भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕಪ್ಪುಬೇನೆ

(ವೈ) ಕುರಿಗಳಿಗೆ ತಗಲುವ ನೆತ್ತರು ನಂಜುರೋಗ

ಕಪ್ಪುರಾಳ

(ರ) ಟಾರೆಣ್ಣೆಯನ್ನಾಗಲೀ ಟರ್ಪೆಂಟೈನ್ ಎಣ್ಣೆಯ ನ್ನಾಗಲೀ ಬಟ್ಟಿ ಇಳಿಸುವುದರಿಂದ ದೊರೆಯುವ ಕರಿಯ ಅಥವಾ ಕಗ್ಗಂದು ಬಣ್ಣದ ರಾಳ ಪದಾರ್ಥ. ಬಿಸಿ ಆಗಿರುವಾಗ ಇದು ಜಿಗುಟು ಅರೆದ್ರವ, ತಣಿಯುವಾಗ ಗಟ್ಟಿ ಆಗುತ್ತದೆ. ನೀರಿನಲ್ಲಿ ಅವಿಲೇಯ, ಹಲವು ಆರ್ಗ್ಯಾನಿಕ್ ದ್ರಾವಕಗಳಲ್ಲಿ ವಿಲೇಯ. ಹಡಗು ಮುಂತಾದವುಗಳಲ್ಲಿ ಸಂದು ಮುಚ್ಚಲು ಬಳಕೆ

ಕಪ್ಪೆ

(ಪ್ರಾ) ಕಶೇರುಕ ವಿಭಾಗ, ದ್ವಿಚರ ವರ್ಗ, ಎನ್ಯೂರ ಗಣಕ್ಕೆ ಸೇರಿದ ಪ್ರಾಣಿ. ನೀರುಗಪ್ಪೆ, ನೆಲಗಪ್ಪೆ, ಹಾರುಗಪ್ಪೆ ಎಂಬ ಮೂರು ಮುಖ್ಯ ಬಗೆಗಳಿವೆ. ಕೆರೆಕುಂಟೆ ಸಣ್ಣ ತೊರೆ ಮತ್ತು ತೇವಪೂರಿತ ಸ್ಥಳಗಳಲ್ಲಿ ವಾಸಿಸುವ ಉಭಯಚರಿ. ಸಣ್ಣ ಪುಟ್ಟ ಹುಳು, ಬಸವನ ಹುಳು, ಕೀಟ ಇದರ ಆಹಾರ. ಮನುಷ್ಯರಂತೆ ಕಪ್ಪೆಗಳಲ್ಲೂ ಚೆನ್ನಾಗಿ ರೂಪುಗೊಂಡ ಅಸ್ಥಿಪಂಜರವಿದೆ, ಜೀರ್ಣಾಂಗಗಳಿವೆ. ಪಚನಕ್ರಿಯೆ, ರಕ್ತ ಪರಿಚಲನಾ ಕ್ರಮ, ನರ ವ್ಯವಸ್ಥೆ, ಇವೆಲ್ಲ ಮನುಷ್ಯರಲ್ಲಿರುವಂತೆಯೇ. ಪ್ರಯೋಗಶಾಲೆ ಗಳಲ್ಲಿ ಪ್ರಯೋಗಕ್ಕಾಗಿ ಬಳಸುತ್ತಾರೆ. ನೋಡಿ : ಚೋಂದ ಕಪ್ಪೆ

ಕಂಪ್ಯೂಟರೀಕರಣ

(ಕಂ) ಯಾಂತ್ರಿಕ ವ್ಯವಹಾರ ಗಳನ್ನು ಯುಕ್ತ ಕ್ರಮವಿಧಿಗಳಾಗಿ ಮಾರ್ಪಡಿಸಿ ನಿರ್ವಹಣೆ ಮಾಡಲು ಕಂಪ್ಯೂಟರ್‌ಗೆ ಒಪ್ಪಿಸುವುದು

