भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗ್ಯಾನಿಸ್ಟರ್

(ಭೂವಿ) ಕಲ್ಲಿದ್ದಲ ಗಣಿಗಳ ಬಳಿ ದೊರೆಯುವ ಒಂದು ಬಗೆಯ ಶಿಲೆ. ಜೇಡಿಮಣ್ಣು ಹಾಗೂ sio2ಗಳ ಶುದ್ಧ ಮಿಶ್ರಣದಿಂದ ರಚಿತವಾದುದು. ಕುಲುಮೆಗಳ ಅಸ್ತರಿಗಾಗಿ, ಸಿಲಿಕ ಇಟ್ಟಿಗೆಗಳನ್ನು ಮಾಡಲು ಬಳಕೆ

ಗ್ಯಾಬ್ರೊ

(ಭೂವಿ) ಒಂದು ರೀತಿಯ ಒರಟು ಕಣದ ಅಗ್ನಿಶಿಲೆ. ಪ್ರಧಾನವಾಗಿ ಪ್ಲೇಜಿಯ್ಲೊಕ್ಷೇಸನ್ನು, ಆಂಫಿಬೋಲನ್ನು ಕೆಲವು ವೇಳೆ ಆಲಿವಿನನ್ನು ಕೂಡ ಒಳಗೊಂಡಿರುತ್ತದೆ

ಗ್ಯಾಮ ಕಿರಣಗಳು

(ಭೌ) ನೋಡಿ : ಗ್ಯಾಮ ವಿಕಿರಣ. ವೈದ್ಯಕೀಯದಲ್ಲಿ ಗ್ಯಾಮ ಕಿರಣಗಳನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೆ

ಗ್ಯಾಮ ಕ್ಷಯ

(ಭೌ) ನ್ಯೂಕ್ಲಿಯಸ್‌ನ ಎರಡು ಶಕ್ತಿ ಮಟ್ಟಗಳ ನಡುವಿನ ಕ್ವಾಂಟಮ್ (ಅವಿಚ್ಛಿನ್ನವಲ್ಲದ) ಸ್ಥಿತ್ಯಂತರ. ಈ ಸಂದರ್ಭದಲ್ಲಿ ಗ್ಯಾಮ ಕಿರಣದ ವಿಸರ್ಜನೆಯಾಗುತ್ತದೆ. ಇದನ್ನು ಗ್ಯಾಮ ಕ್ಷಯ ಎನ್ನುತ್ತಾರೆ. ನೋಡಿ : ಗ್ಯಾಮ ವಿಕಿರಣ

ಗ್ಯಾಮ ಫಲನ

(ಗ) (x) = 0 tx-1 e-t dt dd(1) = 1, (((x+1) = x (((x), (((n) = (n-1)! n n ಯಾವುದೇ ಧನ ಪೂರ್ಣಾಂಕ

ಗ್ಯಾಮ ವಿಕಿರಣ

(ಭೌ) ಬೈಜಿಕ ಕ್ರಿಯೆಗಳ ಅನಂತರ, ಅಥವಾ ಆಲ್ಫ ಇಲ್ಲವೇ ಬೀಟಾ ಕಣಗಳ ವಿಸರ್ಜನೆಯಾದ ಬಳಿಕ, ವಿಕಿರಣಪಟು ಪರಮಾಣುವಿನ ನ್ಯೂಕ್ಲಿಯಸ್ಸು ಅಧಿಕ ಶಕ್ತಿಮಟ್ಟದ ಉದ್ರೇಚಿತ ಸ್ಥಿತಿಯಿಂದ ಕೆಳಗಿನ ಮಟ್ಟಕ್ಕೆ ಜಿಗಿಯುವಾಗ ಹೊರಸೂಸುವ ಉನ್ನತ ಶಕ್ತಿಯ (ಫೋಟಾನ್‌ಗಳ) ವಿದ್ಯುತ್ಕಾಂತ ವಿಕಿರಣ. ಇದನ್ನು ಗ್ಯಾಮಕಿರಣ ಎಂದೂ ಕರೆಯುತ್ತಾರೆ. ಈ ಕಿರಣದ ಅಲೆಯುದ್ದ ಎಕ್ಸ್-ಕಿರಣದ್ದಕ್ಕಿಂತ ಹ್ರಸ್ವ

