भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕಮಟು

(ಸಾ) ಕೊಳೆತ ಕೊಬ್ಬಿನಂಥ ದುರ್ವಾಸನೆಯುಳ್ಳ

ಕಮಾಚಿ ಹುಲ್ಲು

(ಸ) ಪೋಯೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಹುಲ್ಲಿನ ಒಂದು ಬಗೆ. ಒಣ ಹುಲ್ಲಿನಿಂದ ಸಿಟ್ರೋನೆಲ್ಲ ಹೆಸರಿನ ಎಣ್ಣೆಯನ್ನು ಆಸವಿಸಬಹುದು

ಕಮಾನು

(ಎಂ) ಹೊರೆಗಳನ್ನೂ, ಬಲಗಳನ್ನೂ ರವಾನಿಸಲು ನಿರ್ಮಿಸುವ ಸರಳ ರಚನೆ. ಹೊರೆಯ ಭಾರವು ಕಮಾನಿನಿಂದ ಊರೆಗೂ ಅಲ್ಲಿಂದ ನೆಲಕ್ಕೂ ವರ್ಗಾವಣೆಯಾಗುವುದು

ಕಮಾನು ಚಾವಣಿ

(ತಂ) ಒಂದು ಕೇಂದ್ರಬಿಂದುವಿನಿಂದ ಅಥವಾ ಕೇಂದ್ರರೇಖೆಯಿಂದ ವಿಸರಣವಾಗುವ ಸಂಧಿಗಳು ಇರುವ ಕಮಾನುಗಳ ತಂಡ. ಗುಮ್ಮಟದಂಥ ಆವರಣ. ಗುಮ್ಮಟ ಚಾವಣಿ ನೆಲ ಮಾಳಿಗೆ. (ವೈ) ಶರೀರದ ಅಂಗದಲ್ಲಿ ಕುಹರದ ಗುಮ್ಮಟ ಚಾವಣಿ

ಕಮಾನು ದಾರಿ

(ಎಂ) ೧. ಕಮಾನಿನ ಮೇಲ್ಚಾವಣಿ ಇರುವ ಹಾದಿ. ೨. ಕಂಬಗಳ ಮೇಲೆ ನಿಲ್ಲಿಸಿದ ಕಮಾನು ಸಾಲು

ಕಮಾನು ಸೇತುವೆ

(ತಂ) ಕಮಾನು ಆಕಾರದ ಚೌಕಟ್ಟಿನೊಳಗೆ ಮರದ ಚೌಬೀನೆ ಅಥವಾ ಕಬ್ಬಿಣದ ಜಂತಿ ಗಳಿಂದ ಕಟ್ಟಿದ ಸೇತುವೆ. ಕಮಾನಿನ ಮೇಲೆ ಬೀಳುವ ಕ್ಷಿತಿಜೀಯ ನೂಕುಬಲವನ್ನು ಸರಿದೂಗಲು ಅದರ ಎರಡೂ ಕೊನೆಗಳನ್ನು ಹುರಿಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿರುತ್ತದೆ

ಕರಕುಶಲ

(ತಂ) ಹಸ್ತಕೌಶಲ ಕಲೆ, ಕೈ ಕಸುಬಿನ ವೃತ್ತಿ ಅಥವಾ ಉದ್ಯೋಗ

ಕರಗು

(ಭೌ) ಘನವಸ್ತುವಿಗೆ ಶಾಖ ನೀಡಿ ದ್ರವವಸ್ತುವಾಗಿ ಪರಿವರ್ತಿಸುವುದು. ನೋಡಿ : ವಿಲೀನಿಸು

ಕರಡಿ

(ಪ್ರಾ) ಕಾರ್ನಿವೊರ ಗಣದ ಅರ್ಸಿಡೀ ಕುಟುಂಬಕ್ಕೆ ಸೇರಿದ ರೋಮದೇಹಿ ನಿಶಾಚರಿ ಸ್ತನಿ. ಸುಮಾರು ೭ ಜಾತಿಗಳೂ ೯ ಪ್ರಭೇದಗಳೂ ಇವೆ. ಸಾಮಾನ್ಯವಾಗಿ ಉಷ್ಣ ಹಾಗೂ ಸಮ ಶೀತೋಷ್ಣವಲಯವಾಸಿ. ಶೀತವಲಯಕ್ಕೆ ಸೀಮಿತವಾಗಿರುವ ಪ್ರಭೇದಗಳೂ ಉಂಟು. ನಡೆ ಯುವಾಗ ಅಂಗಾಲನ್ನು, ಅದರಲ್ಲೂ ಹಿಮ್ಮಡಿಯನ್ನು, ಊರುವುದರಿಂದ ನಡಿಗೆಯಲ್ಲಿ ವಿಚಿತ್ರ ರೀತಿಯ ತೊನೆತ ಎದ್ದುಕಾಣುತ್ತದೆ. ಕೆಲವೊಮ್ಮೆ ಹಿಂಗಾಲುಗಳ ಮೇಲೆಯೇ ನಡೆಯುವುದುಂಟು.

