भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567891718Next >

ಗಗನಯಾತ್ರಿ

(ತಂ) ವಾಯುಮಂಡಲಾತೀತ ಗಗನದಲ್ಲಿ ಆಕಾಶನೌಕೆಯಲ್ಲಿ ಪ್ರಯಾಣಿಸುವವ. ವ್ಯೋಮಯಾನಿ, ಆಕಾಶಯಾನಿ

ಗಚ್ಚುಗಾರೆ

(ತಂ) ನೋಡಿ : ಕಾಂಕ್ರೀಟ್

ಗಜ

(ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ. ೧ ಗಜ = ೦.೯೧೪೪ ಮೀಟರ್ = ೩ ಅಡಿಗಳು

ಗಜನಿಂಬೆ

(ಸ) ರೂಟೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಸಿಟ್ರಸ್ ಲೆಮನ್ ವೈಜ್ಞಾನಿಕ ನಾಮ. ರುಚಿ- ಹುಳಿ ಇಲ್ಲವೇ ಒಗರು. ಹಣ್ಣು ಅಂಡಾಕಾರ. ತುದಿ ಮುಂಚಾಚಿರುತ್ತದೆ. ಹಣ್ಣು ಸಿಟ್ರಿಕ್ ಆಮ್ಲದಿಂದ ಕೂಡಿರುತ್ತದೆ. ಬೆಟ್ಟದ ಗಜನಿಂಬೆ, ಅಸ್ಸಾಮ್ ಗಜನಿಂಬೆ ಎಂದು ಮುಂತಾದ ಅನೇಕ ಪ್ರಭೇದಗಳುಂಟು. ತಂಪು ಪಾನೀಯ, ಜ್ಯಾಮ್, ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಕೆ. ರಸ ಔಷಧಿಯಾಗಿಯೂ ಉಪಯುಕ್ತ. ನೋಡಿ : ಸಿಟ್ರಿಕ್ ಆಮ್ಲ

ಗಂಟಲ ಊತ

(ವೈ) ಕಟ್ಟುಸಿರು. ಎದೆಸೆರೆ ಬಿಗಿತದ ಪರಿಣಾಮವಾಗಿ ಉಂಟಾಗುವ ಗಂಟಲು ನೋವು

ಗಂಟಲ ಕುಹರ

(ಪ್ರಾ) ಕಶೇರುಕಗಳಲ್ಲಿ ಬಾಯಿ ಕುಹರಕ್ಕೂ ಜಠರಕ್ಕೆ ಹೋಗುವ ನಾಳಕ್ಕೂ ನಡುವಿನ ಅನ್ನನಾಳ ಭಾಗ. ಆಹಾರ ಸಾಗಣೆಗೂ ಉಸಿರಾಟಕ್ಕೂ ಅನುಕೂಲಕರ

ಗಂಟಲಮಾರಿ

(ವೈ) ಕೊರಿನೀಬ್ಯಾಕ್ಟೀರಿಯಮ್ ಡಿಫ್ತೀರಿಯೇ ಎಂಬ ಬ್ಯಾಕ್ಟೀರಿಯಾದಿಂದ ಮಕ್ಕಳಿಗೆ ಸಾಮಾನ್ಯವಾಗಿ ಬರುವ ರೋಗ. ಜ್ವರ, ಗಂಟಲನೋವು, ಗಳಲೆ ಕಟ್ಟುವಿಕೆ, ಗಂಟಲಿನಲ್ಲಿರುವ ಗಲಗ್ರಂಥಿ (ಟಾನ್ಸಿಲ್), ಕಿರುನಾಲಿಗೆ, ಮೃದು ತಾಲು ಹಾಗೂ ಗಂಟಲ ಹಿಂಭಾಗ ಇವುಗಳಲ್ಲಿ ಒಂದು ಹಳದಿ-ಬಿಳಿ ಬಣ್ಣದ ಪೊರೆ ರೂಪುಗೊಳ್ಳುವುದು ಈ ರೋಗದ ಮುಖ್ಯಲಕ್ಷಣ. ಎಷ್ಟೋ ಸಲ ಈ ಪೊರೆ ತೀವ್ರವಾಗಿ ವಾಯು ಮಾರ್ಗವನ್ನು ಮುಚ್ಚಿ ಬಿಡುತ್ತದೆ. ಈ ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷ ಪದಾರ್ಥಗಳು ರಕ್ತದಲ್ಲಿ ಬೆರೆತು ನಂಜಿಗೆ ಕಾರಣವಾಗಿ ಪಾರ್ಶ್ವವಾಯು, ಹೃದಯ ಉರಿಯೂತ ಮುಂತಾದವು ತಲೆದೋರಿ ಸಾವೂ ಸಂಭವಿಸ ಬಹುದು. ಈಗ ಈ ರೋಗ ಅಪರೂಪ. ಕಾರಣ ಈ ರೋಗದ ವಿರುದ್ಧ ಲಭ್ಯವಿರುವ ಪರಿಣಾಮಕಾರಿ ಲಸಿಕೆ. ಮಕ್ಕಳಿಗೆ ಕೊಡುವ ಡಿ.ಪಿ.ಟಿ ಲಸಿಕೆಯಲ್ಲಿ ಮೊದಲನೆಯದೇ ಡಿಫ್ತೀರಿಯ! ಪಿ ಎಂಬುದು ಪೆರ್ಟ್ಯೂಸಿಸ್ ಅಂದರೆ ನಾಯಿಕೆಮ್ಮಿಗೆ ರಕ್ಷಣೆ ಕೊಡುವುದು. ಟಿ ಎಂಬುದು ಟೆಟನಸ್ (ಧನುರ್ವಾಯು)ಗೆ ರಕ್ಷಣೆ ಕೊಡುತ್ತದೆ

