भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕಡಲ ಹೂ

(ಪ್ರಾ) ಸೀಲೆಂಟರೇಟ ವಿಭಾಗ, ಅಂಥೋಜೋವ ವರ್ಗ ಹಾಗೂ ಹೆಕ್ಸಕೊ ರಾಲಿಯ ಉಪವರ್ಗಕ್ಕೆ ಸೇರಿದ ಸಮುದ್ರ ವಾಸಿ ಪ್ರಾಣಿ. ಮಧ್ಯೆ ಬಾಯಿ ಉಳ್ಳ, ತಲೆಯ ಸುತ್ತ ಹೂವಿನ ದಳಗಳಂತೆ ಜೋಡಿಸಿರುವ ಕೋಡು ಬಳ್ಳಿಗಳಿರುವುದ ರಿಂದ ಇದಕ್ಕೆ ಈ ಹೆಸರು. ಮಾಂಸಾಹಾರಿ

ಕಡಲಕಳೆ

(ಸ) ಸಮುದ್ರದಲ್ಲಿ ಅಥವಾ ಉಬ್ಬರಗಳ ಅಂತರವಲಯದಲ್ಲಿ ಕಂಡುಬರುವ ದೊಡ್ಡ ಬಹುಕೋಶೀಯ ಶೈವಲಗಳು. ಇವು ಸಾಮಾನ್ಯವಾಗಿ ಕ್ಲೋರೊಫೈಟ, ಫಿಯೊಫೈಟ ಹಾಗೂ ರ‍್ಹೊಡೊಫೈಟಗಳ ಪ್ರಭೇದಗಳು

ಕಡಲಗಿಣಿ

(ಪ್ರಾ) ಕಾರಡ್ರಯಿಫಾರ್ಮೀಸ್ ಗಣದ ಅಲ್ಸಿಡೀ ಕುಟುಂಬಕ್ಕೆ ಸೇರಿದ ದೊಡ್ಡ ತಲೆ, ಬಣ್ಣಬಣ್ಣದ ಗೆರೆಗಳಿರುವ, ದೊಡ್ಡ ಕೊಕ್ಕು, ಕಪ್ಪು ಮತ್ತು ಬಿಳಿ ಗರಿಗಳಿರುವ ಹಕ್ಕಿ. ಸದಾ ನೀರಿನಲ್ಲಿ ತೇಲುತ್ತ ಮುಳುಗುತ್ತ ಕಾಲ ಕಳೆಯುತ್ತದೆ. ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಸಾಮಾನ್ಯ

ಕಡಲನೊರೆ

(ಪ್ರಾ) ಕೆಲವು ಶೀರ್ಷಪಾದಿಗಳಲ್ಲಿ ದೇಹದೊಳಗೆ ಮೂಳೆಯಂತೆ ಹುದುಗಿಕೊಂಡಿರುವ ಚಿಪ್ಪು, ಹಲ್ಲು ಮೊದಲಾದವುಗಳಿಗೆ ಹೊಳಪು ನೀಡಲು ಅಥವಾ ಪಂಜರದ ಹಕ್ಕಿಗೆ ಆಹಾರದ ಜೊತೆಗೆ ನೀಡಲು ಬಳಸುವ ಕಟ್‌ಲ್ ಮೀನಿನ ಒಳಸಿಂಪಿ/ಚಿಪ್ಪಿನ ಪುಡಿ. ಕಡಲನಾಲಗೆ, ಬೆಸಣದ ಎಲುಬು

ಕಡಲಾಮೆ

(ಪ್ರಾ) ಸರೀಸೃಪ ವರ್ಗದ ಕಿಲೋನಿಯ ಗಣಕ್ಕೆ ಸೇರಿದ ಸಮುದ್ರವಾಸಿ ಪ್ರಾಣಿ. ಡರ್ಮೋಕೆಲಿಸ್ ಕೋರಿಯೇಸಿಯಂ, ಕಿಲೋನಿ ಇಂಬ್ರಿಕೇಟ ಮತ್ತು ಕಿಲೋನಿ ಮೈಡಾಸ್ ಎಂಬ ೩ ಮುಖ್ಯ ಪ್ರಭೇದಗಳು. ಮಾಂಸಾಹಾರಿ. ಡರ್ಮೋಕೆಲಿಸ್ ಕೋರಿಯೇ ಸಿಯ ಸುಮಾರು ೩ ಮೀಟರ್ ಉದ್ದ ಬೆಳೆದು ಅರ್ಧ ಟನ್ ತೂಗುವುದು. ಕಿಲೋನಿ ಇಂಬ್ರಿಕೇಟವನ್ನು ಗರುಡ ಮೂಗಿನ ಆಮೆ ಎಂದೂ, ಕಿಲೋನಿ ಮೈಡಾಸ್‌ನ ಕೊಬ್ಬು ಹಸಿರಾಗಿರುವುದರಿಂದ ಅದನ್ನು ಹಸಿರು ಆಮೆ ಎಂದೂ ಕರೆಯುತ್ತಾರೆ. ಇವಕ್ಕೆ ಹಲ್ಲಿಲ್ಲದ ಮೂತಿ ಇದೆ

