भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗುರುತು

(ತಂ) ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಪರಿಸ್ಥಿತಿಯನ್ನು ಸಂಕೇತಿಸಲು ಬಳಸುವ ವಿಶಿಷ್ಟ ಚಹರೆ

ಗುರುತು ಪಟ್ಟಿ

(ಸಾ) ವಸ್ತುವಿನ ಸ್ವರೂಪ, ಮಾಲೀಕ, ಹೆಸರು, ರವಾನೆಯ ಸ್ಥಳಗಳನ್ನು ಬರೆದು ಆ ವಸ್ತುವಿಗೆ ಅಂಟಿಸುವ, ಕಟ್ಟುವ ಕಾಗದ, ಬಟ್ಟೆ, ರಟ್ಟು, ಲೋಹ ಇತ್ಯಾದಿಗಳ ಬಿಲ್ಲೆ, ಪಟ್ಟಿ. ಅಂಕಿತ

ಗುರುತು ಪದ

(ಕಂ) ಕಂಪ್ಯೂಟರ್‌ನಲ್ಲಿ ಅಂತರ್ಜಾಲ ಮತ್ತಿತರ ಸಂಪರ್ಕ ಪಡೆಯಲು ಬಳಕೆದಾರ ನಿಗದಿಪಡಿಸಿಕೊಂಡ ಗುಪ್ತ ಸಂಕೇತ ಪದ. ಈ ಸಂಕೇತವನ್ನು ಕಂಪ್ಯೂಟರ್ ಗುರುತಿಸಿ ಪ್ರವೇಶ ಒದಗಿಸುತ್ತದೆ. ಇದೊಂದು ಭದ್ರತಾ ವ್ಯವಸ್ಥೆಯೂ ಹೌದು

ಗುರುತ್ವ

(ಭೌ) ಭೂಮಿ ಅಥವಾ ಇತರ ಗ್ರಹ, ಉಪಗ್ರಹದ ಗುರುತ್ವಕ್ಷೇತ್ರದ ಒಳಗಿರುವ ಯಾವುದೇ ರಾಶಿಯುಕ್ತ ವಸ್ತುವಿನ ಮೇಲೆ ವರ್ತಿಸುವ ಗುರುತ್ವಬಲಕ್ಕೆ ಸಂಬಂಧಿಸಿದ ವಿದ್ಯಮಾನ. ವಸ್ತುವಿನ ಮೇಲೆ ವರ್ತಿಸುವ ಗುರುತ್ವಬಲವೇ ಅದರ ತೂಕ. ನ್ಯೂಟನ್‌ನ ದ್ವಿತೀಯ ಚಲನ ನಿಯಮದ ಪ್ರಕಾರ F = ma. ಇಲ್ಲಿ ಬಲ F ಎಂಬುದು ರಾಶಿ 5mನ ಮೇಲೆ ವರ್ತಿಸಿ ಅದರಲ್ಲಿ ವೇಗೋತ್ಕರ್ಷ aಯನ್ನು ಉಂಟುಮಾಡುತ್ತದೆ. ಎಂದೇ ವಸ್ತುವಿನ ತೂಕ mg, ಇಲ್ಲಿ g ಗುರುತ್ವ ವೇಗೋತ್ಕರ್ಷ

ಗುರುತ್ವ ಕಟ್ಟೆ

(ತಂ) ಸ್ಥಿರತೆಗೆ ತನ್ನ ತೂಕವನ್ನೇ ಅವಲಂಬಿಸಿರುವ, ಕುಸಿತವನ್ನು ತನ್ನ ಭಾರದಿಂದಲೇ ತಪ್ಪಿಸುವ ಕಟ್ಟೆ

ಗುರುತ್ವ ನಿಯತಾಂಕ

(ಭೌ) ಪ್ರತೀಕ G= 6.672×10-11 Nm2 kg-2, ಕಾಯಗಳು ಯಾವುವೇ ಆಗಿರಲಿ G ಸ್ಥಿರವಾಗಿರುವುದು. ನೋಡಿ : ಗುರುತ್ವಾಕರ್ಷಣೆ