ಕಂಪ್ಯೂಟರ್

(ಕಂ) ದತ್ತಾಂಶಗಳನ್ನು ಬೇಕಾದ ಹಾಗೆ ಬದಲಿಸುವಂತೆ ಮತ್ತು ಮನುಷ್ಯ ಪ್ರಯತ್ನವಿಲ್ಲದೆ ಕೆಲವು ಪರಿಕರ್ಮ ಗಳನ್ನು ತಂತಾನೇ ನಿರ್ವಹಿಸುವಂತೆ ನೀಡಿದ ಆದೇಶಗಳನ್ನು ಪಾಲಿಸಬಲ್ಲ ಯಂತ್ರ. ಮಾಹಿತಿ ಯನ್ನು ಪಡೆದು (ಇನ್‌ಪುಟ್, ಆದಾನ, ನಿವೇಶ) ಯುಕ್ತವಾಗಿ ಪ್ರಕ್ರಮಿಸಿ ಅತ್ಯಂತ ಶೀಘ್ರಗತಿ ಫಲಿತಾಂಶ ನೀಡುವ (ಔಟ್ ಪುಟ್, ಪ್ರದಾನ, ನಿರ್ಗಮ) ಎಲೆಕ್ಟ್ರಾನಿಕ್ ಉಪಕರಣ. ಅತ್ಯಂತ ಬಹುಮುಖ ಸಾಮರ್ಥ್ಯದ ಕಂಪ್ಯೂಟರ್ ಎಂದರೆ ಡಿಜಿಟಲ್ (ಅಂಕಾತ್ಮಕ) ಕಂಪ್ಯೂಟರ್. ಇದರಲ್ಲಿ ಆದಾನವು ಸಂಕೇತಗಳ ರೂಪದಲ್ಲಿದ್ದು ಯಂತ್ರದಲ್ಲಿ ದ್ವಿಮಾನಾಂಕನದಲ್ಲಿ ಪ್ರತಿನಿಧಿತವಾಗಿ ಇರುತ್ತದೆ. ಸಾದೃಶ್ಯ ಕಂಪ್ಯೂಟರ್ ಇನ್ನೊಂದು ಮಾದರಿಯದು. ಇದರಲ್ಲಿ ಆದಾನ ಪ್ರದಾನಗಳು ವೋಲ್ಟೇಜ್, ಒತ್ತಡಗಳಂಥ ಸತತವಾಗಿ ಬದಲಾಗುವ ಭೌತರಾಶಿಗಳಾಗಿ ಇರುತ್ತವೆ. ಇಂಥ ಕಂಪ್ಯೂಟರ್‌ಗಳನ್ನು ವೈಜ್ಞಾನಿಕ ಪ್ರಯೋಗ, ಕೈಗಾರಿಕಾ ನಿಯಂತ್ರಣ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಇವೆರಡೂ ಬೆರೆತಿರುವ ಮಿಶ್ರಿತ (ಹೈಬ್ರಿಡ್) ಕಂಪ್ಯೂಟರ್‌ಗಳೂ ಇವೆ. ಇವುಗಳಲ್ಲಿ ಆದಾನವು ಸಾದೃಶ್ಯ (ಅನಲಾಗ್) ಮಾದರಿಯಲ್ಲಿದ್ದು ಪ್ರಕ್ರಮವು ಅಂಕಾತ್ಮಕವಾಗಿರುತ್ತದೆ. ಇನ್‌ಪುಟ್‌ಗಳನ್ನು ಹೇಗೆ ಪ್ರಕ್ರಮಿಸಬೇಕೆಂಬ ಕ್ರಮವಿಧಿಯು ಕಂಪ್ಯೂಟರ್‌ನಲ್ಲಿ ಅಂತಸ್ಥವಾಗಿ ಇರುವುದು. ಔಟ್‌ಪುಟ್‌ಗಳನ್ನು ಎಲೆಕ್ಟ್ರಾನ್ ತೆರೆಯ ಮೇಲೆ ಪ್ರದರ್ಶಿಸಬಹುದು. ಮುದ್ರಣಯಂತ್ರ ಬಳಸಿ ಕಾಗದದ ಮೇಲೆ ಮುದ್ರಿಸಲೂಬಹುದು, ಸ್ಮರಣಾಂಗದಲ್ಲಿ ದಾಸ್ತಾನಿಸಿ ಅವಶ್ಯವಾದಾಗ ಹೊರತರಲೂಬಹುದು. ಕಂಪ್ಯೂಟರ್‌ನ ಐದು ಅಂಗಗಳು: ಆದಾನಾಂಗ, ಸ್ಮರಣಾಂಗ, ನಿಯಂತ್ರಣಾಂಗ, ಅಂಕಗಣಿತಾಂಗ, ಪ್ರದಾನಾಂಗ. ಗಣಕಯಂತ್ರ