ಕರಣಿ

(ಗ) ಯಾವುದೇ ಪರಿಮೇಯ ಸಂಖ್ಯೆ aಯ nನೆಯ ಮೂಲ ಅಪರಿಮೇಯವಾಗಿದ್ದರೆ, ಈ ಮೂಲಕ್ಕೆ n ದರ್ಜೆಯ ಕರಣಿ ಎಂದು ಹೆಸರು. ಉದಾ: < page 134 a> ಎರಡನೆಯ ದರ್ಜೆಯ ಕರಣಿ, < page 134 b> ಮೂರನೆಯ ದರ್ಜೆಯ ಕರಣಿ

ಕರಬೂಜ

(ಸ) ಕುಕುರ್ಬಿಟೇಸೀ ಕುಟುಂಬ ಕುಕುಮಿಸ್ ಜಾತಿ ಹಾಗೂ ಮೆಲೊ ಪ್ರಭೇದಕ್ಕೆ ಸೇರಿದ, ನೆಲದ ಮೇಲೆ ಹರಡಿ ಬೆಳೆಯುವ ಜನಪ್ರಿಯ ಹಣ್ಣಿನ ಸಸ್ಯ. ಇರಾನ್ ಕಣಿವೆ ಮತ್ತು ಭಾರತದ ವಾಯವ್ಯ ದೇಶಗಳ ಮೂಲವಾಸಿ. ಹಣ್ಣಿನಿಂದ ಪಾನಕ ಮಾಡುತ್ತಾರೆ. ಬೀಜಗಳಲ್ಲಿ ಔಷಧೀಯ ಗುಣಗಳುಂಟು. ಕರಬೂಜ ರುಚಿಕರ, ಹಿತಕರ, ಪುಷ್ಟಿಕರ ಆಹಾರ

ಕರಾವಳಿ

(ಭೂವಿ) ಕಡಲಂಚಿಗೆ ತಾಗಿದ ನೆಲ. ಇದರ ಮೇಲೆ ಸಮುದ್ರದ ನೇರ ಪ್ರಭಾವವಿದೆ. ಕಡಲ ಕಿನಾರೆ

ಕರಿದಲೆ

(ವೈ) ೧. ಸರ್ವಸಾಮಾನ್ಯವಾಗಿ ಚರ್ಮದ ಮೇಲೆ ಏಳುವ ಕಪ್ಪು ತುದಿಯ ಗುಳ್ಳೆ. ಮೊಡವೆ ಪೀಡಿತರಲ್ಲಿ ಹೆಚ್ಚಿಗೆ ಕಂಡುಬರುತ್ತದೆ. ಚರ್ಮದಲ್ಲಿರುವ ತೈಲಗ್ರಂಥಿಯ ಮುಖಭಾಗದಲ್ಲಿ ಜಿಡ್ಡು, ಮೃತಜೀವಕೋಶ ಹಾಗೂ ದೂಳಿನಿಂದೊಂದು ಬೆಣೆ ರೂಪುಗೊಂಡು ಮುಚ್ಚಿಬಿಡುತ್ತದೆ. ಇದು ವಾತಾವರಣಕ್ಕೆ ತೆರೆದು ಕೊಂಡಿರುವುದರಿಂದ ಕಪ್ಪಗಾಗಿ ಇರುತ್ತದೆ. ಇಂತಹುದೇ ಜಿಡ್ಡು ಬೆಣೆ ಪೊರೆಯಿಂದ ಆವೃತವಾಗಿದ್ದಾಗ ಬಿಳಿಯದಾಗಿ ಕಾಣುತ್ತದೆ. ಇದನ್ನು ಬಿಳಿದಲೆ (ಶ್ವೇತ ಶಿರ) ಎಂದು ಕರೆಯಲಾಗುತ್ತದೆ. ಕರಿದಲೆಯನ್ನು ಸುಲಭವಾಗಿ ತೆಗೆಯಬಹುದು. ಬಿಳಿದಲೆಯನ್ನು ತೆಗೆಯುವುದು ಕಷ್ಟ. ಇವು ಮುಖದಲ್ಲಿ ಹೆಚ್ಚು ಕಂಡುಬರುತ್ತವೆ. ಕುತ್ತಿಗೆ, ಎದೆ, ಬೆನ್ನಿನಲ್ಲಿಯೂ ಕಂಡುಬರಬಹುದು. ೨. ಟರ್ಕಿ ಮತ್ತು ಕೋಳಿ ಜಾತಿ ಪ್ರಾಣಿಗಳನ್ನು ಬಾಧಿಸುವ ಯಕೃತ್ತಿನ ಸೋಂಕು ರೋಗ. ಕೃಷ್ಣಶಿರ

