भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕಪೋಲ ಧಮನಿ

(ವೈ) ಕಣತಲೆಯಲ್ಲಿ ಕಂಡುಬರುವ ರಕ್ತನಾಳ

ಕಪೋಲ ಸ್ನಾಯು

(ವೈ) ಮೇಲು ಹಾಗೂ ಕೆಳ ದವಡೆಗಳ ನಡುವೆ ಇರುವ ಕೆನ್ನೆಯ ಭಾಗ ರೂಪಿಸುವ ತೆಳುವಾಗಿಯೂ ಚಪ್ಪಟೆಯಾಗಿಯೂ ಇರುವ ಸ್ನಾಯು. ತುತೂರಿ ಊದಿದಾಗ ಕೆನ್ನೆಯ ಎರಡೂ ಕಡೆಗಳಲ್ಲಿ ಈ ಸ್ನಾಯು ಉಬ್ಬುವುದನ್ನು ಕಾಣಬಹುದು

ಕಪೋಲಾಸ್ಥಿ

(ವೈ) ಕಣತಲೆಯಲ್ಲಿನ ಎಲುಬು

ಕಪ್ಪಿ

(ತಂ) ಕವಲು ತುದಿಗಳ ನಡುವೆ ಸರಿಯಾಗಿ ಕೂರುವ ಭಾಗವನ್ನು ಭದ್ರಪಡಿಸುವ ಬೋಲ್ಟ್ ಅಥವಾ ಬೆಣೆ ಇರುವಂಥ U-ಆಕಾರದ ಕೂಡಿಕೆ. ಕವಲು ಕೂಡಿಕೆ. ಸಂಯೋಜಕ

ಕಪ್ಪಿ ಎತ್ತುಗ

(ತಂ) ಹಡಗಿನ ಹಾಯಿಗಳನ್ನು /ದೂಲಗಳನ್ನು, ವ್ಯಾಪಕವಾಗಿ ಭಾರ ವಸ್ತುಗಳನ್ನು, ಎತ್ತಲು ಬಳಸುವ ಹಗ್ಗ, ಕೊಕ್ಕೆ ಮುಂತಾದವನ್ನು ಒಳಗೊಂಡಿರುವ ಯಂತ್ರ ಸಲಕರಣೆ

ಕಪ್ಪಿ ಚಕ್ರ

(ತಂ) ಹಗ್ಗ, V-ಬೆಲ್ಟ್ ಅಥವಾ ಗುಂಡುಬೆಲ್ಟ್ ಸರಿದಾಡಲು ಪರಿಧಿಯಲ್ಲಿ ಗಾಡಿ ತೋಡಿರುವ ರಾಟೆ ಚಕ್ರ. ಗಡೆ

ಕಪ್ಪು ಬಣ್ಣ

(ಭೌ) ಬೆಳಕನ್ನು ಪ್ರತಿಫಲಿಸದ ಭಾಗ. ಬಿಳಿ ಬಣ್ಣದ ವಿರುದ್ಧ ಬಣ್ಣ

ಕಪ್ಪು ಅವರೆ

(ಸ) ಕಾಸ್ಟನೊಸ್ಪರ್ಮಮ್ ಜಾತಿಗೆ ಸೇರಿದ ಮರ. ಅತ್ಯಂತ ಗಡಸಾದ ಚೌಬೀನೆ. ಇದು ನುಸಿ ಶಿಲೀಂಧ್ರಗಳ ದಾಳಿಯನ್ನು ಸಹಜವಾಗಿ ವಿರೋಧಿಸುತ್ತದೆ. ಮನೆಗಳ ಒಳ ಅಳವಡಿಕೆಗಳಲ್ಲೂ ಉನ್ನತ ದರ್ಜೆಯ ಪೀಠೋಪಕರಣಗಳ ತಯಾರಿಕೆಯಲ್ಲೂ ಬಳಕೆ

