भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕ್ಷಿಪ್ರಸ್ತಂಭನ

(ಭೌ) ಕಂಪನದಲ್ಲಿರುವ ವಸ್ತು ಹಠಾತ್ತನೆ ಜಡಸ್ಥಿತಿಗೆ ಬರುವುದು

ಕ್ಷೀಣನ

(ವೈ) ದೇಹದ ಕೋಶ/ಅಂಗ ತಕ್ಕ ಪೋಷಣೆ ಇಲ್ಲದೆ ನಶಿಸಿಹೋಗುವುದು. ಬಳಸದಿರುವ ಕಾರಣದಿಂದ ಆದ ಕ್ಷೀಣತೆ. (ಪ್ರಾ) ವಿಕೃತತೆ. ವಿರೂಪಣೆ

ಕ್ಷೀರ ಸ್ರವನ

(ವೈ) ಶಿಶು ಜನನಾನಂತರ ಬಾಣಂತಿಯಲ್ಲಿ ಎದೆಹಾಲು ಅಧಿಕ ಪ್ರಮಾಣದಲ್ಲಿ ಸ್ರವಿಸುವುದು

ಕ್ಷೀರದರ್ಶಕ

(ತಂ) ಹಾಲಿನಲ್ಲಿರುವ ಕೊಬ್ಬಿನ ಅಂಶವನ್ನು ತೋರಿಸುವ ಉಪಕರಣ

ಕ್ಷೀರವಿಷ

(ರ) ಹಾಲಿನಲ್ಲಿ ಅಥವಾ ಚೀಸಿನಲ್ಲಿ ಉತ್ಪತ್ತಿಯಾಗುವ ಒಂದು ವಿಷಾನ್ವಿತ ಸಸ್ಯಕ್ಷಾರ

ಕ್ಷೀರಸಾಂದ್ರತಾಮಾಪಕ

(ತಂ) ಹಾಲಿನ ಸಾಂದ್ರತೆ ಅಳೆಯುವ ಸಲಕರಣೆ

ಕ್ಷೀರಸ್ಫಟಿಕ

(ಭೂವಿ) ನೈಸರ್ಗಿಕ, ಅಸ್ಫಟಿಕೀಯ SiHO2; ಸಿಲಿಕದ ಅತಿಸೂಕ್ಷ್ಮ ಕಣಗಳಿರುವ ಬೆಣಚಿನ ಒಂದು ಪ್ರಭೇದ. ಬೇರೆ ಬೇರೆ ಪ್ರಮಾಣಗಳಲ್ಲಿ ನೀರಿನ ಅಂಶವಿರುತ್ತದೆ. ಕಾಠಿಣ್ಯಾಂಕ ೫-೬, ಸಾಸಾಂ ೧.೯-೨.೨. ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳ ಪ್ರತಿಫಲನವುಳ್ಳ ಹಾಲುಬಿಳುಪಿನ ಅಥವಾ ನಸುನೀಲಿಯ ಕ್ಷೀರಸ್ಫಟಿಕ. ಪ್ರಶಸ್ತ ರತ್ನವಾಗಿ ಬಳಕೆಯಲ್ಲಿದೆ

ಕ್ಷೀರೋತ್ಪತ್ತಿ

(ಪ್ರಾ) ಸಂತಾನಾನಂತರ ಸ್ತನಿಗಳ ಮೊಲೆಯಲ್ಲಿ ಹಾಲೂರಿಕೆ ಆಗುವುದು. ಸ್ತನ್ಯಗ್ರಂಥಿಗಳು ಹಾಲನ್ನು ಉತ್ಪಾದಿಸುವುವು

ಕ್ಷುದ್ರಲೋಹ

(ರ) ಸಾಪೇಕ್ಷವಾಗಿ ಋಣಾತ್ಮಕ ಎಲೆಕ್ಟ್ರೋಡ್ ವಿಭವವಿರುವ ಲೋಹ. ವಿದ್ಯುದ್ರಾಸಾಯನಿಕ ಶ್ರೇಣಿಯ ಕೊನೆಯಲ್ಲಿ ಶ್ರೇಷ್ಠಲೋಹಗಳಿಂದ ದೂರದಲ್ಲಿರುವ ಲೋಹ ಸಮುದಾಯ. ಕೀಳು ಲೋಹ

