भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕನಿಷ್ಠಕಾಲಿಕ

(ಗ) ಯಾವುದೇ ಜಾರುವ ಕಣವು ಒಂದು ಬಿಂದುವಿನಿಂದ ಕೆಳಗಿನ ಇನ್ನೊಂದು ಬಿಂದುವಿಗೆ ಕನಿಷ್ಠ ಅವಧಿಯಲ್ಲಿ ಗುರುತ್ವಾಕರ್ಷಣ ಪ್ರಭಾವದಿಂದಾಗಿ ಮಾತ್ರ ಬೀಳಲು ಅನುಸರಿಸುವ ಪಥ

ಕನೀನಿಕಾ ಪಟ

(ವೈ) ನೋಡಿ : ಪಾಪೆಪೊರೆ

ಕನೀನಿಕೆ

(ವೈ) ನೋಡಿ : ಪಾಪೆ

ಕನ್ನಡಿ

(ಭೌ) ಉತ್ಕೃಷ್ಟ ಮೆರಗು (ಹೊಳಪು) ನೀಡಲಾದ ಮತ್ತು ವಿಶೇಷ ವಿಸರಣವಿಲ್ಲದೆ ಬೆಳಕಿನ ಕಿರಣಗಳನ್ನು ಪ್ರತಿಫಲಿಸ ಬಲ್ಲ ತಲ. ಇದರ ಸರ್ವಸಾಮಾನ್ಯ ರೂಪಗಳು: ಸಮತಲೀಯ, ಗೋಳೀಯ (ಪೀನ ಮತ್ತು ನಿಮ್ನ) ಮತ್ತು ಪರವಲಯಜಾತ್ಮಕ (paraboloidal, ಸಾಧಾರಣವಾಗಿ ನಿಮ್ನ). ಇದರ ತಯಾರಿಕೆಯಲ್ಲಿ ಬಳಸಲಾಗುವ ಪದಾರ್ಥಗಳು: ಹಿಂಬದಿಗೆ/ಮುಂಬದಿಗೆ ಬೆಳ್ಳಿ ಲೇಪಿಸಿದ ಗಾಜು, ಪಾದರಸ, ತವರ ಮತ್ತು ತಾಮ್ರ ಮಿಶ್ರಲೋಹ ಅಥವಾ ಸ್ಟೈನ್‌ಲೆಸ್ (ತುಕ್ಕು ಹಿಡಿಯದ) ಉಕ್ಕು. ಮುಕುರ, ದರ್ಪಣ

ಕನ್ಯಾಕೀಟ

(ಪ್ರಾ) ಓಡೊನೇಟ ಗಣ ಜೈಗಾಪ್ಟರ ಉಪಗಣದ ಪ್ರಮುಖ ಹಿಂಸ್ರ ಕೀಟ. ಸಮರೂಪದ ಹಿಂಗಾಲು ಮುಂಗಾಲುಗಳಿವೆ. ಕೊಡತಿಹುಳು

ಕಂಪಕ

(ಎಂ) ಒಂದು ನಿಮಿಷಕ್ಕೆ ೩೦೦೦ದಿಂದ ೧೦,೦೦೦ ಕಂಪನಗಳನ್ನುಂಟುಮಾಡಿ, ಹಸಿಯ ಕಾಂಕ್ರೀಟನ್ನು ಅಡಕಿಸುವ ಯಂತ್ರ. ಇವುಗಳ ಪ್ರಕಾರಗಳು – ಆಂತರಿಕ ಕಂಪಕ, ಮೇಲ್ಮೈ ಕಂಪಕ; ಸ್ಕ್ರೀಡ್ ಕಂಪಕ, ರೂಪಕದ ಕಂಪಕ

