भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕ್ಷೇತ್ರಕೌಶಲ

(ಸಾ) ಸೇನಾ ಶಿಕ್ಷಣದಲ್ಲಿ ಮುಖ್ಯವಾಗಿ ಬಳಸುವ ಪದ. ಅರಿಯದ ರಣರಂಗದಲ್ಲಿ ಅಡಗಿರಬಹುದಾದ ಶತ್ರುವಿನ ವಿರುದ್ಧ ಸೇನಾಕಾರ್ಯ ನಡೆಸುವ ಮುನ್ನ ಸೈನಿಕರು ಅಲ್ಲಿಯ ಸಾಧಕಬಾಧಕಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸುವ ಯುದ್ಧತಂತ್ರ

ಕ್ಷೇತ್ರಗಣಿತ

(ಗ) ಗೆರೆಗಳ ಉದ್ದ ಸ್ಥಳಗಳ ಮೇಲ್ಮೈಗಳ ವಿಸ್ತೀರ್ಣ ಮತ್ತು ಘನವಸ್ತುಗಳ ಗಾತ್ರಗಳಂಥ ಜ್ಯಾಮಿತೀಯ ಪರಿಮಾಣಗಳನ್ನು ನಿರ್ಣಯಿಸುವ, ಅಳೆಯುವ ಸೂತ್ರಗಳನ್ನು ಕುರಿತ ಗಣಿತ ಶಾಖೆ

ಕ್ಷೇತ್ರಫಲ

(ಗ) ನೋಡಿ : ಸಲೆ

ಕ್ಷೇತ್ರಫಲಮಾಪಕ

(ತಂ) ಸಮತಲಾಕೃತಿಯ ಸಲೆಯನ್ನು ಯಾಂತ್ರಿಕವಾಗಿ ಅಳೆಯಲು ಬಳಸುವ ಸಾಧನ

ಕ್ಷೋಭಗೋಳ

(ಖ) ನೋಡಿ : ಹವಾಗೋಳ

ಕ್ಷೋಭಾಸೀಮೆ

(ಖ) ಅಂತರಿಕ್ಷದಲ್ಲಿ ಹವಾಗೋಳ ಮತ್ತು ಸ್ತರಗೋಳ ಇವುಗಳ ನಡುವಿನ ಗಡಿವಲಯ. ಹವಾಸೀಮೆ. ಭೂಮಿಯಿಂದ ಇದರ ದೂರ ಭೂಮಿಯ ಬೇರೆ ಬೇರೆ ಪ್ರದೇಶ ಗಳಲ್ಲಿ ಬೇರೆ ಬೇರೆ. ಸಮಭಾಜಕದ ಬಳಿ ಈ ದೂರ ಸುಮಾರು ೧೮ ಕಿಮೀ ಆದರೆ ಧ್ರುವಗಳ ಬಳಿ ೧೦ ಕಿಮೀ

ಕ್ಷೋಭೆ

(ಖ) ನೋಡಿ : ಪಥವೈಕಲ್ಯ

ಕ್ಷೋಭೆ

(ಭೂವಿ) ದ್ರವ ಅಥವಾ ಅನಿಲ ಪ್ರವಾಹದ ಹಠಾತ್ ತಿರುವು ಹಾಗೂ ಸುಳಿಗಳನ್ನೊಳಗೊಂಡ ಕ್ರಮರಹಿತ ಚಲನೆ. ಸ್ಥಳೀಯ ಒತ್ತಡಗಳೂ ವೇಗಗಳೂ ಅಕ್ರಮವಾಗಿ ಏರು ಪೇರುಗೊಳ್ಳುತ್ತ ಹೋಗುವುದರಿಂದ ಇದು ಸಂಭವಿಸುತ್ತದೆ

ಕ್ಸಿನಾನ್

(ರ) ರಾಸಾಯನಿಕ ಧಾತು. xe. ಪಸಂ ೫೪. ಪರಾ ೧೩೧.೩; ಜಡಾನಿಲ; ವಾಯುವಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿದೆ (ಮಿಲಿಯನ್ ಗಾತ್ರದಲ್ಲಿ ೦.೦೦೬ ಅಂಶ). ದ್ರಬಿಂ – ೧೧೧.೯0ಸೆ ಕುಬಿಂ -೧೦೭.೧0ಸೆ ಥರ್ಮಯಾನಿಕ್ ಕವಾಟ, ಪ್ರದೀಪ್ತ ನಳಿಕೆ ಮತ್ತು ಬಲ್ಬ್‌ಗಳಲ್ಲಿ ಬಳಕೆ. ಸಮಸ್ಥಾನಿಗಳಿವೆ. ಈ ಪೈಕಿ ಏಳು ವಿಕಿರಣಪಟು

ಕ್ಸಿನೊಬ್ಲಾಸ್ಟ್

(ಭೂವಿ) ಶಿಲೆ ರೂಪಾಂತರಗೊಳ್ಳುವಾಗ ಮೈದಳೆಯುವ ಒಂದು ಖನಿಜ. ಇದರಲ್ಲಿ ಖನಿಜದ ಲಾಕ್ಷಣಿಕ ಸ್ಫಟಿಕ ಮುಖಗಳು ಪ್ರಕಟವಾಗುವುದಿಲ್ಲ

