भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗೋಸುಂಬೆ

(ಪ್ರಾ) ಉರಗವರ್ಗ ಸ್ಕ್ವಮಾಟ ಗಣ ಕೆಮಿಲಿಯಾನಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ. ನಾಲಗೆಯನ್ನು ಉದ್ದವಾಗಿ ಚಾಚಬಲ್ಲ, ಬಾಲವನ್ನು ಮರದ ರೆಂಬೆಗೆ ಸುತ್ತಿ ಹಿಡಿದುಕೊಂಡಿರಬಲ್ಲ, ವಾತಾವರಣಕ್ಕೆ ಅನುಸಾರವಾಗಿ ಮೈ ಬಣ್ಣವನ್ನು ಬದಲಾಯಿಸಿ ಕೊಳ್ಳಬಲ್ಲ ಮತ್ತು ದೀರ್ಘ ಕಾಲ ಆಹಾರ ಸೇವನೆ ಇಲ್ಲದೆಯೇ ಬದುಕಿರಬಲ್ಲ ಒಂದು ಬಗೆಯ ಗೌಳಿ. ಊಸರವಳ್ಳಿ

ಗೋಳ

(ಗ) ಯೂಕ್ಲೀಡಿಯನ್ ಆಕಾಶದಲ್ಲಿ ಸ್ಥಿರಬಿಂದು ಒಂದರಿಂದ ನಿಯತ ಅಂತರದಲ್ಲಿರುವ ಸಮಸ್ತ ಬಿಂದುಗಳೂ ರೂಪಿಸುವ ವಕ್ರತಲ. ಸ್ಥಿರಬಿಂದುವಿಗೆ ಗೋಳಕೇಂದ್ರವೆಂದೂ ನಿಯತ ಅಂತರಕ್ಕೆ ಗೋಳತ್ರಿಜ್ಯವೆಂದೂ ಹೆಸರು. ತ್ರಿಜ್ಯ r ಆಗಿರುವ ಗೋಳದ ಗಾತ್ರ ೩/೪೪r3 ಮತ್ತು ಮೇಲ್ಮೈ ಸಲೆ 44r2

ಗೋಳ

(ಭೂ) ಗೋಳಾಕಾರದ ಕಾಯ. ಉದಾ: ಭೂಮಿ. ಮೇಲ್ಮೈ ಮೇಲೆ ಅಕ್ಷಾಂಶ ರೇಖಾಂಶ ನಮೂದಿಸಿದ ಜಗತ್ತಿನ ಭೂಪಟವಿರುವ ಮಂಡಲ. ಭೂಮಂಡಲ

ಗೋಳಕಗಳು

(ಖ) ಸಾಂದ್ರ, ಅಡಕ ದೂಳು ಮೋಡಗಳು

ಗೋಳಕಲ್ಪ

(ಗ) ದೀರ್ಘವೃತ್ತವನ್ನು ಇದರ ಪ್ರಧಾನ ಅಕ್ಷಗಳ ಪೈಕಿ ಒಂದರ ಸುತ್ತ ಆವರ್ತಿಸಿದಾಗ ದೊರೆಯುವ ಮೂರು ಆಯಾಮಗಳ ವಕ್ರ ತಲ. ಎಂದೇ ದೀರ್ಘ ವೃತ್ತ ಕಲ್ಪ. ಇದರಲ್ಲಿ ಮೂರು ಪ್ರಧಾನ ಅಕ್ಷಗಳ ಪೈಕಿ ಎರಡು ಪರಸ್ಪರ ಸಮ. ದೀರ್ಘವೃತ್ತದ ದೀರ್ಘಾಕ್ಷವನ್ನು ಆವರ್ತನ ಅಕ್ಷವಾಗಿ ಆಯ್ದಾಗ ದೊರೆಯುವ ತಲಕ್ಕೆ ದೀರ್ಘ ಗೋಳಕಲ್ಪ (ಉದಾ: ಮೊಟ್ಟೆ) ಎಂದೂ ಹ್ರಸ್ವಾಕ್ಷವನ್ನು ಆಯ್ದಾಗ ದೊರೆಯುವ ತಲಕ್ಕೆ ಹ್ರಸ್ವ ಗೋಳಕಲ್ಪ (ಉದಾ : ಭೂಮಿ) ಎಂದೂ ಹೆಸರು. ಗೋಳಾಭ