ಕಂಪನ ಕಶ

(ಜೀ) ತನ್ನ ಚಲನೆಗಳಿಂದ ಆಹಾರವನ್ನು ಬಾಯಿಯೊಳಕ್ಕೆ ಎಳೆದುಕೊಳ್ಳಲು ಬಳಸುವ, ಕೆಲವು ಶೈವಲ ಪ್ರಾಣಿಗಳಲ್ಲಿರುವ ಚಾವಟಿಯಂಥ ಅಂಗ

ಕಂಪನಾನುಕುಂಚನ

(ಸ) ಕೆಲವು ಸಸ್ಯಗಳು (ಉದಾ: ಮುಟ್ಟಿದರೆಮುನಿ) ಆಘಾತಕ್ಕೆ, ವಿಶೇಷವಾಗಿ ಯಾಂತ್ರಿಕ ಆಘಾತಕ್ಕೆ ತೋರುವ ಅನುಕುಂಚನ ಪ್ರತಿಕ್ರಿಯೆ

ಕಂಪನಾನುವರ್ತನೆ

(ಭೌ) ಕಂಪನ ಆಗುತ್ತಿರುವ ದಿಶೆಯತ್ತ ವಾಲುವುದು

ಕಂಪವಾತ

(ವೈ) ಆಧಾರ ನರಗ್ರಂಥಿಗಳ ವ್ಯಾಧಿ. ಮಕ್ಕಳಿಗೂ ಕುದುರೆಗಳಿಗೂ ಬರುವ ಸೆಳವು ರೋಗ. ಸ್ನಾಯುಗಳ ಹತೋಟಿ ತಪ್ಪಿ ಕೈಕಾಲು ಮುಖ ನಾಲಗೆಗಳು ಸದಾ ಅಲುಗಾಡುತ್ತಿರುತ್ತವೆ

ಕಪಾಲ ನರಮಂಡಲ

(ವೈ) ಕಶೇರುಕ ಗಳಲ್ಲಿ ಮಿದುಳಿನಿಂದ ನೇರವಾಗಿ ಹಬ್ಬಿರುವ ೧೦-೧೨ ನರಯುಗ್ಮಗಳು

ಕಪಾಲಮಾಪನ

(ಜೀ) ತಲೆಬುರುಡೆಗಳನ್ನು ಅಳೆಯುವ ವಿಜ್ಞಾನ

ಕಪಾಲಶಸ್ತ್ರಕ್ರಿಯೆ

(ವೈ) ೧. ಮಿದುಳಿನ ಮೇಲೆ ನಡೆಸುವ ಶಸ್ತ್ರಚಿಕಿತ್ಸೆಗಾಗಿ ತಲೆಬುರುಡೆಯನ್ನು ತೆರೆಯುವ ಶಸ್ತ್ರಕ್ರಿಯೆ. ೨. ಪ್ರಸವ ಆತಂಕವಾದಾಗ ಮಗುವನ್ನು ಗರ್ಭಾಶಯದಿಂದ ಹೊರಕ್ಕೆಳೆಯಲು ಅದರ ತಲೆ ಅಮುಕುವುದು, ಜಜ್ಜುವುದು. ಕಪಾಲಮರ್ದನ

ಕಪಾಲಸಾಮುದ್ರಿಕ ವಿಜ್ಞಾನ

(ಸಾ) ವ್ಯಕ್ತಿಯ ಬುದ್ಧಿ ಸಾಮರ್ಥ್ಯ ಮತ್ತು ಗುಣಲಕ್ಷಣಗಳನ್ನು ಆತನ ತಲೆಬುರುಡೆಯ ರಚನೆ ಪ್ರತಿಬಿಂಬಿಸುತ್ತದೆ ಎಂಬ ಹಿಂದಿನ ಕಲ್ಪನೆ, ಅದನ್ನು ಪರೀಕ್ಷಿಸುವ, ಅಧ್ಯಯನ ಮಾಡುವ ಒಂದು ಶಾಸ್ತ್ರ