ಗುರುತ್ವ ವೇಗೋತ್ಕರ್ಷ

(ಭೌ) ನಿರ್ದ್ರವ್ಯತೆಯಲ್ಲಿ ಗುರುತ್ವದಿಂದಾಗಿ ಮುಕ್ತಪತನದಲ್ಲಿರುವ ವಸ್ತುವಿನ ವೇಗೋತ್ಕರ್ಷ. ಇದು ಎತ್ತರ ಹಾಗೂ ಅಕ್ಷಾಂಶ ದೊಂದಿಗೆ ಬದಲಾಗುತ್ತದೆ. ೪೫0ಅಕ್ಷಾಂಶದಲ್ಲಿ ಅದು ಸೆಕೆಂಡ್ ಸೆಂಕೆಂಡಿಗೆ ೯೮೦.೬ ಸೆಂಮೀ. ಪ್ರತೀಕ g

ಗುರುತ್ವಕೇಂದ್ರ

(ಭೌ) ವಸ್ತುವಿನ ಪ್ರತಿಯೊಂದು ಕಣದ ಮೇಲೆ ಗುರುತ್ವ ಬಲ ವರ್ತಿಸುತ್ತ ಇರುವುದು. ಈ ಎಲ್ಲ ಬಲಗಳ ಫಲಿತ ಬಲವು ವರ್ತಿಸುವ ಬಿಂದುವೇ ಆ ವಸ್ತುವಿನ ಗುರುತ್ವಕೇಂದ್ರ. ಈ ಬಿಂದುವಿಗೆ ಆಧಾರಕೊಟ್ಟು ನಿಲ್ಲಿಸಿದರೆ

ಗುರುತ್ವಕ್ಷೇತ್ರ

(ಭೌ) ರಾಶಿಯುಕ್ತ ವಸ್ತುವನ್ನು ಸುತ್ತಲೂ ಆವರಿಸಿದ್ದು ಈ ಆವರಣದೊಳಕ್ಕೆ ಪ್ರವೇಶಿಸುವ ಇತರ ಯಾವುದೇ ರಾಶಿಯುಕ್ತ ವಸ್ತುವಿನಲ್ಲಿ ವೇಗೋತ್ಕರ್ಷವುಂಟು ಮಾಡುವ ಪ್ರದೇಶ. ಈ ವೇಗೋತ್ಕರ್ಷಕ್ಕೆ ಕಾರಣವಾಗುವ ಬಲ ಮತ್ತು ಈ ಎರಡನೆಯ ವಸ್ತುವಿನ ರಾಶಿ ಇವೆರಡರ ನಿಷ್ಪತ್ತಿಯೇ ಗುರುತ್ವ ಕ್ಷೇತ್ರದ ತ್ರಾಣ (ಶಕ್ತಿ)

ಗುರುತ್ವಮಾಪಕ

(ತಂ) ೧. ದ್ರವ ಅಥವಾ ಘನ ಪದಾರ್ಥಗಳ ವಿಶಿಷ್ಟ ಗುರುತ್ವವನ್ನು ನಿರ್ಧರಿಸುವ ಸಾಧನ. ೨. ಸ್ಥಿರ ರಾಶಿಯೊಂದನ್ನು ಬೇರೆ ಬೇರೆ ಸ್ಥಳಗಳಲ್ಲಿ ತೂಕ ಮಾಡಿ ಗುರುತ್ವ ಬಲಗಳಲ್ಲಿರುವ ವ್ಯತ್ಯಾಸಗಳನ್ನು ಅಳತೆ ಮಾಡಲು ಬಳಸುವ ಸೂಕ್ಷ್ಮ ಸಾಧನ

