भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಕಂಜಂಕ್ಟೈವ

(ವೈ) ಕಣ್ಣಿನ ಬಿಳಿಗುಡ್ಡೆಯ ಹೊರಪೊರೆ ಮತ್ತು ರೆಪ್ಪೆಯ ಒಳಪೊರೆ. ಕಣ್ಣಿನ ಆರ್ದ್ರಚರ್ಮ

ಕಂಟಕಚರ್ಮಿ

(ಪ್ರಾ) ಮುಳ್ಳಿನಿಂದ ಕೂಡಿ ಗಡಸು ಹೊರಚಿಪ್ಪು ಇರುವ ಸಾಗರ ಜೀವಿಗಳ ಒಂದು ಬಗೆ. ಇವುಗಳ

ಕಟಾಂಜನ

(ಎಂ) ಮೆಟ್ಟಿಲುಗಳ ಅಂಚಿನಲ್ಲಿರುವ ಹಿಡಿಕಂಬಿ. ಚೌಬೀನೆ, ಉಕ್ಕು, ಕಾಂಕ್ರೀಟಿನಿಂದ ನಿರ್ಮಿಸುತ್ತಾರೆ

ಕಂಟಿಕ

(ಭೌ) ಧ್ವನಿಮುದ್ರಿಕೆಯ ತಟ್ಟೆಯಿಂದ ಧ್ವನಿಯನ್ನು ಪುನರುತ್ಪಾದಿಸಲು ಬಳಸುವ ಸೂಜಿ. ಕಂಟಿ. ಗಾನಸೂಚಿ

ಕಟು

(ರ) ಘಾಟಿನಿಂದ ಕೂಡಿದ, ಚುಚ್ಚುವ

ಕಟ್-ಔಟ್

(ತಂ) ವಿದ್ಯುತ್ತು ಪ್ರವಹಿಸುವಾಗ ಪರಿಸ್ಥಿತಿ ಅಪಾಯ ಹಂತ ತಲಪಿದ್ದಾದರೆ ಆಗ ತಂತಾನೆ ಪ್ರವಾಹದ ಹರಿವನ್ನು ನಿಲ್ಲಿಸುವ ಸಂಯಂತ್ರ

ಕಟ್ಟು ಹಾವು

(ಪ್ರಾ) ಸರೀಸೃಪ ವರ್ಗ, ಓಫೀಡಿಯ ಗಣ, ಇಲಾಪಿಡೀ ಕುಟುಂಬಕ್ಕೆ ಸೇರಿದ ಬಣ್ಣಬಣ್ಣದ ಪಟ್ಟೆಗಳಿರುವ ಭಾರತದ ವಿಷ ಸರ್ಪಗಳಲ್ಲಿ ಒಂದು ಜಾತಿ (ಕ್ರೇಟ್). ಬಂಗಾರಸ್ ವೈಜ್ಞಾನಿಕ ನಾಮ. ವಿಷ ಅತಿ ತೀಕ್ಷ್ಣವಾಗಿರುತ್ತದೆ. ಅದು ನರಮಂಡಲವನ್ನೇ ನಿಶ್ಚೇತನಗೊಳಿಸಿ ಸಾವನ್ನು ತರುತ್ತದೆ. ಬಂಗಾಳ, ಮಧ್ಯಪ್ರದೇಶ, ಅಸ್ಸಾಮ್ ಮತ್ತು ಒರಿಸ್ಸಾ ಗಳಲ್ಲಿ ಕಂಡುಬರುತ್ತದೆ. ಗೋಡೆ ಬಿರುಕು, ಕಲ್ಲುರಾಶಿ ನಡುವೆ ಇದ್ದು, ಇಲಿ, ಹಾವು ತಿಂದು ಜೀವಿಸುತ್ತದೆ. ಕಡಂಬಳ

ಕಟ್ಟುಬಂಧ ಚಿಕಿತ್ಸೆ

(ವೈ) ಶರೀರದ ಅಸ್ವಾಸ್ಥ್ಯದ ಲಕ್ಷಣಗಳು ಬೆನ್ನುಮೂಳೆ, ವಕ್ಷ ಅಥವಾ ವಸ್ತಿ ಕುಹರದಲ್ಲಿಯ ತಂತುಕಟ್ಟುಗಳ ತುಯ್ತ ಅಥವಾ ಸಂಕೋಚನೆಯ ಮೇಲೆ ಅವಲಂಬಿತ ಎಂಬ ತತ್ತ್ವವನ್ನು ಆಧರಿಸಿ ನಡೆಸುವ ರೋಗ ಚಿಕಿತ್ಸೆ

