भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗುಹಾವಿಜ್ಞಾನ

(ಜೀ) ಗುಹೆಗಳಲ್ಲಿರುವ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಅಧ್ಯಯನ

ಗುಹೆ

(ಭೂವಿ) ಶಿಲಾಸಮೂಹದಲ್ಲಿ ಕಂಡುಬರುವ ದೊಡ್ಡದಾದ ಎಡ್ಡತಿಡ್ಡ ಪೊಟರೆ. ತೆರೆದುಕೊಂಡಿರಬಹುದು. ನೆಲದಾಳದಲ್ಲಿ ಹುದುಗಿಕೊಂಡೂ ಇರಬಹುದು. ಗವಿ. ಬಿಲ

ಗುಹ್ಯ ರೋಗಗಳು

(ವೈ) ಲೈಂಗಿಕ ಸಂಪರ್ಕದಲ್ಲಿ ತೊಡಗಿರುವ ಯಾರಾದರೊಬ್ಬರಲ್ಲಿರುವ ರೋಗ ಇನ್ನೊಬ್ಬರಿಗೆ ಹರಡುವಂತಹುದು. ಉದಾ: ಗಾನೋರಿಯ, ಸಿಫಲಿಸ್, ಏಡ್ಸ್ ಮುಂತಾದವು

ಗುಳಿದಸಿ

(ತಂ) ಬಿತ್ತನೆಗುಳಿ ಮೊದಲಾದವನ್ನು ತೋಡುವ ಸಣ್ಣ ಸಾಧನ

ಗುಳ್ಳೆ

(ಸ) ಎಲೆ, ಕಾಂಡ, ಹಣ್ಣು ಇತ್ಯಾದಿಗಳ ಮೇಲೆ ಉಂಟಾದ ಹೊಪ್ಪಳೆ ಅಥವಾ ಗಂತಿ. ಈ ಭಾಗದಿಂದ ಬೂಷ್ಟಿನಂಥ ರಚನೆ ಹೊರಹೊಮ್ಮುತ್ತದೆ

ಗುಳ್ಳೆನರಿ

(ಪ್ರಾ) ಕಾರ್ನಿವೊರ ಗಣ, ಕೇನಿಡೀ ಕುಟುಂಬ, ನಾಯಿ ಜಾತಿಗೆ ಸೇರಿರುವ, ನರಿಯಂತೆ ಕಾಣುವ ವನ್ಯಪ್ರಾಣಿ. ಕೇನಿಸ್ ವೈಜ್ಞಾನಿಕ ನಾಮ. ಅನೇಕ ಪ್ರಭೇದಗಳಿವೆ. ಮೋಟು ಕಿವಿ, ಪೊದೆ ಬಾಲ ಮುಖ್ಯ ಲಕ್ಷಣ. ಸಂಜೆ ವೇಳೆ ಕೂಗುತ್ತ, ಗಿಡ್ಡ ಬಗುಳು ಹಾಗೂ ಗೋಳು ಕರೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಊಳಿಡುತ್ತದೆ

ಗೂಗಾಲ್

(ಗ) ೧ರ ಬಲಪಕ್ಕದಲ್ಲಿ ನೂರು ಸೊನ್ನೆಗಳನ್ನು ಬರೆದಾಗ ದೊರೆಯುವ ಬೃಹತ್ ಸಂಖ್ಯೆ, ೧೦೧೦೦. ಅಮೆರಿಕದ ಒಂದು ಪ್ರಾಥಮಿಕ ಶಾಲೆಯ ಒಬ್ಬ ವಿದ್ಯಾರ್ಥಿ ಈ ಪದವನ್ನು ಮೊತ್ತಮೊದಲಿಗೆ ಸೂಚಿಸಿದ (೧೯೫೫)