ಕಪ್ಪು ಕಾಯ

(ಭೌ) ತನ್ನ ಮೇಲೆ ಬಿದ್ದ ಎಲ್ಲ ವಿಕಿರಣವನ್ನೂ ಹೀರಿಕೊಳ್ಳುವುದೆಂದು, ಹೊರಸೂಸಬಲ್ಲುದೆಂದು ಭಾವಿಸಲಾದ ಒಂದು ಪ್ರಕಾಲ್ಪನಿಕ ಕಾಯ. ಹಾಗಾಗಿ ಇದರ ಹೀರಿಕೆ ಹಾಗೂ ಉತ್ಸರ್ಜನೆ ಅಂಕ ೧. ನಿಜವಾದ ಕಪ್ಪು ಕಾಯ ಕಾಲ್ಪನಿಕ ವಾಗಿದ್ದರೂ ಸಮಪ್ರಮಾಣದ ಉಷ್ಣತೆಯಿರುವ ಆವರಣವೊಂದರ ಗೋಡೆಯಲ್ಲಿರುವ ಪುಟ್ಟ ರಂಧ್ರವೊಂದನ್ನು ಆಚರಣೆಯಲ್ಲಿ ಕಪ್ಪುಕಾಯಕ್ಕೆ ಅತ್ಯಂತ ಸಮೀಪ ಬರುವುದೆಂದು ತೆಗೆದುಕೊಳ್ಳ ಬಹುದು. ಕೃಷ್ಣ ಕಾಯ

ಕಪ್ಪು ಕ್ಷೀರಸ್ಫಟಿಕ

(ಭೂವಿ) ಬಣ್ಣ ಕಪ್ಪಾಗಿರದಿದ್ದರೂ ಕಪ್ಪು ಹೊಳಹು ಅಥವಾ ಛಾಯೆ ಪ್ರದರ್ಶಿಸುವ ಎಲ್ಲ ಕ್ಷೀರ ಸ್ಫಟಿಕಗಳ ಹೆಸರು. ಜ್ವಾಲಾವರ್ಣದ ಮಿನುಗುಗಳಿರುವ ಆಸ್ಟ್ರೇಲಿಯನ್ ನೀಲ ಕ್ಷೀರ ಸ್ಫಟಿಕ ಪ್ರಸಿದ್ಧವಾದುದು

ಕಪ್ಪು ಚಿನ್ನ

(ಭೂವಿ) ಬಿಸ್ಮತ್ ಬೆರೆತ ಚಿನ್ನ. ಪೆಟ್ರೋಲಿಯಮ್‌ನ ಗುಣವಾಚಕ. ಕಲ್ಲೆಣ್ಣೆ. ನೋಡಿ: ಪೆಟ್ರೋಲಿಯಮ್

ಕಪ್ಪು ತುಕ್ಕುರೋಗ

(ಸ) ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ಗಳಿಂದ ಸಸ್ಯಗಳಿಗೆ ತಾಗುವ ರೋಗ. ಸಸ್ಯದ ಒಂದು ಭಾಗ ಕಪ್ಪು ಕಂದಾಗಿ ಬಣ್ಣಗೆಟ್ಟು ಕ್ರಮೇಣ ನಶಿಸುವುದು ಈ ರೋಗದ ಲಕ್ಷಣ

ಕಪ್ಪು ನಕ್ಷತ್ರ

(ಖ) ದ್ವಿನಕ್ಷತ್ರ ಸಮೂಹದಲ್ಲಿಯ, ಬೆಳಕನ್ನು ಬೀರದ ಅಗೋಚರ ತಾರೆ. ಕೃಷ್ಣನಕ್ಷತ್ರ. ಕೃಷ್ಣ ವಿವರಕ್ಕಿಂತ ಭಿನ್ನವಾದುದು. ಅತ್ಯಲ್ಪ ವಿಕಿರಣವನ್ನು ಪ್ರಸರಿಸುತ್ತದೆ. ಇದರಿಂದಾಗಿ ಇದರ ಅಸ್ತಿತ್ವ ಸುಲಭವಾಗಿ ಪ್ರಕಟವಾಗದು