ಗುರುತ್ವಮಾಪನ

(ರ) ಗುರುತ್ವಬಲ ಅಳತೆ. ತೂಕಮಾಪನ

ಗುರುತ್ವಮಾಪನ ವಿಶ್ಲೇಷಣೆ

(ರ) ತೂಕವನ್ನು ಅವಲಂಬಿಸಿ ಮಾಡುವ ಒಂದು ವಿಧದ ಪರಿಮಾಣಾತ್ಮಕ ವಿಶ್ಲೇಷಣೆ. ಉದಾ: ಬೆಳ್ಳಿ ಲವಣಗಳ ದ್ರಾವಣದಲ್ಲಿ ಬೆಳ್ಳಿಯ ಪರಿಮಾಣವನ್ನು ಕಂಡುಹಿಡಿಯಲು, ದ್ರಾವಣಕ್ಕೆ ಹೆಚ್ಚು ಪ್ರಮಾಣದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ ಸೇರಿಸಿ ಬೆಳ್ಳಿ ಕ್ಲೋರೈಡ್ ಅವಕ್ಷೇಪಿಸುವಂತೆ ಮಾಡಿ, ಅದನ್ನು ಸೋಸಿ ಹೊರತೆಗೆದು, ತೊಳೆದು, ಒಣಗಿಸಿ ಅದರಿಂದ ಬೆಳ್ಳಿಯ ತೂಕ ನಿರ್ಧರಿಸುವುದು. ಭಾರಾತ್ಮಕ ವಿಶ್ಲೇಷಣೆ

ಗುರುತ್ವಾಕರ್ಷಣೀಯ ಅಂತರಕ್ರಿಯೆ

(ಭೌ) ನೋಡಿ : ಮೂಲಭೂತ ಅಂತರಕ್ರಿಯೆಗಳು

ಗುರುತ್ವಾಕರ್ಷಣೆ

(ಭೌ) ವಿಶ್ವದಲ್ಲಿ ಯಾವುವೇ ಎರಡು ವಸ್ತುಗಳ ನಡುವೆ ವರ್ತಿಸುವ ಬಲ- ಒಂದು ಇನ್ನೊಂದನ್ನು ತನ್ನತ್ತ ಸೆಳೆಯುವ ವಿದ್ಯಮಾನ. d ಅಂತರದಲ್ಲಿರುವ ಎರಡು ಬಿಂದುರಾಶಿಗಳು m1 ಮತ್ತು m2ರ ನಡುವೆ ವರ್ತಿಸುವ ಈ ಆಕರ್ಷಣ ಬಲ F ಆಗಿದ್ದರೆ ಆಗ . ಇಲ್ಲಿ Gಗೆ ವಿಶ್ವ ಗುರುತ್ವಾರ್ಷಣ ನಿಯತಾಂಕ ಎಂದು ಹೆಸರು. ಐಸಾಕ್ ನ್ಯೂಟನ್ (೧೬೪೨-೧೭೨೭) ಈ ವಿದ್ಯಮಾನವನ್ನು ಆವಿಷ್ಕರಿಸಿದ್ದರಿಂದ ಇದಕ್ಕೆ ನ್ಯೂಟನ್ ಗುರುತ್ವಾಕರ್ಷಣ ನಿಯಮವೆಂದು ಹೆಸರು

ಗುರುತ್ವಾನುವರ್ತನ

(ಜೀ) ಸಸ್ಯಗಳು ಭೂಮಿಯ ಗುರುತ್ವಾಕರ್ಷಣೆಗೆ ಪ್ರತಿಕ್ರಿಯೆಯಾಗಿ ನಿರ್ದಿಷ್ಟ ದಿಕ್ಕಿಗೆ ತಿರುಗುವಿಕೆ. ಮುಖ್ಯ (ತಾಯಿ) ಬೇರು ಧನಾತ್ಮಕವಾಗಿ ಗುರುತ್ವಾನುವರ್ತಕ (ಅಂದರೆ ಹೇಗೆ ಇಟ್ಟರೂ ಕೆಳಕ್ಕೇ ಬೆಳೆಯುತ್ತದೆ); ಮುಖ್ಯ ಕಾಂಡ ಋಣಾತ್ಮಕವಾಗಿ ಗುರುತ್ವಾನು ವರ್ತಕ (ಅಂದರೆ ಹೇಗೆ ಇಟ್ಟರೂ ಮೇಲಕ್ಕೇ ಬೆಳೆಯುತ್ತ ಹೋಗುತ್ತದೆ). ಆಕ್ಸಿನ್ ಎಂಬ ಸಸ್ಯ ಹಾರ್ಮೋನ್ ಇಂಥ ಗುರುತ್ವಾನುವರ್ತನೆಗೆ ಕಾರಣ. ಭೂಅಭಿಗಮನ