ಕಟ್ಟುಸಿರು

(ವೈ) ಉಸಿರಾಟದಲ್ಲಿ ತೊಂದರೆ. ಹೃದಯದ ಅಥವಾ ಶ್ವಾಸಕೋಶಗಳ ತೀವ್ರ ಕಾಯಿಲೆಗಳಲ್ಲಿ ಕಂಡುಬರುತ್ತದೆ

ಕಟ್ಟೆ

(ತಂ) ನೀರ ಹರಿವಿಗೆ ಅಡ್ಡವಾಗಿ ಕಟ್ಟಿದ ತಡೆ. ಇದರ ಹಿಂದೆ ಏರ್ಪಡುವ ಜಲಾಶಯದಿಂದ ನೀರನ್ನು ಜಲ ಸಂಚಾರ, ವಿದ್ಯುದುತ್ಪಾದನೆ, ನೀರಾವರಿ ಇತ್ಯಾದಿ ಉಪಯುಕ್ತ ಕಾರ್ಯಗಳಿಗೆ ಬಳಸುತ್ತಾರೆ. ಒಡ್ಡುಕಟ್ಟು, ತೆವರು, ಅಣೆಕಟ್ಟೆ

ಕಂಠ

(ಭೂವಿ) ನಂದಿದ ಅಗ್ನಿಪರ್ವತದ ಊಡು ಮಾರ್ಗ ಸೂಚಿಸುವ, ಕಂಠದಂತೆ ದಟ್ಟೈಸಿದ ಅಗ್ನಿಶಿಲಾ ಪದಾರ್ಥ. (ಸ) ಆರ್ಕಿಗೋನಿಯಮ್, ಪೆರಿಥೀಸಿಯಮ್‌ನ ನಾಳದಂಥ ಮೇಲ್ಭಾಗ

ಕಂಠದ್ವಾರೀಯ

(ವೈ) ಕಂಠದ್ವಾರಕ್ಕೆ ಸಂಬಂಧಿಸಿದ, ಅದರಲ್ಲಿ ಅಥವಾ ಅದರಿಂದ ಹುಟ್ಟಿದ

ಕಠಿಣ ಸೈಕತ ಶಿಲೆ

(ಭೂವಿ) ಇಂಗ್ಲೆಂಡಿನಲ್ಲಿ ಕಲ್ಲಿದ್ದಲ ಸ್ತರಗಳ ಕೆಳಗೆ ಕಂಡುಬರುವ ಕಾರ್ಬಾನಿಫೆರಸ್ ಸ್ತರ. ಇದು ಪ್ರಧಾನವಾಗಿ ಸಿಕತ ಶಿಲೆ (ಮರಳುಗಲ್ಲು) ಹಾಗೂ ಪದರುಗಲ್ಲು ಗಳಿಂದ (ಷೇಲ್) ಕೂಡಿದೆ. ಸಿಲೀಕೃತ ಪಳೆಯುಳಿಕೆಯ ಸುಣ್ಣಕಲ್ಲು. ಹೇರಳವಾಗಿ ಕುಳಿಗಳಿವೆ. ಇವುಗಳಲ್ಲಿ ಹಿಂದೆ ಪಳೆಯುಳಿಕೆಗಳ ಚಿಪ್ಪುಗಳಿದ್ದುವು. ನೋಡಿ: ಬರ್‌ಸ್ಟೋನ್

ಕಡಲ ಕರಡಿ

(ಪ್ರಾ) ಪಿನ್ನಿಪೀಡಿಯ ಗಣ, ಓಟರೈಯಿಡೀ ಕುಟುಂಬಕ್ಕೆ ಸೇರಿದ ಸಮುದ್ರವಾಸಿ ಸ್ತನಿ. ಇದಕ್ಕೆ ಫರ್‌ಸೀಲ್ ಎಂಬ ಹೆಸರೂ ಉಂಟು. ಕಡಲ ಸಿಂಹದ ಹತ್ತಿರ ಸಂಬಂಧಿ. ಕ್ಯಾಲೊರೈನಸ್ ಜಾತಿಯ ಕಡಲ ಕರಡಿ ಬೆರಿಂಗ್ ಸಮುದ್ರದ ದ್ವೀಪಗಳಲ್ಲೂ, ಆರ್ಕ್ಟೋಸಿಫ್ಯಾಲಸ್ ಜಾತಿಯದು ನ್ಯೂಜಿಲೆಂಡ್, ಆಸ್ಟ್ರೇಲಿಯಗಳಲ್ಲೂ ಕಂಡುಬರುತ್ತವೆ. ಬೆಲೆಬಾಳುವ ಚರ್ಮಕ್ಕೆ (ಫರ್) ಹೆಸರುವಾಸಿ