ಕಪ್ಪು ನೀಹಾರಿಕೆಗಳು

(ಖ) ದೃಶ್ಯ ಪ್ರತಿಬಂಧಕಗಳಾಗಿ ಹರಡಿಕೊಂಡಿರುವ ದೂಳಿನ ಮತ್ತು ಅನಿಲಗಳ ಮೋಡಗಳು. ಆಕಾಶಗಂಗೆಯ ಸರ್ವತ್ರ ಇವು ವ್ಯಾಪಿಸಿವೆ. ಇತರ ಬ್ರಹ್ಮಾಂಡ ಗಳಲ್ಲಿಯೂ ಇವನ್ನು ವೀಕ್ಷಿಸಲಾಗಿದೆ

ಕಪ್ಪು ಪುಡಿ

(ತಂ) ಗಣಿಕೆಲಸದಲ್ಲಿ ಬಂಡೆಗಳನ್ನು ಸಿಡಿಸಲು ಬಳಸುವ ಸಿಡಿಮದ್ದು. ಪೊಟ್ಯಾಸಿಯಮ್ ನೈಟ್ರೇಟ್, ಗಂಧಕ, ಇದ್ದಲು, ಸ್ಫೋಟಕ ದ್ರವ್ಯ ಮುಂತಾದವುಗಳ ಮಿಶ್ರಣ

ಕಪ್ಪು ಪೆಟ್ಟಿಗೆ

(ತಂ) ವಿಮಾನದೊಳಗಿದ್ದು ಯಾನ ಮಾಹಿತಿಗಳನ್ನು ಸ್ವಯಂ-ದಾಖಲಿಸುವ ಸುಭದ್ರ ಸಂಪುಟ. ಯಾನದಾಖಲೆ ನಿರೂಪಕ. ಅಪಘಾತ ಸಂಭವಿಸಿದಾಗ ಇದು ಮಾಹಿತಿ ನೀಡುವಲ್ಲಿ ತುಂಬ ಉಪಯುಕ್ತ

ಕಪ್ಪು ಲಾವಾ ಗಾಜು

(ಭೂವಿ) ಜ್ವಾಲಾಮುಖಿ ಯಿಂದ ಉದ್ಭವಿಸುವ ಶಿಲಾರಸಜನ್ಯ ನೈಸರ್ಗಿಕ ಗಾಜು. ಅತಿ ಭಾರ ಮತ್ತು ಕಡುಗಪ್ಪು

ಕಪ್ಪು ವಜ್ರ

(ಭೂವಿ) ಗುಪ್ತ-ಸ್ಫಟಿಕೀಯ (cryptocrystalline) ಅತಿ ಸಾಂದ್ರ ಬಲು ಕಠಿಣ ವಜ್ರ. ಘರ್ಷಕ ವಾಗಿ ಉಪಯೋಗ. ಬ್ರೆಜಿಲ್‌ನಲ್ಲಷ್ಟೆ ಲಭ್ಯ. ಕಾರ್ಬನೆಡೊ

ಕಪ್ಪು ಹಿಮ

(ಪವಿ) ಮಾನವಕೃತ ಅನಾಹುತಗಳಿಂದಾಗಿ ತೈಲ ಬಾವಿಗಳಿಗೆ ಬೆಂಕಿಬಿದ್ದಾಗ ದೊಡ್ಡ ಪ್ರಮಾಣದಲ್ಲಿ ತೈಲ

ಕಪ್ಪುಕುಳಿ

(ಖ) ನೋಡಿ : ಕೃಷ್ಣವಿವರ

Search Dictionaries

Loading Results

Follow Us :   
  Download Bharatavani App
  Bharatavani Windows App