ಕ್ಷುದ್ರಾಂತ್ರ

(ವೈ) ಕಶೇರುಕಗಳಲ್ಲಿ ದೊಡ್ಡ ಕರುಳಿನೊಳಕ್ಕೆ ತೆರೆಯುವ ಸಣ್ಣ ಕರುಳಿನ ಕೊನೆಯ ಸಣ್ಣದಾದ ಹಾಗೂ ತೆಳು ಭಿತ್ತಿಯ ಭಾಗ. ಉದ್ದ ಸುಮಾರು ೧.೮-೩.೩೫ ಮೀ. ಮುರಿಗರುಳು

ಕ್ಷುದ್ರೋಗ

(ವೈ) ಅತಿಶಯ ಹಸಿವಿಗೆ ಕಾರಣವಾಗುವ ಒಂದು ರೋಗ. ಕೂಳು ಕಾಮಾಲೆ, ಹಸಿವು ರೋಗ

ಕ್ಷೇತ್ರ

(ಗ) ನೋಡಿ: ಸಹಕ್ಷೇತ್ರ

ಕ್ಷೇತ್ರ

(ಭೌ) ಕಾಯಗಳ ಅಥವಾ ಕಣಗಳ ನಡುವಿನ ಅಂತರಕ್ರಿಯೆ ವಿವರಿಸಲು ಬಳಸುವ ಪದ. ಉದಾ: ಕಾಯದ ವಿಭವವನ್ನು ‘ಸ್ಕೇಲಾರ್ (ಅದಿಶ) ಕ್ಷೇತ್ರ’ವಾಗಿ ಪರಿಮಾಣ ವೊಂದರಿಂದಷ್ಟೆ ವಿವರಿಸಲಾಗುತ್ತದೆ. ವಿದ್ಯುತ್, ಕಾಂತೀಯ ಅಥವಾ ಗುರುತ್ವ ಕ್ಷೇತ್ರಗಳನ್ನು ‘ವೆಕ್ಟರ್ (ಸದಿಶ) ಕ್ಷೇತ್ರ’ಗಳಾಗಿ ಪರಿಮಾಣ ಹಾಗೂ ದಿಶೆಗಳೊಂದಿಗೆ ವಿವರಿಸಲಾಗುತ್ತದೆ

ಕ್ಷೇತ್ರ ಉತ್ಸರ್ಜನ ಪ್ರದರ್ಶನ

(ತಂ) ಕ್ಷೇತ್ರ ಉತ್ಸರ್ಜನ ಪ್ರದರ್ಶನದಲ್ಲಿ ಆಯತಾಕಾರದ ವ್ಯೂಹ ರಚನೆಯನ್ನು ಒಳಗೊಂಡ ಕ್ಯಾಥೋಡ್ ಕಿರಣದ ನಳಿಗೆಗಳು ಇರುತ್ತವೆ (ಸಿ.ಆರ್.ಟಿ.) ವ್ಯೂಹದ ಪ್ರತಿಯೊಂದು ಕ್ಯಾಥೋಡ್ ಕಿರಣ ನಳಿಗೆಯೂ ಒಂದು ಉಪ-ಪಿಕ್ಸೆಲನ್ನು ಸೃಷ್ಟಿಸುವುದು. ಅಂತಹ ಮೂರು ನಳಿಗೆಗಳನ್ನು ಒಗ್ಗೂಡಿಸಿದಾಗ, ಅವು ಕೆಂಪು, ಹಸಿರು, ನೀಲಿ ಪಿಕ್ಸೆಲ್‌ಗಳನ್ನು ಸೃಷ್ಟಿಸುವುವು. ಕ್ಷೇತ್ರ ಉತ್ಸರ್ಜನ ಪ್ರದರ್ಶನವು ಅಧಿಕ ವರ್ಣ ವ್ಯತ್ಯಾಸ ಪ್ರಮಾಣ ಹೊಂದಿದ್ದು, ಬಹು ಬೇಗನೆ ಪ್ರತಿಕ್ರಿಯೆ ನೀಡುವುದು

