇಂದ್ರಿಯ ತಾಣಗಳಲ್ಲಿ ಕಂಡುಬರುತ್ತದೆ

ಗ್ಲಾಸ

(ಪ್ರಾ) ಕಶೇರುಕಗಳಲ್ಲಿ ನಾಲಗೆಯಂಥ ರಚನೆ. ಕೀಟಗಳಲ್ಲಿ ತಳ ತುಟಿಯ ನಾಲಗೆಯಂಥ ಭಾಗ

ಗ್ಲಾಸಿನ ನೊಣ

(ಪ್ರಾ) ಡಿಪ್ಟರ ಗಣದ ಮಸ್ಕಿಡೀ ಕುಟುಂಬಕ್ಕೆ ಸೇರಿರುವ ಅಪಾಯಕಾರಿ ಕೀಟ. ಸಾಮಾನ್ಯವಾಗಿ ಇದನ್ನು ಟ್ಸೆಟ್ಸೀ ನೊಣ ಎಂದು ಕರೆಯುತ್ತಾರೆ. ಆಫ್ರಿಕದಲ್ಲಿ ಕಂಡುಬರುತ್ತದೆ. ನಿದ್ರಾರೋಗವನ್ನು ಉಂಟುಮಾಡುವ ಟ್ರಿಪ್ಯಾನೊಸೋಮ್ ಎಂಬ ಜೀವಿಯನ್ನು ಇದು ಮನುಷ್ಯರಲ್ಲಿ ಹರಡುತ್ತದೆ

ಗ್ಲಿಸರೈಡ್

(ರ) ನೈಸರ್ಗಿಕ ಎಣ್ಣೆ ಮತ್ತು ಕೊಬ್ಬು ಗಳಲ್ಲಿರುವ, ಗ್ಲಿಸರಾಲ್‌ನ ಮೇದಾಮ್ಲಗಳ ಎಸ್ಟರ್

ಗ್ಲುಟೆಲೀನ್‌ಗಳು

(ರ) ಧಾನ್ಯದ ಬೀಜಗಳಲ್ಲಿ ಕಂಡುಬರುವ, ಶಾಖಕ್ಕೊಳಪಡಿಸಿದಾಗ ಅಸ್ಥಿರವಾಗುವ ಸರಳ ಪ್ರೋಟೀನ್‌ಗಳ ವರ್ಗ. ಸಾರರಿಕ್ತ ಆಮ್ಲಗಳಲ್ಲೂ ಕ್ಷಾರಗಳಲ್ಲೂ ವಿಲೇಯ

ಗ್ಲೂಕೋಸ್

(ರ) ಬಿಳಿ, ಸ್ಫಟಿಕೀಯ ಸಕ್ಕರೆ, ನಿಸರ್ಗದಲ್ಲಿ ಹೇರಳವಾಗಿ ಲಭ್ಯ. C6H12O6. ಅತ್ಯಂತ ಸಾಮಾನ್ಯ ಆಲ್ಡೊ ಹೆಕ್ಸೋಸ್. ಪ್ರಾಣಿಗಳಲ್ಲಿ ಶಕ್ತಿಯ ಪ್ರಧಾನ ಮೂಲ. ರಕ್ತ, ದುಗ್ಧರಸ ಮತ್ತು ಮಸ್ತಿಷ್ಕ ಮೇರು ತರಲಗಳ ಮೂಲಕ ಶರೀರದಾದ್ಯಂತ ಕೋಶಗಳಿಗೆ ರವಾನೆಯಾಗಿ ಅಲ್ಲಿ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಪಿಷ್ಟ ಮತ್ತು ಸೆಲ್ಯುಲೋಸ್‌ಗಳು ಗ್ಲೂಕೋಸ್‌ನ ಸಾಂದ್ರೀಕೃತ ಬಹ್ವಂಗಿಗಳು (ಪಾಲಿಮರ್). ಜೇನುತುಪ್ಪ, ದ್ರಾಕ್ಷಿ ಹಣ್ಣಿನಲ್ಲಿರುವ ಪಿಷ್ಟ ಮುಂತಾದ ಪಾಲಿಸ್ಯಾಕರೈಡ್‌ಗಳ ಜಲವಿಭಜನೆಯಿಂದ ತಯಾರಿಸುವ ಅದರ ಬಲಮುರಿ ರೂಪ. ನೋಡಿ : ಡೆಕ್‌ಸ್ಟ್ರೋಸ್