ಗ್ಯಾಮೊಜೆನಿಸಿಸ್

(ಜೀ) ಗಂಡು ಹಾಗೂ ಹೆಣ್ಣಿನ ಪ್ರಜನನ ಕೋಶಗಳ ಸಂಯೋಗದಿಂದ ಸಂತಾನೋತ್ಪತ್ತಿ. ಹೆಣ್ಣು ಮತ್ತು ಗಂಡುಗಳು ಒದಗಿಸುವ ಗಮೀಟುಗಳ ಮಿಲನದಿಂದ ಸಂತಾನೋತ್ಪತ್ತಿಯಾಗುವ ವಿಧಾನ

ಗ್ಯಾಲಕ್ಟೋಸ್

(ರ) C6H12O6 ಹೆಕ್ಸೋಸ್ ಸಕ್ಕರೆ. ದ್ರಬಿಂ ೧೬೬0ಸೆ. ಲ್ಯಾಕ್ಟೋಸ್‌ನ ಹಾಗೂ ಕೆಲವು ಸಸ್ಯ ಪಾಲಿಸ್ಯಾಕರೈಡ್‌ಗಳ ಒಂದು ಘಟಕ. ಹಾಲು-ಸಕ್ಕರೆಯನ್ನು ಸಾರರಿಕ್ತ ಆಮ್ಲಗಳೊಂದಿಗೆ ಜಲವಿಭಜನೆಗೆ ಒಳಪಡಿಸಿದಾಗ ಇದು ಡಿ-ಗ್ಲೂಕೋಸ್‌ನೊಂದಿಗೆ ರೂಪುಗೊಳ್ಳುತ್ತದೆ

ಗ್ಯಾಲನ್

(ಸಾ) ದ್ರವದ ಅಳತೆಯ ಏಕಮಾನ. ೧ ಗ್ಯಾಲನ್ = ೩.೭೯ ಲೀಟರ್

ಗ್ಯಾಲಪ್ ಜನಮತ ಗಣನೆ

(ಸಾ) ಪ್ರಚಲಿತ ಸಮಸ್ಯೆ ಯೊಂದನ್ನು (ಉದಾ: ಸಾರ್ವತ್ರಿಕ ಚುನಾವಣೆ) ಕುರಿತು ಜನಾಭಿಪ್ರಾಯವನ್ನು ಶಾಸ್ತ್ರೀಯವಾಗಿ ಸಂಗ್ರಹಿಸಿ ವಿಶ್ಲೇಷಿಸಿ ಅಭ್ಯಸಿಸಿ ಭವಿಷ್ಯ ನುಡಿಯುವ ಪ್ರಕ್ರಮ

ಗ್ಯಾಲರಿ

(ಸಾ) ಉದ್ದನೆಯ ಕಿರು ಹಾದಿ/ಓಣಿ. ಸಭಾಂಗಣದಲ್ಲಿ ಅತ್ಯಂತ ಮೇಲ್ಭಾಗದಲ್ಲಿಯ ಕೈಸಾಲೆ

ಗ್ಯಾಲಿಕ್ ಆಮ್ಲ

(ರ) C7H6O5 ಟ್ರೈಹೈಡ್ರಾಕ್ಸಿ ಬೆನ್ಸೋಯಿಕ್ ಆಮ್ಲ. ಪರಿಶುದ್ಧ ಮೆಥನಾಲ್ ಅಥವಾ ಕ್ಲೋರೊಫಾರಮ್ ದ್ರಾವಣಗಳಿಂದ ಸೂಜಿಗಳಂತೆ ರೂಪುಗೊಳ್ಳುವ ಸ್ಫಟಿಕೀಯ ಸಂಯುಕ್ತ. ನೀರು, ಆಲ್ಕಹಾಲ್ ಹಾಗೂ ಈಥರ್‌ಗಳಲ್ಲಿ ವಿಲೇಯ. ಕರಟಕಾಯಿ ತೊಗಟೆಗಳಿಂದ ಇಲ್ಲವೇ ಪೆನಿಸಿಲಿಯಮ್ ನೋಟೇಟಮ್ ಕಿಣ್ವನದಿಂದ ಲಭ್ಯ. ಉತ್ಕರ್ಷಣವಿರೋಧಿಗಳನ್ನು ಮತ್ತು ಮಸಿ (ಶಾಯಿ) ಬಣ್ಣಗಳನ್ನು ತಯಾರಿಸಲೂ ಛಾಯಾಚಿತ್ರಣದಲ್ಲೂ ಬಳಕೆ