ಕರಿನಾಲಗೆ

(ವೈ) ಆಹಾರದಲ್ಲಿ ನಿಕೊಟಿನಿಕ್ ಆಮ್ಲದ ಕೊರತೆಯ ಕಾರಣವಾಗಿ ನಾಯಿಗಳಿಗೆ ಬರುವ ರೋಗ. ನಾಲಗೆ ಕಪ್ಪಾಗಿ ಬಣ್ಣಗೆಡುವುದು ಇದರ ಲಕ್ಷಣ

ಕರಿಮಂಜು

(ಪವಿ) ಪೈರುಪಚ್ಚೆಯನ್ನು, ಸಸ್ಯ ಸಮುದಾಯವನ್ನು ಕಪ್ಪಾಗಿಸುವ, ಕೊರೆಯುವ, ದಟ್ಟ ಮಂಜು

ಕರಿಮರ

(ಸ) ಅಕೇಶಿಯ ಜಾತಿಯ ಗಡಸುಮರ. ಆಸ್ಟ್ರೇಲಿಯಾ ಹಾಗೂ ಟಾಸ್ಮೇನಿಯಾ ಮೂಲವಾಸಿ

ಕರಿಮೂತ್ರ ಜ್ವರ

(ವೈ) ಇದು ರಕ್ತಮೂತ್ರ. ಫ್ಯಾಲ್ಸಿಫಾರಮ್ ಮಲೇರಿಯದ ಒಂದು ತೊಡಕು. ಕೆಂಪು ಕಣಗಳು ಒಡೆದು ಅವುಗಳ ಒಳಗಿರುವ ಹಿಮೋಗ್ಲಾಬಿನ್ ಹೊರಬಂದು ಮೂತ್ರಪಿಂಡಗಳ ಮೂಲಕ ವಿಸರ್ಜಿತವಾಗುವಾಗ ಕಪ್ಪು ಬಣ್ಣ ತಳೆಯುತ್ತದೆ. ಹಾಗಾಗಿ ಮೂತ್ರದ ಬಣ್ಣ ಕಪ್ಪಾಗಿರುತ್ತದೆ. ಕ್ವಿನೈನ್ ಮೂಲದ ಔಷಧ ಚಿಕಿತ್ಸೆ ಪಡೆದವರಲ್ಲಿ ಈ ತೊಡಕು ಸಾಮಾನ್ಯ

ಕರಿಮೆಣಸು

(ಸ) ಪೈಪರೇಲಿಸ್ ಗಣ, ಪೈಪರೇಸೀ ಕುಟುಂಬಕ್ಕೆ ಸೇರಿದ ಬಳ್ಳಿ ಸಸ್ಯದ ಎಳೆಯ ಮೆಣಸನ್ನು ಒಣಗಿಸಿ ಮಾಡಿದ ಕಾಳು. ಖಾರ ರುಚಿಯ ಸಂಬಾರ ಪದಾರ್ಥ. ಔಷಧೀಯ ಗುಣಗಳೂ ಉಂಟು

ಕರೀನ

(ಪ್ರಾ) ಏಣಿನಂಥ ರಚನೆ. ಹಕ್ಕಿಯ ಎದೆ ಎಲುಬು

ಕರು

(ಪ್ರಾ) ಯಾವುದೇ ಚತುಷ್ಪಾದಿಯ, ವಿಶೇಷವಾಗಿ ಹಸುವಿನ, ವರ್ಷದೊಳಗಿನ ಮರಿ

Search Dictionaries

Loading Results

Follow Us :   
  Download Bharatavani App
  Bharatavani Windows App