ಕಂಪ್ಯೂಟರ್ ವಿಜ್ಞಾನ

(ತಂ) ಕಂಪ್ಯೂಟರ್ ತಂತ್ರಜ್ಞಾನ, ಕ್ರಮವಿಧಿ ಇತ್ಯಾದಿಗಳ ಅಧ್ಯಯನಕ್ಕೆ ಸಂಬಂಧಿಸಿದ ವಿಜ್ಞಾನ. ಕಂಪ್ಯೂಟರ್‌ಗಳ ಕೃತಕ ಬುದ್ಧಿಶಕ್ತಿ (ನೋಡಿ), ಮಾಹಿತಿ ಮರುಗಳಿಕೆ (ಇನ್‌ಫರ್ಮೇಶನ್ ರಿಟ್ರೀವಲ್), ತಂತ್ರವಿದ್ಯಾ ಎಂಜಿನಿಯರಿಂಗ್ ಮುಂತಾದವು ಕಂಪ್ಯೂಟರ್ ವಿಜ್ಞಾನದ ವ್ಯಾಪ್ತಿಯೊಳಗೆ ಬರುತ್ತವೆ

ಕಪ್ರೋಯಿಕ್ ಆಮ್ಲ

(ರ) ಹಾಲು, ಪಾಮ್ ಎಣ್ಣೆ ಮುಂತಾದ ಮೇದೋ ವಸ್ತುಗಳಲ್ಲಿ ಗ್ಲಿಸರೈಡ್‌ಗಳಾಗಿ ದೊರೆಯುವ ಪದಾರ್ಥ. ಘನೀಭವನ ಬಿಂದು ೨0ಸೆ. ಕುಬಿಂ ೨೦೫0ಸೆ. CH3(CH2)4COOH. ಹೆಕ್ಸನೋಯಿಕ್ ಆಮ್ಲ ಎಂದೂ ಹೆಸರಿದೆ. ಇದರ ಈಥೈಲ್ ಎಸ್ಟರ್ ಭಕ್ಷ್ಯಗಳ ತಯಾರಿಕೆಯಲ್ಲಿ ರುಚಿಕಾರಕವಾಗಿ ಬಳಕೆ

ಕಫ

(ವೈ) ೧. ಶ್ವಾಸಕೋಶಗಳಿಂದ ಹೊರಬರುವ ಗಟ್ಟಿಯಾದ ಲೋಳೆ. ನಾವು ಉಸಿರಾಡುವ ಗಾಳಿಯ ಮೂಲಕ ನಮ್ಮ ಶ್ವಾಸಕೋಶಗಳನ್ನು ಪ್ರವೇಶಿಸುವ ದೂಳು, ಹೊಗೆ, ಪರಾಗಕಣ, ಬ್ಯಾಕ್ಟೀರಿಯ ಮುಂತಾದ ಕ್ರಿಮಿಗಳನ್ನು ತನ್ನಲ್ಲಿ ಬಂಧಿಸಿ ಗಂಟಲಿಗೆ ತರುತ್ತದೆ. ಹಾಗಾಗಿ ಕಫ ಕ್ರಿಮಿ, ಕಲ್ಮಶ ಭರಿತ ವಾಗಿರುತ್ತದೆ. ಇದನ್ನು ಎಲ್ಲೆಂದರಲ್ಲಿ ಉಗಿಯಬಾರದು. ಶ್ವಾಸಮಂಡಲದ ‘ಜಾಡಮಾಲಿ’ ಈ ಕಫ. ೨. ಗ್ರೀಕರ ಪ್ರಾಚೀನ ಅಂಗಕ್ರಿಯಾಶಾಸ್ತ್ರದ ಪ್ರಕಾರ, ನಮ್ಮ ಆರೋಗ್ಯವನ್ನು ನಿಯಂತ್ರಿಸುವ ನಾಲ್ಕು ರಸಗಳಲ್ಲಿ ಕಫವೂ ಒಂದು

