भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗ್ರಂಥಿ

(ಪ್ರಾ) ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕು ವುದಕ್ಕಾಗಿ ಅವನ್ನು ಯುಕ್ತರೀತಿಯಲ್ಲಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾಗಿರುವ ಅಂಗ. (ಸ) ದ್ರವ ವಿಶೇಷಗಳನ್ನು ಸ್ರವಿಸುವ, ಸಸ್ಯದ ಮೈಮೇಲಿನ ಕೋಶ/ಕೋಶ ಸಮೂಹ

ಗ್ರಂಥಿಗಂತಿ

(ವೈ) ಇದೊಂದು ಸಾಮಾನ್ಯ, ಸೌಮ್ಯ ಸ್ವರೂಪದ ಗೆಡ್ಡೆ, ಗಂತಿ. ಇದು ಹೊರಪೊರೆಯ ಜೀವಕೋಶ ಗಳಿಂದ ಹುಟ್ಟುತ್ತದೆ. ಗಂತಿ ಜೀವಕೋಶಗಳು ಗ್ರಂಥಿ/ಗ್ರಂಥಿ ಯಂತಹ ರಚನೆಯನ್ನು ರೂಪಿಸುತ್ತವೆ. ಈ ಬೆಳವಣಿಗೆ ದುಂಡಗೆ ಇದ್ದು ಸುತ್ತಮುತ್ತಲಿನ ಊತಕದ ಮೇಲೆ ಒತ್ತಡವನ್ನು ಹಾಕುತ್ತದೆ. ಕ್ಯಾನ್ಸರ್ ಕೋಶಗಳ ಹಾಗೆ ಹರಡುವುದಿಲ್ಲ.

ಗ್ರಹ

(ಖ) ಯಾವುದೇ ನಕ್ಷತ್ರದ ಗುರುತ್ವ ಕ್ಷೇತ್ರದೊಳಗೆ ಆ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ನಕ್ಷತ್ರವಲ್ಲದ ಘನ ಕಾಯ. ಗುರುತ್ವಾಕರ್ಷಣ ನಿಯಮ ಪ್ರಕಾರ ಗ್ರಹದ ಕಕ್ಷೆ ಒಂದು ದೀರ್ಘವೃತ್ತ, ನಕ್ಷತ್ರದ ನೆಲೆ ಈ ದೀರ್ಘವೃತ್ತದ ನಾಭಿ. ಸೂರ್ಯ ಕುರಿತಂತೆ ಎಂಟು ಗ್ರಹಗಳಿವೆ. ಸೂರ್ಯನಿಂದ ಆರೋಹೀ ದೂರಾನುಸಾರ ಇವು: ಬುಧ, ಶುಕ್ರ, ಭೂಮಿ, ಕುಜ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್. ಪ್ರತಿಯೊಂದು ಗ್ರಹವೂ ಮಾತೃನಕ್ಷತ್ರದಿಂದ ತನ್ನ ಮೇಲೆ ಬೀಳುವ ವಿಕಿರಣವನ್ನು ಪ್ರತಿಫಲಿಸಿ ಬಾಹ್ಯಲೋಕಕ್ಕೆ ತನ್ನ ಅಸ್ತಿತ್ವವನ್ನು ಪ್ರಕಟಿಸುತ್ತದೆ

ಗ್ರಹಗತಿದರ್ಶಕ (ಒರ್ರೆರಿ)

(ಖ) ಸೌರವ್ಯೂಹದ ಯಾಂತ್ರಿಕ ಪ್ರತಿರೂಪ. ಇದರಲ್ಲಿ ಸೂರ್ಯನ ಸುತ್ತ ಗ್ರಹಗಳ ಚಲನೆ ಕಾಣಿಸಲು ಹಲ್ಲು ಚಕ್ರಗಳ (ಗಿಯರುಗಳ) ಬಳಕೆ ಉಂಟು. ೧೭೦೮ರಲ್ಲಿ ಮೊದಲ ಗ್ರಹಗತಿದರ್ಶಕ ಪ್ರದರ್ಶಿತವಾಯಿತು. ಚಾರ್ಲ್ಸ್ ಬಾಯ್ಲ್‌ರವರು ಅರ್ಲ್ ಆಗಿದ್ದ ಒರ್ರೆರಿ ನಗರದ ಹೆಸರನ್ನು ಈ ಸಾಧನಕ್ಕೆ ನೀಡಲಾಗಿದೆ