ಗೂಗಾಲ್‌ಪ್ಲೆಕ್ಸ್

(ಗ) ೧೦ನ್ನು ಗೂಗಾಲ್ ಘಾತಕ್ಕೆ ಏರಿಸಿದಾಗ ಲಭಿಸುವ ಪದ : ೧೦೧೦೧೦೦

ಗೂಡು

(ಪ್ರಾ) ಮೊಟ್ಟೆಗಳನ್ನೂ, ಮರಿಗಳಿಗೆ ಸ್ವರಕ್ಷಣೆ ಸಾಧ್ಯ ವಾಗುವ ತನಕ ಮರಿಗಳನ್ನೂ, ಇರಿಸಿ ಬೆಳೆಸಲು ಹಕ್ಕಿ ಅಥವಾ ಕೀಟಮೀನುಗಳಂಥ ಮತ್ತಾವುದೇ ಪ್ರಾಣಿ ಸಿದ್ಧಗೊಳಿಸಿದ ಆಶ್ರಯ ಅಥವಾ ಹಕ್ಕೆ. ಹಕ್ಕಿಯ ಆವಾಸ

ಗೂನು ಬೆನ್ನು

(ವೈ) ಬೆನ್ನು ಬಾಗಿ ಗೂನು ಉಂಟಾಗಿರುವುದು

ಗೂಬೆ

(ಪ್ರಾ) ಸ್ಟ್ರಿಜಿಫಾರ್ಮೀಸ್ ಗಣ, ಟೈಟಾನಿಡೀ ಹಾಗೂ ಸ್ಟ್ರಿಜಿಡೀ ಕುಟುಂಬಗಳಿಗೆ ಸೇರಿರುವ ಮಾಂಸಾಹಾರಿ ಪಕ್ಷಿ. ೧೩೩ ಪ್ರಭೇದಗಳಿವೆ. ಆಥೀನೆಬ್ರಾಮ ಹಾಗೂ ಗ್ಲಾಸಿಡಿಯಮ್ ರೇಡಿಯೇಟಮ್ ವೈಜ್ಞಾನಿಕ ನಾಮದವು ಭಾರತದಲ್ಲಿ ಸಾಮಾನ್ಯ. ತಟ್ಟೆಯಂತೆ ಅಗಲ ವಾಗಿರುವ ಮುಖ, ದೊಡ್ಡ ಕಣ್ಣುಗಳು, ದಪ್ಪ ತಲೆ, ಕೊಕ್ಕೆ ಯಂತೆ ಬಾಗಿದ ಮೋಟು ಕೊಕ್ಕು, ಮೋಟು ಕತ್ತು, ಮೃದು ತುಪ್ಪಳದ ರೆಕ್ಕೆ ಪುಕ್ಕ ಇದರ

ಗೂರು

(ವೈ) ಶ್ವಾಸಮಂಡಲದ ನಾಳಗಳ ವ್ಯಾಸ ಕುಗ್ಗಿರುವ ಸಂದರ್ಭದಲ್ಲಿ, ವಾಯು ಚಲಿಸುವಾಗ ಹೊರಡುವ ಸುಂಯ್ ಸುಂಯ್ ಶಬ್ದ. ಈ ಶಬ್ದ ತೀವ್ರವಾಗಿದ್ದರೆ ಬರಿ ಕಿವಿಗಳಿಗೆ ಕೇಳಿಸುತ್ತದೆ. ಸೌಮ್ಯವಾಗಿದ್ದಾಗ, ಸ್ಟೆತಸ್ಕೋಪಿನಿಂದ ಮಾತ್ರ ಆಲಿಸಲು ಸಾಧ್ಯ. ಗೂರಲು ಸಾಮಾನ್ಯವಾಗಿ ಆಸ್ತಮದಲ್ಲಿ ಕೇಳಿಬರುತ್ತದೆ. ಉದಾ: ಗಂಟಲುರಿ (ಕ್ರೌಪ್), ಪರಾಗ ಜ್ವರ (ಹೇ ಫೀವರ್), ಸಂಕುಚಿತ ದ್ವಿದಳ ಕವಾಟ (ಮೈಟ್ರಲ್ ಸ್ಟೆನೋಸಿಸ್), ಶ್ವಾಸನಾಳ ಉರಿಯೂತ, ಶ್ವಾಸಕೋಶ ಸೋಂಕು, ಎಂಫಿಸೇಮ ಇತ್ಯಾದಿ ಸಂದರ್ಭಗಳಲ್ಲಿಯೂ ಗೂರು ಕೇಳಿ ಬರಬಹುದು