ಗ್ಯಾಲಿಯಮ್

(ರ) ನೀಲಿ ಛಾಯೆಯ ಬಿಳುಪು ಬಣ್ಣದ ಮೃದು ಲೋಹ ಧಾತು. ಪ್ರತೀಕ ga ಪಸಂ ೩೧, ದ್ರಬಿಂ ೨೯.೭೮0ಸೆ ಕುಬಿಂ ೨೦೦೦0ಸೆ ಸಾಪತೂ ೬೯.೭೨.ಬೆಸುಗೆ ಮಿಶ್ರಲೋಹಗಳಲ್ಲೂ ಉನ್ನತ ತಾಪ ಗುರ್ತಿಸಲೂ ಉಷ್ಣತಾಮಾಪಕದಲ್ಲಿ ಬಳಕೆ. ಗ್ಯಾಲಿಯಮ್ ಆರ್ಸನೈಡ್ ಮುಖ್ಯ ಅರೆವಾಹಕ

ಗ್ಯಾಲ್ವನೀಕರಿಸು

(ತಂ) ಬಿಸಿಯಾದ ಸತುವಿನ ದ್ರಾವಣದಲ್ಲಿ ಅದ್ದುವ ಮೂಲಕ ಇಲ್ಲವೇ ವಿದ್ಯುಲ್ಲೇಪನದ ಮೂಲಕ ಸತುವನ್ನು ಯಾವುದೇ ಲೋಹದ ಮೇಲ್ಮೈ ಮೇಲೆ ನಿಕ್ಷೇಪಿಸು. ವಿದ್ಯುಲ್ಲೇಪಿಸು. (ವೈ) ವೈದ್ಯಕೀಯ ಉದ್ದೇಶಗಳಿಗಾಗಿ ಶರೀರದ ಭಾಗಗಳ ಮೂಲಕ ವಿದ್ಯುತ್ತನ್ನು ಹರಿಸು

ಗ್ಯಾಲ್ವನೀಕೃತ ಕಬ್ಬಿಣ

(ತಂ) ಸತುವುಲೇಪಿತ ಕಬ್ಬಿಣ. ಸಾಮಾನ್ಯವಾಗಿ ತುಕ್ಕು ಹಿಡಿಯದಂತೆ ಮಾಡಲು ಕಬ್ಬಿಣದ ಮೇಲೆ ಸತುವನ್ನು ಲೇಪಿಸಲಾಗುತ್ತದೆ