ಗ್ರಹಣ

(ಖ) ಚಂದ್ರಬಿಂಬವು ಸೂರ್ಯ-ಭೂಮಿ ರೇಖೆಗೆ ಬಂದಾಗ ಸೂರ್ಯಗ್ರಹಣವೂ, ಈ ರೇಖೆಯ ವಿಸ್ತರಣೆಗೆ ಬಂದಾಗ ಚಂದ್ರಗ್ರಹಣವೂ ಸಂಭವಿಸುತ್ತವೆ. ಸಾಮಾನ್ಯವಾಗಿ ಗ್ರಹಣ ಪದವನ್ನು ಈ ಎರಡು ಸಂದರ್ಭಗಳಲ್ಲಿ ಮಾತ್ರ ಬಳಸುತ್ತೇವೆ. ಸೂರ್ಯಗ್ರಹಣದಲ್ಲಿ ಚಂದ್ರನ ಅಪಾರಕ ಬಿಂಬ ಸೂರ್ಯನನ್ನು ನಮ್ಮಿಂದ ಮರೆಮಾಡುತ್ತದೆ. ಅಂದರೆ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಚಂದ್ರಗ್ರಹಣದಲ್ಲಿ ಭೂಮಿಯ ನೆರಳಿನೊಳಕ್ಕೆ ಚಂದ್ರ ಪ್ರವೇಶಿಸುತ್ತದೆ. ಮೇಲುನೋಟಕ್ಕೆ ಚಂದ್ರ ಸೂರ್ಯಬಿಂಬ ಗಳೆರಡೂ ಗ್ರಹ ನಕ್ಷತ್ರಗಳಿಗಿಂತ ಹೆಚ್ಚು ವಿಸ್ತಾರವಾಗಿರುವುದರಿಂದ ಈ ಘಟನೆಗಳು ಎದ್ದು ಕಾಣುತ್ತವೆ. ಭೂಮಿಗೂ ಸೂರ್ಯನಿಗೂ ನಡುವೆ ಯಾವುದೇ ಗ್ರಹ ಬರುವ ಘಟನೆಗೆ ಗ್ರಹ ಸಂಕ್ರಮವೆಂದು ಹೆಸರು. ಆಗ ಗ್ರಹದ ಕಪ್ಪು ಚುಕ್ಕೆ ಸೂರ್ಯ ಬಿಂಬದ ಮೇಲೆ ಸರಿದಂತೆ ಕಾಣುವುದು. ಭೂಮಿ ಮತ್ತು ಗ್ರಹ ನಡುವೆ ಇನ್ನೊಂದು ಗ್ರಹ ಬರುವ ಘಟನೆಯೂ ಗ್ರಹ ಸಂಕ್ರಮವೇ. ಭೂಮಿಗೂ ನಕ್ಷತ್ರಕ್ಕೂ ನಡುವೆ ಗ್ರಹವಾಗಲೀ ಸೂರ್ಯನಾಗಲೀ ಬರುವ ಘಟನೆಗೆ ನಕ್ಷತ್ರ ಗ್ರಹಣವೆಂದು ಹೆಸರು. ಖಗ್ರಾಸ: ಆಕಾಶದಲ್ಲೇ ಗ್ರಹಣದ ಆರಂಭ ಮತ್ತು ಅಂತ್ಯ. ಗ್ರಸ್ತೋದಯ: ಗ್ರಹಣಯುಕ್ತ ಸೂರ್ಯ ಅಥವಾ ಚಂದ್ರಬಿಂಬದ ಮೂಡುವಿಕೆ. ಗ್ರಸ್ತಾಸ್ತ : ಗ್ರಹಣಯುಕ್ತ ಸೂರ್ಯ / ಚಂದ್ರಬಿಂಬದ ಮುಳುಗುವಿಕೆ