ಗುರೆಳ್ಳು

(ಸ) ಆಸ್ಟರೇಸೀ (ಕಂಪಾಸಿಟೀ) ಕುಟುಂಬಕ್ಕೆ ಸೇರಿದ ಮತ್ತು ಆರ್ಥಿಕ ಪ್ರಾಮುಖ್ಯವಿರುವ ಏಕ ವಾರ್ಷಿಕ ಸಸ್ಯ. ಗೈಜೋಶಿಯ ಅಬಿಸೀನಿಕ ವೈಜ್ಞಾನಿಕ ನಾಮ. ಆಫ್ರಿಕ ಮೂಲವಾಸಿ. ಎಣ್ಣೆಗಾಗಿ ಆಫ್ರಿಕ, ಭಾರತಗಳಲ್ಲಿ ಬೆಳೆಸು ತ್ತಾರೆ. ಹುಚ್ಚೆಳ್ಳು, ಕಾರೆಳ್ಳು, ಖುರಾಸಾನಿ

ಗುಲಾಬಿ

(ಸ) ರೋಸೇಸೀ ಕುಟುಂಬಕ್ಕೆ ಸೇರಿರುವ ಸುಂದರ ಜನಪ್ರಿಯ ಅಲಂಕಾರ ಸಸ್ಯ. ವೈಜ್ಞಾನಿಕ ನಾಮ ರೋಸ. ಪ್ರಪಂಚದ ಸಮಶೀತೋಷ್ಣ ವಲಯದ ಉತ್ತರ ದೇಶಗಳಲ್ಲೂ, ಮೆಕ್ಸಿಕೊ, ಭಾರತಗಳಲ್ಲೂ ಕೃಷಿ ಮಾಡುತ್ತಾರೆ. ಇದರಿಂದ ಪನ್ನೀರು, ಅತ್ತರು, ಕೋಶತೈಲ, ಗುಲ್ಖನ್ ತಯಾರಿಸುತ್ತಾರೆ. ತಂಪುಕಾರಕ

ಗುಲ್ಫಾಸ್ಥಿ

(ಪ್ರಾ) ಚತುಷ್ಪಾದಿ ಕಶೇರುಕಗಳಲ್ಲಿ (ಕಾಲಿನ) ಹರಡು ಮೂಳೆ: (ಕೈಯ) ಮಣಿಕಟ್ಟಿನಲ್ಲಿಯ ಚಾಂದ್ರಾಸ್ಥಿಗೆ ಸಂವಾದಿ

ಗುಲ್ಮ

(ಪ್ರಾ) ಕಶೇರುಕಗಳಲ್ಲಿ ಹೊಸ ಕೆಂಪು ರಕ್ತಕೋಶ ಗಳನ್ನು ರೂಪಿಸುವ ಮತ್ತು ಹಳೆಯವನ್ನು ನಾಶಪಡಿಸುವ ರಕ್ತ ಪರಿಚಲನಾ ಕ್ರಮದಲ್ಲಿಯ ದುಗ್ಧರಸ ಗ್ರಂಥಿಗಳ ಅಂಗ. ಇದು ಉದರದ ಹಿಂಬದಿಯಲ್ಲಿದೆ. ಪ್ಲೀಹ. ತೊರಳೆ

ಗುಹಾಮಾನವ

(ಸಾ) ಪ್ರಾಗೈತಿಹಾಸಿಕ ಕಾಲದ ಶಿಲಾಯುಗ ದಲ್ಲಿ ಗುಹಾವಾಸಿಯಾಗಿದ್ದ ಮಾನವ

Search Dictionaries

Loading Results

Follow Us :   
  Download Bharatavani App
  Bharatavani Windows App