ಗೋಳಮಾಪಕ

(ಗ) ಗೋಳೀಯ ತಲದ ವಕ್ರತೆ ಅಳೆಯಲು ಬಳಸುವ ಸಾಧನ

ಗೋಳಾಭ

(ಗ) ನೋಡಿ : ಗೋಳಕಲ್ಪ

ಗೋಳಾರ್ಧ

(ಗ) ಗೋಳಕೇಂದ್ರದ ಮೂಲಕ ಗೋಳದ ಸಮತಲ ಛೇದನ

ಗೋಳೀಯ ಗುಚ್ಛಗಳು

(ಖ) ಹಲವಾರು ನಕ್ಷತ್ರಗಳು ನಿಕಟವಾಗಿ ಬಂಧಿತವಾಗಿದ್ದುಕೊಂಡು ಪ್ರದರ್ಶಿಸುವ ಗೋಳಾಕೃತಿಗಳು. ಅತ್ಯಂತ ಪ್ರಾಚೀನ ನಕ್ಷತ್ರ ಸಮುದಾಯಗಳಿವು. ನೋಡಿ : ನಕ್ಷತ್ರ ಪುಂಜಗಳು

ಗೋಳೀಯ ತ್ರಿಕೋಣಮಿತಿ

(ಗ) ಗೋಳೀಯ ತ್ರಿಭುಜವನ್ನು ರಚಿಸುವ ಮಹಾವೃತ್ತದ ಕಂಸಗಳ ಉದ್ದಗಳಿಗೂ ಕಂಸ ತಲಗಳ ನಡುವಿನ ಕೋನಗಳಿಗೂ ನಡುವೆ ಸಂಬಂಧ ಏರ್ಪಡಿಸುವ ಗಣಿತ ವಿಭಾಗ

ಗೋಳೀಯ ತ್ರಿಭುಜ

(ಗ) ಗೋಳದ ಯಾವುವೇ ಮೂರು ಮಹಾವೃತ್ತಗಳು ರೂಪಿಸುವ ಮೂರು ಆಯಾಮಗಳ ತ್ರಿಭುಜ. ಇದರ ಭುಜಗಳೆಲ್ಲವೂ ವೃತ್ತ ಕಂಸಗಳು. ಇವು ಕೇಂದ್ರದಲ್ಲಿ ರಚಿಸುವ ಕೋನಗಳ ಅಳತೆಯಿಂದ ಗೋಳೀಯ ತ್ರಿಭುಜದ ವಿವಿಧ ಗುಣಗಳನ್ನು ನಿಗಮಿಸುವುದು ಸಾಧ್ಯ. ಚಿತ್ರದಲ್ಲಿ ತ್ರಿಭುಜವನ್ನು ದಪ್ಪ ರೇಖೆಗಳಿಂದ ಕಾಣಿಸಿದೆ

ಗೋಳೀಯ ವಿಪಥನ

(ಭೌ) ಒಂದೇ ಬಿಂದುವಿನಿಂದ ಹೊರಟ ಬೆಳಕಿನ ಕಿರಣಗಳು ಗೋಳ ದರ್ಪಣದ ಇಲ್ಲವೇ ಲೆನ್ಸಿನ ಮೇಲೆ ಬಿದ್ದು ಪ್ರತಿಫಲಿಸಿ ಇಲ್ಲವೇ ಬಾಗಿ ಏಕಕೇಂದ್ರಾಭಿಮುಖವಾಗಿ ಹೊರಟು ಒಂದೇ ಕೇಂದ್ರದಲ್ಲಿ ಸೇರದೆ ಅನೇಕ ಕೇಂದ್ರಗಳಲ್ಲಿ ಸೇರುವುದು

ಗೋಳೀಯತೆ

(ಭೂವಿ) ಪರಿಶೀಲನೆಯಲ್ಲಿರುವ ಕಾಯದ ಘನಗಾತ್ರದಷ್ಟೆ ಗಾತ್ರವಿರುವ ಗೋಳದ ಮೇಲ್ಮೈ ಸಲೆ (s) ಮತ್ತು ಕಾಯದ ವಾಸ್ತವ ಮೇಲ್ಮೈ ಸಲೆ (s) ಇವುಗಳ ನಡುವಿನ ನಿಷ್ಪತ್ತಿ, s:s