ಗ್ರಹಣಕಾರಕ ಯಮಳ ತಾರೆಗಳು

(ಖ) ಯಮಳ ತಾರೆಗಳು ಒಂದು ಇನ್ನೊಂದರ ಸುತ್ತ ಪರಿಭ್ರಮಿಸು ತ್ತಿರುವಾಗ ಅವು ಭೂಮಿ ಜೊತೆ ಏಕರೇಖಾಸ್ಥವಾದರೆ ಆಗ ಒಂದು ಇನ್ನೊಂದನ್ನು ಮರೆಮಾಡುತ್ತದೆ – ಗ್ರಹಣ ಸನ್ನಿವೇಶ

ಗ್ರಹಣಮೋಕ್ಷ

(ಖ) ಸೂರ್ಯಗ್ರಹಣದಲ್ಲಿ ಚಂದ್ರನ ನೆರಳಿನಿಂದ ಭೂಮಿಯೂ ಚಂದ್ರಗ್ರಹಣದಲ್ಲಿ ಭೂಮಿಯ ನೆರಳಿನಿಂದ ಚಂದ್ರನೂ ಪೂರ್ತಿ ಹೊರಬರುವುದು

ಗ್ರಹಣಸಾಮರ್ಥ್ಯಯುತ

(ಸ) ಪರಿಣಾಮಕಾರಿಯಾಗಿ ಪರಾಗಸ್ಪರ್ಶಗೊಳ್ಳುವ ಅಥವಾ ಫಲೀಕರಿಸುವ ಸಾಮರ್ಥ್ಯವುಳ್ಳ

ಗ್ರಹಣಾಂಗ

(ಪ್ರಾ) ಸಾಧಾರಣವಾಗಿ ಕೀಟ ಮುಂತಾದ ಪ್ರಾಣಿಗಳ ದೇಹದ ಮುಂಭಾಗದಲ್ಲಿರುವ ನೀಳ, ತೆಳು ಮತ್ತು ನಮ್ಯ ಅಂಗ ಭಾಗ. ರುಚಿ, ವಾಸನೆ, ಉಷ್ಣತೆ, ಚಲನೆ ಮುಂತಾದವನ್ನು ಗ್ರಹಿಸಲು ಸಹಕಾರಿ

ಗ್ರಹಾತ್ಮಕ ನೀಹಾರಿಕೆ

(ಖ) ಕೆಂಪು ದೈತ್ಯ ನಕ್ಷತ್ರದ ಅವಸಾನ ಘಟ್ಟದಲ್ಲಿ ಅದು ಎರಡು ನಿರ್ದಿಷ್ಟ ಭಾಗಗಳಾಗಿ ಬೇರ್ಪಟ್ಟಿರುತ್ತದೆ; ತಿರುಳಿನಲ್ಲಿ ಕಾರ್ಬನ್ ನಕ್ಷತ್ರ. ಇದನ್ನು ಸುತ್ತುವರಿದು ಕ್ರಮೇಣ ಲಂಬಿಸುತ್ತಿರುವ ಹೈಡ್ರೊಜನ್ -ಹೀಲಿಯಮ್ ಅನಿಲ ಕವಚ. ತಿರುಳಿನಲ್ಲಿರುವ ತಾರೆಯಿಂದ ಈ ಅನಿಲ ಕವಚದ ಮೇಲೆ ಬೀಳುವ ವಿಕಿರಣ ಅದಕ್ಕೆ ಮಂದ ಮಿನುಗನ್ನು ನೀಡುತ್ತದೆ. ಭೂಮಿಗೆ ಕಾಣುವಂತೆ ಈ ದೃಶ್ಯ ತುಸು ವಿಚಿತ್ರವಾಗಿರುವುದು: ಕೇಂದ್ರದಲ್ಲಿ ಒಂದು ತಾರೆಯಿದೆಯೋ ಇದನ್ನು ಸುತ್ತುವರಿದು ಒಂದು ಗ್ರಹವಲಯ ಇದೆಯೋ ಎಂಬಂತೆ. ಎಂದೇ ಗ್ರಹಾತ್ಮಕ ನೀಹಾರಿಕೆ ಎಂದು ಹೆಸರು. ನಿಜಕ್ಕೂ ಇಲ್ಲಿ ಯಾವ ಗ್ರಹವೂ ಇಲ್ಲ