ಕಡಲಿನ ಹಿಂಜರಿಕೆ

(ಭೂವಿ) ಸಮುದ್ರದ ಜಲಮಟ್ಟ ಕುಸಿಯುವುದರಿಂದ ಇಲ್ಲವೇ ತೀರ ಪ್ರದೇಶದ ಮಟ್ಟ ಏರುವುದರಿಂದ ಇದು ಸಂಭವಿಸುತ್ತದೆ

ಕಡಲು

(ಭೂವಿ) ಜಲಗೋಳದ ಒಂದು ಭಾಗ. ಸಾಗರಕ್ಕಿಂತ ಚಿಕ್ಕದು. ಅದರಂತೆ ಇದರ ನೀರೂ ಉಪ್ಪು. ಸಮುದ್ರ

ಕಡಲೇಡಿ

(ಪ್ರಾ) ನೋಡಿ : ಲಾಬ್‌ಸ್ಟರ್

ಕಡಲ್ಗಾಲುವೆ

(ಭೂವಿ) ನೀರು ಹರಿಯಲು ನೈಸರ್ಗಿಕವಾಗಿ ಏರ್ಪಟ್ಟಿರುವ ಪಾತಳಿ. ಜಲಮಾರ್ಗ. ನದೀ ಪಾತ್ರ. ಎರಡು ವಿಶಾಲ (ಸಮುದ್ರ) ಪ್ರದೇಶಗಳನ್ನು ಸೇರಿಸುವ ಜಲಸಂಧಿಗಿಂತಲೂ ಅಗಲವಾದ ಸಮುದ್ರ ಭಾಗ. ಉದಾ: ಇಂಗ್ಲಿಷ್ ಕಡಲ್ಗಾಲುವೆ

ಕಡಲ್ಗಾಳಿ

(ಭೂ) ಕಡಲಿನಿಂದ ನೆಲದೆಡೆಗೆ ಬೀಸುವ ಗಾಳಿ. ನೆಲದ ಮೇಲ್ಮೈ ಉಷ್ಣತೆ ಹತ್ತಿರದ ಕಡಲಿನ ಉಷ್ಣತೆಗಿಂತ ಹೆಚ್ಚಾದಾಗ ಬಿಸಿಯಾದ ಗಾಳಿ ಮೇಲೇರಿ ನೆಲದ ಮೇಲೆ ಒತ್ತಡ ಕಡಿಮೆಯಾದಾಗ ಅದರತ್ತ ಕಡಲ್ಗಾಳಿ ಬೀಸಲಾರಂಭಿಸುತ್ತದೆ. ಸಾಧಾರಣವಾಗಿ ಇದು ಹಗಲು ಹೊತ್ತು ಸಂಭವಿಸುತ್ತದೆ, ಏಕೆಂದರೆ ಆಗ ನೆಲದ ಗಾಳಿ ಬೇಗ ಕಾಯುತ್ತದೆ ಮತ್ತು ತಂಪಾದ ಸಮುದ್ರದ ಗಾಳಿ ಕಾಯುವುದು ನಿಧಾನ. ನೋಡಿ : ನೆಲಗಾಳಿ

ಕಡವೆ

(ಪ್ರಾ) ಸರ್ವಿಡೀ ಕುಟುಂಬಕ್ಕೆ ಸ್ತನಿ ವರ್ಗ ಹಾಗೂ ಆರ್ಟಿಯೊ ಡ್ಯಾಕ್ಟಿಲ ಉಪವರ್ಗಕ್ಕೆ ಸೇರಿದ ದೊಡ್ಡ ಜಿಂಕೆ. ಸರ್ವಸ್ (ರೂಸ) ಯೂನಿಕಲರ್ ವೈಜ್ಞಾನಿಕ ನಾಮ. ಸಾಂಬರ್ ಎಂಬ ಹೆಸರುಂಟು. ಭಾರತ, ಶ್ರೀಲಂಕ ದಟ್ಟ ಕಾಡು ಇದರ ಬೀಡು

ಕಡಾಣಿ

(ತಂ) ಚಕ್ರ ಕಳಚಿಹೋಗದಂತೆ ಅಚ್ಚಿನ ತುದಿಯ ರಂಧ್ರದಲ್ಲಿ ಹಾಕಿರುವ ಮೊಳೆ. ಕೀಲು

ಕಡಾಯ

(ತಂ) ಪೀಪಾಯಿ, ದೊಡ್ಡ ತೊಟ್ಟಿ

ಕಂಡಿ

(ಭೌ) ಬೆಳಕು ಒಳ ಪ್ರವೇಶಿಸುವ ಸಲುವಾಗಿ ಕೆಮರಾ, ದೂರದರ್ಶಕ ಮುಂತಾದ ದೃಕ್ ಉಪಕರಣಗಳಲ್ಲಿ ಅಳವಡಿಸಿರುವ ವರ್ತುಳೀಯ ತೆರಪು /ಆ ತೆರಪಿನ ವ್ಯಾಸ