ಕಫಹರ

(ವೈ) ಶ್ವಾಸನಾಳಗಳಲ್ಲಿ ಶೀತದ ಕಫವನ್ನು ತೆಳುವಾಗಿಸಿ ಹೊರಹಾಕುವುದಕ್ಕೆ ನೆರವಾಗುವ ಔಷಧ

ಕಫೋತ್ಪಾಟನೆ

(ವೈ) ೧. ಕಫಹಾರಕ ಔಷಧವು ಕರಗಿಸಿದ ಕಫ ವನ್ನು ಕೆಮ್ಮಿ ಉಗುಳುವುದು. ೨. ಉಗುಳು

ಕಂಬನಿ

(ಪ್ರಾ) ಕಣ್ಣಿನಲ್ಲಿಯ ಭಾಗಗಳು ಪರಸ್ಪರ ಉಜ್ಜುವುದನ್ನು ನಿವಾರಿಸಲು ಅಶ್ರುಕಾರಕ ಗ್ರಂಥಿ ಸ್ರವಿಸುವ ಲವಣಯುಕ್ತ ದ್ರವ. ಕಣ್ಣೀರು. ಕಣ್ಣಿಗೆ ಬಾಹ್ಯವಸ್ತು ಬಿದ್ದಾಗ ಇಲ್ಲವೇ ವ್ಯಕ್ತಿಯಲ್ಲಿ ಭಾವೋದ್ವೇಗ ಹೆಚ್ಚಿದಾಗ ಕಣ್ಣೀರಿನ ಉತ್ಪಾದನೆ ಅಧಿಕವಾಗಿ ಅದು ಕಣ್ಣಿನಿಂದ ಹೊರ ತೊಟ್ಟಿಕ್ಕುವುದುಂಟು. ಅಶ್ರು

ಕಂಬಸಾಲು

(ಗ) ನೋಡಿ: ಉದ್ದಸಾಲು

ಕಬಳಿಕೆ

(ಭೌ) ಪರಮಾಣವಿಕ ಅಥವಾ ಬೈಜಿಕ ವ್ಯವಸ್ಥೆ ಅಧಿಕ ಕಣಗಳನ್ನು ನುಂಗಿ ತನ್ನದಾಗಿಸಿಕೊಳ್ಳುವುದು

ಕಂಬಳಿಹುಳು

(ಪ್ರಾ) ಪತಂಗ, ಚಿಟ್ಟೆ ಮುಂತಾದ ಆರ್ತ್ರಾಪೋಡ ವಿಭಾಗದಲ್ಲಿ ಇರುವ ಲೆಪಿಡಾಪ್ಟರ ಗಣದ ಕೀಟಗಳ ಲಾರ್ವ ಅಥವಾ ಡಿಂಭಸ್ಥಿತಿ. ಕಂಬಳಿಹುಳುಗಳು ಬಹುತೇಕ ಸಸ್ಯಾಹಾರಿಗಳು. ಇವುಗಳಿಂದ ಸಸ್ಯಹಾನಿ ಆಗುವುದುಂಟು

ಕಬ್ಬಾರೆ ಹಕ್ಕಿ

(ಪ್ರಾ) ಸಿಕೋನೈನಿ ಫಾರ್ಮೀಸ್ ಗಣ. ಆರ್ಡೆಯಿಡೀ ಕುಟುಂಬಕ್ಕೆ ಸೇರಿದ, ನೀಳ್ಗಾಲಿನ, ನೀರಿನಲ್ಲಿ ನಡೆದಾಡುವ ಹಕ್ಕಿ. ಉಷ್ಣ, ಸಮಶೀತೋಷ್ಣವಲಯ ವಾಸಿ. ಕೋಳಿಗಾತ್ರದಿಂದ ರಣಹದ್ದಿನ ಗಾತ್ರದವರೆಗೆ ಇದರ ಗಾತ್ರ ಉಂಟು. ಕೊಕ್ಕು ನೀಳ, ಚೂಪು, ಭಲ್ಲೆ ಆಕಾರದ್ದು. ಕುತ್ತಿಗೆಯ ಮಧ್ಯಭಾಗದಲ್ಲಿ ಕೊಂಕಿದ್ದು ಅದು S ಆಕಾರದಲ್ಲಿ ಕಾಣುತ್ತದೆ. ರೆಕ್ಕೆ ಅಗಲ ಹಾಗೂ ಬಾಲ ಮೊಟಕು. ನಾರಾಯಣಿ ಪಕ್ಷಿ. ಕ್ರೌಂಚ