ಕ್ಸೆರಾಕ್ಸ್

(ತಂ) ಮೂಲಪ್ರತಿಯ ನಕಲು ತೆಗೆಯುವ ಒಂದು ಅರಾಸಾಯನಿಕ, ಶುಷ್ಕರೇಖನ ವಿಧಾನ. ಫೋಟೋ ಕಾಪಿಯಿಂಗ್. ಇಂಗ್ಲೆಂಡಿನ ಕ್ಸೆರಾಕ್ಸ್ ಕಾರ್ಪೊರೇಷನ್ ಇದನ್ನು ಮೊದಲು ಶೋಧಿಸಿದುದರಿಂದ ಇದಕ್ಕೆ ಈ ಹೆಸರು

ಕ್ಸೆರೋಗ್ರಫಿ

(ತಂ) ಛಾಯಾಚಿತ್ರ ಪ್ರತಿರೂಪಣದ ಒಂದು ವಿಧಾನ. ಇದರಲ್ಲಿ ರಾಸಾಯನಿಕ ವಿಧಾನದ ಬದಲಾಗಿ ಶುಷ್ಕ ವಿಧಾನವನ್ನು ಬಳಸಲಾಗುತ್ತದೆ

ಕ್ಸೈಲಮ್

(ಸ) ಉಚ್ಚವರ್ಗದ ಸಸ್ಯಗಳಲ್ಲಿ ಪ್ರಧಾನ ಜಲವಾಹಕ ಮತ್ತು ಪ್ರಮುಖ ಆಧಾರಭೂತ ಊತಕ. ಟ್ರ್ಯಾಕೀಡ್ ನಾಳ, ತಂತು ಮುಂತಾದವು ಇದರ ಭಾಗಗಳು. ದಾರು

ಕ್ಸೈಲಾನ್

(ರ) ಸಸ್ಯಗಳಲ್ಲಿಯ ಸೆಲ್ಯುಲೋಸ್ ಜೊತೆ ನಿಕಟವಾಗಿ ಹೊಂದಿಕೊಂಡಿರುವಂತೆ ಲಭಿಸುವ ಸಂಕೀರ್ಣ ಪಾಲಿಸ್ಯಾಕರೈಡ್

ಕ್ಸೈಲೀನ್

(ರ) C6H4(CH3)2. ಡೈಮೀಥೈಲ್ ಬೆನ್ಝೀನ್. ಕಲ್ಲಿದ್ದಲು ಡಾಂಬರಿನಿಂದ ಲಭ್ಯ. ಮೂರು ಸಮಾಂಗಿಗಳು ಉಂಟು. ರಂಗುಗಳ ತಯಾರಿಕೆಯಲ್ಲಿ ಬಳಕೆ

ಕ್ಸೈಲೋಸ್

(ರ) ವರ್ಣರಹಿತ ಸ್ಫಟಿಕೀಯ ಪೆಂಟೋಸ್, C5H10O5. ಮರ ಸಕ್ಕರೆ. ದ್ರಬಿಂ ೧೪೪0ಸೆ. ಕ್ಸೈಲಾನ್‌ನಲ್ಲಿ ಲಭ್ಯ

ಕ್ಸ್ಯಾಂಥೀನ್

(ರ) ಹಳದಿ ಸ್ಫಟಿಕೀಯ ಭಿನ್ನಚಕ್ರೀಯ ಸಂಯುಕ್ತ. ದ್ರಬಿಂ ೧೦೦.೫0ಸೆ; ಕ್ಸ್ಯಾಂಥೀನ್ ವರ್ಣಗಳ ಆಧಾರ. C6H4O. CH2C6H4

ಕ್ಸ್ಯಾಂಥೈನ್

(ರ) ಮೂತ್ರ, ರಕ್ತ ಮತ್ತು ಕೆಲವು ಪ್ರಾಣಿ ಊತಕಗಳಲ್ಲಿ ಕಂಡುಬರುವ ಹಳದಿ, ವಿಲೀನಶೀಲ ಭಿನ್ನ ಚಕ್ರೀಯ ಸಂಯುಕ್ತ. C5H4N4O2.

ಕ್ಸ್ಯಾಂಥೊಫಿಲ್

(ರ) ಪತ್ರಪೀತ. ನೋಡಿ: ಲೂಟೆಯಿನ್

ಕ್ಸ್ಯಾಂಥೋಕ್ರೋಯಿಸಮ್

(ಪ್ರಾ) ಚರ್ಮದಲ್ಲಿ ಚಿನ್ನ ಮತ್ತು ಹಳದಿ ಬಣ್ಣದ ವರ್ಣಕಗಳಷ್ಟೆ ಇದ್ದು ಉಳಿದೆಲ್ಲ ವರ್ಣಕಗಳೂ ಇಲ್ಲದಿರುವ ಸ್ಥಿತಿ. ಗೋಲ್ಡ್‌ಫಿಷ್‌ನಲ್ಲಿ ಇರುವಂತೆ

Search Dictionaries

Loading Results

Follow Us :   
  Download Bharatavani App
  Bharatavani Windows App