भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕಂತೆ

(ಸಾ) ವಿವಿಧ ವಸ್ತುಗಳನ್ನು ಕಟ್ಟಿ ಮಾಡಿದ ಪಿಂಡಿ, ಮೂಟೆ. ಸಮುದಾಯ. (ವೈ) ಶರೀರದಲ್ಲಿ ಸಮಾಂತರವಾಗಿರುವ ನರಗಳು, ಎಳೆ, ನಾರು ಮೊದಲಾದವುಗಳ ಗೊಂಚಲು. ಕುಚ್ಚು

ಕತ್ತಲೆ ಕೋಣೆ

(ತಂ) ಬೆಳಕು ಪ್ರವೇಶಿಸದಂತೆ ಮಾಡಿದ ಕೋಣೆ. ವಿಶೇಷವಾಗಿ ಛಾಯಾಚಿತ್ರಣದಲ್ಲಿ ಫಿಲಮ್‌ಗಳನ್ನು ತೊಳೆಯಲು ಬಳಸುವ ಕೋಣೆ

ಕತ್ತಾಳೆ

(ಸ) ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದ ಏಕದಳ ಸಸ್ಯ. ಅಗೇವ್ ವೈಜ್ಞಾನಿಕ ನಾಮ. ತವರು ಮೆಕ್ಸಿಕೋ. ಅಲಂಕಾರಕ್ಕಾಗಿ ಕುಂಡಗಳಲ್ಲಿ ಬೆಳೆಸುವುದುಂಟು. ಎಲೆಗಳಿಂದ ತೆಗೆಯುವ ನಾರು ಪ್ರಸಿದ್ಧ. ಭೂತಾಳೆ. ರಕ್ಕಸ ಪಟ್ಟಿ

ಕತ್ತುಪಟ್ಟಿ

(ಪ್ರಾ) ಪ್ರಾಣಿಯ ಕೊರಳಿನ ಸುತ್ತ ಇರುವ ಗಡಸಾದ ಅಥವಾ ಉದ್ದವಾದ ಕೂದಲಿನ ಇಲ್ಲವೇ ಗರಿಗಳ ಒಂದು ರೀತಿಯ ಪಟ್ಟಿ. ಕಂಠವೇಷ್ಟನ

ಕಂದಕ

(ತಂ) ಕಿರಿದಾದ ಅಗಲ, ಕಡಿದಾದ ಬದಿಗಳಿರುವ, ಆಳವಾದ ಮತ್ತು ಉದ್ದವಾದ ಕಾಲುವೆ. ಅಗಲದಲ್ಲಿಯೂ ವಿಸ್ತಾರ ದಲ್ಲಿಯೂ ಕಣಿವೆಗಿಂತ ಚಿಕ್ಕದು. ಕಂದಕಗಳು ನೈಸರ್ಗಿಕವಾಗಿರ ಬಹುದು, ಸಮುದ್ರ ತಳಗಳಲ್ಲಿ ಅಥವಾ ಗುಡ್ಡ ಪ್ರದೇಶಗಳಲ್ಲಿ ಇರುವಂತೆ ಮನುಷ್ಯಕೃತವೂ ಆಗಿರಬಹುದು

ಕಂದಕ ಜ್ವರ

(ವೈ) ಮುಖ್ಯವಾಗಿ ಹೇನುಗಳಿಂದ ಹಬ್ಬುವ ಒಂದು ವ್ಯಾಧಿ. ಒಂದನೇ ಮಹಾಯುದ್ಧದಲ್ಲಿ ಸೈನಿಕರು ವಿಶೇಷವಾಗಿ ಬಾಧಿತರಾಗಿದ್ದರು. ಎಡಬಿಡದೆ ಬರುವ ಜ್ವರ, ತಲೆನೋವು, ಮೈಕೈನೋವು ಇದರ ಲಕ್ಷಣಗಳು

ಕದಿಯುವ ಚಾಳಿ

(ವೈ) ಇತರರಿಗೆ ಸೇರಿದ ವಸ್ತುಗಳನ್ನು ಅವರಿಗೆ ತಿಳಿಯದಂತೆ ಸ್ವಂತಕ್ಕೆ ತೆಗೆದುಕೊಳ್ಳಲು ವ್ಯಕ್ತಿಯನ್ನು ಪ್ರೇರಿಸುವ ಮನೋರೋಗ. ಅಗತ್ಯವಿಲ್ಲದಿದ್ದರೂ, ಕೊಳ್ಳುವ ಶಕ್ತಿ ಇದ್ದರೂ ಏನನ್ನಾದರೂ ಕದಿಯುವ ತೀವ್ರ ಪ್ರವೃತ್ತಿ ಉಂಟು ಮಾಡುವ ಮಾನಸಿಕ ವ್ಯಾಧಿ. ಚೌರ್ಯೋನ್ಮಾದ

ಕದಿರು

(ಸ) ಧಾನ್ಯದ ತೆನೆ

ಕದಿರು

(ತಂ) ನೂಲು ಯಂತ್ರದಲ್ಲಿ ದಾರ ಸುತ್ತುವ ಉರುಳೆಯ ಆಸರೆ ಕಂಬಿ. ತಿರುಗಣಿ ಅಕ್ಷವಾಗಿ ವರ್ತಿಸುವ ಭಾಗ

ಕದಿರು ಬಿಲ್ಲೆ

(ತಂ) ಹತ್ತಿ ಗಿರಣಿಯಲ್ಲಿ ಕದಿರಿನ ಚಲನೆಯನ್ನು ಸಮತೋಲನದಲ್ಲಿಡಲು ಅದಕ್ಕೆ ಜೋಡಿಸಿರುವ ಬಿಲ್ಲೆ

ಕದಿರು ರೂಪ

(ಜೀ) ಎರಡು ತುದಿಗಳಲ್ಲೂ ಮೊನಚಾಗಿದ್ದು ಕದಿರಿನ ಅಥವಾ ಚುಟ್ಟದ ಆಕಾರದಲ್ಲಿರುವ (ಪ್ರಾಣಿ ಅಥವಾ ಸಸ್ಯ)