ಕ್ಷೇತ್ರ ಉತ್ಸರ್ಜನ ಸೂಕ್ಷ್ಮದರ್ಶಕ

(ಭೌ) ಎಲೆಕ್ಟ್ರಾನ್‌ಗಳ ಅಥವಾ ಧನಾತ್ಮಕ ಅಯಾನ್‌ಗಳ ಕ್ಷೇತ್ರ ಉತ್ಸರ್ಜನೆಯನ್ನು ಬಳಸಿಕೊಂಡು ಉತ್ಸರ್ಜಕ ಮೇಲ್ಮೈಯ ಬಿಂಬವನ್ನು ಪ್ರತಿದೀಪ್ತ ತೆರೆಯ ಮೇಲೆ ದೊಡ್ಡದಾಗಿಸುವ ಸಾಧನ

ಕ್ಷೇತ್ರ ಉತ್ಸರ್ಜನೆ

(ತಂ) ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ, ಒಂದು ಘನ ವಸ್ತುವಿನಿಂದ ಎಲೆಕ್ಟ್ರಾನ್‌ಗಳು ಉತ್ಸರ್ಜನೆಗೊಳ್ಳುವ ಪ್ರಕ್ರಿಯೆ. ಇದರ ವಿಶೇಷತೆಯೆಂದರೆ, ಘನ ವಸ್ತುವಿನ ಮೊನಚಾದ ತುದಿಯ ಬಳಿ ಕ್ಷೇತ್ರವು ವರ್ಧನೆ ಯಾದಾಗ, ಭಾರಿ ವಿದ್ಯುತ್ ಕ್ಷೇತ್ರವು ಉತ್ಪಾದನೆಯಾಗುವುದು

ಕ್ಷೇತ್ರ ಕುಂಡಲಿ

(ಭೌ) ವಿದ್ಯುದ್ಯಂತ್ರದಲ್ಲಿ ಕಾಂತಕ್ಷೇತ್ರ ಉಂಟುಮಾಡುವ ತಂತಿ ಸುರುಳಿ

ಕ್ಷೇತ್ರಕಲನ

(ಗ) ಗೊತ್ತಿರುವ ಮೇಲ್ಮೈ ವಿಸ್ತೀರ್ಣಕ್ಕೆ ಸಮವಾದ ಚೌಕ ವಿಸ್ತೀರ್ಣವನ್ನು ಶೋಧಿಸುವ ಕ್ರಿಯೆ

ಕ್ಷೇತ್ರಕಾಂತ

(ಭೌ) ವಿದ್ಯುತ್ ಯಂತ್ರ ಅಥವಾ ಸಾಧನದಲ್ಲಿ ಕಾಂತಕ್ಷೇತ್ರವನ್ನು ಸೃಜಿಸುವ ಅಯಸ್ಕಾಂತ. ಕೆಲವು ಸಣ್ಣ ಡೈನಾಮೊಗಳಲ್ಲೂ ಮೋಟಾರ್‌ಗಳಲ್ಲೂ ಇದು ಒಂದು ಶಾಶ್ವತ ಕಾಂತ. ಹೆಚ್ಚಿನ ಯಂತ್ರಗಳಲ್ಲಿ ಇದೊಂದು ವಿದ್ಯುತ್ಕಾಂತ

ಕ್ಷೇತ್ರಕಾರ್ಯ

(ಸಾ) ನಿರ್ದಿಷ್ಟ ಕ್ಷೇತ್ರದಲ್ಲಿ ಎಸಗಲಾದ ಕಾರ್ಯ. ಹಂಗಾಮಿ ಕೋಟೆ ಕೊತ್ತಲಗಳು. ಹೊಲದಲ್ಲಿನ ಕೆಲಸ

Search Dictionaries

Loading Results

Follow Us :   
  Download Bharatavani App
  Bharatavani Windows App