ಗ್ಯಾಲ್ವನೋಮೀಟರ್

(ಭೌ) ಚಲಿಸುವ ಕಾಂತಸೂಚಿ ಅಥವಾ ಸುರುಳಿಯ ಸಹಾಯದಿಂದ ಅಲ್ಪ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಗುರುತಿಸುವ/ಅಳೆಯುವ ಉಪಕರಣ. ಇದರಲ್ಲಿ ಶಾಶ್ವತ ಕಾಂತವೊಂದು ಇರುತ್ತದೆ. ಅದರ ಧ್ರುವಗಳ ನಡುವೆ ಚಲಿಸುವ ಒಂದು ಮೃದು ಕಬ್ಬಿಣದ ಸುರುಳಿ ಇರುತ್ತದೆ. ಈ ಸುರುಳಿಯು ನವುರಾದ ವಿದ್ಯುನ್ನಿರೋಧಕ ತಾಮ್ರದ ತಂತಿಯಿಂದ ಆವೃತ ವಾಗಿರುತ್ತದೆ. ಈ ಸುರುಳಿಯ ಮೂಲಕ ವಿದ್ಯುತ್ ಹರಿಸಿದಾಗ ಅದರ ಪಕ್ಕಗಳಲ್ಲಿ ಉಂಟಾಗುವ ಕಾಂತಕ್ಷೇತ್ರ ಹಾಗೂ ಶಾಶ್ವತ ಕಾಂತದ ಕಾಂತಕ್ಷೇತ್ರ ಇವುಗಳ ನಡುವಿನ ಅಂತರಕ್ರಿಯೆಯು ಸುರಳಿಯ ಮೇಲೆ ಒಂದು ಟಾರ್ಕ್ (ಭ್ರಾಮಕ)ಅನ್ನು ಸೃಜಿಸುತ್ತದೆ. ಚಲಿಸುವ ಸುರುಳಿಯಲ್ಲಿ ಇರುವ ಸೂಚಕ ಅಥವಾ ಕನ್ನಡಿಯು ತೋರುವ ಬೆಳಕಿನ ಕಿರಣಾವಳಿಯ ವಿಚಲನೆ ಪ್ರಮಾಣವು ಸುರುಳಿ ಮೂಲಕ ಹರಿದ ವಿದ್ಯುತ್ ಪ್ರವಾಹದ ಶಕ್ತಿಯನ್ನು ಸೂಚಿಸುತ್ತದೆ. ಗ್ಯಾಲ್ವನೋಮೀಟರನ್ನು ಆಮ್ಮೀಟರ್/ವೋಲ್ಟ್ ಮೀಟರನ್ನಾಗಿ ಪರಿವರ್ತಿಸಬಹುದು. ಈಚೆಗೆ, ಚಲಿಸುವ ಸುರುಳಿಯ ಮಾದರಿಯ ಬದಲು ಡಿಜಿಟಲ್ ಎಲೆಕ್ಟ್ರಾನಿಕ್ ಉಪಕರಣಗಳು ಹೆಚ್ಚುಹೆಚ್ಚಾಗಿ ಬಳಕೆಗೆ ಬರುತ್ತಿವೆ. ನೋಡಿ: ಉತ್‌ಕ್ಷೇಪಿತ ಗ್ಯಾಲ್ವನೋಮೀಟರ್

ಗ್ಯಾಸೊಲೀನ್

(ರ) ಅಂತರ್ದಹನ ಎಂಜಿನ್‌ಗಳಲ್ಲಿ ಬಳಸುವ ಇಂಧನ. ಸಾರಭೂತವಾಗಿ ಹೈಡ್ರೊಕಾರ್ಬನ್‌ಗಳ ಚಂಚಲ ದಹ್ಯ ದ್ರವದಿಂದ ಕೂಡಿರುತ್ತದೆ. ಕಚ್ಚಾ ಪೆಟ್ರೋಲಿಯಮ್‌ನ ಆಂಶಿಕ ಆಸವನದಿಂದ ಪಡೆಯಲಾಗುತ್ತದೆ. ಇದನ್ನು ಪೆಟ್ರೋಲ್ ಎಂದೂ ಕರೆಯುತ್ತಾರೆ. ನೋಡಿ : ಪೆಟ್ರೋಲ್

ಗ್ಯಾಸ್ಟ್ರಿನ್

(ರ) ಜಠರದ ಲೋಳೆಪೊರೆಯಲ್ಲಿನ ವಿಶೇಷ ಕೋಶಗಳು ಸ್ರವಿಸುವ ಪಾಲಿಪೆಪ್ಟೈಡ್ ಹಾರ್ಮೋನ್. ಇದು ಆಮ್ಲವನ್ನೂ ಪೆಪ್ಸಿನ್ ಕಿಣ್ವವನ್ನೂ ಸ್ರವಿಸುವ ಇತರ ಕೋಶಗಳಿಗೆ ಉತ್ತೇಜನ ನೀಡುತ್ತದೆ

ಗ್ಯಾಸ್ಟ್ರುಲ

(ಪ್ರಾ) ಭ್ರೂಣದ ಅಭಿವರ್ಧನೆಯಲ್ಲಿ ಬ್ಲಾಸ್ಟುಲಾ ನಂತರದ ಹಂತ

ಗ್ರಂಥಸ್ವಾಮ್ಯ

(ಸಾ) ಕೃತಿಸ್ವಾಮ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App