ಗ್ಲೂಟಿಷನ್

(ವೈ) ಆಹಾರವನ್ನು ನುಂಗುವ ಕ್ರಿಯೆ. ನುಂಗುವಿಕೆ

ಗ್ಲೂಟೆನಿನ್

(ರ) ಗೋದಿಯ ಕಾಳಿನಲ್ಲಿ ಕಂಡುಬರುವ, ಶಾಖಕ್ಕೊಳಪಡಿಸಿದಾಗ ಅಸ್ಥಿರವಾಗುವ ಸರಳ ಪ್ರೋಟೀನ್

ಗ್ಲೈಕಾಲ್

(ರ) ಎರಡು ಹೈಡ್ರಾಕ್ಸಿಲ್ ಗುಂಪುಗಳಿರುವ ಯಾವುದೇ ಆಲ್ಕಹಾಲ್. CnH2n(OH)2 ದಪ್ಪ ಸಿಹಿ ದ್ರವ ಅಥವಾ ಸ್ಫಟಿಕೀಯ ಘನಪದಾರ್ಥ. ಎಥಿಲೀನ್ ಗ್ಲೈಕಾಲ್‌ನಂಥದೇ ರಚನೆ. ಟೆರಿಲಿನ್ ತಯಾರಿಕೆಯಲ್ಲಿ ಬಳಕೆ

ಗ್ಲೈಕೊಜೆನ್

(ರ) ಉನ್ನತವರ್ಗ ಪ್ರಾಣಿಗಳ ಸ್ನಾಯು ಹಾಗೂ ಯಕೃತ್ತು ಕೋಶಗಳಲ್ಲೂ, ಕೆಳವರ್ಗ ಪ್ರಾಣಿಗಳ ಕೋಶಗಳಲ್ಲೂ ಕಾರ್ಬೊಹೈಡ್ರೇಟ್ ಶಕ್ತಿಯಾಗಿ ಸಂಗ್ರಹವಾದ ಅನಪಕರ್ಷಣಕಾರಿ, ಬಿಳಿ, ರೂಪರಹಿತ ಪಾಲಿಸ್ಯಾಕರೈಡ್

ಗ್ಲೈಡರ್

(ತಂ) ಎಂಜಿನ್ ಇಲ್ಲದೆ ಹಾರುವ ವಿಮಾನ. ಆದರೆ ಆರಂಭದಲ್ಲಿ ಎಂಜಿನ್ ಚಾಲಿತ ವಿಮಾನದಿಂದ ಎಳೆಯಲ್ಪಟ್ಟಿದ್ದು ಅನಂತರ ಸ್ವತಃ ಹಾರುತ್ತ ಹೋಗಬಲ್ಲ ವಿಮಾನ

ಗ್ಲೈಸಿನ್

(ರ) NH2.CH2.COOH ಅಮೈನೊಅಸೆಟಿಕ್ ಆಮ್ಲ. ಅತ್ಯಂತ ಸರಳ ಅಮೈನೋ ಆಮ್ಲ. ಬಣ್ಣವಿಲ್ಲ. ಹರಳುರೂಪಿ, ವಿಲೇಯ. ದ್ರಬಿಂ. ೨೩೨0ಸೆ. ಆರ್ಗ್ಯಾನಿಕ್ ಸಂಶ್ಲೇಷಣೆಯಲ್ಲಿ ಬಳಕೆ

ಗ್ಲೋಬಿನ್

(ರ) ರಕ್ತದ ಹಿಮೊಗ್ಲಾಬಿನ್‌ನ ಕೆಂಪು ಬಣ್ಣಕ್ಕೆ ಕಾರಣವಾದ ಹೀಮಿನ್ ವರ್ಣದ್ರವ್ಯವನ್ನು ಹಿಮೊಗ್ಲಾಬಿನ್‌ನಿಂದ ಪ್ರತ್ಯೇಕಿಸಿದಾಗ ಉಳಿಯುವ ಪ್ರೋಟೀನ್ ಭಾಗ

ಗ್ವಾನಾಕೋ

(ಪ್ರಾ) ಆರ್ಟಿಯೊಡ್ಯಾಕ್ಟಿಲ ಗಣ ಹಾಗೂ ಕಮೆಲಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಒಂಟೆ ಜಾತಿಗೆ ಸೇರಿದುದು. ಆದರೆ ಬೆನ್ನಿನ ಮೇಲೆ ಡುಬ್ಬ ಇಲ್ಲ. ಅಲ್ಪಾಕ, ಲಾಮಾಗಳ ಹತ್ತಿರ ಸಂಬಂಧಿ. ಲಾಮಾ ಗ್ವಾನಕೀ ವೈಜ್ಞಾನಿಕ ನಾಮ. ದಕ್ಷಿಣ ಅಮೆರಿಕದ ಮೂಲ ವಾಸಿ. ಕೆಂಗಂದು ಬಣ್ಣದ ಉಣ್ಣೆ ಕೊಡುವ ಲಾಮ. ಹುಲ್ಲು ಪ್ರಧಾನ ಆಹಾರ. ಬಲು ವೇಗವಾಗಿ ಓಡ ಬಲ್ಲದು, ಈಜಬಲ್ಲದು

Search Dictionaries

Loading Results

Follow Us :   
  Download Bharatavani App
  Bharatavani Windows App