ಕಡಲ ಚಾಚು

(ಭೂವಿ) (ನಾರ್ವೆಯಲ್ಲಿರುವಂತೆ) ಎತ್ತರವಾದ ಕಡಿದು ಬಂಡೆಗಳ ಮಧ್ಯೆ ಹಾಗೂ ಪರ್ವತಗಳ ಇಳಿಜಾರುಗಳ ಮಧ್ಯೆ ಉದ್ದವಾಗಿಯೂ ಕಿರಿದಾಗಿಯೂ ಸುತ್ತು ಬಳಸಿಕೊಂಡು ನುಗ್ಗಿರುವ ಸಮುದ್ರದ ಚಾಚು. ಕಡಲತೋಳು

ಕಡಲ ನಾಯಿ

(ಪ್ರಾ) ಪಿನ್ನಿಪೀಡಿಯ ಉಪಗಣದ,

ಕಡಲ ಬಾಣ

(ಪ್ರಾ) ಲಾಲಿಗೋ ಜಾತಿಯ ಹಲವಾರು ಮೃದ್ವಂಗಿಗಳ ಸಾಮಾನ್ಯ ಹೆಸರು. ನೀರಿನಲ್ಲಿ ಈಜುವಾಗ ಬಾಹುಗಳು ಮುಂಚಾಚಿ ಬಾಣವನ್ನು ಹೋಲುವುದರಿಂದ ಈ ಹೆಸರು. ದೇಹದ ಮುಂತುದಿಯಲ್ಲಿರುವ ತಲೆಯಲ್ಲಿ ಎಂಟು ಬಾಹುಗಳೂ ಎರಡು ಪರಿಗ್ರಾಹಿ ಬಾಹುಗಳೂ ಇವೆ

ಕಡಲ ಸೌತೆ

(ಪ್ರಾ) ಕಂಟಕಚರ್ಮಿ ವಂಶದ ಹೋಲೋತುರಾಯ್ಡಿಯ ವರ್ಗದ ಕಡಲ ಪ್ರಾಣಿಗಳ ಜನಪ್ರಿಯ ಹೆಸರು. ದೇಹ ಮೃದು, ನೀಳ ಹಾಗೂ ಸ್ನಾಯುಮಯ. ಆಕಾರ ಸೌತೆಕಾಯಿಯಂತೆ. ಸಾಗರ ತಳದಲ್ಲಿ ಮಣ್ಣಿನಲ್ಲಿ ಹುದುಗಿ, ಜಡವಸ್ತುವಿನಂತೆ ಬಿದ್ದಿರುತ್ತದೆ. ಚೀನ, ಮಲಯ ಮತ್ತು ಆಸ್ಟ್ರೇಲಿಯಗಳಲ್ಲಿ ಖಾದ್ಯವಸ್ತುವಾಗಿ ಬಳಕೆ

ಕಡಲ ಹಕ್ಕಿ

(ಪ್ರಾ) ಪೆಲಿಕನಿಫಾರ್ಮಿಸ್ ಗಣ, ಸೂಲಿಡೀ ಕುಟುಂಬಕ್ಕೆ ಸೇರಿದ ಮೋರಸ್ ಎಂಬ ಸಮುದ್ರವಾಸಿ ಪಕ್ಷಿ ಜಾತಿ. ಸಮುದ್ರ ಬಳಿಯೇ ಹೆಚ್ಚು ಕಾಲ ಇದ್ದು ತೀರದ ದ್ವೀಪಗಳಲ್ಲೇ ಮೊಟ್ಟೆ ಇಟ್ಟು ಮರಿ ಮಾಡಿ, ಮೀನು ತಿಂದು ಜೀವಿಸುತ್ತದೆ

ಕಡಲ ಹಸು

(ಪ್ರಾ) ಅಮೆರಿಕ ಖಂಡದ ತೀರಗಳಲ್ಲಿ ಕಂಡುಬರುವ ಟ್ರಿಕೆಕಸ್ ಕುಲದ, ಒಂದು ಸಸ್ಯಾಹಾರಿ ಜಲಚರ ಸ್ತನಿ. ನೋಡಿ : ಸೈರೀನಿಯ

Search Dictionaries

Loading Results

Follow Us :   
  Download Bharatavani App
  Bharatavani Windows App