ಗೌಜಲು ಹಕ್ಕಿ

(ಪ್ರಾ) ಗ್ಯಾಲಿಫಾರ್ಮೀಸ್ ಗಣ, ಟಿಟ್ರಿವೋನಿಡಿ ಕುಟುಂಬ, ಫ್ರಾಂಕೊಲೈನಸ್ ಜಾತಿಯ ವನ್ಯಪಕ್ಷಿ. ಭಾರತದಾದ್ಯಂತ ಕಾಣ ಬರುತ್ತದೆ. ಭೂವಾಸಿ. ನೆಲದ ಮೇಲೆ ಚೆನ್ನಾಗಿ ಓಡುತ್ತದೆ. ಅಪಾಯ ಒದಗಿದಾಗ ಭರ್ರನೆ ಕೆಳಮಟ್ಟದಲ್ಲಿ ಸ್ವಲ್ಪ ದೂರ ಹಾರಿ ಮತ್ತೆ ನೆಲಕ್ಕಿಳಿದು ಪೊದೆಗಳಲ್ಲಿ ಅವಿತುಕೊಳ್ಳುತ್ತದೆ

ಗೌಸ್

(ಭೌ) ಕಾಂತೀಯ ಪ್ರೇರಣೆಯ ಸಿಜಿಎಸ್ ಏಕಮಾನ. ವಾಯುಮಾಧ್ಯಮದಲ್ಲಿ (ಕಾಂತವ್ಯಾಪ್ಯತೆ ೧) ಕಾಂತಕ್ಷೇತ್ರದ ತೀವ್ರತೆ ೧ ಆರ್ಸ್ಟೆಡ್ ಇರುವಾಗ ಕಾಂತೀಯ ಅಭಿವಾಹ ಸಾಂದ್ರತೆ ೧ ಗೌಸ್. ಚದರ ಸೆಂಮೀಗೆ ೧ ಮ್ಯಾಕ್ಸ್‌ವೆಲ್. ಕಾರ್ಲ್‌ಗೌಸ್ (೧೭೭೭-೧೮೫೫) ಗೌರವಾರ್ಥ ಈ ಹೆಸರು

ಗೌಳಿ

(ಪ್ರಾ) ನೋಡಿ : ಹಲ್ಲಿ

ಗ್ಯಾಂಗ್

(ಭೂವಿ) ಲೋಹವಿಲ್ಲದ ಅದಿರಿನ ಭಾಗ. ಲೋಹದ ಅದಿರಿನ ಎಳೆಯಲ್ಲಿ ಮೌಲ್ಯರಹಿತ ಖನಿಜಗಳು

ಗ್ಯಾಂಗ್ರೀನ್

(ವೈ) ದೇಹದ ಯಾವುದೇ ಭಾಗಕ್ಕೆ ರಕ್ತದ ಸರಬರಾಜು ನಿಂತುಹೋದಾಗ ಊತಕ ನಿರ್ಜೀವವಾಗುವುದು ಮತ್ತು ಸಾಮಾನ್ಯವಾಗಿ ಕೊಳೆತುಹೋಗುವುದು

ಗ್ಯಾಡೊಲೀನಿಯಮ್

(ರ) ವಿರಳ ಭಸ್ಮಧಾತು. ಪ್ರತೀಕ gd. ಪಸಂ ೬೪, ಪತೂ ೧೫೭.೨೫, ತ್ರಿವೇಲೆನ್ಸೀಯ. ನಿಮ್ನ ಉಷ್ಣತೆಗಳಲ್ಲಿ ಉನ್ನತ ಕಾಂತೀಯ ಸ್ವರೂಪದ್ದು

ಗ್ಯಾನಾಯ್ಡ್

(ಪ್ರಾ) ಗನಾಯಿಡೀ ಉಪವಂಶದ ಗಡಸು ನುಣುಪು ಮತ್ತು ಹೊಳೆವ ಶಲ್ಕಗಳಿರುವ ಮೀನು

Search Dictionaries

Loading Results

Follow Us :   
  Download Bharatavani App
  Bharatavani Windows App