ಕಡಿದಾದ ಕಟ್ಟೆ

(ಭೂವಿ) ಸ್ತರಭಂಗ ಅಥವಾ ಸವಕಳಿ ಯಿಂದ ಉಂಟಾಗುವ ನಿರಂತರ, ಏಕಮುಖ ಇಳಿಜಾರಿರುವ ಪ್ರದೇಶ

ಕಡಿದು ಬಂಡೆ

(ಭೂವಿ) ಪ್ರಪಾತದಂತೆ ಕಡಿದಾಗಿ ಮೇಲಕ್ಕೆ ಎದ್ದ ಅಗಲ ಮತ್ತು ಚಪ್ಪಟೆ ಮುಂಭಾಗವಿರುವ ದಿಣ್ಣೆ. ಭೂಶಿರ

ಕಡೆತ

(ತಂ) ಅಚಲವಾಗಿರುವ ಯಂತ್ರಭಾಗದ ಕತ್ತರಿಸುವ ಏಣು, ತಿರುಗುತ್ತಿರುವ ವಸ್ತುವಿನ ಮೇಲೆ ಒತ್ತಡ ಹೇರಿದಾಗ ನಡೆಯುವ ಕ್ರಿಯೆ. ಈ ಮೂಲಕ ವಸ್ತುವಿನ ವ್ಯಾಸವನ್ನು ತಗ್ಗಿಸ ಲಾಗುತ್ತದೆ. ಕಡೆಯುವುದು, ಚರಕಿ ಬಳಕೆ

ಕಡೆತ

(ಸಾ) ಕಡೆಗೋಲಿನಿಂದ ಅಥವಾ ಮಂತುವಿನಿಂದ ದ್ರವ ಪದಾರ್ಥದ ಮಂಥನ

ಕಣ

(ಭೌ) ಭೌತವಿಜ್ಞಾನದಲ್ಲಿ ಒಂದು ಉಪಯುಕ್ತ ಪರಿಕಲ್ಪನೆ: ಸಾಂತ ರಾಶಿ ಇರುವ ಆದರೆ ಗಮನಾರ್ಹ ಆಯಾಮ ಗಳಿಲ್ಲದಿರುವ ಆದರ್ಶವಸ್ತು. ಎಂದೇ ಕಣದ ರಾಶಿ ಕೇಂದ್ರದ ಸುತ್ತ ಅದರ ಜಡತ್ವದ ಮಹತ್ತ್ವ ಸೊನ್ನೆ. ಗಣಿತದಲ್ಲಿ ಬಿಂದುವೂ ಆಯಾಮರಹಿತ ಆದರ್ಶ ಎಂಬುದನ್ನು ಗಮನಿಸಬೇಕು. (ಪವಿ) ಪರಿಸರ ಕುರಿತಂತೆ ಕಾರ್ಬನಿಕ/ಅಕಾರ್ಬನಿಕ ಮೂಲದ ಘನ ಅಥವಾ ದ್ರವದ ಅತಿ ಸಣ್ಣ ತುಣುಕುಗಳು. ೦.೦೧ ಮೈಕ್ರಾನ್‌ನಿಂದ ೨೦.೦೦ ಮೈಕ್ರಾನ್ ಗಾತ್ರ ಇರುತ್ತವೆ. ಸೌದೆ, ಕಲ್ಲಿದ್ದಲು ಉರಿದಾಗ ಹೊಮ್ಮುವ ಹೊಗೆಯೂ ಕಣಗಳ ರಾಶಿಯೇ. ವೈರಸ್, ಬ್ಯಾಕ್ಟೀರಿಯ, ಪರಾಗರೇಣು, ಶಿಲೀಂಧ್ರಗಳ ಬೀಜಕ ಗಳನ್ನೂ ಕಣಗಳೆಂದೇ ಪರಿಗಣಿಸಲಾಗಿದೆ. ಅನೇಕ ಕಣಗಳು ಶ್ವಾಸಕೋಶ ಸೇರಿ ಮಾನವರಲ್ಲಿ ಅಲರ್ಜಿ ಉಂಟುಮಾಡುತ್ತವೆ. ಅವು ಪರಿಸರ ಮಾಲಿನ್ಯವನ್ನೂ ಉಂಟುಮಾಡುತ್ತವೆ

ಕಣ ಭೌತವಿಜ್ಞಾನ

(ಭೌ) ಮೂಲಕಣದ ರಚನೆ, ವರ್ತನೆ ಮತ್ತು ಗುಣಗಳನ್ನು ಅಧ್ಯಯನ ಮಾಡುವ ವಿಜ್ಞಾನ ಶಾಖೆ. ಉನ್ನತಶಕ್ತಿ ಭೌತವಿಜ್ಞಾನ ಎಂದೂ ಹೆಸರಿದೆ

Search Dictionaries

Loading Results

Follow Us :   
  Download Bharatavani App
  Bharatavani Windows App