ಗಂಟಲು

(ಪ್ರಾ) ಕಶೇರುಕದ ಕೊರಳಿನೊಳಗೆ ಇರುವ ಕುಹರ. ಧ್ವನಿಪೆಟ್ಟಿಗೆ ಮತ್ತು ಸಂಬಂಧಿತ ರಚನೆಗಳನ್ನು ಒಳಗೊಂಡಿರುವ ಭಾಗ. ಗೋಣು

ಗಂಟು

(ಸ) ಸಸ್ಯಕಾಂಡದಲ್ಲಿಯ ಗೆಣ್ಣು. ಮರದ ಕಾಂಡದಲ್ಲಿ ರೆಂಬೆ ಹೊರಡುವ ಸ್ಥಳದಲ್ಲಿ ಆಗುವ ಗಳಲೆ; ಇದರಿಂದ ಮರದ ಆ ಭಾಗದ ಹಲಗೆಯಲ್ಲಿ ಕಾಣುವ ಅಡ್ಡ ಎಳೆಯ ಗುಂಡು ರಚನೆ

ಗಂಟು

(ಸ) ಸಸ್ಯಗಳಲ್ಲಿ ಸಣ್ಣ ಉಬ್ಬು ಅಥವಾ ಗೆಡ್ಡೆ

ಗಂಟುನೊಣ

(ಪ್ರಾ) ಕೀಟವರ್ಗದ ಸೆಸಿಡೊಮೈಯಿಡೀ ಕುಟುಂಬಕ್ಕೆ ಸೇರಿದ ಕೀಟಗಳ ಸಾಮಾನ್ಯ ಹೆಸರು. ಸಸ್ಯಗಳಿಗೆ, ವಿಶೇಷವಾಗಿ ಓಕ್ ಮರಕ್ಕೆ, ಅಂಟಿಕೊಂಡು ಗಂಟುಗಳನ್ನು ಉಂಟುಮಾಡುವುದರಿಂದ ಇದಕ್ಕೆ ಈ ಹೆಸರು. ಸೊಳ್ಳೆಗಳನ್ನು ಹೋಲುತ್ತದೆ. ಕಾಂಟರಿನಿಯ ಆಂಡ್ರೊಪೊಗೋನಿಸ್ ಎಂಬ ಪ್ರಭೇದ ದಕ್ಷಿಣ ಭಾರತದಲ್ಲಿ ಜೋಳದ ಪೈರಿಗೆ ಹಾನಿಕಾರಕ

