भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗೆಣ್ಣು

(ಸ) ಕಾಂಡದಲ್ಲಿ ಎಲೆ, ಟಿಸಿಲು ಮುಂತಾದವು ಚಿಗುರುವ ನೆಲೆ. ಪರ್ವ

ಗೆಲಕ್ಸಿ

(ಖ) ನೋಡಿ : ಬ್ರಹ್ಮಾಂಡ

ಗೇಜು

(ತಂ) ರೈಲು ಮಾರ್ಗದ ಹಳಿಗಳ ನಡುವಣ ಅಂತರ. ಉದಾ : ಬ್ರಾಡ್ ಗೇಜು – ೧.೬೭೬ ಮೀ. ಮೀಟರ್ ಗೇಜು – ೧.೦೦ ಮೀ., ನ್ಯಾರೋ ಗೇಜು – ೦.೭೬೨ ಮೀ.

ಗೇಜ್ ಬೋಸಾನ್

(ಭೌ) ಎರಡು ಮೂಲಭೂತ ಕಣಗಳ ಪರಸ್ಪರ ಕ್ರಿಯೆಗೆ ಮಧ್ಯವರ್ತಿಯಾಗಿ ವರ್ತಿಸುವ ಒಂದು ವಿಧದ ಕಣ. ನಾಲ್ಕು ಮಾದರಿಗಳುಂಟು; ವಿದ್ಯುತ್ಕಾಂತೀಯ ಕ್ರಿಯೆಗೆ ಅನುವಾಗುವವು ಫೋಟಾನ್‌ಗಳು; ಪ್ರಬಲ ಕ್ರಿಯೆ ಪ್ರೇರಿಸುವವು ಗ್ಲುಆನ್‌ಗಳು; ದುರ್ಬಲ ಕ್ರಿಯೆಗೆ ನೆರವಾಗುವವು ಮಧ್ಯವರ್ತಿ ವೆಕ್ಟಾರ್ ಬೋಸಾನ್‌ಗಳು; ಗುರುತ್ವಕ್ರಿಯೆ ಪ್ರೇರಿಸುವವು ಗ್ರಾವಿಟಾನ್‌ಗಳು

ಗೊಂಚಲು ಹೂ

(ಸ) ಪ್ರಧಾನ ಕಾಂಡದ ತುದಿಯಲ್ಲಿ ಮೊದಲು ಒಂದು ಹೂ ಅರಳಿ ತರುವಾಯ ಉಪಕಾಂಡಗಳ ತುದಿ ಗಳಲ್ಲಿ ಒಂದೊಂದಾಗಿ ಹೂ ಅರಳುತ್ತ ಹೋಗುವ ಸಂಯುಕ್ತ ಪುಷ್ಪ

ಗೊಂಚಲು ಹೂವು

(ಸ) ನೋಡಿ : ತೂಗು ಮಂಜರಿ

ಗೊಂಡೆ

(ಸ) ಕಾಂಡದ ಮೇಲ್ತುದಿಯಲ್ಲಿರುವ ಎಲೆಗಳ ಅಥವಾ ಹೂಗಳ ಒತ್ತಾದ ಗುಂಪು. ಗುಚ್ಛ. ಗೊಂಚಲು

ಗೊಡ್ಡು

(ಸಾ) ಬಂಜೆ. ಬಂಜರು, ನಿಸ್ಸಾರ. ಫಲ ಬಿಡದ. ಬರಡು. (ಭೂವಿ) ಫಾಸಿಲ್‌ರಹಿತ

ಗೊದಮೊಟ್ಟೆ

(ಪ್ರಾ) ನೋಡಿ : ಚೋಂದ ಕಪ್ಪೆ

ಗೊನಿಡಿಯಮ್

(ಸ) ಗಮೀಟೊಫೈಟ್‌ನ (ಯುಗ್ಮಕ ಸಸ್ಯ) ಮೇಲೆ ಅಥವಾ ಒಳಗೆ ವಿಶೇಷಾಂಗವೊಂದರಲ್ಲಿ ಹುಟ್ಟಿ ಕೊಳ್ಳುವ ಅಲೈಂಗಿಕ ಜನನ ಕೋಶ/ಕೋಶವೃಂದ