ಕಪಾಲಾವರಣ

(ಪ್ರಾ) ಕಶೇರುಕಗಳಲ್ಲಿ ಅಸ್ಥಿ/ಮೃದ್ವಸ್ಥಿ ಕಪಾಲವನ್ನು ಆವರಿಸಿರುವ ತಂತು ಊತಕದ ಪದರ

ಕಪಿ

(ಪ್ರಾ) ಸ್ತನಿ ವರ್ಗ, ಪ್ರೈಮೆಟ್ ಗಣ ಹಾಗೂ ಅಂತ್ರೊಪಾಯ್ಡಿಯ ಉಪಗಣಕ್ಕೆ ಸೇರಿದ ಪ್ರಾಣಿ. ಈ ಉಪಗಣದಲ್ಲಿ ಪ್ಲಾಟಿರೈನಿ ಹಾಗೂ ಕ್ಯಾಟರೈನಿ ಎಂಬ ಎರಡು ಬುಡಕಟ್ಟುಗಳಿವೆ. ಮೊದಲಿನವು ನವ ಪ್ರಪಂಚದವು. ದಕ್ಷಿಣ ಮತ್ತು ಮಧ್ಯ ಅಮೆರಿಕ ದೇಶಗಳಲ್ಲಿ ವಾಸ. ಎರಡನೆಯವು ಪ್ರಾಚೀನ ಪ್ರಪಂಚದ ಕಪಿಗಳು. ಮಂಗ, ಕೋಡಗ, ಕೋತಿ

ಕಪೈಬ

(ಸ) ಕೊಪೈಫೆರ ಜಾತಿಗೆ ಸೇರಿದ ಅಮೆರಿಕದ ದ್ವಿದಳೀಯ ಮರಗಳಿಂದ ಪಡೆದ ಚೋದಕ (ಉತ್ತೇಜಕ) ಚಂಚಲ ತೈಲ ಮತ್ತು ರಾಳ. ವಾಸನಾದ್ರವ್ಯವಾಗಿ ಬಳಕೆ. ಗುಗ್ಗುಳ, ಲೋಬಾನ

ಕಂಪೈಲರ್

(ಕಂ) ಒಂದು ಸಂಕೇತ ಭಾಷೆಯಲ್ಲಿರುವ ಕ್ರಮವಿಧಿಗಳನ್ನು ಇನ್ನೊಂದು ಸಂಕೇತ ಭಾಷೆ ಅಥವಾ ಯಂತ್ರ ಭಾಷೆಗೆ ಅನುವಾದಿಸುವುದನ್ನು ಸಾಧ್ಯವಾಗಿಸುವ ನಿಯತವಾದ ಸಂಕೇತ ಸೂಚನಾವಳಿ (ರೊಟೀನ್)

ಕಪೋತ

(ಪ್ರಾ) ಕೊಲಂಬಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ಪಾರಿವಾಳ. ಕೆಲವು ಪಾರಿವಾಳ ಪ್ರಭೇದಗಳಿಗೆ ವಿವಿಧ ರೀತಿಯ ತರಬೇತು ನೀಡಬಹುದು. ಮಾನವ ಕ್ರಿ.ಪೂ. ಮೂರು ಸಹಸ್ರ ವರ್ಷಗಳ ಹಿಂದೆಯೇ ಪಾರಿವಾಳವನ್ನು ಪಳಗಿಸಲು ಆರಂಭಿಸಿದ. ಪಂದ್ಯಾಟ, ಟಪಾಲು ಸಾಗಣೆ ಇತ್ಯಾದಿ ಕೆಲಸಗಳನ್ನು ಇವುಗಳಿಗೆ ಕಲಿಸುವುದು ಸಾಧ್ಯ. ನೋಡಿ : ಪಾರಿವಾಳ

ಕಪೋಲ

(ವೈ) ನೋಡಿ : ಕಣತಲೆ

Search Dictionaries

Loading Results

Follow Us :   
  Download Bharatavani App
  Bharatavani Windows App