ಕದಿರುಗಿಣಿ

(ಪ್ರಾ) ಪ್ಯಾಸೆರಿ ಫಾರ್ಮೀಸ್ ಗಣದ ನೆಕ್ಟರಿನೈಯಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ಉಷ್ಣ ವಲಯ ವಾಸಿ. ಮಿರುಗುವ ವರ್ಣ ರಂಜಿತ ಗರಿ, ಬಾಗಿದ ಕೊಕ್ಕು, ಉದ್ದಕ್ಕೆ ಚಾಚಬಹುದಾದ ಕೊಳವೆಯಾಕಾರದ ನಾಲಗೆ ಇದರ ವಿಶಿಷ್ಟ ಲಕ್ಷಣಗಳು. ಸನ್‌ಬರ್ಡ್

ಕದಿರುಂಡೆ

(ತಂ) ಕದಿರಿಗೆ ಸುತ್ತಿರುವ ಶಂಕುವಿನ ಆಕಾರದ ದಾರದ ಉಂಡೆ

ಕಂದೀಲು

(ತಂ) ಬೇಕಾದಲ್ಲಿಗೆ ಒಯ್ಯಬಹುದಾದ ದೀಪ. ಲಾಂದ್ರ, ಲಾಟೀನು

ಕಂದು

(ರ) ಕಪಿಲವರ್ಣ. ಕಿತ್ತಳೆ ಮತ್ತು ಕಪ್ಪು ಬಣ್ಣಗಳನ್ನು ಬೆರೆಸಿದಾಗ ದೊರೆಯುವ ಬಣ್ಣ

ಕಂದು ತುಕ್ಕು

(ಸ) ಪ್ಲಮ್ ಮತ್ತು ಇತರ ಹಣ್ಣು ಮರಗಳಿಗೆ ತಗಲುವ ಶಿಲೀಂಧ್ರಜನ್ಯ ರೋಗ. ಕಡಿದು ಒಟ್ಟಿದ ಮರ ನಶಿಸುವುದು ಈ ಕಾರಣದಿಂದ

ಕನಸು

(ವೈ) ನಿದ್ರಾವಸ್ಥೆಯಲ್ಲಿ ಮನಸ್ಸಿನಲ್ಲಿ ಅನೈಚ್ಛಿಕವಾಗಿ ಮೂಡುವ ಬಿಂಬಗಳು, ವಿಚಾರಗಳು, ಭಾವನೆಗಳು

ಕನಿಷ್ಠ ಛೇದನ ಹೃದಯ ಶಸ್ತ್ರಚಿಕಿತ್ಸೆ

(ವೈ) ವಕ್ಷವನ್ನು ಸೀಳಿ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡುವ ವಿಧಾನವನ್ನು ತಪ್ಪಿಸಲು ಹುಟ್ಟಿಕೊಂಡ ನೂತನ ವಿಧಾನಗಳಿಗೆ ನೀಡಿರುವ ಸಮೂಹ ಹೆಸರು. ಇಲ್ಲಿ ಹೃದಯ ಛೇದನ ಕನಿಷ್ಠ ಪ್ರಮಾಣದಲ್ಲಿ ನಡೆಯುತ್ತದೆ. ಇದರಿಂದ ರೋಗಿ ಬೇಗ ಚೇತರಿಸಿಕೊಳ್ಳಬಹುದು ಹಾಗೂ ಜೀವಾಪಾಯ ಸಾಧ್ಯತೆ ಕಡಿಮೆಯಾಗುತ್ತದೆ. ಉದಾ: ಉದರದರ್ಶಕ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಉಪಕರಣಗಳಂತಹವನ್ನೇ ವಕ್ಷದಲ್ಲಿ ಬಳಸಿ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ಇದು ಪ್ರಾಯೋಗಿಕ ಹಂತ ದಲ್ಲಿದೆ. ಹೃದಯ-ಶ್ವಾಸಕೋಶ ಯಂತ್ರವನ್ನು ಬಳಸದೇ ನಡೆಸುವ ಹೃದಯ ಶಸ್ತ್ರ ಚಿಕಿತ್ಸೆಗಳಿಗೂ ಈ ಹೆಸರನ್ನೇ ಬಳಸುವುದುಂಟು

ಕನಿಷ್ಠ ಭರತಗಳು

(ಖ) ನೋಡಿ: ಉಬ್ಬರವಿಳಿತಗಳು

ಕನಿಷ್ಠ ವರ್ಗ ವಿಧಾನ

(ಸಂ) ದತ್ತಾಂಶ (xi  yi); i = 1,2…..,nಗೆ ವಕ್ರರೇಖೆಯನ್ನು ಹೊಂದಿಸುವ ಉಪಯುಕ್ತ ಹಾಗೂ ಜನಪ್ರಿಯ ವಿಧಾನ. ಉದಾ: ಚರಗಳ ನಡುವಿನ ಸಂಬಂಧ y = a+bx ಎಂದಿರುವಾಗ S = [Yi-(a+bxi)]2 ಎಂಬ ವರ್ಗ ಅತ್ಯಂತ ಕಡಿಮೆಯಿರುವಂತೆ a ಮತ್ತು b ಮೌಲ್ಯಗಳನ್ನು ದತ್ತಾಂಶದಿಂದ ಅಂದಾಜಿಸುವುದು

Search Dictionaries

Loading Results

Follow Us :   
  Download Bharatavani App
  Bharatavani Windows App