ಗಂಟೆ

(ಖ) ದಿವಸದ ೨೪ನೆಯ ಒಂದು ಭಾಗ. ೬೦ ಮಿನಿಟ್. ಕಾಲದ ಒಂದು ಏಕಮಾನ. ೩೬೦೦ ಸೆಕೆಂಡುಗಳಿಗೆ ಸಮ

ಗಂಟೆ

(ಸಾ) ವೃತ್ತಾಕಾರದ ದೊಡ್ಡ ತೆರೆಬಾಯಿ ಕೆಳಮುಖ

ಗಂಟೆ ಹಕ್ಕಿ

(ಪ್ರಾ) ಕ್ಯಾಂಪನೀರೊ ಗಣಕ್ಕೆ ಸೇರಿದ ಚಾಸ್ಮರಿಂಕಸ್ ನಿವೀಯಸ್ ಪ್ರಭೇದದ ಸಣ್ಣ ಹಕ್ಕಿ. ಮುಖ್ಯವಾಗಿ ದಕ್ಷಿಣ ಅಮೆರಿಕ ವಾಸಿ. ಇದರ ಕೂಗು ಇಂಪಾದ ಗಂಟೆಯ ನಿನಾದವನ್ನು ಹೋಲುವುದರಿಂದ ಈ ಹೆಸರು. ನೆತ್ತಿಯ ಮೇಲೆ ಕೋಡಿನಂಥ ಶಿಖೆ ಇದೆ. ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್ ಗಳಲ್ಲೂ ಇಂಥದೇ ಗಂಟೆನಾದ ಹೊಮ್ಮಿಸುವ ಹಕ್ಕಿಗಳಿವೆ

ಗಟೇಷನ್

(ಸ) ನೋಡಿ : ಬಿಂದುಸ್ರಾವ

ಗಟ್ಟ

(ತಂ) ಕಂಡಿಯಲ್ಲಿ ಸಂದುಬಿಡದೆ ಬಿಗಿಯಾಗಿ ಹೊಂದಿಕೊಳ್ಳುವ ಗೂಟ. ಬೆಣೆ, ಬಿರಡೆ, ಪ್ಲಗ್

ಗಟ್ಟಿಸು

(ತಂ) ಕಾಂಕ್ರೀಟ್ ಹಾಕಿದ ಬಳಿಕ ಅದರ ಮೇಲೆ ನೀರು ಕಟ್ಟಿ ಹದಗೊಳಿಸುವುದು. ಕ್ಯೂರಿಂಗ್

ಗಡಪಾರೆ

(ತಂ) ಸನ್ನೆಯಾಗಿ ಬಳಕೆ. ಸನ್ನೆಗೋಲು ಕೊಕ್ಕೆಹಾರೆ

ಗಂಡಮಾಲೆ

(ವೈ) ಕರುಳು ಪ್ರದೇಶದಲ್ಲಿರುವ ಗ್ರಂಥಿಗಳು ಕ್ಷಯದ ಸೋಂಕಿಗೆ ತುತ್ತಾಗಿ ಊದಿಕೊಂಡು (ಗಂಟಲ ಬಳಿ) ಗಡ್ಡೆ ಕಟ್ಟುವ ರೋಗ. ಇದು ೧೫ ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯ. ಶ್ವಾಸಕೋಶ ರೋಗ ಗುಣಪಡಿಸಲು ಬಳಸುವ ಔಷಧಗಳನ್ನೇ ಗಂಡಮಾಲೆ ಚಿಕಿತ್ಸೆಯಲ್ಲೂ ಬಳಸಬೇಕಾಗುತ್ತದೆ. ಆಹಾರದಲ್ಲಿ ಅಯೊಡೀನ್ ಕೊರತೆಯಿಂದಲೂ ಈ ಗಲಗಂಡ ರೋಗ ಸಂಭವಿಸುತ್ತದೆ

ಗಡಸಾಗುವಿಕೆ

(ವೈ) ಉರಿಯೂತ, ರಕ್ತಾಧಿಕ್ಯ ಮೊದಲಾದ ಕಾರಣಗಳಿಂದ ದೇಹದ ಯಾವುದೇ ಭಾಗದ ಊತಕಗಳು ಜಡ್ಡು ಗಟ್ಟುವುದು. ಜಡ್ಡುಗಟ್ಟಿದ ಭಾಗ ಅಥವಾ ಅಂಗ. (ಭೂವಿ) ಶಾಖ, ಒತ್ತಡ, ರಾಸಾಯನಿಕ ವ್ಯತ್ಯಯದಿಂದ ಶಿಲೆಗಳು ಗಡಸಾಗುವುದು
< previous1234567891718Next >

Search Dictionaries

Loading Results

Follow Us :   
  Download Bharatavani App
  Bharatavani Windows App