ಗೊಬ್ಬರ

(ಸಾ) ಲಾಯಗಳಿಂದಲೂ ಬೇಸಾಯಗಾರರ ಹಟ್ಟಿಗಳಿಂದಲೂ ಕಸಕಡ್ಡಿಗಳೊಂದಿಗೆ ಅಥವಾ ಅವಿಲ್ಲದೆಯೇ ಸಂಗ್ರಹಿಸಿದ ಪ್ರಾಣಿಗಳ ಲದ್ದಿ, ಸಗಣಿ ಇತ್ಯಾದಿ. ಮಣ್ಣನ್ನು ಫಲವತ್ತು ಮಾಡಲು ಬೆರೆಸುತ್ತಾರೆ. ಹಸುರು ಎಲೆಗಳಿಂದ ವಿಶೇಷ ರೀತಿಯ ಗೊಬ್ಬರವನ್ನು ತಯಾರಿಸಲಾಗುತ್ತದೆ

ಗೊಬ್ಬರ ಅನಿಲ ಸ್ಥಾವರ

(ಸಾ) ಸಗಣಿ, ಲದ್ದಿ, ಗಂಜಳ ಮೊದಲಾದವನ್ನು ದೀರ್ಘಕಾಲ ಸಂಗ್ರಹಿಸಿ ಅವುಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುವ ಅನಿಲವನ್ನು ಹೊರಹರಿಸಲು ಅನುವಾಗುವಂತೆ ಏರ್ಪಡಿಸಿದ ನೆಲದಡಿಯ ಮುಚ್ಚಿದ ಗುಂಡಿ. ಹೀಗೆ ಬಂದ ಅನಿಲವನ್ನು ದೀಪ ಉರಿಸಲು ಇಲ್ಲವೇ ಅಡುಗೆಮನೆಯಲ್ಲಿ ಇಂಧನವಾಗಿ ಬಳಸಲಾಗುತ್ತದೆ ನೋಡಿ : ಗೋಬರ್ ಅನಿಲ

ಗೊರವಿ

(ಸ) ರೂಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮರ. ಇಕ್ಸೂರ ಆರ್ಬೋರಿಯ ವೈಜ್ಞಾನಿಕ ನಾಮ. ಭಾರತದಲ್ಲಿ ಹೇರಳವಾಗಿ ಬೆಳೆಯುತ್ತದೆ. ಹೂ, ಹಣ್ಣು, ತೊಗಟೆ ಮತ್ತು ಬೇರುಗಳಲ್ಲಿ ಔಷಧೀಯ ಗುಣಗಳುಂಟು. ಚೌಬೀನೆ ಯಾಗಿಯೂ ಉದ್ಯಾನಗಳಲ್ಲಿ ಅಲಂಕಾರ ಸಸ್ಯವಾಗಿಯೂ ಬಳಕೆ

ಗೊರಸು

(ಪ್ರಾ) ಕುದುರೆ ಮೊದಲಾದವುಗಳಂಥ ಖುರಯುಕ್ತ ಸ್ತನಿಗಳ ಕಾಲಡಿಯ ಪಾದಗಳಿಗಿರುವ ಕೊಂಬು ದ್ರವ್ಯದ ಹೊದಿಕೆ

ಗೊರಿಲ್ಲ

(ಪ್ರಾ) ಮ್ಯಾಮೇಲಿಯ ವರ್ಗ, ಪ್ರೈಮೇಟ್ ಗಣ, ಪಾಂಗಿಡೀ ಕುಟುಂಬಕ್ಕೆ ಸೇರಿದ ವನ್ಯವಾಸಿ ವಾನರ. ಇದರ ತವರು ಆಫ್ರಿಕ, ಗೊರಿಲ್ಲಗಳು ಚಿಂಪಾಂಜಿ ಹಾಗೂ ಒರಾಂಗೂಟಾನ್‌ಗಳಿಗೆ ಹತ್ತಿರ ಸಂಬಂಧಿ. ಲೋಲ್ಯಾಂಡ್ ಗೊರಿಲ್ಲ ಹಾಗೂ ಮೌಂಟನ್ ಗೊರಿಲ್ಲ ಎಂಬ ಎರಡು ಪ್ರಭೇದಗಳುಂಟು. ಅತ್ಯಂತ ದೊಡ್ಡ ವಾನರ. ಸಸ್ಯಾಹಾರಿ. ಕಾಡಿನಲ್ಲಿದ್ದಾಗ ನೀರನ್ನು ಕುಡಿಯುವುದಿಲ್ಲ. ಬಿಸಿಲು ಅಚ್ಚುಮೆಚ್ಚು. ಇವುಗಳ ಆಯಸ್ಸು ಸುಮಾರು ೩೬ ವರ್ಷ