ಕಬ್ಬಿಣ

(ರ) ಆವರ್ತ ಕೋಷ್ಟಕದಲ್ಲಿ ಎಂಟನೆಯ ಗುಂಪಿಗೆ ಸೇರಿದ ಲೋಹ ಧಾತು. ಪ್ರತೀಕ Fe ಪಸಂ ೨೬, ಸಾಪರಾ ೫೫.೮೪೭, ೨೦0 ಸೆ.ನಲ್ಲಿ ಸಾಸಾಂ ೭.೮೬ ದ್ರಬಿಂ ೧೫೩೫0 ಸೆ ಕುಬಿಂ ೨೮೦೦0 ಸೆ. ವಿದ್ಯುತ್ ರೋಧಶೀಲತೆ ೯.೮ x ೧೦-೮ ಓಮ್‌ಮೀಟರ್‌ಗಳು. ಉಕ್ಕು ಹಾಗೂ ಮೆತು ಕಬ್ಬಿಣ ತಯಾರಿಕೆಯಲ್ಲಿ ಮೂಲ ಲೋಹ

ಕಬ್ಬಿಣದ ಏಣುಹಲಗೆ

(ತಂ) ಸಾಧಾರಣವಾಗಿ ಸತುವನ್ನು ಲೇಪಿಸಿ ಅಲೆಅಲೆಯಾಗಿ ನಿರಿಗೆ ಮಾಡಿದ ಕಬ್ಬಿಣದ ಹಲಗೆ (ಹಾಳೆ). ಜಿಂಕ್‌ಶೀಟ್, ಸುಕ್ಕು ತಗಡು

ಕಬ್ಬಿಣದ ಮೂಲೆಕಟ್ಟು

(ಎಂ) ಮೆದು ಉಕ್ಕಿನ l-ಆಕಾರದ ಊರೆ

ಕಬ್ಬಿನ ಸಕ್ಕರೆ

(ರ) ನೋಡಿ : ಸುಕ್ರೋಸ್

ಕಬ್ಬು

(ಸ) ಫೋಯೇಸೀ ಅಥವಾ ಗ್ರಾಮಿನೀ ಕುಟುಂಬಕ್ಕೆ ಸೇರಿದ ಅತ್ಯುಪಯುಕ್ತ ಬಹುವಾರ್ಷಿಕ ದೈತ್ಯಾಕಾರದ ಹುಲ್ಲು. ಸ್ಯಾಕರಮ್ ಅಫಿಸಿನೇರಮ್ ವೈಜ್ಞಾನಿಕ ನಾಮ. ಪಾಲಿನೇಷಿಯ ದ್ವೀಪ ಇದರ ತವರು. ಕಬ್ಬಿನಿಂದ ಬೆಲ್ಲ, ಸಕ್ಕರೆ ತಯಾರಿಸುವುದರ ಜೊತೆಗೆ ಕಾಕಂಬಿಯಿಂದ ಮದ್ಯವನ್ನೂ ಹಿಪ್ಪೆಯಿಂದ ಉತ್ತಮ ಗೊಬ್ಬರವನ್ನೂ ಸಿಪ್ಪೆಯಿಂದ ಕಾಗದ ಮತ್ತು ಮೇಣವನ್ನೂ ಉಳಿಕೆಗಳಿಂದ ಮೇವನ್ನೂ ತಯಾರಿಸುತ್ತಾರೆ

Search Dictionaries

Loading Results

Follow Us :   
  Download Bharatavani App
  Bharatavani Windows App