ಗ್ರಹಾಭ

(ಖ) ನೋಡಿ : ಕ್ಷುದ್ರ ಗ್ರಹಗಳು

ಗ್ರಹಿಕೆ

(ಮವೈ) ಅರಿಯುವ, ಸಂವೇದಿಸುವ, ಬೌದ್ಧಿಕ ವಾಗಿ ಕಲ್ಪಿಸಿಕೊಳ್ಳುವ ಶಕ್ತಿ. ಗ್ರಹಣ ಸಾಮರ್ಥ್ಯ. ಅರಿಯುವಿಕೆ

ಗ್ರಹಿಕೆ

(ಸಾ) ನಾನಾ ಜ್ಞಾನೇಂದ್ರಿಯ ವ್ಯೂಹಗಳ ಕ್ರಿಯೆಯ ಮೂಲಕ ವ್ಯಕ್ತಿ ಜಗತ್ತಿನ ಬಗೆಗೂ ತನ್ನ ಶರೀರದ ಬಗೆಗೂ ತಿಳಿವಳಿಕೆ ಪಡೆಯುವುದು

ಗ್ರಾನೈಟ್

(ಭೂವಿ) ಭೂಮಿಯ ಒಳಗೆ ಅತಿ ಉಷ್ಣದ ಫಲವಾಗಿ ರೂಪುಗೊಂಡ, ಹರಳು ಹರಳಾದ, ಅರ್ಥೊಕ್ಲೇಸ್, ಪ್ಲೇಜಿಯೊಕ್ಲೇಸ್, ಕ್ವಾರ್ಟ್ಸ್, ಹಾರ್ನ್‌ಬ್ಲೆಂಡ್ ಮತ್ತು ಬಯೊಟೈಟ್ ಖನಿಜಗಳಿಂದ ಕೂಡಿದ, ಸಾಮಾನ್ಯವಾಗಿ ಎಲ್ಲೆಲ್ಲೂ ದೊರೆಯುವ ಬೂದು ಅಥವಾ ಕೆಂಪು ಛಾಯೆಯ ಅಗ್ನಿಶಿಲೆ. ಕಟ್ಟಡಕ್ಕಾಗಿ ಹಾಗೂ ಅಲಂಕಾರ ಶಿಲೆಯಾಗಿ ಬಳಕೆ

ಗ್ರಾಫಿಕ್ಸ್

(ತಂ) ಮೂರು ಆಯಾಮಗಳ ವಸ್ತುವಿನ ನಕ್ಷೆಯನ್ನು ಎರಡು ಆಯಾಮಗಳ ಮೇಲ್ಮೈ ಮೇಲೆ ಗಣಿತಶಾಸ್ತ್ರ ಪ್ರಕ್ಷೇಪನ ನಿಯಮಗಳಿಗನುಗುಣವಾಗಿ ಚಿತ್ರಿಸುವ ಕಲೆ. (ಕಂ) ಕಂಪ್ಯೂಟರ್ ಮೂಲಕ ವಿಶೇಷ ರೀತಿಯ ರೇಖಾಚಿತ್ರಣ