ಗೊಸಾಲ್ರೈಟ್

(ಭೂವಿ) ಜಲಯೋಜಿತ ಸತುವಿನ ಸಲ್ಫೈಟ್‌ಉಳ್ಳ ಬಿಳಿ ಖನಿಜ ಸಂಯುಕ್ತ. ZnSO4.7H2O ಸೀಸದ ಗಣಿಗಳ ಗೋಡೆಗಳ ಮೂಲಕ ಒಸರುವ ನೀರಿನ ಅವಕ್ಷೇಪನ; ಸತುವಿನ ಸಲ್ಫೈಡ್ ರಾಸಾಯನಿಕವಾಗಿ ವಿಭಜನೆ ಗೊಳ್ಳುವುದರಿಂದ ರೂಪಿತವಾಗುತ್ತದೆ

ಗೋಚರ

(ಸಾ) ಕಣ್ಣಿಗೆ ಕಾಣುವ, ವ್ಯಕ್ತ. ಪ್ರತ್ಯಕ್ಷ. ತೋರ್ಕೆ. ಮೇಲುನೋಟಕ್ಕೆ ಭಾಸವಾಗುವ

ಗೋಚರ ಕ್ಷಿತಿಜ

(ಖ) ಭೂಮಿಯೂ ಆಕಾಶವೂ ಸಂಧಿಸುವಂತೆ ಭಾಸವಾಗುವ ರೇಖೆ ಮತ್ತು ಖಗೋಳದ ಮೇಲೆ ಇದರ ಪ್ರಕ್ಷೇಪ. ಹಾರಿಜ

ಗೋಚರ ರೋಹಿತ

(ಭೌ) ವಿದ್ಯುತ್ಕಾಂತ ರೋಹಿತದಲ್ಲಿ ಕೆಂಪಿನಿಂದ ನೇರಿಳೆವರೆಗಿನ ವ್ಯಾಪ್ತಿ. ಇದು ಕೆಂಪು (ರಕ್ತ) ಬಣ್ಣದ ದೀರ್ಘ ಅಲೆಯುದ್ದದಿಂದ ನೇರಿಳೆ ಬಣ್ಣದ ಹ್ರಸ್ವ ಅಲೆಯುದ್ದದವರೆಗೆ ಹಬ್ಬಿರುವ ಬೆಳಕು. ಕೆಂಪು ಬಣ್ಣದ ಅಲೆಯುದ್ದಕ್ಕಿಂತ ದೀರ್ಘತರ ಅಲೆಯುದ್ದದ ರೋಹಿತ ವ್ಯಾಪ್ತಿಗೆ ಅವಕೆಂಪು ವಿಭಾಗವೆಂದೂ ನೇರಿಳೆಯದಕ್ಕಿಂತ ಹ್ರಸ್ವತರ ವ್ಯಾಪ್ತಿಗೆ ಅತಿನೇರಿಳೆ ವಿಭಾಗವೆಂದೂ ಹೆಸರು. ಹೀಗೆ ವಿದ್ಯುತ್ಕಾಂತ ರೋಹಿತದಲ್ಲಿ ಅವಕೆಂಪು, ಗೋಚರ ಮತ್ತು ಅತಿನೇರಿಳೆ ವಿಭಾಗಗಳು ನಮ್ಮ ನೇತ್ರೇಂದ್ರಿಯದ ಸೀಮಿತಗಳ ಅನುಸಾರವಾಗಿ ಏರ್ಪಟ್ಟಿವೆ

ಗೋಚರತೆ

(ಸಾ) ಸಾಧಾರಣ ಗಾತ್ರದ ಕಪ್ಪು ವಸ್ತುವನ್ನು ಹಗಲ ಬೆಳಕಿನಲ್ಲಿ ಗುರುತು ಹಿಡಿಯಬಹುದಾದ ಗರಿಷ್ಠ ದೂರ

Search Dictionaries

Loading Results

Follow Us :   
  Download Bharatavani App
  Bharatavani Windows App