ಗೃಹವಿಜ್ಞಾನ

(ಸಾ) ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದಂತೆ ಗೃಹಿಣಿ ಮನೆಯನ್ನು ಯಾವ ರೀತಿ ಓರಣವಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಅಭ್ಯಸಿಸುವ ವಿಜ್ಞಾನ. ಕುಟುಂಬ ಸದಸ್ಯರು ಸೇವಿಸುವ ಆಹಾರ, ಧರಿಸುವ ಉಡುಪು, ಆಯವ್ಯಯ, ಮಕ್ಕಳ ಲಾಲನೆ ಪಾಲನೆ ಪೋಷಣೆ ಈ ಅಧ್ಯಯನದ ಮುಖ್ಯಾಂಶ

ಗೆಟರ್

(ರ) ಖಾಲಿಮಾಡಿದ ನಾಳ ಮೊದಲಾದವುಗಳಲ್ಲಿ ಉಳಿದಿರಬಹುದಾದ ಅನಿಲವನ್ನು ತೆಗೆದುಹಾಕಲು ಬಳಸುವ, ರಾಸಾಯನಿಕವಾಗಿ ಸಕ್ರಿಯವಾದ ವಸ್ತು. ಉದಾ: ಲೋಹೀಯ ಬೇರಿಯಮ್, ಥರ್ಮಿಯಾನಿಕ್ ಕವಾಟಗಳಲ್ಲಿ ಬಳಸುವ ಲೋಹೀಯ ಮೆಗ್ನೀಸಿಯಮ್

ಗೆಡ್ಡೆ

(ಸ) ನೆಲದೊಳಗೆ ಬೆಳೆಯುವ ಕಾಂಡಭಾಗ. ಕಂದ

ಗೆಡ್ಡೆ

(ಸ) ಸಾಧಾರಣವಾಗಿ ಸಸ್ಯ ತನ್ನ ಆಹಾರವನ್ನು ನೆಲದಡಿಯಲ್ಲಿ ಶೇಖರಿಸಿ ಇಡುವ ಒಂದು ಅವಯವ. ಶಲ್ಕಕಾಂಡ

ಗೆಡ್ಡೆ

(ಸ) ನೆಲದಡಿಯಲ್ಲಿ ಉಬ್ಬಿ ಆಹಾರ ಸಂಗ್ರಹ ಮತ್ತು ಸಾರ್ವಕಾಲಿಕ ಅಂಗವಾಗಿ ವರ್ತಿಸುವ ಕಾಂಡ. ಉದಾ: ಆಲೂಗೆಡ್ಡೆ, ಗೆಣಸು

ಗೆಡ್ಡೆಕೋಸು

(ಸ) ಬ್ರಾಸಿಕೇಸೀ ಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ಬ್ರಾಸಿಕ ಓಲರೇಸಿಯ ಪ್ರಭೇದದ ಗಾಂಜಿಲೋಡಿಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಇದರ ಕಾಂಡ ತರಕಾರಿಯಾಗಿ ಉಪಯುಕ್ತ. ಹೂಕೋಸು, ಎಲೆಕೋಸುಗಳಿಗೆ ಹತ್ತಿರ ಸಂಬಂಧಿ. ನವಿಲುಕೋಸು ಪರ್ಯಾಯ ನಾಮ

ಗೆಣ್ಣು

(ಸ) ಕಾಂಡದ ಮೇಲೆ ಒಂದು ಅಥವಾ ಹೆಚ್ಚು ಎಲೆಗಳು ಸೇರಿಕೊಂಡಿರುವ ಭಾಗ. (ತಂ) ಕಂಪಿಸುತ್ತಿರುವ ಕಾಯದಲ್ಲಿ ಒಂದು ಅಥವಾ ಹೆಚ್ಚು ಶ್ರಾಂತ ಬಿಂದು

ಗೆಣ್ಣು

(ಪ್ರಾ) ಪ್ರಾಣಿಯ ಮೊಣಕಾಲಿನ ಗೆಣ್ಣಿನ ಭಾಗ; ಬೆರಳಿನ ಬುಡ. ಪ್ರಾಣಿಯ ಮೊಣಕಾಲು ಹಾಗೂ ಅದರ ಮೇಲ್ಭಾಗ ಕೆಳಭಾಗಗಳ ಮಾಂಸಸಹಿತವಾದ ಖಂಡ

Search Dictionaries

Loading Results

Follow Us :   
  Download Bharatavani App
  Bharatavani Windows App