ಗ್ರಾಫ್ ಸಿದ್ಧಾಂತ

(ಗ) ಗ್ರಾಫ್‌ಗಳ ಹಾಗೂ ಜಾಲಬಂಧಗಳ ರಚನೆಯ ಗಣಿತಶಾಸ್ತ್ರೀಯ ಅಧ್ಯಯನ

ಗ್ರಾಮೊಫೋನ್

(ತಂ) ಗಟ್ಟಿ ರಬ್ಬರಿನ ಬಿಲ್ಲೆ ಅಥವಾ ಬೇಕಲೈಟ್ ತಟ್ಟೆ ಮೇಲೆ ದಾಖಲಾದ ಸಂಗೀತ, ಭಾಷಣ ಮೊದಲಾದವು ಗಳ ಧ್ವನಿ ಸಂಕೇತಗಳಿಂದ ಧ್ವನಿ ಯನ್ನು ಪುನರಾವೃತ್ತಿ ಮಾಡುವ ಉಪಕರಣ. ಇದರಲ್ಲಿ ಇರುವ ಸ್ಟೈಲಸ್ (ಮುಳ್ಳು) ಸುತ್ತುತ್ತಿರುವ ತಟ್ಟೆ ಮೇಲಿನ ಧ್ವನಿ ಪಥದ ಸಂಪರ್ಕ ಪಡೆದಾಗ ಅಲ್ಲಿ ದಾಖಲೆ ಆಗಿದ್ದ ಧ್ವನಿ ಪುನರಾವೃತ್ತಿಗೊಳ್ಳುತ್ತದೆ. ಫೋನೊಗ್ರಾಫ್. ಇದರ ಆವಿಷ್ಕರ್ತೃ ಮಾರ್ಕೊನಿ (೧೮೭೪-೧೯೩೭)

ಗ್ರಾಮ್ ಅಣು

(ರ) ಯಾವುದೇ ಸಂಯುಕ್ತ ಅಥವಾ ಧಾತುವಿನ ಅಣುತೂಕ ಎಷ್ಟೋ ಅಷ್ಟು ಗ್ರಾಮ್ ತೂಗುವಷ್ಟು ಆ ಪದಾರ್ಥ. ಇದೇ ಅದರ ಗ್ರಾಮ್ ಅಣು ತೂಕ ಕೂಡ

ಗ್ರಾಮ್ ಸಮಾನ ತೂಕ

(ರ) ಯಾವುದೇ ಧಾತು ಅಥವಾ ಸಂಯುಕ್ತದ ರಾಸಾಯನಿಕ ಸಮಾನ ತೂಕ ಎಷ್ಟೋ ಅಷ್ಟು ಗ್ರಾಮ್‌ಗಳಲ್ಲಿ ಪದಾರ್ಥದ ಪ್ರಮಾಣ

ಗ್ರಾವಿಟಾನ್

(ಭೌ) ಗುರುತ್ವಾಕರ್ಷಕ ಅಂತರಕ್ರಿಯೆ ಯಲ್ಲಿ ವಿನಿಮಯಗೊಳ್ಳುವುದೆಂದು ಭಾವಿಸಲಾದ ಒಂದು ಊಹಾತ್ಮಕ ಕಣ ಇಲ್ಲವೇ ಶಕ್ತಿ ಪರಿಮಾಣ. ಇನ್ನೂ ಆವಿಷ್ಕರಿಸ ಲಾಗಿಲ್ಲ. ಇದು ಅಸ್ತಿತ್ವದಲ್ಲಿದ್ದುದೇ ಆದಲ್ಲಿ ಅದರ ರಾಶಿ ಹಾಗೂ ಆವೇಶಗಳು ಶೂನ್ಯ ಮತ್ತು ಗಿರಕಿ ೨ ಎಂದು ಭಾವಿಸಲಾಗಿದೆ

Search Dictionaries

Loading Results

Follow Us :   
  Download Bharatavani App
  Bharatavani Windows App